ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ನಿಮಗೆ ಥೈರಾಯ್ಡ್‌ ಸಮಸ್ಸೆ ಇದೆ ಎಂದು ಅರ್ಥ!

Written by Anand raj

Published on:

ಅತಿಯಾದ ಆಯಾಸ, ಕೂದಲು ಉದುರುವುದು, ಅನಿಯಮಿತ ಮುಟ್ಟು ಮುಂತಾದ ಸಮಸ್ಯೆಗಳು ತಲೆದೋರುತ್ತಿವೆಯೇ? ಅಥವಾ ನಡುಕ, ಆತಂಕ, ಬೆವರು ಮತ್ತು ಹಸಿವು ಹೆಚ್ಚುತ್ತಿದೆಯೇ..? ಇವು ಥೈರಾಯ್ಡ್‌ನ ಸಾಮಾನ್ಯ ಲಕ್ಷಣಗಳು. ಥೈರಾಯ್ಡ್‌ ಗ್ರಂಥಿಯು ಪ್ರಮುಖ ಹಾರ್ಮೋನ್ ನಿಯಂತ್ರಕವಾಗಿದೆ. ಅದರಲ್ಲೂ ಇದು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಸಮಸ್ಯೆ. ವಿಶ್ವದಲ್ಲಿ 8 ಮಹಿಳೆಯರಲ್ಲಿ ಒಬ್ಬರಿಗೆ ಥೈರಾಯ್ಡ್‌ ಸಾಮಾನ್ಯವಂತೆ. ಆದರೆ ಶೇಕಡಾ 60 ರಷ್ಟು ಮಹಿಳೆಯರಿಗೆ ತಮಗೆ ಥೈರಾಯ್ಡ್‌ ಲಕ್ಷಣಗಳು ಇರುವುದು ತಿಳಿದೇ ಇರುವುದಿಲ್ಲ ಎಂದು ವರದಿಯಾಗಿದೆ.

ಥೈರಾಯ್ಡ್‌ ಪಾತ್ರವೇನು? ದೇಹದ ಬೇರೆ ಅಂಗಗಳಂತೆ, ಥೈರಾಯ್ಡ್‌ ಕೂಡ ಸರಿಯಾಗಿ ಕಾರ್ಯ ನಿರ್ವಹಿಸುವುದು ಅತ್ಯಂತ ಅಗತ್ಯ. ಅದು ನಮ್ಮ ಕುತ್ತಿಗೆಯ ಮುಂಭಾಗದಲ್ಲಿರುವ ಚಿಟ್ಟೆಯ ಆಕಾರದ ಅಂಗವಾಗಿದ್ದು, ತೂಕ ನಷ್ಟ, ಚಯಾಪಚಯ, ಚರ್ಮ ಮತ್ತು ಕೂದಲಿನ ಆರೋಗ್ಯ ನಿರ್ವಹಣೆ ಮುಂತಾದ ಅಗತ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ಹಾರ್ಮೋನುಗಳ ಉತ್ಪಾದನೆ ಮತ್ತು ನಿಯಂತ್ರಣದ ಕೆಲಸವನ್ನು ಮಾಡುತ್ತದೆ. ಥೈರಾಯ್ಡ್‌ ಹಾರ್ಮೋನ್‍ಗಳ ಮಟ್ಟದಲ್ಲಿ ಆಗುವ ಏರುಪೇರು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣ ಆಗುತ್ತದೆ.

1) ಅನಿರೀಕ್ಷಿತ ತೂಕ ಇಳಿಕೆ ಅಥವಾ ಏರಿಕೆ: ಥೈರಾಯ್ಡ್‌ ಮಟ್ಟ ದೇಹದ ಒಟ್ಟಾರೆ ಚಯಾಪಚಯ ಕ್ರಿಯೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ತೂಕದ ಮೇಲೆ ಕೂಡ. ಹಾಗಾಗಿ, ನಿಮ್ಮ ತೂಕದಲ್ಲಿ ಹಠಾತ್ ಬದಲಾವಣೆಗಳು ಆದರೆ, ಥೈರಾಯ್ಡ್‌ ಪರೀಕ್ಷಿಸಿ. ತೂಕ ಹೆಚ್ಚು ಕಡಿಮೆ ಆಗುವುದಕ್ಕೆ ಬೇರೆ ಕಾರಣಗಳು ಕೂಡ ಇರುತ್ತದೆ. ಕಡಿಮೆ ಥೈರಾಯ್ಡ್‌ ಹಾರ್ಮೋನ್‍ಗಳು ತೂಕ ಹೆಚ್ಚಳಕ್ಕೆ ಮತ್ತು ಅಧಿಕ ಚಟುವಟಿಕೆಯುಳ್ಳ ಥೈರಾಯ್ಡ್‌ ಹಾರ್ಮೋನ್‍ಗಳು ಅನಿರೀಕ್ಷಿತ ತೂಕ ಇಳಿಕೆಗೆ ಕಾರಣ ಆಗಬಹುದು. ಹೈಪೋಥೈರಾಯ್ಡ್‌ನಿಂದ ತೂಕ ಕಳೆದುಕೊಳ್ಳುವುದು ಮಹಿಳೆಯರಲ್ಲಿ ಕಂಡು ಬರುವ ಸಾಮಾನ್ಯ ಲಕ್ಷಣ.

2) ಕತ್ತಿನ ಸುತ್ತ ಚರ್ಮದ ನೆರಿಗೆಗಳು ಕಪ್ಪಾಗುವುದು: ಥೈರಾಯ್ಡ್‌ ಕಾಯಿಲೆಯ ಸಾಮಾನ್ಯ ಆರಂಭಿಕ ಲಕ್ಷಣ ಎಂದರೆ ಕತ್ತಿನ ಸುತ್ತಲಿನ ಚರ್ಮ ಕಪ್ಪಾಗುವುದು. ಕತ್ತಿನ ಸುತ್ತಲಿನ ಚರ್ಮದ ಮಡಿಕೆಗಳು ಕಪ್ಪಾಗುವುದಕ್ಕೆ ಥೈರಾಯ್ಡ್‌ ಹಾರ್ಮೋನ್‍ಗಳ ಉಲ್ಬಣದಿಂದಾಗಿ ಎಂದು ಸಂಶೋಧನೆಗಳು ತಿಳಿಸಿವೆ.

ಅದಲ್ಲದೆ, ಥೈರಾಯ್ಡ್‌ ಅಂಗವು ಚರ್ಮ ಮತ್ತು ಕೂದಲಿನ ಉತ್ತಮ ಆರೋಗ್ಯ ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಟಿ3 ಮತ್ತು ಟಿ4 ಮಟ್ಟಗಳ ತೊಂದರೆ ಒಣ ಚರ್ಮ, ತುರಿಕೆ ನೆತ್ತಿ, ಎಣ್ಣೆಯುಕ್ತ ಚರ್ಮ ಅಥವಾ ಉಗುರುಗಳಲ್ಲಿ ಬಿರುಕು ಉಂಟಾಗಲು ಕಾರಣ ಆಗುತ್ತದೆ.

3) ಆಯಾಸ ಮತ್ತು ದುರ್ಬಲತೆ: ಶಕ್ತಿ ಕುಂದುವುದು ಅಥವಾ ಆಯಾಸದ ಅನುಭವ ಸಾಮಾನ್ಯವಾಗಿ ಮುಪ್ಪು ಹಾಗೂ ದಿನನಿತ್ಯದ ಒತ್ತಡದ ಲಕ್ಷಣಗಳೆಂದು ಪರಿಗಣಿಸಲ್ಪಡುತ್ತದೆ. ಆದರೆ, ಅನಿಯಮಿತ ಮತ್ತು ದೀರ್ಘ ಕಾಲದ ಆಯಾಸಕ್ಕೆ ಥೈರಾಯ್ಡ್‌ ಕೂಡ ಕಾರಣ ಆಗಿರಬಹುದು. ಥೈರಾಯ್ಡ್‌ಗೆ ಸಂಬಂಧಿಸಿದ ಆಯಾಸ ಮತ್ತು ದುರ್ಬಲತೆಯು , ಹೃದಯ ಬಡಿತ, ಸ್ನಾಯು ದೌರ್ಬಲ್ಯ ಮತ್ತು ನಡುಕಕ್ಕೂ ಕಾರಣ ಆಗಬಹುದು.

4) ನಿದ್ರಾಹೀನತೆ: ನಿದ್ರೆ ಮಾಡಲು ಸಮಸ್ಯೆ ಆಗುವುದು ಕೂಡ ಥೈರಾಯ್ಡ್‌ನ ಕಾರಣಗಳಲ್ಲಿ ಒಂದು. ಅಲ್ಲದೆ, ಥೈರಾಯ್ಡ್‌ ಹಗಲಿನ ನಿದ್ರೆಗೂ ಕಾರಣ ಆಗಬಹುದು. ಅತಿ ಕ್ರಿಯಾತ್ಮಕ ಥೈರಾಯ್ಡ್‌ ನಿಮ್ಮ ಮನಸ್ಥಿತಿ, ನರವ್ಯವಸ್ಥೆ, ಆಯಾಸ ಮತ್ತು ಸ್ನಾಯುಗಳ ದುರ್ಬಲತೆಯ ಮೇಲೂ ಪರಿಣಾಮ ಬೀರಬಹುದು.ನಿರಂತರ ಭಾವನೆಗಳು ನಿದ್ರೆ ಬಾರದಂತೆ ಮಾಡಬಹುದು. ರಾತ್ರಿ ಬೆವರುವುದು ಮತ್ತು ಪದೇ ಪದೇ ಮೂತ್ರ ವಿಸರ್ಜನೆ ಆಗುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು.

5) ಆತಂಕ, ಹೆದರಿಕೆ ಮತ್ತು ಮೆದುಳಿನ ಮಂಕು: ಮಾನಸಿಕ ಆರೋಗ್ಯವನ್ನು ದುರ್ಬಲಗೊಳಿಸುವ ಅಥವಾ ಹದಗೆಡಿಸುವ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬಾರದು. ಥೈರಾಯ್ಡ್‌ ಇರುವ ಮಹಿಳೆಯರಲ್ಲಿ ಆತಂಕದ ಸಮಸ್ಯೆಗಳು, ಹೆದರಿಕೆ, ನಡುಕ, ಕಿರಿಕಿರಿ, ಮನಸ್ಥಿತಿಯಲ್ಲಿನ ತೀವ್ರ ಬದಲಾವಣೆಗಳು ಹಾಗೂ ಮೆದುಳಿನ ಮಂಕನ್ನು ಅನುಭವಿಸುವ ಹೆಚ್ಚಿನ ಅಪಾಯ ಇರುತ್ತದೆ ಎನ್ನಲಾಗುತ್ತದೆ. ನೆನಪಿನ ಶಕ್ತಿ ನಷ್ಟವಾಗುವುದು, ಏಕಾಗ್ರತೆಯ ಮಟ್ಟ ಕಡಿಮೆ ಆಗುವುದು ಮತ್ತು ದಿನ ನಿತ್ಯದ ಚಟುವಟಿಕೆಗಳಲ್ಲಿ ಸಾಮರ್ಥ್ಯ ಕುಂದುವುದು ಹೈಪೋ ಥೈರಾಯ್ಡ್‌ನ ಲಕ್ಷಣಗಳಾಗಿರುತ್ತವೆ.

6) ಅನಿಯಮಿತ ಮಟ್ಟು ಮತ್ತು ಬದಲಾವಣೆಗಳು: ಮಹಿಳೆಯರಲ್ಲಿ ಅನಿಯಮಿತ ಮುಟ್ಟು ಕಂಡು ಬಂದರೆ ಸಾಮಾನ್ಯವಾಗಿ ಪಿಸಿಓಎಸ್‍ನ ಲಕ್ಷಣ ಎಂದು ಪರಿಗಣಿಸಲಾಗುತ್ತದೆ. ಎಲ್ಲಾ ಸಂದರ್ಭಗಳಲ್ಲಿ ಅದೊಂದೇ ಕಾರಣ ಆಗಿರುವುದಿಲ್ಲ. ಥೈರಾಯ್ಡ್‌ ಮಟ್ಟಗಳಲ್ಲಿನ ತೊಂದರೆ ಕೂಡ ಅದಕ್ಕೆ ಕಾರಣ ಆಗಿರಬಹುದು. ಏಕೆಂದರೆ ಥೈರಾಯ್ಡ್‌ ನೇರವಾಗಿ ನಿಮ್ಮ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ಥೈರಾಯ್ಡ್‌ನ ಅಲ್ಪ ಅಥವಾ ಅಧಿಕ ಮಟ್ಟಗಳು 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಮುಟ್ಟಿನಲ್ಲಿ ಬದಲಾವಣೆ ತರಬಹುದು ಅಥವ ಅಕಾಲಿಕ ಋತುಬಂಧಕ್ಕೆ ಕಾರಣ ಆಗಬಹುದು. ಈ ಬದಲಾವಣೆಗಳನ್ನು ಮೊದಲೇ ಗಮನಿಸಬೇಕು.

Related Post

Leave a Comment