ಅಕ್ಷಯ ತೃತೀಯ ಈ ಶುಭ ಮುಹೂರ್ತದಲ್ಲಿ ಈ ವಸ್ತುಗಳನ್ನು ಖರೀದಿ ಮಾಡಿ ಈ ತಪ್ಪನ್ನು ಮಾಡಬೇಡಿ ಕಷ್ಟಗಳು ಜಾಸ್ತಿಯಾಗುತ್ತವೆ!

Written by Anand raj

Published on:

ಅಕ್ಷಯ ಎನ್ನುವುದು ಯಾವತ್ತು ಕೂಡ ಮುಗಿಯದೆ ಇರುವುದು. ಅದರ ಫಲ ಅಧಿಕ ಆಗುವುದು ಎಂದರ್ಥ. ಈ ದಿನ ಕೆಲವೊಂದು ತಪ್ಪು ಮಾಡುವುದರಿಂದ ಅದರ ಫಲ ಅಕ್ಷಯ ಆಗುತ್ತದೆ.ಹಾಗಾಗಿ ಈ ತಪ್ಪುಗಳನ್ನು ಮಾಡಬೇಡಿ.

ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ.ಈ ವರ್ಷದ ಅಕ್ಷಯ ತೃತೀಯವನ್ನು 2024 ಮೇ 10ನೇ ತಾರೀಕಿನಂದು ಶುಕ್ರವಾರ ದಿನ ಆಚರಣೆ ಮಾಡಲಾಗುತ್ತದೆ. ಬೆಳಗ್ಗೆ 4:15 ನಿಮಿಷಕ್ಕೆ ಪ್ರಾರಂಭವಾಗುತ್ತದೆ ಮೇ 11ನೇ ತಾರೀಕು ಶನಿವಾರ ಮಧ್ಯರಾತ್ರಿ 2:50 ನಿಮಿಷಕ್ಕೆ ಕೊನೆಗೂಳ್ಳುತ್ತದೆ.

ಪೂಜೆ ಮಾಡುವುದಕ್ಕೆ ಒಳ್ಳೆಯ ಸಮಯ ಎಂದರೆ ಬೆಳಗ್ಗೆ 5:30 ರಿಂದ ಮಧ್ಯಾಹ್ನ 12:30 ನಿಮಿಷದವರೆಗೂ ಕೂಡ ಒಳ್ಳೆಯ ಶುಭ ಮುಹೂರ್ತ ಇರುತ್ತದೆ.ಈ ಸಮಯದಲ್ಲಿ ಪೂಜೆ ಮಾಡಿ ಎಂದರು ವಸ್ತುಗಳನ್ನು ಮನೆಗೆ ತೆಗೆದುಕೊಂಡು ಬರುತ್ತೀರಾ ಎಂದರೆ ತೆಗೆದುಕೊಂಡು ಬರಬಹುದು. ಸಂಜೆ 5:30 ದಿಂದ 7:09 ಗಂಟೆ ವರೆಗೂ ಪೂಜೆ ಮಾಡಬಹುದು ಮತ್ತು ವಸ್ತುಗಳನ್ನು ತೆಗೆದುಕೊಂಡು ಬಂದಿದ್ದರೆ ಅದನ್ನು ಇಟ್ಟು ಪೂಜೆಯನ್ನು ಮಾಡಬಹುದು. ನಂತರದಲ್ಲಿ ಚಿನ್ನ ಬೆಳ್ಳಿ ವಸ್ತುಗಳನ್ನು ಧರಿಸಿಕೊಳ್ಳಬಹುದು. ಯಾವುದೇ ಕಾರಣಕ್ಕೂ ಸಾಲ ಮಾಡಿ ಚಿನ್ನ ಬೆಳ್ಳಿ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಬರಬೇಡಿ. ಏಕೆಂದರೆ ಆ ದಿನ ಏನೇ ಮಾಡಿದರು ಕೂಡ ಹೆಚ್ಚಾಗುತ್ತದೆ.

ಈ ದಿನ ಚಿನ್ನ ಬೆಳ್ಳಿ ಅಷ್ಟೇ ಅಲ್ಲ ಕಲ್ಲು ಉಪ್ಪು, ಪೊರಕೆ, ಪುಸ್ತಕ , ದಿನಸಿಯನ್ನು ಕೂಡ ತೆಗೆದುಕೊಂಡು ಬರಬಹುದು.ಇನ್ನು ಲಕ್ಷ್ಮಿಗೆ ಪ್ರಿಯವಾದ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಬಂದರೆ ತುಂಬಾ ಒಳ್ಳೆಯದು. ಇನ್ನು ಗುಲಗಂಜಿ ತೆಗೆದುಕೊಂಡು ಬಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ಕ್ಯಾಶ್ ಇಡುವ ಜಾಗದಲ್ಲಿ ಇಟ್ಟರೆ ತುಂಬಾ ಒಳ್ಳೆಯದು. ಇನ್ನು ಆ ದಿನ ದಾನ ಮಾಡಿದರೆ ತುಂಬಾ ಒಳ್ಳೆಯದು.

Related Post

Leave a Comment