ಹೋಳಿ ಹುಣ್ಣಿಮೆಗೂ ಮುನ್ನ ಮಂಗಳ ಗ್ರಹದ ರಾಶಿಯಲ್ಲಿ ಬದಲಾವಣೆ ಆಗಲಿದೆ. ಮಂಗಳ ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಇದು ಕೆಲವರ ಬಾಳನ್ನು ಬೆಳಗಲಿದೆ.
ತುಲಾ ರಾಶಿ: ದಿಢೀರ್ ಧನಲಾಭ ಉಂಟಾಗುವುದು. ಐಷಾರಾಮಿ ಜೀವನವನ್ನು ನಡೆಸುತ್ತೀರಿ. ಮದುವೆಯಾಗುವ ಸಾಧ್ಯತೆಯಿದೆ. ಹೊಸ ಕೆಲಸ ಸಿಗುತ್ತದೆ. ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣಗೊಳ್ಳುತ್ತವೆ.
ಮಕರ ರಾಶಿ: ಆದಾಯ ಹೆಚ್ಚಾಗುತ್ತದೆ. ನಿಮ್ಮ ವ್ಯಕ್ತಿತ್ವದಿಂದ ಜನರು ಪ್ರಭಾವಿತರಾಗಿದ್ದಾರೆ. ಪ್ರತಿ ಕೆಲಸದಲ್ಲೂ ಯಶಸ್ಸು ಕಾಣುವಿರಿ. ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ.
ಮೇಷ ರಾಶಿ: ನಿಮ್ಮ ಸಂಪತ್ತು ವೃದ್ಧಿಯಾಗುತ್ತದೆ. ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ಹಿಂದೆ ಮಾಡಿದ ಹೂಡಿಕೆಗಳು ಈಗ ಲಾಭವನ್ನು ತರುತ್ತವೆ. ವೃತ್ತಿಜೀವನ ಉತ್ತಮವಾಗಿರುತ್ತದೆ. ಅದೃಷ್ಟ ಸದಾನಿಮ್ಮ ಜೊತೆಗಿರುವುದು.