ಬೆಳಗಿನ ಜಾವಾ ಈ ರೀತಿಯ ಕನಸು ಬಿದ್ರೆ ಅವನೇ ಪುಣ್ಯವಂತ?

Written by Anand raj

Published on:

ನಾವೆಲ್ಲರೂ ಕನಸು ಕಾಣುತ್ತೇವೆ. ಅದರಲ್ಲೂ ಬೆಳಗಿನ ಜಾವ ಬೀಳುವ ಕನಸು ನನಸಾಗುತ್ತದೆ ಎನ್ನಲಾಗುತ್ತದೆ. ಜೊತೆಗೆ ನಾವು ಕಾಣುವ ಕನಸಿಗೂ ನಮ್ಮ ಜೀವನಕ್ಕೂ ನಿಕಟ ಸಂಬಂಧವಿರುತ್ತದೆ. ಇದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ. ನಾವು ಕನಸಿನಲ್ಲಿ ಕಾಣುವ ಪ್ರತಿಯೊಂದು ವಿಚಾರವು ನಮ್ಮ ದೈನಂದಿನ ಜೀವನಕ್ಕೆ ಸಂಬಂಧಿಸಿದ್ದಾಗಿರುತ್ತದೆ. ವಿಜ್ಞಾನದ ಪ್ರಕಾರ, ಭವಿಷ್ಯದಲ್ಲಿ ನಮಗೆ ಏನಾಗಲಿದೆ ಎಂಬುದನ್ನು ಕನಸುಗಳು ಊಹಿಸುತ್ತವೆ. ಕೆಲವು ಕನಸುಗಳು ಸಂತೋಷದ ಸಂಕೇತವೆಂದು ನಂಬಲಾಗಿದೆ, ಆದರೆ ಕೆಲವು ಅಪಾಯದ ಮನ್ಸೂಚಕ ಅಂತಲೂ ನಂಬಲಾಗಿದೆ. ಬೆಳಗಿನ ಕನಸುಗಳು ನನಸಾಗುತ್ತವೆ. ಬ್ರಹ್ಮ ಘಳಿಗೆಗಳಲ್ಲಿ ಕಂಡ ಕನಸುಗಳು ನನಸಾಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತದೆ.

ಬೆಳಗಿನ ಜಾವ ಅಥವಾ ಬ್ರಹ್ಮ ಮುಹೂರ್ತದಲ್ಲಿ ಯಾವುದೇ ಕನಸು ಕಂಡರೆ ಒಳ್ಳೆಯದು. ಯಾವ ಕನಸುಗಳು ಅಶುಭ ಸೂಚಕವಾಗಿವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಕನಸಿನಲ್ಲಿ ಧಾನ್ಯದ ರಾಶಿಯನ್ನು ನೋಡುವುದು ಕನಸಿನಲ್ಲಿ ಫಸಲು ಬಂದಿರುವ ಗದ್ದೆ ಅಥವಾ ಧಾನ್ಯಗಳ ರಾಶಿಯನ್ನು ನೋಡಿದರೆ, ಅದು ಶುಭ ಶಕುನವೆಂದು ನಂಬಲಾಗಿದೆ. ಮುಂಜಾನೆ ಧಾನ್ಯಗಳ ಕನಸು ಕಾಣುವುದು ಎಂದರೆ ನೀವು ಶೀಘ್ರದಲ್ಲೇ ಬಹಳಷ್ಟು ಹಣವನ್ನು ಗಳಿಸಲಿದ್ದೀರಿ ಎಂದರ್ಥವಾಗಿದೆ. ಇಲ್ಲವೆ ವಿವಿಧ ರೂಪದಲ್ಲಿ ನಿಮ್ಮ ಸಂಪತ್ತು ಹೆಚ್ಚಳವಾಗಬಹುದು ಎಂಬುದು ಇದರ ಅರ್ಥವಾಗಿರುತ್ತದೆ.

ನೀರು ತುಂಬಿದ ಹೂಜಿಯ ಕನಸು ಮುಂಜಾನೆ ಕನಸಿನಲ್ಲಿ ನೀರು ತುಂಬಿದ ಹೂಜಿ ಅಥವಾ ಜಗ್ ಅನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಂತಹ ಕನಸು ಸಂಪತ್ತಿನ ಹಠಾತ್ ಲಾಭವನ್ನು ಸೂಚಿಸುತ್ತದೆ.

ಕನಸಿನಲ್ಲಿ ಸಂದರ್ಶನವನ್ನು ನೀಡುತ್ತಿರುವುದನ್ನು ನೋಡಿದರೆ ಏನರ್ಥ ನೀವು ಬೆಳಗ್ಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಸಂದರ್ಶನವನ್ನು ನೀಡುತ್ತಿದ್ದೀರಿ ಎಂದು ಕನಸು ಕಂಡರೆ, ನಿಮ್ಮ ವೃತ್ತಿಜೀವನದಲ್ಲಿ ನೀವು ದೊಡ್ಡ ಸುಧಾರಣೆಯನ್ನು ಮಾಡಲಿದ್ದೀರಿ ಎಂದರ್ಥ. ಈ ಕನಸು ಕೆಲಸ ಪಡೆಯುವುದನ್ನು ಸೂಚಿಸುತ್ತದೆ. ಈ ಕನಸು ವಿವಿಧ ಮೂಲಗಳಿಂದ ಆದಾಯ ಅಥವಾ ಆದಾಯದ ಹೆಚ್ಚಳವನ್ನು ಸೂಚಿಸುತ್ತದೆ.

ಪೂರ್ವಜರ ಕನಸು ಮುಂಜಾನೆ ಕನಸಿನಲ್ಲಿ ಪೂರ್ವಜರನ್ನು ನೋಡುವುದು ತುಂಬಾ ಮಂಗಳಕರ. ಕನಸಿನಲ್ಲಿ ಪೂರ್ವಜರನ್ನು ನೋಡುವುದು ಎಂದರೆ ಅವರ ಆಶೀರ್ವಾದ ನಿಮ್ಮ ಮೇಲಿದೆ ಮತ್ತು ನೀವು ಶೀಘ್ರದಲ್ಲೇ ಉತ್ತಮ ಯಶಸ್ಸನ್ನು ಸಾಧಿಸುವಿರಿ.

ದಾರಿಯಲ್ಲಿ ಹಣಸಿಕ್ಕ ಕನಸು ಬಿದ್ದರೆ ನಿಮಗೆ ದಾರಿಯಲ್ಲಿ ಸಿಕ್ಕಾಪಟ್ಟೆ ಹಣ ಸಿಕ್ಕಿರುವಂತಹ ಕನಸು ಬಿದ್ದರೆ ಶುಭವಾಗಲಿದೆ ಎಂದು ನಂಬಲಾಗಿದೆ. ಇದು ದೂರದಿಂದ ನಿಮಗೆ ಬರಬೇಕಾದ ಹಣ, ಇಲ್ಲವೆ ನಿಮ್ಮ ಆದಾಯ ವೃದ್ಧಿಯಾಗುವುದನ್ನು ಸೂಚಿಸುತ್ತದೆ. ಅಥವಾ ನಿಮ್ಮ ವ್ಯಾಪಾರದಲ್ಲಿ, ಉದ್ಯೋಗದಲ್ಲಿ ನಿಮಗೆ ಧನಲಾಭದ ಸೂಚಕವಾಗಿದೆ.

ಕಾಡು ಪ್ರಾಣಿ ಅಟ್ಟಿಸಿ ಬರುವ ಕನಸು ನಿಮಗೆ ಯಾವುದಾದರು ಕಾಡು ಪ್ರಾಣಿ ಅಟ್ಟಿಸಿಕೊಂಡು ಬರುವಂತಹ ಕನಸು ಬಿದ್ದರೆ ಅದು ಅಶುಭವಂತೆ. ಬೆಳಗಿನ ಜಾವ ಈ ರೀತಿ ಕನಸು ಬಿದ್ದರೆ ನಿಮಗೆ ಅನಾರೋಗ್ಯ ಸಮೀಪಿಸುತ್ತಿದೆ ಎಂಬರ್ಥ ನೀಡಲಿದೆಯಂತೆ. ಅದರಲ್ಲೂ ಆನೆ, ನರಿ, ಹಾವು ಅಟ್ಟಿಸಿಕೊಂಡು ಬಂದರೆ ಸಮಸ್ಯೆ ಕಾಡಲಿದೆ ಎಂದರ್ಥವಂತೆ. ಸಣ್ಣ ಪ್ರಾಣಿಗಳು ಬಲಶಾಲಿಯಾಗಿ ಕಂಡರೆ ಇನ್ನು ಅಚ್ಚರಿ ಎಂಬಂತೆ ಸಣ್ಣ ಸಣ್ಣ ಪ್ರಾಣಿಗಳು ನಿಮ್ಮ ಕನಸಿನಲ್ಲಿ ಹೆಚ್ಚು ಬಲಶಾಲಿಯಾಗಿ ಕಂಡರೆ ಅಶುಭವಂತೆ. ಉದಾಹರಣೆಗೆ ಮನೆಯಲ್ಲಿರುವ ಹಲ್ಲಿ ಗಾತ್ರದಲ್ಲಿ ದೊಡ್ಡದಾಗಿ ಕಂಡರೆ, ಅದು ನಿಮ್ಮ ನುಂಗಲು ಯತ್ನಿಸುತ್ತಿರುವಂತೆ ಕನಸು ಕಂಡರೆ ಅನಾರೋಗ್ಯಕ್ಕೆ ಇಲ್ಲಿವೆ ಅಪಘಾತ ಸಂಭವಿಸಲಿದೆ ಎಂದರ್ಥವಂತೆ.

ನೀರಿಗೆ ಬಿದ್ದಂತೆ ಕನಸು ಬಿದ್ದರೆ ನಿಮಗೆ ಬೆಳಗಿನ ಜಾವದಲ್ಲಿ ನೀರಿನಲ್ಲಿ ಬಿದ್ದು ಉಸಿರುಗಟ್ಟಿದಂತಹ ಕನಸು ಬಿದ್ದರೆ ಅಶುಭವಾಗಲಿದೆ ಎಂದರ್ಥ. ಇಲ್ಲವೆ ನಿಮಗೆ ಜಲಕಂಟಕ ಎದುರಾಗಲಿದೆ ಎಂಬ ಸೂಚನೆಯೂ ಇರಬಹುದು ಎಂದು ಹೇಳಲಾಗುತ್ತದೆ.

Related Post

Leave a Comment