ಹಣಕೊಸ್ಕರ ಸಾಕಷ್ಟು ಪ್ರಯತ್ನವನ್ನು ಮಾಡುತ್ತೇವೆ. ಎಷ್ಟೇ ದುಡಿದರೂ ಮನೆಯಲ್ಲಿ ಹಣ ಉಳಿಯುವುದಿಲ್ಲ.ಇದೆ ಚೈತ್ರ ಹುಣ್ಣಿಮೆ ದವನ ಹುಣ್ಣಿಮೆ ದಿನ ಹನುಮ ಜಯಂತಿ ಅನ್ನು ಆಚರಣೆಯನ್ನು ಮಾಡುತ್ತೇವೆ.2024 ಏಪ್ರಿಲ್ 23 ಮಂಗಳವಾರ ಹುಣ್ಣಿಮೆ ಇದೆ. ಹುಣ್ಣಿಮೆ ದಿನ ವೀಳ್ಯದೆಲೆಯಿಂದ ಈ ಒಂದು ಪರಿಹಾರ ಮಾಡಿದರೆ ಸಾಕು ಹಣದ ಸಮಸ್ಸೆ ಬರುವುದಿಲ್ಲ. ವೀಳ್ಯದೆಲೆಯಲ್ಲಿ ಸಾಕ್ಷಾತ್ ಮಹಾಲಕ್ಷ್ಮಿನೇ ನೆಲೆಸಿರುತ್ತಾರೆ.
ಮೊದಲು ಒಂದು ವೀಳ್ಯದೆಲೆ ತೆಗೆದುಕೊಳ್ಳಬೇಕು. ನಂತರ ಕೇಸರಿ ಸಿಂಧೂರವನ್ನು ಒಂದು ಬೌಲ್ ಗೆ ಹಾಕಬೇಕು ಮತ್ತು ಕೊಬ್ಬರಿ ಎಣ್ಣೆ ಹಾಕಿ ಮಿಕ್ಸ್ ಮಾಡಬೇಕು. ತುಳಸಿ ಕಡ್ಡಿ ಮೂಲಕ ಕೇಸರಿಯಿಂದ ಶ್ರೀಂ ಎನ್ನುವ ಬೀಜಕ್ಷರಿ ಮಂತ್ರವನ್ನು ಬರೆಯಬೇಕು. ನಂತರ ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ ಅದರ ಮೇಲೆ ವೀಳ್ಯದೆಲೆ ಇಟ್ಟು ಅರಿಶಿನ ಕುಂಕುಮ ಹಚ್ಚಿ ಹೂವಿನಿಂದ ಅಲಂಕಾರ ಮಾಡಬೇಕು. ಈ ದಿನ ಲಕ್ಷ್ಮಿ ಬಿಜಾಕ್ಷರಿ ಮಂತ್ರವನ್ನು 108 ಬಾರಿ ಜಪ ಮಾಡಬೇಕು ಮತ್ತು ಕನಕದಾಸರ ಸೂತ್ರವನ್ನು ಪಟನೆ ಮಾಡಬೇಕು.ನಂತರ ದೇವಿ ಹತ್ತಿರ ಪ್ರಾರ್ಥನೆ ಮಾಡಿಕೊಳ್ಳಿ. ನಮಗೆ ಎಲ್ಲಾ ಕೆಲಸದಲ್ಲಿ ಹೆಚ್ಚಿನ ಲಾಭ ಸಿಗಲಿ ಎಂದು ಬೇಡಿಕೊಳ್ಳಿ.
15 ನಿಮಿಷ ಬಳಿಕ ವೀಳ್ಯದೆಲೆಯನ್ನು ಅರಿಶಿನ ಬಟ್ಟೆಯಲ್ಲಿ ಇಟ್ಟು ಇದರ ಜೊತೆ ಸ್ವಲ್ಪ ಅಕ್ಷತೆ ಹಾಕಿ ಗಂಟು ಕಟ್ಟಿ ಬಿರುವಿನಲ್ಲಿ ಇಡಬೇಕು.ಮೂರು ಹುಣ್ಣಿಮೆ ಕಳೆಯುವವರೆಗೂ ಹಾಗೆ ಇರಲಿ. ನಂತರ ಬದಲಾವಣೆ ಆಗುವುದನ್ನು ನೀವೇ ನೋಡಿರಿ. ಇದೆ ರೀತಿ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ.