ಬಂಗಾರದ ಒಡವೆಯನ್ನು ನೀವು ತೆಗೆದುಕೊಳ್ಳುವ ಮೊದಲು ಆ ಒಡವೆಯನ್ನು ತುಂಬಾ ಜನರು ಮುಟ್ಟಿ ನೋಡಿರುತ್ತಾರೆ. ಆ ಬಂಗಾರ ಒಡವೆಯನ್ನು ಮುಟ್ಟುವಾಗ ಅವರ ಮನಸ್ಸಿನಲ್ಲಿ ಯಾವ ರೀತಿ ಯೋಚನೆ ಇರುತ್ತದೆ ಎನ್ನುವುದು ಗೊತ್ತಿರುವುದಿಲ್ಲ. ಆದ್ದರಿಂದಾಗಿ ಆ ಒಡವೆಯನ್ನು ಶುದ್ಧಿಗೊಳಿಸದೆ ಧರಿಸಿದರೆ ಅದರಲ್ಲಿ ಇರುವ ದೋಷಗಳು ನಮಗೆ ಬರುತ್ತದೆ.
ಮನೆಯಲ್ಲಿ ಬಂಗಾರದ ಒಡವೆಯನ್ನು ಹೊಸದಾಗಿ ತಂದಾಗ ಈ ರೀತಿಯಾಗಿ ಶುದ್ಧಿಗೊಳಿಸಬೇಕು. ಒಂದು ತಟ್ಟೆ ಅಥವಾ ಬೋಟ್ಟಲಿನಲ್ಲಿ ಕಲ್ಲು ಉಪ್ಪು ಹಾಕಿ ಅದರ ಮೇಲೆ ಒಡವೆ ಬಾಕ್ಸ್ ಅನ್ನು ಇಡಬಹುದು.ಅಥವಾ ಒಂದು ರೇಷ್ಮೆ ಬಟ್ಟೆ ಅಥವಾ ಕಾಟನ್ ಬಟ್ಟೆಯಲ್ಲಿ ಒಡವೆ ಇಟ್ಟು ಕಲ್ಲು ಉಪ್ಪಿನ ಮೇಲೆ ಇಡಬೇಕು. ಅರ್ಧ ಗಂಟೆ ಬಳಿಕ ಕಲ್ಲು ಉಪ್ಪಿನ ಮೇಲೆ ಆ ಒಡವೆ ತೆಗೆದು ನೀರಲ್ಲಿ ತೊಳೆದು. ಉಪ್ಪನ್ನು ಯಾರು ತುಳಿಯದೆ ಇರುವ ಜಾಗಕ್ಕೆ ಹಾಕಬೇಕು.
ನಂತರ ಒಡವೆಯನ್ನು ಹಸಿ ಹಾಲಿನಲ್ಲಿ ಹಾಕಿ ತೆಗೆಯಬೇಕು. ನಂತರ ಶುದ್ಧವಾದ ನೀರಿನಲ್ಲಿ ತೊಳೆದು ಬಟ್ಟೆಯಿಂದ ವರೆಸಿ. ಮೊದಲು ಒಡವೆಯನ್ನು ದೇವರ ಫೋಟೋ ಅಥವಾ ವಿಗ್ರಹಕ್ಕೆ ಹಾಕಬೇಕು. ಈ ರೀತಿ ಮಾಡಿದರೆ ಬಂಗಾರದಲ್ಲಿರುವ ದೋಷ ನಿವಾರಣೆ ಆಗುತ್ತದೆ ಮತ್ತು ಇನ್ನು ಹೆಚ್ಚು ಬಂಗಾರ ನಿಮಗೆ ಸಿಗುತ್ತದೆ.