ಕೈಯಲ್ಲಿ ದೇವರ ಉಂಗುರವನ್ನು ಧರಿಸಿ ಮಾಂಸಹಾರ ತಿನ್ನಬಹುದ?ಮಹಿಳೆಯರು ಎಷ್ಟು ಬಳೆಗಳನ್ನು ಧರಿಸಿದರೆ ಒಳ್ಳೆಯದು!

Written by Anand raj

Published on:

ನಮ್ಮಲ್ಲಿ ಬಹಳಷ್ಟು ಮಂದಿ ದೇವರ ಪ್ರತಿಮೆಗಳುಳ್ಳ ಉಂಗುರ, ಕತ್ತಿನಲ್ಲಿ ಸರಕ್ಕೆ ಲಾಕೆಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ದೇವರ ಪ್ರತಿಮೆಗಳುಳ್ಳ ಉಂಗುರಗಳನ್ನು ಧರಿಸಿದರಷ್ಟೇ ಸಾಲದು. ಅವು ಧರಿಸಲು, ಧರಿಸಿದ ಬಳಿಕ ಸಹ ಕೆಲವು ಪದ್ಧತಿಗಳಿವೆ. ಅವನ್ನು ಪಾಲಿಸದೇ ಹೋದರೆ ನಷ್ಟ ಉಂಟಾಗುತ್ತದೆ. ಆ ನಿಯಮಗಳು ಏನೂ ಎಂಬುದು ಇಲ್ಲಿದೆ ನೋಡಿ.

*ಉಂಗುರ ಧರಿಸುವ ಮೊದಲು ಆಲಯಗಳಲ್ಲಿ ಸೂಕ್ತ ಪೂಜೆ, ಅಭಿಷೇಕ ಮಾಡಿಸಬೇಕು. ಆಗಲೇ ಅದಕ್ಕೆ ಶಕ್ತಿ ಸಿಗುತ್ತದೆ. ಆ ಭಗವಂತ ನಮ್ಮೊಂದಿಗೆ ಇರುವ ಅನುಭಾವ ಸಿದ್ದಿಸುತ್ತದೆ.

*ಉಂಗುರದಲ್ಲಿರುವ ದೇವರ ಪ್ರತಿಮೆ ಕಾಲುಗಳು ಕೈ ಉಗುರುಗಳ ಕಡೆಗೆ, ಮಣಿಕಟ್ಟಿನ ಕಡೆಗೆ ಇರುವಂತೆ ಧರಿಸಬೇಕು. ನಮಸ್ಕರಿಸುವಾಗ ಮುಷ್ಟಿ ಮಡಚಿ ನಮಸ್ಕರಿಸಬೇಕು.. ಆಗ ಭಗವಂತನ ಕಾಲಿಗೆ ನಮಸ್ಕರಿಸಿದವರಾಗುತ್ತೇವೆ.

*ದೇವರ ಪ್ರತಿಮೆ ಇರುವ ಉಂಗುರಗಳನ್ನು ಧರಿಸಿ ಮಾಂಸಾಹಾರ ಸೇವಿಸಬಾರದು. ಅಷ್ಟೇ ಅಲ್ಲ ಎಂಜಲು ತಾಗದಂತೆ ಎಚ್ಚರ ವಹಿಸಬೇಕು.

*ಸ್ತ್ರೀಯರು ಮುಟ್ಟಿನ ಸಮಯದಲ್ಲಿ ಉಂಗುರ, ಲಾಕೆಟ್‍ಗಳನ್ನು ತೆಗೆದಿಡುವುದು ಉತ್ತಮ.

*ಮದ್ಯ ಸೇವಿಸುವವರು, ಸಿಗರೇಟ್ ಸೇದುವರರು ಉಂಗುರ ಧರಿಸುವುದು ಒಳಿತಲ್ಲ. ಉಂಗುರ ಧರಿಸಿ ಮದ್ಯ ಸೇವಿಸುವುದು, ಧೂಮಪಾನ ಮಾಡುವುದು ಮಾಡಬಾರದು. ಈ ನಿಯಮಗಳನ್ನು ಪಾಲಿಸದೆ ದೇವರ ಪ್ರತಿಮೆ ಇರುವ ಉಂಗುರ ಇಟ್ಟುಕೊಂಡರೆ ನಮಗೆ ಒಳ್ಳೆಯದಕ್ಕಿಂತ ಕೆಟ್ಟದ್ದೇ ಆಗುತ್ತದೆ.

ಸನಾತನ ಧರ್ಮದ ಪ್ರಕಾರ ಮದುವೆಯಾದ ಹೆಣ್ಣುಮಗಳು 16 ಶೃಂಗಾರಗಳನ್ನು ಧರಿಸಬೇಕು. ಇದು ಬಹಳ ಮುಖ್ಯ ಹಾಗೂ ಮಂಗಳಕರ ಎಂದು ನಂಬಲಾಗಿದೆ. ಇವನ್ನು ಧರಿಸುವುದರಿಂದ ದಾಂಪತ್ಯ ಜೀವನ ದೀರ್ಘಕಾಲ ಹಸನಾಗಿರುತ್ತದೆ, ಅಲ್ಲದೆ ಪತಿಗೆ ದೀರ್ಘಾಯಸ್ಸು ಲಭಿಸುತ್ತದೆ ಎಂದು ನಂಬಲಾಗಿದೆ. ಮದುವೆಯ ಬಳಿಕ ಕೈ ತುಂಬಾ ಗಾಜಿನ ಬಳೆಗಳನ್ನು ಧರಿಸುವುದು ವಾಸ್ತು ಪ್ರಕಾರವೂ ಪ್ರಯೋಜನವಿದೆ. ಬಳೆಗಳ ಸದ್ದು ಮನೆಯಲ್ಲಿ ಹರಡುವ ಕಾರಣ ಯಾವುದೇ ಋಣಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶ ಮಾಡುವುದಿಲ್ಲ. ಇದರಿಂದ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಎನ್ನಲಾಗುತ್ತದೆ. ದುಷ್ಟಶಕ್ತಿಗಳ ಮನೆಯೊಳಗೆ ಪ್ರವೇಶಿಸದಂತೆ ಈ ಗಾಜಿನ ಬಳೆಗಳ ಸದ್ದು ತಡೆಯುತ್ತದೆ ಎಂಬ ನಂಬಿಕೆಯೂ ಇದೆ.

Related Post

Leave a Comment