ದಾಸವಾಳ ನಾವು ಬೆಳ್ಳಗಾಗುವುದರಿಂದ ಹಿಡಿದು ನಮ್ಮ ಆರೋಗ್ಯಕ್ಕೂ ಈ ದಾಸವಾಳದ ಹೂವು ತುಂಬಾನೇ ಉತ್ತಮ
ಆದರೆ ಇದರ ಸರಿಯಾದ ಬಳಕೆ ತಿಳಿದಿರಬೇಕು ಅಷ್ಟೇ.ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕಂಡು ಬರುವ ಹೂವಿನ ಗಿಡಗಳಲ್ಲಿ ದಾಸವಾಳ ಗಿಡವು ಒಂದು.ಅತ್ಯಂತ ವೇಗವಾಗಿ ಬೆಳೆಯುವ ಗಿಡಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಸಹ ಈ ಗಿಡವು ಹೊಂದಿದೆ.ದಾಸವಾಳದ ಹೂವನ್ನು ಕೇವಲ ಅಲಂಕಾರದಲ್ಲಿ ಮಾತ್ರ ಬಳಸುವುದಲ್ಲದೇ ದೇವರ ಪೂಜೆಗಳಲ್ಲಿ ,ವೈದ್ಯಕೀಯ ಚಿಕಿತ್ಸೆಗಳಲ್ಲಿ ,ನೈಸರ್ಗಿಕ ಬಣ್ಣಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತಿದೆ.ಇದಲ್ಲದೇ ಈ ಗಿಡ ಇದರ ಹೂವು ಆರೋಗ್ಯ ವರ್ಧಕವೂ ಹೌದು .ದಾಸವಾಳದಲ್ಲಿ ಹೇರಳವಾದ ಆ್ಯಂಟಿ ಆಕ್ಸಿಡೆಂಟ್ಗಳಿವೆ.ಇದು ದೇಹದಲ್ಲಿರುವ ಬೇಡದ ಕಲ್ಮಶವನ್ನು ಹೊರಹಾಕಿ ಶಕ್ತಿವರ್ಧಕವಾಗಿಯೂ ಕೆಲಸ ಮಾಡುತ್ತದೆ.ದಾಸವಾಳ ಹೂವಿನಲ್ಲಿ ವಿಟಮಿನ್ ಸಿ ನಾರಿನಾಂಶ ಕ್ಯಾಲ್ಸಿಯಂ ಕಬ್ಬಿಣಾಂಶ ಹೇರಳವಾಗಿದೆ.
ದಾಸವಾಳದ ಹೂವನ್ನು ಹೇಗೆ ಸೇವಿಸಬೇಕು ?ಹಾಗೂ ಇದರಿಂದ ದೇಹಕ್ಕೆ ಸಿಗುವ ಲಾಭಗಳೇನು ?ದಾಸವಾಳದ ಹೂವಿನ ಚಹಾ ತಯಾರಿಸಿ ಸೇವಿಸಬಹುದು.ದಾಸವಾಳ ಹೂವಿನ ಟೀ ತಯಾರಿಸಲು ಎರಡು ಕೆಂಪು ದಾಸವಾಳದ ಹೂವನ್ನು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ 5 ರಿಂದ 6 ನಿಮಿಷಗಳ ಕಾಲ ಕುದಿಸಿ ,ಹೀಗೆ ತಯಾರಾದ ಪೇಯವನ್ನು ಪತಿ ನಿತ್ಯ ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ ಇದರಿಂದ ನಿಮ್ಮ ದೇಹಕ್ಕೆ ಹಾಗೂ ನಿಮ್ಮ ಸೌಂದರ್ಯಕ್ಕೆ ಹಲವಾರು ಲಾಭಗಳು ದೊರೆಯುತ್ತದೆ.
ದಾಸವಾಳದ ಹೂವು ಸಿಗುವುದಿಲ್ಲ ಎನ್ನುವವರು ಸಿಕ್ಕಾಗ ಇದನ್ನು 4 ರಿಂದ 5 ದಿನಗಳ ಕಾಲ ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಒಂದು ಡಬ್ಬದಲ್ಲಿ ಶೇಖರಿಸಿಟ್ಟುಕೊಳ್ಳಿ ಹಾಗೂ ಪ್ರತಿದಿನ ಒಂದು ಚಮಚ ದಾಸವಾಳದ ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಕೂಡ ಕುಡಿಯಬಹುದು.ಇನ್ನು ಇದು ಸಾಧ್ಯವಿಲ್ಲ ಎನ್ನುವವರು ದಾಸವಾಳದ ಪುಡಿ ಎಲ್ಲಾ ಆಯುರ್ವೇದಿಕ್ ಮೆಡಿಕಲ್ ಶಾಪ್ ಗಳಲ್ಲಿ ಲಭ್ಯವಿದೆ ಅದನ್ನು ಖರೀದಿಸಿ ಕೂಡ ಬಳಸಬಹುದು. ಇನ್ನು ಈ ಪೇಯವನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹಾಗೂ ಸೌಂದರ್ಯಕ್ಕೆ ಸಿಗುವ ಲಾಭಗಳ ಬಗ್ಗೆ ತಿಳಿಯೋಣ..
ದೇಹದ ಉಷ್ಣತೆ ಕಡಿಮೆ ಮಾಡುತ್ತದೆ:ದೇಹದ ಉಷ್ಣತೆ ಕಾಪಾಡುವಲ್ಲಿ ಈ ಪಾನೀಯ ತುಂಬಾ ಸಹಾಯಕಾರಿ.ಇನ್ನು ಈ ಪಾನೀಯ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಕಾಪಾಡುತ್ತದೆ ಆದ್ದರಿಂದ ದೇಹದ ಉಷ್ಣತೆಯ ಸಮಸ್ಯೆಯಿಂದ ಬಳಲುತ್ತಿರುವವರು ದಿನದಲ್ಲಿ ಒಂದು ಬಾರಿ ತಪ್ಪದೇ ದಾಸವಾಳದ ಪಾನೀಯ ತಯಾರಿಸಿ ಕುಡಿಯಲು ಮರೆಯದಿರಿ.ಮಹಿಳೆಯರಿಗೆ ಬಿಳಿ ಸೆರಗು ಹೋಗುವುದು ತಡೆಗಟ್ಟುವಲ್ಲಿ ಸಹಾಯಕಾರಿ:ಕೆಲವು ಮಹಿಳೆಯರಲ್ಲಿ ಬಿಳಿ ಸೆರಗು ಹೋಗುವ ಸಮಸ್ಯೆ ಇರುತ್ತದೆ.ಅಂಥವರು ಈ ಪಾನೀಯವನ್ನು ತಯಾರಿಸುವಾಗ ಒಂದು ಕೆಂಪು ದಾಸವಾಳ ಹಾಗೂ ಒಂದು ಬಿಳಿ ದಾಸವಾಳದ ಹೂವನ್ನು ಹಾಕಿ ಈ ಪೇಯವನ್ನು ತಯಾರಿಸಿ ಕುಡಿದರೆ ಬಿಳಿ ಸೆರಗು ಹೋಗುವುದನ್ನು ತಡೆಗಟ್ಟಬಹುದು.ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು:ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ ಈ ಪಾನೀಯ ತುಂಬಾ ಒಳ್ಳೆಯದು.ಇದನ್ನು ಕುಡಿಯುವುದರಿಂದ ರಕ್ತದ ಒತ್ತಡ ನಿಯಂತ್ರಣದಲ್ಲಿಡಬಹುದು ಹಾಗೂ ಇದು ಬೊಜ್ಜು ನಿವಾರಕ ಗುಣವನ್ನು ಹೊಂದಿರುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಇದರಿಂದ ಹೃದಯದ ಸ್ವಾಸ್ಥ್ಯವೂ ಹೆಚ್ಚಾಗುತ್ತದೆ.
ಮೂತ್ರನಾಳದ ಸೋಂಕು ನಿವಾರಣೆಗೆ ಉತ್ತಮ ಮೂತ್ರನಾಳದ ಸೋಂಕು ನಿವಾರಣೆಗೆ ಈ ಪೇಯ ಅತ್ಯಂತ ಸಹಕಾರಿಯಾಗಿದೆ.
ಕೆಲವೊಮ್ಮೆ ದೇಹದ ಉಷ್ಣತೆ ಹೆಚ್ಚಾದಾಗ ಕೆಲವರಿಗೆ ಮೂತ್ರ ವಿಸರ್ಜನೆ ಮಾಡುವಾಗ ಉರಿ ಕಂಡು ಬರುತ್ತದೆ ಅದನ್ನು ಕಡಿಮೆ ಮಾಡುವಲ್ಲಿ ಎಳನೀರಿನಷ್ಟೆ ಈ ಪೇಯ ಪರಿಣಾಮಕಾರಿಯಾಗಿದೆ.ಕೆಮ್ಮು ಮತ್ತು ಶೀತಕ್ಕೆ ಒಳ್ಳೆಯದು ಅಲರ್ಜಿ ಸಮಸ್ಯೆ ಇರುವವರಿಗೆ ಆಗಾಗ ಕೆಮ್ಮು ಮತ್ತು ಶೀತ ಕಾಣಿಸಿಕೊಳ್ಳುತ್ತದೆ ಅದನ್ನು ಕಡಿಮೆ ಮಾಡುವ ಸಾಮರ್ಥ್ಯ ಈ ಪಾನೀಯದಲ್ಲಿದೆ ಆದರೆ ಇದಕ್ಕೆ ಅರ್ಧ ಹೋಳು ನಿಂಬೆ ಹಣ್ಣು ಸೇರಿಸಿ ಕುಡಿಯಿರಿ ಯಾಕೆಂದರೆ ದಾಸವಾಳ ಹಾಗೂ ನಿಂಬೆ ಹಣ್ಣಿನಲ್ಲಿ ಹೇರಳವಾದ ವಿಟಮಿನ್ ಸಿ ಇರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕೆಮ್ಮು ಶೀತ ಕಡಿಮೆ ಮಾಡುವಲ್ಲಿಯೂ ಇದು ಸಹಾಯಕಾರಿಯಾಗಿದೆ.
ಕೂದಲಿನ ಆರೋಗ್ಯಕ್ಕೆ ಒಳ್ಳೆಯದು ದಾಸವಾಳದ ಹೂವು ಮತ್ತು ಎಲೆ ಕೂದಲನ್ನು ಬಾಹ್ಯಯಾಗಿ ಆರೈಕೆ ಮಾಡುವಲ್ಲಿ ತುಂಬಾನೇ ಪ್ರಯೋಜನಕಾರಿ.ಇನ್ನು ಈ ರೀತಿಯ ಪೇಯ ತಯಾರಿಸಿ ಕುಡಿಯುವುದರಿಂದ ಆಂತರಿಕವಾಗಿ ಕೂದಲಿಗೆ ಪೋಷಣೆ ದೊರೆಯುತ್ತದೆ ,ಕೂದಲು ಚೆನ್ನಾಗಿ ಬೆಳೆಯುತ್ತದೆ , ಕೂದಲು ಉದುರುವುದು ನಿಲ್ಲುತ್ತದೆ.ರಕ್ತಹೀನತೆಗೆ ಉತ್ತಮದಾಸವಾಳದ ಪೇಯ ತಯಾರಿಸಿ ಕುಡಿಯುವುದರಿಂದ ಇದು ರಕ್ತವನ್ನು ಶುದ್ಧೀಕರಿಸುತ್ತದೆ ಹಾಗೂ ರಕ್ತದಲ್ಲಿ ಕಬ್ಬಿಣಾಂಶ ಹೆಚ್ಚುತ್ತದೆ.ಇದೇ ಕಾರಣಕ್ಕೆ ರಕ್ತಹೀನತೆಯಿಂದ ಬಳಲುತ್ತಿರುವವರು ಈ ಹೂವಿನಿಂದ ತಯಾರಿಸಿದ ಪೇಯ ಕುಡಿಯುವುದು ಉತ್ತಮ.ಕಾಂತಿಯನ್ನು ಹೆಚ್ಚಿಸುತ್ತದೆ ಬೆಳ್ಳಗಾಗಲು ಬಯಸುವವರು ಇದನ್ನು ತಪ್ಪದೇ ಸೇವಿಸಿ ಯಾಕೆಂದರೆ ದಾಸವಾಳದ ಹೂವಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ.ನಿಮ್ಮೆಲ್ಲರಿಗೂ ತಿಳಿದೇ ಇದೆ ವಿಟಮಿನ್ ಸಿ ಕಾಂತಿಯನ್ನು ಹೆಚ್ಚಿಸಲು ತುಂಬಾನೆ ಸಹಾಯಕಾರಿ. ಬೇಡದ ವಿಟಮಿನ್ ಸಿ ಟ್ಯಾಬ್ಲೆಟ್ ಸೇವಿಸುವ ಬದಲು ದಿನಕ್ಕೆ ಒಂದು ಬಾರಿ ಈ ಪೇಯವನ್ನು ಸೇವಿಸಿ.ಇನ್ನು ಇದಕ್ಕೆ ಅರ್ಧ ಹೋಳು ನಿಂಬೆ ಹಣ್ಣು ಸೇರಿಸಿದರೆ ಇನ್ನೂ ಉತ್ತಮ.ತೂಕ ಕಡಿಮೆ ಮಾಡಲು ಉತ್ತಮ ದಾಸವಾಳದ ಟೀ ಕುಡಿಯುವುದರಿಂದ ಮೈ ಬೊಜ್ಜು ಬೇಗನೆ ಕಡಿಮೆಯಾಗುತ್ತದೆ ಅದಲ್ಲದೆ ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಈ ಪೇಯ ಸಹಾಯ ಮಾಡುತ್ತದೆ.
ಪೀರಿ ಯಡ್ಸ್ ನೋವನ್ನು ಕಡಿಮೆ ಮಾಡುತ್ತದೆ ಕೆಲವರಿಗೆ ಪೀರಿಯಡ್ಸ್ ಸಮಯದಲ್ಲಿ ವಿಪರೀತ ನೋವು ಕಂಡು ಬರುತ್ತದೆ ಅದನ್ನು ಕಡಿಮೆ ಮಾಡುವಲ್ಲಿ ದಾಸವಾಳದ ಟೀ ಸಹಾಯ ಮಾಡುತ್ತದೆ ಆದ್ದರಿಂದ ಪೀರಿಯಡ್ಸ್ ನೋವು ಕಂಡು ಬಂದಾಗ ಈ ಪೇಯವನ್ನು ತಯಾರಿಸಿ ಕುಡಿಯಿರಿ.ರಕ್ತವನ್ನು ಶುದ್ಧೀಕರಿಸುತ್ತದೆ ಈ ಪೇಯ ರಕ್ತವನ್ನು ಶುದ್ಧೀಕರಿಸುತ್ತದೆ ಆದ್ದರಿಂದ ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರು ಈ ಪೇಯವನ್ನು ಸೇವಿಸುವುದು ಉತ್ತಮ.ನಿಮ್ಮ ಮನೆಯ ಬಳಿ ದಾಸವಾಳದ ಗಿಡ ಇದ್ದರೆ ಕಾಮೆಂಟ್ ಮಾಡಿ ತಿಳಿಸಿ.ಧನ್ಯವಾದಗಳು.