ಕೆಲವೊಂದು ವಿಶೇಷವಾದ ದಿನಗಳಲ್ಲಿ ಅರಳಿ ಮರ ಅಥವಾ ಅಶ್ವತ್ಥ್ ವೃಕ್ಷಕ್ಕೆ ಬಹಳ ಭಕ್ತಿ, ಭಾವ, ಗೌರವದಿಂದ ಪೂಜಿಸಲಾಗುತ್ತದೆ. ಈ ಮರಕ್ಕೆ ಮೂರು ದೈವಿಕ ಶಕ್ತಿಯು ಕೂಡ ಇದೆ. ಈ ಮರದಲ್ಲಿ ನಿಮ್ಮ ಸಕಲ ಇಷ್ಟಾರ್ಥಗಳು ನೆರವೇರುತ್ತದೆ ಹಾಗೂ ಜ್ಞಾನ ವೃದ್ಧಿಯೂ ಕೂಡ ಆಗುತ್ತದೆ.
ಈ ಮರದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ಮೂವರು ಕೂಡಿರುವಂತಹ ಜಾಗ. ಶನಿವಾರದ ದಿನ ಯಾವುದೇ ಕಾರಣಕ್ಕೂ ಅಶ್ವತ್ಥ್ ವೃಕ್ಷವನ್ನು ಪೂಜಿಸಬಾರದು. ಶನಿವಾರದ ದಿನ ಗೋದೂಲಿ ಸಮಯದ ನಂತರ ಲಕ್ಷ್ಮಿ ದೇವಿಯ ಅಕ್ಕ ಆಗಿರುವ ದರಿದ್ರ ಲಕ್ಷ್ಮಿಯು ಈ ಮರದಲ್ಲಿ ಬಂದು ವಾಸ ಮಾಡುತ್ತಾಳೆ. ಲಕ್ಷ್ಮಿ ದೇವಿಯು ಇಲ್ಲದೇ ಇರುವ ಸಮಯದಲ್ಲಿ ಈ ಜಾಗದಲ್ಲಿ ಇರಲು ವಿಷ್ಣುದೇವರು ಹೇಳಿರುತ್ತಾರೆ.
ಈ ಮರವನ್ನು ಪೂಜಿಸಬೇಕೆಂದರೆ ಒಂದು ವೇಳೆ ಸಂತಾನದಲ್ಲಿ ಸಮಸ್ಯೆ, ಲಗ್ನದಲ್ಲಿ ಸಮಸ್ಯೆ,ಅನಾರೋಗ್ಯದ ಸಮಸ್ಯೆ ಹೀಗೆ ಯಾವುದಾದರೂ ತೊಂದರೆ ಇದ್ದರೆ ಪೂಜೆ ಮಾಡಬೇಕು.
ಈ ಮರವನ್ನು 3 ಬಾರಿ ಪ್ರದಕ್ಷಿಣೆ ಮಾಡಿದ ನಂತರವೇ ಫಲಗಳು ಪ್ರಾಪ್ತಿಯಾಗುವುದು. 5 ಬಾರಿ ಪ್ರದಕ್ಷಿಣೆ ಮಾಡಿದರೆ ಉತ್ತಮ, 9 ಬಾರಿ ಪ್ರದಕ್ಷಿಣೆ ಮಾಡಿದರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ,12 ಬಾರಿ ಪ್ರದಕ್ಷಿಣೆ ಮಾಡಿದರೆ ಆಯಸ್ಸು ವೃದ್ದಿಯಾಗುತ್ತದೆ. ಈ ಮರಕ್ಕೆ ಪೂಜೆಯನ್ನು ಮಾಡಬೇಕಾದರೆ ಎಳನೀರನ್ನು ತೆಗೆದುಕೊಂಡು ಹೋಗಿ ಮರದ ಬುಡಕ್ಕೆ ಹಾಕಬೇಕು. ಇದರ ಜೊತೆಗೆ ಸ್ವಲ್ಪ ಹಾಲನ್ನು ಕೂಡ ಮರದ ಬುಡಕ್ಕೆ ಹಾಕಿ ಭಕ್ತಿಯಿಂದ ಬೇಡಿಕೊಂಡರೆ ನಿಮ್ಮ ಎಲ್ಲಾ ಸಕಲ ಇಷ್ಟಾರ್ಥಗಳು ನೆರವೇರುತ್ತದೆ.