ಸಂಡಾಸ್ ಸುಲಭ /ಡಯಬಿಟಿಸ್ ಕಡಿಮೆ /ಬೊಜ್ಜು ಕರಗಲು / ಬೆಂಡೆಕಾಯಿ ಲಾಭಗಳು…

Written by Anand raj

Published on:

ತರಕಾರಿ ಎಂದರೆ ಮೂಖ ಸಿಂಡರಿಸುವವರೇ ಹೆಚ್ಚು. ಆದರೆ ಅದರಲ್ಲಿ ಇರುವಂತಹ ಪೌಷ್ಠಿಕಾಂಶಗಳ ಬಗ್ಗೆ ಅವರಿಗೆ ತಿಳಿದಿಲ್ಲ. ತರಕಾರಿಗಳಲ್ಲಿ ಒಂದಾಗಿರುವಂತಹ ಬೆಂಡೆಕಾಯಿಯು ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ನೆರವಾಗುವುದು.

ಅಚ್ಚ ಹಸಿರಾಗಿರುವಂತಹ ತರಕಾರಿಗಳ ಸೇವನೆಯು ನಮ್ಮ ದೇಹದ ಆರೋಗ್ಯ ಮಾತ್ರವಲ್ಲದೆ, ಮನಸ್ಸಿನ ಮೇಲೂ ಗಾಢ ಪರಿಣಾಮ ಬೀರುವುದು ಎಂದು ತಿಳಿದುಬಂದಿದೆ. ಯಾಕೆಂದರೆ ತರಕಾರಿಗಳ ಸೇವನೆಯಿಂದಾಗಿ ಮನಸ್ಸು ಶಾಂತವಾಗಿರುತ್ತದೆ ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ.

ಇದರ ಬಗ್ಗೆ ವಾದ, ಪ್ರತಿವಾದಗಳು ಏನೇ ಇದ್ದರೂ ತರಕಾರಿ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಆದರೆ ಹೆಚ್ಚಿನವರಿಗೆ ತರಕಾರಿ ಬಗ್ಗೆ ತುಂಬಾ ಅಸಡ್ಡೆ. ಇದರ ರುಚಿಯು ಅವರ ಬಾಯಿಗೆ ಹಿಡಿಸದು. ಅವರಿಗೆ ಮಾಂಸಾಹಾರವೇ ಬೇಕು. ಮಾಂಸಾಹಾರಿಗಳು ಕೂಡ ಪ್ರತಿನಿತ್ಯವೂ ಸ್ವಲ್ಪ ಪ್ರಮಾಣದಲ್ಲಿ ತರಕಾರಿ ಸೇವಿಸಬೇಕು. ಪ್ರತಿಯೊಂದು ತರಕಾರಿಯಲ್ಲೂ ಹಲವಾರು ರೀತಿಯ ಪೋಷಕಾಂಶಗಳು ಇವೆ. ಇದನ್ನು ನಮ್ಮ ದೇಹವು ಬಳಸಿಕೊಳ್ಳುವುದು. ನಾವು ಈ ಲೇಖನದಲ್ಲಿ ಬೆಂಡೆಕಾಯಿಯಿಂದ ಸಿಗುವ ಆರೋಗ್ಯ ಲಾಭಗಳ ಬಗ್ಗೆ ತಿಳಿದುಕೊಳ್ಳುವ.

​ಬೆಂಡೆಕಾಯಿಯು ತೂಕ ಇಳಿಸಲು ನೆರವಾಗುವುದು

ಬೆಂಡೆಕಾಯಿಯಲ್ಲಿ ಇರುವ ತುಂಬಾ ಕಡಿಮೆ ಕ್ಯಾಲರಿ (30ಕೆಸಿಎಎಲ್/100ಗ್ರಾಂ) ತೂಕ ಇಳಿಸಲು ಒಂದು ಅತ್ಯುತ್ತಮ ಆಹಾರ. ಇದು ತುಂಬಾ ಕಡಿಮೆ ಕ್ಯಾಲರಿ ನೀಡುವುದು. ಅಷ್ಟೇ ಅಲ್ಲದೇ ಬೆಂಡೆಕಾಯಿಯಲ್ಲಿ ಉನ್ನತ ಮಟ್ಟದ ನಾರಿನಾಂಶವಿದ್ದು, ಇದು ಹೊಟ್ಟೆಯು ದೀರ್ಘಕಾಲ ತುಂಬಿರುವಂತೆ ಮಾಡುವುದು.

ಹೃದಯ ಕಾಯಿಲೆಗೆ ಒಳ್ಳೆಯದು
ಬೆಂಡೆಕಾಯಿಯಲ್ಲಿ ಹೀರಿಕೊಳ್ಳುವ ನಾರಿನಾಂಶ ಪೆಕ್ಟಿನ್ ಇದೆ. ಪೆಕ್ಟಿನ್ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವುದು ಮತ್ತು ಅಪಧಮನಿಕಾಠಿಣ್ಯ ತಡೆಯುವುದು. ಜಮೆಯಾಗಿರುವಂತಹ ಕೊಲೆಸ್ಟ್ರಾಲ್ ಮತ್ತು ಹೆಪ್ಪುಗಟ್ಟುವಿಕೆಯನ್ನು ಇದು ತಡೆಯುವುದು.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವುದು
ಬೆಂಡೆಕಾಯಿಯಲ್ಲಿ ಇರುವಂತಹ ನಾರಿನಾಂಶವು ಇದಕ್ಕೆ ಪ್ರಮುಖ ಕಾರಣವಾಗಿದೆ. ಯುಜೆನಾಲ್ ಎನ್ನುವಂತಹ ಒಂದು ರೀತಿಯ ನಾರಿನಾಂಶವು ಜೀರ್ಣಕ್ರಿಯೆ ನಿಧಾನಗೊಳಿಸುವುದು ಮತ್ತು ರಕ್ತನಾಳದಲ್ಲಿ ಇರುವಂತಹ ಸಕ್ಕರೆ ಹೀರಿಕೊಳ್ಳುವುದು. ಊಟದ ಬಳಿಕ ಸಕ್ಕರೆ ಮಟ್ಟವು ಏರಿಕೆ ಆಗುವುದನ್ನು ಇದು ತಡೆಯುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವುದು. ನಾರಿನಾಂಶವು ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಜೀರ್ಣಕ್ರಿಯೆಗೆ ಸಹಕಾರಿ

ಬೆಂಡೆಕಾಯಿಯಲ್ಲಿ ಇರುವಂತಹ ನಾರಿನಾಂಶವು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಇದು ಕರುಳಿನ ಕ್ರಿಯೆಯನ್ನು ನಿಯಂತ್ರಿಉಸುವುದ. ಪೆಕ್ಟಿನ್ ಕರುಳಿನಲ್ಲಿ ಊದಿಕೊಂಡು ಕರುಳಿನಲ್ಲಿರುವಂತಹ ಕಲ್ಮಷವು ಸುಲಭವಾಗಿ ಹೊರಹೋಗುವಂತೆ ಮಾಡುವುದು. ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಬೆಂಡೆಕಾಯಿ ತಿಂದರೆ ಅದರಿಂದ ಲಾಭ ಪಡೆಯಬಹುದು.

ಗರ್ಭಧಾರಣೆಗೆ ನೆರವಾಗುವುದು

ಗರ್ಭ ಧರಿಸಬೇಕು ಎಂದು ಬಯಸುವವರಿಗೆ ಬೆಂಡೆಕಾಯಿಯು ತುಂಬಾ ಒಳ್ಳೆಯ ಆಹಾರವಾಗಿದೆ. ಬೆಂಡೆಕಾಯಿಯಲ್ಲಿ ಇರುವಂತಹ ಫಾಲಿಕ್ ಆಮ್ಲವು ಗರ್ಭ ಧರಿಸಲು ನೆರವಾಗುವುದು ಮಾತ್ರವಲ್ಲದೆ ಇದು ಭ್ರೂಣದ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸುವುದು. ಬೆಂಡೆಕಾಯಿಯು ಗರ್ಭಪಾತವಾಗದಂತೆ ತಡೆಯುವುದು. ಭ್ರೂಣದ ನರಕೊಳವೆಗಳು ಬೆಳೆಯಲು ಫಾಲಿಕ್ ಆಮ್ಲವು ನೆರವಾಗುವುದು.

ಪ್ರತಿರೋಧಕ ಶಕ್ತಿ ಸುಧಾರಿಸುವುದು

ಬೆಂಡೆಕಾಯಿಯಲ್ಲಿ ಇರುವಂತಹ ವಿಟಮಿನ್ ಸಿ ಅಂಶವು ಪ್ರತಿರೋಧಕ ಶಕ್ತಿ ಸುಧಾರಣೆ ಮಾಡುವಲ್ಲಿ ಸಹಕಾರಿ ಆಗಿರುವುದು.

ರಕ್ತಹೀನತೆ ನಿವಾರಣೆ

ಬೆಂಡೆಕಾಯಿಯಲ್ಲಿ ಕಬ್ಬಿನಾಂಶ, ಫಾಲಿಕ್ ಆಮ್ಲ ಮತ್ತು ವಿಟಮಿನ್ ಕೆ ಇದೆ. ಇದು ರಕ್ತಹೀನತೆ ತಡೆಯಲು ಮತ್ತು ನಿವಾರಣೆ ಮಾಡಲು ನೆರವಾಗುವುದು.

​ಕರುಳಿನ ಕ್ಯಾನ್ಸರ್ ತಡೆಯಲು ನೆರವಾಗುವುದು

ಬೇರೆಲ್ಲಾ ನಾರಿನಾಂಶವಿರುವಂತಹ ಆಹಾರದಂತೆ ಬೆಂಡೆಕಾಯಿ ಕೂಡ ಕರುಳಿನ ಕ್ಯಾನರ್ ತಡೆಯುವಲ್ಲಿ ನೆರವಾಗುವುದು. ಇದು ಜೀರ್ಣಕ್ರಿಯೆಯನ್ನು ಸರಿಯಾಗಿಟ್ಟು ಅದು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ನೆರವಾಗುವುದು.

​ಕಣ್ಣಿನ ದೃಷ್ಟಿ ಸುಧಾರಿಸುವುದು

ಬೆಂಡೆಕಾಯಿಯಲ್ಲಿ ಇರುವಂತಹ ಬೆಟಾ ಕ್ಯಾರೋಟಿನ್ ಮತ್ತು ವಿಟಮಿನ್ ಎ ಅಂಶವು ಕಣ್ಣಿನ ದೃಷ್ಟಿ ಸುಧಾರಿಸಲು ತುಂಬಾ ನೆರವಾಗುವುದು.

​ತಲೆಹೊಟ್ಟು ಮತ್ತು ಹೇನಿಗೆ ಚಿಕಿತ್ಸೆ

ತಲೆಹೊಟ್ಟು ಮತ್ತು ಹೇನು ನಿವಾರಿಸಲು ಬೆಂಡೆಕಾಯಿ ಬಳಸಲಾಗುತ್ತದೆ. ನೇರವಾಗಿ ಬೆಂಡೆಕಾಯಿ ಕತ್ತರಿಸಿಕೊಳ್ಳಿ ಮತ್ತು ಇದನ್ನು ನೀರಿನಲ್ಲಿ ಬಿಸಿ ಮಾಡಿ. ಈ ನೀರಿಗೆ ಲಿಂಬೆರಸ ಹಾಕಿ ಮತ್ತು ಕೂದಲು ತೊಳೆಯಲು ಈ ನೀರನ್ನು ಬಳಸಿ. ಬೆಂಡೆಕಾಯಿಯಲ್ಲಿ ನಾರಿನಾಂಶವು ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣದಿಂದಾಗಿ ಆಹಾರ ತಜ್ಞರು ಸಾಧ್ಯವಾದಷ್ಟು ತರಕಾರಿ ಸೇವಿಸಲು ಹೇಳುವರು.

Related Post

Leave a Comment