ಮಂಗಳಮುಖಿಯರು ಮತ್ತು ಮುತ್ತೈದೆಯರು ಕನಸಲ್ಲಿ ಬಂದರೆ ಏನು ಅರ್ಥ ಗೊತ್ತಾ ?

Written by Anand raj

Updated on:

ಒಂದೊಂದು ಕನಸಿಗೂ ಒಂದೊಂದು ಅರ್ಥವಿದೆ. ಒಂದೊಂದು ಕನಸಿನ ಹಿಂದೆಯೂ ನಾನಾ ರಹಸ್ಯಗಳು ಇವೆ. ಇದೇ ರೀತಿ ಮಂಗಳಮುಖಿಯರು ಅಥವಾ ಮುತ್ತೈದೆಯರು ಕನಸು ಬಿದ್ದರೆ ನಿಮ್ಮ ಬದುಕು ಬದಲಾದಂತೆ. ಹಾಗಾದರೆ ಮಂಗಳಮುಖಿಯರ ಕನಸು ಶುಭಾವೋ ಅಥವಾ ಅಶುಭಾವೋ ಮುತ್ತೈದೆಯರ ಕನಸು ಬಿದ್ದರೆ ಏನೆಲ್ಲಾ ಆಗುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.

1, ಮಂಗಳಮುಖಿಯರನ್ನು ಕನಸಿನಲ್ಲಿ ನೋಡುವುದು ಒಳ್ಳೆಯದು ಇನ್ನೊಂದು ತರ ಕೆಟ್ಟದ್ದು. ಮಂಗಳ ಮುಖಿಯರಿಗೆ ಹಣವನ್ನು ನೀಡುವಂತೆ ಕನಸು ಬಿದ್ದರೆ ಅದಕ್ಕಿಂತ ಒಳ್ಳೆಯದು ಇನ್ನೊಂದು ಇಲ್ಲಾ. ಇದು ಕುಂಡಲಿಯಲ್ಲಿ ಬುಧನನ್ನು ಬಲ ಪಡಿಸುತ್ತದೆ. ಕನಸಿನಲ್ಲಿ ಹಣ ನೀಡಿದ್ದೆ ಆದಲ್ಲಿ ಬೆಳಗ್ಗೆ ಎದ್ದು ನಿಮ್ಮ ಕನಸಿನಲ್ಲಿ ಕಂಡರೆ ನಿಮ್ಮ ಕೈಲಾದಷ್ಟು ಹಣವನ್ನು ನೀಡಿ. ಅವರಿಂದ ಒಳ್ಳೆಯ ಮಾತುಗಳನ್ನು ಕೇಳಿ.ಹೀಗೆ ಮಾಡುವುದರಿಂದ ಖಂಡಿತವಾಗಿಯೂ ನೀವು ಉನ್ನತ ಸ್ಥಾನಕ್ಕೆ ಹೋಗುತ್ತೀರಿ.

ಮಂಗಳಮುಖಿಯರಿಗೆ ಹಣ ನೀಡುವಾಗ ಒಂದು ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ನೀವೇನಾದರೂ ಹಣಕೊಟ್ಟರೆ ಅವರಿಂದಲೂ ಒಂದು ಎರಡು ರೂಪಾಯಿಯನ್ನು ವಾಪಾಸ್ ಪಡೆದುಕೊಳ್ಳಿ. ಇದರಿಂದ ನೀವು ಅಂದುಕೊಂಡಿದ್ದು ಶೀಘ್ರದಲ್ಲಿ ಈಡೇರಲಿದೆ. ಸುಖ ಸಂಪತ್ತು ನೆಮ್ಮದಿ ಎನ್ನುವುದು ಸದಾ ನಿಮ್ಮ ಬೆಂಗಾವಲು ಆಗಲಿದೆ.ನಿಮ್ಮ ಬದುಕು ಬಂಗಾರ ಆಗಲಿದೆ.

2, ಮಂಗಳಮುಖಿಯರು ನಿಮ್ಮ ಮನೆಯ ಬಾಗಿಲಿಗೆ ಬಂದು ಏನು ತೆಗೆದುಕೊಳ್ಳದೆ ಖಾಲಿ ಕೈಯಲ್ಲಿ ಹೋದಂತೆ ಕನಸು ಕಂಡರೆ ಅಶುಭದ ಸಂಕೇತ. ಮುಂದಿನ ದಿನಗಳಲ್ಲಿ ನಿಮಗೆ ತುಂಬಾ ಕಷ್ಟ ಎದುರು ಆಗುತ್ತದೆ. ಆರ್ಥಿಕ ಸಮಸ್ಯೆ ನಿಮ್ಮ ಹೆಗಲು ಏರಿದೆ ಎನ್ನುವುದನ್ನು ಸೂಚಿಸುತ್ತದೆ.ಹೀಗಾಗಿ ಇಂತಹ ಕನಸು ಕಂಡವರು ಆದಷ್ಟು ಬೇಗಾ ಕೈಲಾದಷ್ಟು ಮಂಗಳಮುಖಿಯರಿಗೆ ದಾನ ಮಾಡಿ.ಇದರಿಂದ ನಿಮಗೆ ಎದುರಾಗಿರುವ ಅಪಾಯಗಳಿಂದ ದೂರಾಗಬಹುದು.

3, ಇನ್ನು ಕನಸಿನಲ್ಲಿ ಹಿರಿಯರ ಆಗಮನ ಶುಭ ಮತ್ತು ಅಶುಭ ದ ಸೂಚನೆಯನ್ನು ನೀಡುತ್ತದೆ.4,ಕನಸಿನಲ್ಲಿ ವಯಸ್ಸಾದ ವ್ಯಕ್ತಿಯು ನಿಮಗೆ ಹಣ್ಣು ಅಥವಾ ಇನ್ನಿತರ ಆಹಾರ ಪದಾರ್ಥವನ್ನು ನೀಡುವಂತೆ ಕನಸು ಬಿದ್ದರೆ ನೀವೇ ಅದೃಷ್ಟವಂತರು. ಇಂತಹ ಕನಸು ಬಿದ್ದರೆ ನೀವು ಮುಟ್ಟಿದ್ದೆಲ್ಲವೂ ಬಂಗಾರ ಆದಂತೆ. ಅಷ್ಟೇ ಅಲ್ಲದೆ ಆದಷ್ಟು ಬೇಗ ಕಂಕಣಭಾಗ್ಯ ಕೂಡಿ ಬರಲಿದೆ ಎನ್ನುವ ಮಾಹಿತಿಯನ್ನು ನೀಡುತ್ತದೆ.

5, ಕನಸಿನಲ್ಲಿ ಕೆಂಪು ಬಟ್ಟೆಯನ್ನು ಧರಿಸಿದವರನ್ನು ನೋಡುವುದು ಅಥವಾ ಇತ್ತೀಚಿಗೆ ಮದುವೆಯಾದ ವಧುವಿನ ಕನಸು ಬಿದ್ದರೆ ತುಂಬಾ ಒಳ್ಳೆಯದು.6, ಶುಕ್ರವಾರದಂದು ಲಕ್ಷ್ಮೀದೇವಿಯ ಪೂಜೆಯನ್ನು ಮಾಡಿ ಸುಮಂಗಲಿಯರಿಗೆ ಉಡುಗೊರೆಯನ್ನು ನೀಡಿದರೆ ನೀವು ಊಹಿಸಿಕೊಳ್ಳದಷ್ಟು ಸಂಪತ್ತನ್ನು ಆ ಭಗವಂತ ನಿಮಗೆ ದರೆ ಎರೆಯಲಿದ್ದಾನೆ.7, ನಿಮ್ಮ ಕನಸಿನಲ್ಲಿ ಹಸು ಕಾಣಿಸಿಕೊಂಡರೆ ತಾಯಿ ಲಕ್ಷ್ಮಿ ದೇವಿಯ ದರ್ಶನ ಮಾಡಿದಂತೆ. ಆದಷ್ಟು ಹಸುವಿಗೆ ಹುಲ್ಲನ್ನು ತಿನ್ನಿಸಿ. ಇದನ್ನು ಚಾಚೂ ತಪ್ಪದೆ ಪಾಲಿಸಿದರೆ ನಿಮಗೆ ಒಳ್ಳೆಯ ದಿನಗಳು ಆರಂಭವಾಗಲಿದೆ.

Related Post

Leave a Comment