ಕಪ್ಪಗಿರುವ ಕೈ ಕಾಲು ಬಾಡಿ ಬೆಳ್ಳಗಾಗಲು ಮನೆಮದ್ದು!

Written by Anand raj

Published on:

ಕಪ್ಪಗಿರುವ ಕೈ ಕಾಲು ಮತ್ತು ದೇಹವನ್ನು ಬೆಳ್ಳಗಾಗುವಂತೆ ಮಾಡುವ ಮನೆ ಮದ್ದು…ನಮ್ಮ ಕೈ ಕಾಲು ಅಥವಾ ದೇಹದಲ್ಲಿ ಯಾವುದಾದರೂ ಭಾಗ ಕಪ್ಪಾಗಿದ್ದರೆ ಅದನ್ನು ಹೇಗೆ ಬೆಳ್ಳಗೆ ಮಾಡಬಹುದು ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಉಪಯೋಗ ಮಾಡಿಕೊಂಡು ಹೇಗೆ ಮನೆ ಮದ್ದನ್ನು ತಯಾರಿಸಬಹುದು ಎಂಬ ಸರಳ ವಿಧಾನವನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ.

ನಿಮ್ಮ ದೇಹವನ್ನು ಬೆಳಗ್ಗೆ ಮಾಡುವುದಕ್ಕೆ ಎರಡು ವಿಧಾನವನ್ನು ಅನುಸರಿಸಬೇಕಾಗುತ್ತದೆ ಅದರಲ್ಲಿ ಮೊದಲನೇ ವಿಧಾನ ಸ್ಕ್ರಬ್ಬಿಂಗ್ ಮಾಡಬೇಕು. ಇನ್ನೂ ಈ ಸ್ಕ್ರಬ್ಬಿಂಗ್ ಮಾಡುವ ಉದ್ದೇಶ ನಮ್ಮ ದೇಹದಲ್ಲಿ ಇರುವಂತಹ ಡೆಡ್ ಸ್ಕಿನ್ ಅನ್ನೂ ರಿಮೂ ಮಾಡುವುದಕ್ಕೆ ಈ ಸ್ಕ್ರಬಿಂಗ್ ಅನ್ನು ಉಪಯೋಗ ಮಾಡುತ್ತಾರೆ. ಇನ್ನು ಎರಡನೇ ವಿಧಾನ ಸ್ಕ್ರಬಿಂಗ್ ಮಾಡಿರುವ ಭಾಗಕ್ಕೆ ಸ್ಕಿನ್ ಪ್ಯಾಕ್ ಅನ್ನು ಅಪ್ಲೇ ಮಾಡಬೇಕು.

ಸ್ಕ್ರಬ್ಬಿಂಗ್ ವಿಧಾನ ಮಾಡುವುದಕ್ಕೆ ಒಂದು ಕಪ್ ಗೆ ಒಂದು ಟೇಬಲ್ ಸ್ಪೂನ್ ಉಪ್ಪು ಹಾಗೂ ಒಂದು ಟೇಬಲ್ ಸ್ಪೂನ್ ನಿಂಬೆ ರಸವನ್ನು ಹಾಕಿ ಎರಡನ್ನು ಕೂಡ ಮಿಕ್ಸ್ ಮಾಡಿ ನಂತರ ಈ ಮಿಶ್ರಣವನ್ನು ನಿಮ್ಮ ಸ್ಕಿನ್ ಮೇಲೆ ಅಪ್ಲೈ ಮಾಡಿ. ಎರಡು ನಿಮಿಷಗಳ ಕಾಲ ಮಸಾಜ್ ಮಾಡಿ ನಂತರ ಅದನ್ನು ತಣ್ಣಿರಿನಿಂದ ವಾಶ್ ಮಾಡಿ ಒಂದು ಬಟ್ಟೆಯಿಂದ ಒರೆಸಿಕೊಳ್ಳಬೇಕು.

ಎರಡನೇ ವಿಧಾನ ಸ್ಕಿನ್ ಪ್ಯಾಕ್ ಮಾಡುವುದು ಒಂದು ಕಪ್ ಗೆ ಒಂದು ಟೇಬಲ್ ಸ್ಪೂನ್ ಹಸಿಕಡ್ಲೆ ಹಿಟ್ಟು, ಅರ್ಧ ಟೇಬಲ್ ಸ್ಪೂನ್ ಕಸ್ತೂರಿ ಅರಿಶಿಣ, ಒಂದು ಟೇಬಲ್ ಸ್ಪೂನ್ ಗಟ್ಟಿ ಮೊಸರು, ಒಂದು ಟೇಬಲ್ ಸ್ಪೂನ್ ನಿಂಬೆ ರಸ, ಇವೆಲ್ಲವನ್ನೂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಈ ಮಿಶ್ರಣವನ್ನು ಸ್ಕಿನ್ ಗೆ ಅಪ್ಲೈ ಮಾಡಿ 10 ನಿಮಿಷ ಬಿಟ್ಟು ತಣ್ಣೀರಿನಿಂದ ವಾಸ್ ಮಾಡಿ ವಾರದಲ್ಲಿ ಮೂರು ಬಾರಿ ಹೀಗೆ ಮಾಡುವುದರಿಂದ ನಿಮ್ಮ ಚರ್ಮ ಕಾಂತಿಯುತವಾಗುತ್ತದೆ.

Related Post

Leave a Comment