ಈ ಬೇರು ಸಿಕ್ಕರೆ ಕುಬೇರರಾಗ್ತೀರ!

Written by Anand raj

Published on:

ಬಲಿಷ್ಠ ತಾಂತ್ರಿಕ ಶಕ್ತಿ ಹೊಂದಿರುವ ವನಸ್ಪತಿ ನಿಮ್ಮ ಕೈಗೆ ಸಿಕ್ಕರೆ ನೀವು ರಾತ್ರೋ ರಾತ್ರಿ ಕುಬೇರರಾಗ್ತೀರ. ನಿಮ್ಮ ಅನೇಕ ಸಮಸ್ಸೆಗಳಿಗೂ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ. ಪ್ರಕೃತಿಯಲ್ಲಿ ಸಿಗುವ ಒಂದೊಂದು ಸಸ್ಯವು ಕೂಡ ಮನುಷ್ಯನಿಗೆ ಬೇಕಾಗಿರುವ ಔಷಧೀಯ ಗುಣಗಳನ್ನು ಹೊಂದಿವೆ. ಅದರಲ್ಲಿ ಉತ್ತರಾಣಿ ಗಿಡ ಕೂಡ ಒಂದು. ಈ ಗಿಡವು ಬಂಜರುಭೂಮಿ ಬೆಟ್ಟ ಕಣಿವೆ ಎನ್ನುವ ಬೇಧವಿಲ್ಲ.ಇದನ್ನು ಉತ್ತರಾಣಿ ಗಿಡ ಎಂದು ಕರೆಯುತ್ತಾರೆ. ಈ ಗಿಡದಲ್ಲಿ ಎರಡು ವಿಧಗಳಿವೆ. ಒಂದು ಕೆಂಪು ಬಣ್ಣದ ಕಾಂಡವನ್ನು ಹೊಂದಿದೆ ಮತ್ತೊಂದು ಬಿಳಿಯ ಕಾಂಡವನ್ನು ಹೊಂದಿರುತ್ತದೆ. ಉತ್ತರಾಣಿ ಕಡ್ಡಿ ಮತ್ತು ಗಿಡವು ಹಲವು ರೋಗಗಳನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ. ಸಾಮಾನ್ಯವಾಗಿ ಎಲ್ಲ ಪ್ರದೇಶದಲ್ಲಿ ಸಿಗುವ ಉತ್ತರಾಣಿ ನಿಮ್ಮ ಹಲವು ರೋಗಗಳಿಗೆ ಒಳ್ಳೆಯ ಮದ್ದಾಗಿದೆ.

ಈ ಗಿಡದ ಬೇರು ಬಹಳಷ್ಟು ಉಪಯುಕ್ತವಾಗಿದೆ. ಸೂರ್ಯೋದಯಕ್ಕೂ ಮುಂಚೆ ಎದ್ದು ಉತ್ತರಾಣಿ ಗಿಡದ ಬೇರನ್ನು ತೆಗೆದುಕೊಂಡು ಬಂದು ಸ್ವಚ್ಛವಾದ ನೀರಿನಲ್ಲಿ ತೊಳೆದು ಗಂಧದ ರೀತಿ ಮಾಡಿ ಹಣೆಗೆ ತಿಲಕದ ರೀತಿ ಹಚ್ಚಿಕೊಂಡು ಕೆಲಸಕ್ಕೆ ಹೋದರೆ ಅಲ್ಲಿ ನಿಮಗೆ ಜನ ಆಕರ್ಷಣೆ ಆಗುತ್ತಾರೆ. ನಿಮಗೆ ಯಶಸ್ಸು ಸಿಗೋದು ಅಲ್ಲದೆ ನಿಮಗೆ ಧನ ಪ್ರಾಪ್ತಿ ಕೂಡ ಆಗುತ್ತದೆ.

ಈ ಸಮಯದಲ್ಲಿ ಲಕ್ಷ್ಮಿ ದೇವಿ ವಶೀಕರಣ ಆಗುತ್ತಾಳೆ. ನೀವು ಹಣ ಇಡುವ ಜಾಗದಲ್ಲಿ ಉತ್ತರಾಣಿ ಗಿಡದ ಬೇರನ್ನು ಇಟ್ಟು ಪೂಜಿಸುತ್ತ ಇದ್ದರೆ ಧನ ಪ್ರಾಪ್ತಿಯಾಗುತ್ತದೆ.

ಈ ಗಿಡದ ಬೇರಿನ ಗಂಧವನ್ನು ಮಕ್ಕಳ ಹಣೆಗೆ ಹಚ್ಚಿದರೆ ಬುಧನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಇದರಿಂದ ಮಕ್ಕಳು ವಿದ್ಯಾಭ್ಯಾಸದಲ್ಲಿ ಆಸಕ್ತಿಯನ್ನು ಹೊಂದುತ್ತಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಹೊಂದುತ್ತಾರೆ ಮತ್ತು ಸರಕಾರಿ ಕೆಲಸ ಸಿಗುವ ಸಾಧ್ಯತೆ ಹೆಚ್ಚು ಇರುತ್ತದೆ. ಹಲವಾರು ಸಮಸ್ಸೆಗಳಿಗೆ ಪರಿಹಾರ ಕೊಡುತ್ತದೆ ಈ ಗಿಡ.

Related Post

Leave a Comment