ಯಾವ ರೋಗವು ನಿಮ್ಮ ಹತ್ತಿರವೂ ಸುಳಿಯಲ್ಲ ತಲೆಯಿಂದ ಹಿಡಿದು ಪಾದದ ವರೆಗೆ ಎಲ್ಲಾ ಸಮಸ್ಸೆಗೆ ಇದೆ ಪರಿಹಾರ!

Written by Anand raj

Published on:

ಚಳಿಗಾಲದ ಸಂದರ್ಭದಲ್ಲಿ ಎದುರಾಗುವ ಶೀತ ಕೆಮ್ಮು ಅಥವಾ ಇತರ ಸಮಸ್ಯೆಗಳಿಗೆ ಸುತ್ತಮುತ್ತಲಿನ ತಾಪಮಾನ ಪ್ರಮುಖ ಕಾರಣವಾಗಿರುತ್ತದೆ. ನಮ್ಮ ದೇಹದ ತಾಪಮಾನ ಹೊರಗಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ನಮಗೆ ಇಂತಹ ಆರೋಗ್ಯ ಸಮಸ್ಯೆಗಳು ಕಂಡುಬರಲು ಪ್ರಾರಂಭವಾಗುತ್ತವೆ. ಇದಕ್ಕೆ ನಮ್ಮ ದೇಹದ ದುರ್ಬಲ ರೋಗ ನಿರೋಧಕ ಶಕ್ತಿ ಕೂಡ ಕಾರಣವಾಗಿರಬಹುದು.

ಆದರೆ ಬಿಳಿ ಎಳ್ಳು ಅಥವಾ ಕಪ್ಪುಎಳ್ಳು ಸೇವನೆ ಮಾಡುವುದರಿಂದ ಅಥವಾ ನಮ್ಮ ಆಹಾರ ಪದ್ಧತಿಯಲ್ಲಿ ಆಗಾಗ ಎಳ್ಳೆಣ್ಣೆ ಬಳಕೆ ಮಾಡಿಕೊಳ್ಳುವುದರಿಂದ ಇಂತಹ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು. ಅಷ್ಟೇ ಅಲ್ಲದೆ ಎಳ್ಳಿನಲ್ಲಿ ದೇಹದ ಮೂಳೆಗಳನ್ನು ಆರೋಗ್ಯಕರವಾಗಿ ಕಾಪಾಡುವ ಮತ್ತು ಹಲ್ಲುಗಳ ಸದೃಢತೆಯನ್ನು ದೀರ್ಘಕಾಲ ಕಾಪಾಡುವ ಗುಣ ಸ್ವಭಾವ ಇದೆ.

ಹೀಗಾಗಿ ಯಾರು ತಮ್ಮ ಆಹಾರಪದ್ಧತಿಯಲ್ಲಿ ಎಳ್ಳನ್ನು ಹೆಚ್ಚು ಬಳಕೆ ಮಾಡುತ್ತಾರೆ ಅವರಿಗೆ ಮುಂಬರುವ ದಿನಗಳಲ್ಲಿ ಆಸ್ಟಿಯೋಪೋರೋಸಿಸ್ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುವುದಿಲ್ಲ. ಎಳ್ಳಿನಲ್ಲಿ ವಿಟಮಿನ್ ಡಿ ಮತ್ತು ಪೊಟ್ಯಾಷಿಯಂ ಅಂಶ ಕೂಡ ಹೆಚ್ಚಾಗಿ ಸಿಗುವುದರಿಂದ ಆರೋಗ್ಯಕ್ಕೆ ಹಲವಾರು ಅನುಕೂಲತೆಗಳು ಇರಲಿವೆ.

​ಎಳ್ಳಿನ ಬೀಜಗಳು ಹೇಗೆ ಸಹಾಯ ಮಾಡುತ್ತವೆ?-ಆರೋಗ್ಯ ತಜ್ಞರು ಹೇಳುವ ಹಾಗೆ ಮುಂಬರುವ ದಿನಗಳಲ್ಲಿ ಎದುರಾಗುವ ಮೂಳೆಗಳ ಸಮಸ್ಯೆ ಅಥವಾ ಆಸ್ಟಿಯೋಪೋರೋಸಿಸ್ ಎದುರಾಗಬೇಕು ಎಂದರೆ ಮೂಳೆಗಳು ಚಿಕ್ಕವಯಸ್ಸಿನಿಂದಲೂ ಸದೃಢತೆ ಇಲ್ಲದೆ ಇದ್ದರೆ ತೊಂದರೆಯಾಗುತ್ತದೆ.

ಹೀಗಾಗಿ ಮಕ್ಕಳಿಗೆ ಪ್ರತಿದಿನ ಒಂದು ಲೋಟ ಹಾಲು ಕುಡಿಯಲು ಕೊಡುವುದರಿಂದ ಮೂಳೆಗಳಲ್ಲಿ ಕ್ಯಾಲ್ಶಿಯಂ ಕೊರತೆಯನ್ನು ಸರಿಪಡಿಸಿಕೊಳ್ಳಬಹುದು. ಇದರ ಜೊತೆಗೆ ಆಹಾರ ಪದ್ಧತಿಯಲ್ಲಿ ಎಳ್ಳೆಣ್ಣೆ ಬಳಕೆ ಮಾಡುವುದರಿಂದ ದೇಹದಲ್ಲಿ ವಾತದ ಸಮಸ್ಯೆಯನ್ನು ಸರಿಪಡಿಸಿ ಮುಂಬರುವ ಮೂಳೆಗಳ ತೊಂದರೆಯಿಂದ ಪಾರಾಗಬಹುದು.

​ಆಹಾರ ತಜ್ಞರ ಪ್ರಕಾರ-ಆಹಾರ ತಜ್ಞರ ಪ್ರಕಾರ ಕಾಲು ಕಪ್ ಎಳ್ಳಿನ ಬೀಜಗಳಲ್ಲಿ ಸುಮಾರು 200 ಕ್ಯಾಲೊರಿಗಳು ಮತ್ತು 351 ಮಿಲಿಗ್ರಾಂ ಕ್ಯಾಲ್ಸಿಯಂ ಅಂಶ ಸಿಗುತ್ತದೆ. ಮಧುಮೇಹಿಗಳಿಗೆ ಎಳ್ಳು ತುಂಬಾ ಪ್ರಯೋಜನಕಾರಿ.

ಏಕೆಂದರೆ ಇದು ಅತ್ಯಂತ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ ದೇಹದ ತಾಪಮಾನವನ್ನು ಸಹ ಇದು ನಿರ್ವಹಣೆ ಮಾಡುವುದರಿಂದ ಮೂಳೆಗಳಿಗೆ ಸಂಬಂಧಪಟ್ಟ ಹಲವು ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ದೇಹದ ಖನಿಜಾಂಶಗಳು ಉತ್ತಮವಾಗಿ ನಿರ್ವಹಣೆ ಯಾಗಲು ಸಹಾಯವಾಗುತ್ತದೆ.

​ಎಳ್ಳು ಬೀಜ ನೆನೆಸಿದ ನೀರು-ಬೇಸಿಗೆಕಾಲದಲ್ಲಿ ಒಂದು ಟೀ ಚಮಚ ಬಿಳಿಎಳ್ಳು ಬೀಜಗಳನ್ನು ನೀರಿನಲ್ಲಿ ಇಡೀ ರಾತ್ರಿ ನೆನೆಹಾಕಿ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಆರೋಗ್ಯಕರವಾದ ಮೂಳೆಗಳು ಹಾಗೂ ಮೂಳೆ ಮಜ್ಜೆ ಸಿಗಲಿದೆ.ಇನ್ನೂ ಎಳ್ಳಿನ ಜೊತೆ ಬೆಲ್ಲವನ್ನು ಅಥವಾ ಎಳ್ಳಿನ ಲಾಡು ಸೇವನೆ ಮಾಡುವುದರಿಂದ ಉತ್ತಮ ಪರಿಹಾರವನ್ನು ಮೊದಲಿನಿಂದಲೇ ಕಂಡುಕೊಳ್ಳಬಹುದು.

​ಕೀಲುನೋವು ಅಥವಾ ಮೂಳೆಗಳ ನೋವು-ಒಂದು ವೇಳೆ ನಿಮಗೆ ಅತಿಯಾದ ಕೀಲುನೋವು ಅಥವಾ ಮೂಳೆಗಳ ನೋವು ಕಂಡು ಬಂದರೆ, ಎಳ್ಳೆಣ್ಣೆಯಿಂದ ವಾರಕ್ಕೆ ಒಮ್ಮೆ ಮಸಾಜ್ ಮಾಡುವುದರಿಂದ ಪರಿಹಾರವನ್ನು ಕಂಡುಕೊಳ್ಳಬಹುದು. ನೋವುನಿವಾರಕ ಗುಣಲಕ್ಷಣಗಳು ಎಳ್ಳೆಣ್ಣೆಯಲ್ಲಿ ಸಿಗುವುದರಿಂದ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.

​ಕಫದೋಷ ಹೊಂದಿರುವವರಿಗೆ-ಕಫದೋಷ ಹೊಂದಿರುವ ದೇಹದವರಿಗೆ ಎಳ್ಳು ಸೇವನೆ ಆಗಿಬರುವುದಿಲ್ಲ. ಇದಕ್ಕಾಗಿ ಕೇವಲ ಹಾಲನ್ನು ಪ್ರತಿದಿನ ಕುಡಿಯುವುದರಿಂದ ಮೂಳೆಗಳ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು.ಹಾಲಿನ ಜೊತೆ ಕೇಸರಿ, ಬಾದಾಮಿ ಖರ್ಜೂರಗಳನ್ನು ಜೊತೆಗೆ ಏಲಕ್ಕಿ, ದಾಲ್ಚಿನ್ನಿ ಶುಂಠಿ ಅಥವಾ ಅರಿಶಿನ ಸೇರಿಸಿ ಸೇವನೆ ಮಾಡಬಹುದು. ಇನ್ನೂ ಹಲವಾರು ತರಕಾರಿಗಳ ಜೊತೆಗೆ ಧಾನ್ಯಗಳ ಜೊತೆಗೆ ಎಳ್ಳು ಸೇವನೆ ಮಾಡಬಹುದು.

Related Post

Leave a Comment