ಊಟ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ ಅನಾರೋಗ್ಯ 100% ಕಾಡುತ್ತದೆ!

Written by Anand raj

Published on:

ಸರ್ವರಿಗೂ ನಮಸ್ಕಾರ, ಊಟ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ ಯಾವ ತಪ್ಪುಗಳು ಅನ್ನುತ್ತೀರಾ ಹೇಳುತ್ತೀವಿ ಬನ್ನಿ, ಊಟ ಮಾಡುವ ಸಂದರ್ಭದಲ್ಲಿ ನೀರನ್ನು ಅಥವಾ ಯಾವುದೇ ರೀತಿಯ ಜ್ಯೂಸನ್ನು ಕುಡಿಯಬಾರದು ಯಾಕೆಂದರೆ ಊಟ ಮಾಡುವಾಗ ನೀರನ್ನು ಕುಡಿದರೆ ಅದು ನಿಮ್ಮ ಹೊಟ್ಟೆಯಲ್ಲಿರುವ ಆಮ್ಲವನ್ನು ಕಡಿಮೆ ಮಾಡುತ್ತದೆ, ಇದರಿಂದ ನಿಮ್ಮ ಜಠರವು ಪ್ರೋಟೀನ್ಗಳು ಕಾರ್ಬೋಹೈಡ್ರೇಟ್ಗಳು ಮತ್ತು ಕೊಬ್ಬಿನ ಅಂಶಗಳನ್ನು ಅರಗಿಸುವಲ್ಲಿ ತನ್ನ ಪರಿಣಾಮವನ್ನು ಕಳೆದುಕೊಳ್ಳಬಹುದು, ಆದ್ದರಿಂದ ಊಟಕ್ಕಿಂತ ಹತ್ತು ನಿಮಿಷ ಮುಂಚೆ ನೀರನ್ನು ಅಥವಾ ಜ್ಯೂಸನ್ನು ಕುಡಿಯುವುದು ಉತ್ತಮ ಇದರಿಂದ ನಿಮ್ಮ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.

ಇನ್ನು ಮಾಂಸದ ಜೊತೆಗೆ ಚೀಸ್ ತಿನ್ನಬೇಡಿ ಯಾಕೆಂದರೆ ಚೀಸ್ ಮತ್ತು ಮಾಂಸದಲ್ಲಿ ಪ್ರೋಟೀನ್ ಅಂಶಗಳು ಹೆಚ್ಚಾಗಿರುತ್ತವೆ, ಇವೆರಡನ್ನೂ ಒಂದೇ ಸಮಯದಲ್ಲಿ ತಿನ್ನುವುದರಿಂದ ನಿಮ್ಮ ಜಠರದ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ ಮತ್ತು ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ ಇದರಿಂದ ಹೊಟ್ಟೆ ನೋವಿನ ಸಮಸ್ಯೆಗಳು ಕೂಡ ಉಂಟಾಗಬಹುದು.

ಬೀನ್ಸ್ ಮತ್ತು ಚೀಸನ್ನು ಒಟ್ಟಿಗೆ ತಿನ್ನುವುದರಿಂದ ನಿಮ್ಮ ಹೊಟ್ಟೆ ಉಬ್ಬುತ್ತದೆ, ನಿಮ್ಮ ಹೊಟ್ಟೆಯೊಳಗೆ ಗ್ಯಾಸನ್ನು ಉಂಟುಮಾಡುತ್ತದೆ ಮತ್ತು ಇದರಿಂದ ಜೀರ್ಣಕಾರಿ ಸಮಸ್ಯೆಗಳು ಕಡಿಮೆಯಾಗುತ್ತವೆ.ಹಾಲು ಕುಡಿದ ನಂತರ ಬಾಳೆಹಣ್ಣನ್ನು ತಿನ್ನಬೇಡಿ ಹಾಲು ಮತ್ತು ಬಾಳೆಹಣ್ಣನ್ನು ಒಟ್ಟಿಗೆ ಸೇವಿಸುವುದರಿಂದ ನಿಮ್ಮ ಹೊಟ್ಟೆ ಹುಬ್ಬುತ್ತದೆ ಮತ್ತು ಇದು ನಿಮ್ಮ ಜೀವನ ವ್ಯವಸ್ಥೆಯನ್ನು ಹಾಳು ಮಾಡುತ್ತದೆ.

ಊಟ ಮಾಡುವಾಗ ಹಣ್ಣುಗಳನ್ನು ಸೇವಿಸಬೇಡಿ ಊಟ ಮಾಡುವಾಗ ಹಣ್ಣುಗಳನ್ನು ಸೇವಿಸಿದರೆ, ಹಣ್ಣುಗಳಲ್ಲಿರುವ ಸಕ್ಕರೆಯ ಅಂಶವು ನಿಮ್ಮ ಹೊಟ್ಟೆಯ ಒಳಗಡೆ ಗುದುಗುವಿಕೆಯನ್ನು ಉಂಟುಮಾಡುತ್ತದೆ. ಇದು ಆರೋಗ್ಯಕ್ಕೆ ಬಹಳ ಅಪಾಯಕಾರಿ ಆದ್ದರಿಂದ ಊಟದ ಕೆಲವು ಸಮಯದ ನಂತರ ಹಣ್ಣುಗಳನ್ನು ಸೇವಿಸುವುದು ಉತ್ತಮ.

ಇನ್ನು ಮೊಟ್ಟೆ ಹಾಗೂ ಬಟಾಣಿಯನ್ನು ಒಟ್ಟಿಗೆ ಸೇವಿಸಬೇಡಿ ಯಾಕೆಂದರೆ ಮೊಟ್ಟೆ ಹಾಗೂ ಬಟಾಣಿಯಲ್ಲಿ ಪ್ರೋಟೀನ್ಗಳು ಬಹಳ ಹೆಚ್ಚಾಗಿರುತ್ತದೆ, ಎರಡನ್ನೂ ಒಟ್ಟಾಗಿ ಸೇವಿಸಿದರೆ ಜೀರ್ಣಾಂಗ ವ್ಯವಸ್ಥೆ ಹಾಳಾಗುತ್ತದೆ ಮತ್ತು ಎರಡನ್ನು ಬಹಳ ಬೇಗ ಜೀರ್ಣಿಸಲು ಸಾಧ್ಯವಾಗುವುದಿಲ್ಲ ಆದ್ದರಿಂದ ಮೊಟ್ಟೆ ಹಾಗೂ ಬಟಾಣಿಯನ್ನು ಒಂದೇ ಸಮಯದಲ್ಲಿ ಸೇವಿಸಬೇಡಿ.

ಪಾಸ್ತದ ಜೊತೆ ಟಮೋಟೋ ಹಣ್ಣನ್ನು ತಿನ್ನಬೇಡಿ ಪಾಸ್ತಾ ಹಾಗೂ ಟೊಮೆಟೊ ಇವೆರಡನ್ನೂ ಒಟ್ಟಿಗೆ ಸೇವಿಸಿದರೆ ಟೊಮೆಟೋ ಹಣ್ಣು ನಮ್ಮ ದೇಹದಲ್ಲಿರುವ ಕಿಣ್ವವನ್ನು ಹಾಳುಮಾಡುತ್ತದೆ ಅಥವಾ ದುರ್ಬಲಗೊಳಿಸುತ್ತದೆ, ಇದು ನಿಮ್ಮ ಜಠರವನ್ನು ಹಾಳು ಮಾಡುವ ಸಾಧ್ಯತೆಗಳಿರುತ್ತವೆ ಇದರಿಂದ ನಿಮ್ಮ ಜೀರ್ಣ ಕ್ರಿಯೆ ಅಥವಾ ಜೀರ್ಣಾಂಗ ವ್ಯವಸ್ಥೆ ಹಾಳಾಗಬಹುದು.

ನೀವು ಆಹಾರವನ್ನು ಸೇವಿಸುವಾಗ ಯಾವುದೋ ಸಮಯದಲ್ಲಿ ಸೇವಿಸಬಾರದು, ಸರಿಯಾದ ಸಮಯದಲ್ಲಿ ಆಹಾರವನ್ನು ಸೇವಿಸುವುದರಿಂದ ಇದು ನಿಮ್ಮ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ ಮತ್ತು ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ.

Related Post

Leave a Comment