ಆರೋಗ್ಯದ ಪವರ್ ಹೌಸ್ ಈ ದಾಸವಾಳ ಟೀ! ಅದ್ಭುತ ಲಾಭಗಳು!

Written by Anand raj

Published on:

ಗ್ರೀನ್ ಟೀ ಸಹಿತ ಗಿಡಮೂಲಿಕೆ ಟೀಗಳು ಇಂದು ಹೆಚ್ಚು ಜನಪ್ರಿಯವಾಗುತ್ತಿದ್ದು, ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ಕುಡಿಯುವಂತಹ ಟೀ ಬದಲಿಗೆ ಗಿಡಮೂಲಿಕೆ ಹಾಗೂ ಆರೋಗ್ಯಕ್ಕೆ ಒಳ್ಳೆಯದಾಗಿರುವಂತಹ ಟೀ ಕುಡಿಯುತ್ತಿದ್ದಾರೆ.

ಇದು ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ, ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಕೂಡ ಇವೆ. ಇದು ನಮ್ಮ ದೇಹವನ್ನು ಹಲವಾರು ಕಾಯಿಲೆಗಳಿಂದಲೂ ರಕ್ಷಣೆ ಮಾಡುವುದು.

ಪ್ರಕೃತಿಯಲ್ಲಿ ಸಿಗುವಂತಹ ಗುಲಾಬಿ, ದಾಸವಾಳ, ಚೆಂಡು ಹೂ ನೋಡಲು ತುಂಬಾ ಸುಂದರವಾಗಿ ಕಾಣುವಂತೆ ಅವುಗಳಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಕೂಡ ಇವೆ. ಅದರಲ್ಲೂ ದಾಸವಾಳ ಹೂ ಹಲವಾರು ಆರೋಗ್ಯ ಗುಣಗಳನ್ನು ಹೊಂದಿವೆ. ಕೆಲವು ಹೂವುಗಳಿಂದ ಮಾಡಿರುವ ಚಹಾದ ಲಾಭಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ನೀವು ಇದನ್ನು ಓದಿಕೊಂಡು ತಿಳಿಯಲು ತಯಾರಾಗಿ.

​ದಾಸವಾಳದ ಟೀ
ದಾಸವಾಳವು ಸುಂದರ ಕೆಂಪು ಬಣ್ಣ ಹೊಂದಿದ್ದು, ಇದರಲ್ಲಿ ಹಲವಾರು ವಿಧದ ಆರೋಗ್ಯ ಲಾಭಗಳು ಇವೆ. ಇದರ ಎಸಲುಗಳನ್ನು ಬಳಸಿಕೊಂಡು ವಡೆ ಕೂಡ ಮಾಡಬಹುದು. ಆದರೆ ದಾಸವಾಳದ ಎಸಲಿನಿಂದ ತಯಾರಿಸುವ ಚಾದ ಬಗ್ಗೆ ನಾವು ನಿಮಗೆ ಇಲ್ಲಿ ತಿಳಿಸಲಿದ್ದೇವೆ. ಇದು ಸಂಪೂರ್ಣ ಆರೋಗ್ಯಕ್ಕೆ ತುಂಬಾ ಲಾಭಕಾರಿ.

ದಾಸವಾಳದ ಚಹಾದ ಲಾಭಗಳು

ದಾಸವಾಳದ ಚಹಾ ಕುಡಿಯುವುದರಿಂದ ಹಲವಾರು ಲಾಭಗಳು ಇವೆ. ಇದರಲ್ಲಿ ನಾವು ನಿಮಗೆ ನಾಲ್ಕು ಪ್ರಮುಖ ಲಾಭಗಳನ್ನು ತಿಳಿಸುತ್ತೇವೆ.

​ತೂಕ ಇಳಿಸುವಿಕೆ

ತೂಕ ಇಳಿಸಲು ಗ್ರೀನ್ ಟೀ ಕುಡಿದು ನಿಮಗೆ ಬೇಸರ ಮೂಡಿದ್ದರೆ ಆಗ ನೀವು ಗಾಢ ಬಣ್ಣ ಮತ್ತು ಆರೋಗ್ಯಕಾರಿ ಆಗಿರುವ ಟೀ ಕುಡಿಯಿರಿ. ಸ್ವಲ್ಪ ಗ್ರೀನ್ ಟೀ, ಲಿಂಬೆ ಮತ್ತು ಜೇನುತುಪ್ಪ ಬೆರೆಸಿಕೊಂಡು ಇದನ್ನು ಮತ್ತಷ್ಟು ರುಚಿಕರವಾಗಿಸಬಹುದು. ನೀವು ಇದನ್ನು ದಿನಾಲೂ ಕುಡಿಯಿರಿ ಮತ್ತು ದೇಹದ ಕೊಬ್ಬು ಕರಗಿಸಿ ಹಾಗೂ ಬೊಜ್ಜು ಕಡಿಮೆ ಮಾಡಿ.

​ಪ್ರತಿರೋಧಕ ಶಕ್ತಿ ವೃದ್ಧಿಸುವುದು

ದೇಹದಲ್ಲಿ ಬ್ಯಾಕ್ಟೀರಿಯಾ ಚಟುವಟಿಕೆ ಕಡಿಮೆ ಮಾಡಲು ದಾಸವಾಳದ ಹೂ ತುಂಬಾ ಪ್ರಮುಖ ಪಾತ್ರ ವಹಿಸುವುದು. ಇದು ಬ್ಯಾಕ್ಟೀರಿಯಾದ ಹಲವಾರು ಸೋಂಕು ಮತ್ತು ಕಾಯಿಲೆಗಳನ್ನು ತಡೆಯುವುದು. ಇದು ನಿಮ್ಮನ್ನು ಅನಾರೋಗ್ಯಕ್ಕೆ ಒಳಪಡಿಸುವ ಮೊದಲು ನೀವು ದಾಸವಾಳದ ಚಾ ಕುಡಿಯಿರಿ. ಅಶ್ವಗಂಧ ಚಾ ಕುಡಿದರೂ ಪ್ರತಿರೋಧಕ ಶಕ್ತಿ ವೃದ್ಧಿಸಬಹುದು.

​ಅಧಿಕ ರಕ್ತದೊತ್ತಡ ನಿಯಂತ್ರಣ

ದೇಹದಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆಯಿದ್ದರೆ ಆಗ ಇದು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ದಾಸವಾಳದ ಹೂವಿನ ಚಾದಲ್ಲಿ ರಕ್ತದೊತ್ತಡ ನಿಯಂತ್ರಿಸುವಂತಹ ಗುಣಗಳು ಇವೆ. ರಕ್ತದೊತ್ತಡ ಸಮಸ್ಯೆ ಬರುವ ಅಪಾಯ ಇರುವಂತಹವರು ಈ ಚಾ ಕುಡಿಯಲೇಬೇಕು.

​ಆಂಟಿಆಕ್ಸಿಡೆಂಟ್ ನಿಂದ ಸಮೃದ್ಧ

ವಿಟಮಿನ್ ಗಳು ಹಾಗೂ ಖನಿಜಾಂಶಗಳಂತೆ ಆಂಟಿಆಕ್ಸಿಡೆಂಟ್ ಕೂಡ ವಿವಿಧ ರೀತಿಯ ಕಾಯಿಲೆಗಳನ್ನು ತಡೆಯಲು ತುಂಬಾ ಲಾಭಕಾರಿ. ದೇಹದಲ್ಲಿ ಹಾನಿ ಉಂಟು ಮಾಡುವಂತಹ ಫ್ರೀ ರ್ಯಾಡಿಕಲ್ ನ್ನು ದಾಸವಾಳದ ಹೂ ಕೊಲ್ಲುವುದು ಎಂದು ಅಧ್ಯಯನಗಳು ಹೇಳಿವೆ. ಇದು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಮಾತ್ರವಲ್ಲದೆ, ಚರ್ಮ, ಹೃದಯ ಆರೋಗ್ಯ, ಅಕಾಲಿಕ ವಯಸ್ಸಾಗುವ ಲಕ್ಷಣಗಳನ್ನು ರಕ್ಷಿಸುವುದು.

​ದಾಸವಾಳದ ಟೀ ತಯಾರಿ ಹೇಗೆ?

ಹಾಗಾದರೆ ದಾಸವಾಳದ ಟೀ ಕುಡಿಯಲೇಬೇಕು ಎಂದು ನಿಮಗೆ ಅನಿಸಿರಬಹುದು. ಇದನ್ನು ತಯಾರಿಸುವ ವಿಧಾನ ಕೂಡ ಮುಂದೆ ಓದಿ…

ಮೊದಲಿಗೆ ದಾಸವಾಳದ ಹೂಗಳ ಅಗತ್ಯವಿದ್ದು, ನೀವು ಹೂ ಕೀಳುವಾಗ ಅದು ಬಾಡದೆ, ತಾಜಾವಾಗಿ ಇರಬೇಕು.ಈಗ ನೀವು ಅದರ ಎಸಲುಗಳನ್ನು ಬೇರ್ಪಡಿಸಿಕೊಳ್ಳಿ.ಇದನ್ನು ನೀರಿಗೆ ಹಾಕಿ ಸರಿಯಾಗಿ ತೊಳೆಯಿರಿ. ಎರಡು ಸಲ ತೊಳೆದರೆ ಆಗ ಕಲ್ಮಶ ಅಥವಾ ಕೀಟಾಣು ನಾಶ ಆಗುವುದು.ಈಗ ಒಂದು ಪಾತ್ರೆ ಇಟ್ಟು ಅದಕ್ಕೆ ಒಂದುವರೆ ಕಪ್ ನೀರು ಹಾಕಿ. ನಿಮಗೆ ಬೇಕಿದ್ದರೆ ಹೆಚ್ಚು ಹಾಕಬಹುದು.ನೀರು ಕುದಿಯಲಿ ಮತ್ತು ಇದರ ಬಳಿಕ ಹೂವಿನ ಎಸಲುಗಳನ್ನು ಹಾಕಿ.ಸಣ್ಣ ಬೆಂಕಿಯಲ್ಲಿ ಇದನ್ನು 2 ನಿಮಿಷ ಕಾಲ ಕುದಿಸಿ.ಗ್ಯಾಸ್ ಆಫ್ ಮಾಡಿ ಮತ್ತು ಮುಚ್ಚಳ ಮುಚ್ಚಿ ಮತ್ತು ಬದಿಗೆ ಇಟ್ಟುಬಿಡಿ.5-6 ನಿಮಿಷ ಬಳಿಕ ಈ ಚಾವನ್ನು ಸೋಸಿಕೊಳ್ಳಿ.ಈಗ ದಾಸವಾಳದ ಚಾ ತಯಾರಾಗಿದೆ.

Related Post

Leave a Comment