ಉತ್ತರಕಾಂಡ ದೆಹರಾದುನ್ ಸಮೀಪದಲ್ಲಿರುವ ತಪಕೇಶ್ವರ ಮಂದಿರ:ಈ ಮಂದಿರ ಸಾಕಷ್ಟು ಭಕ್ತರನ್ನು ಆಕರ್ಷಿಸುತ್ತದೆ.ಈ ಪ್ರದೇಶದ ಪ್ರಖ್ಯಾತ ಶಿವಾಲಯ ಇದಾಗಿದ್ದು ಅದು ಕೂಡ ಗುಹೆಯಲ್ಲಿ ಇದೆ.ಈ ಗುಹೆಯ ಕಿರಿದಾದ ಬಂಡೆಯಿಂದ ಜಿನುಗುವ ಜಲ ಶಿವಲಿಂಗದ ಮೇಲೆ ಸದಾ ಶ್ರವಿಸುತ್ತ ಇರುತ್ತದೆ.ಶಿವ ರುದ್ರನಿಗೆ ಪ್ರತಿನಿತ್ಯ ಅಭಿಷೇಕ ನಡೆಯುತ್ತದೆ. ಹೀಗೆ ಲಿಂಗದ ಮೇಲೆ ಬಿದ್ದ ನೀರು ನೆಲೆದಾಡೆ ಒಸರಿ ದೇವಾಲಯದ ಹಣತೆ ದೂರದಲ್ಲಿ ಸಣ್ಣ ತೋರೆಯಾಗಿ ಪ್ರಬೈಸುವ ದೃಶ್ಯ ಮನೋಮೋಹಕ.ತಪಕೇಶ್ವರ ಎಂಬ ಹೆಸರಿನ ಮೂಲ ಹನಿ ಹಿಂದಿ ಪದವೇ ತಪಕ.ಇನ್ನು ಈ ಮಹಾದೇವ ಮಂದಿರಕ್ಕೆ ಪೌರಾಣಿಕ ಹಿನ್ನೆಲೆ ಇದೆ.ಪಾಂಡವರು ಮತ್ತು ಕೌರವರ ಗುರುಗಳಾಗಿದ್ದ ದ್ರೋಣಾಚಾರ್ಯ ಇಲ್ಲಿ ಧ್ಯಾನ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಆದ್ದರಿಂದಲೇ ದ್ರೋಣಗವಿ ಎಂಬ ಹೆಸರಿನ ಗವಿಗಳು ಕೂಡ ಇದೆ.ಈ ಗುಹೆಗಳು 6000 ವರ್ಷಗಳಿಗಿಂತ ಪುರಾತನವಾದ ಗುಹೆಗಳು ಎಂದು ಹೇಳಲಾಗುತ್ತದೆ.
ಗುಪ್ತೇಶ್ವರ ಮಹಾದೇವಲಯ:ಇದು ಒರಿಸ್ಸಾದಲ್ಲಿ ದಟ್ಟವಾದ ಅರಣ್ಯದಲ್ಲಿ ಸಹಜವಾಗಿ ಸಿದ್ಧವಾದ ಸ್ವಯಂಭೂಲಿಂಗ ನೆಲೆಸಿದೆ.ಈ ದಟ್ಟವಾದ ಅಡವಿಯಲ್ಲಿ ಶಿವನ ಲಿಂಗದ ಮೇಲೆ ಸತತವಾದ ಜಲದಿಂದ ಅಭಿಷೇಕ ಜರುಗುತ್ತದೆ.ಇದನ್ನು ಶ್ರೀರಾಮಚಂದ್ರನು ಪೂಜಿಸಿದರೆ ಎಂದು ಹೇಳಲಾಗುತ್ತದೆ.ಈ ಗುಹೆಯ ಪಕ್ಕದಲ್ಲಿ ಶ್ರೀರಾಮಗಿರಿ ಎಂಬ ಸ್ಥಳವನ್ನು ಕೂಡ ದರ್ಶನ ಮಾಡಬಹುದು.ಈ ಲಿಂಗವನ್ನು ಶ್ರೀರಾಮಚಂದ್ರನೇ ಕಂಡುಹಿಡಿದನೆಂದು 6000 ವರ್ಷದ ಪುರಾತನರು ಎಂದು ಹೇಳಲಾಗುತ್ತದೆ.ಇದನ್ನು ಕೋಟೇಶ್ವರ ಮಹದೇವ ಎಂದು ಕರೆಯಲಾಗುತ್ತದೆ.ಈ ಲಿಂಗವನ್ನು ಪವಿತ್ರ ಎಂದು ಭಾವಿಸುತ್ತ ಭಕ್ತಿಶ್ರದ್ಧೆಗಳಿಂದ ಪೂಜಿಸಲಾಗುತ್ತದೆ.
ಮುಖ್ಯವಾಗಿ ಇಲ್ಲಿ ಅತಿ ದೀರ್ಘಕಾಲ ಮೂಲವ್ಯಾಧಿಯಿಂದ ಬಳಲುತ್ತಿರುವವರು ಇಲ್ಲಿ ಬಂದು ಮಹದೇವನ ದರ್ಶನ ಮಾಡಿಕೊಂಡರೆ ಸಾಕು ಸಂಪೂರ್ಣ ಆರೋಗ್ಯವಂತರಾಗುತ್ತಾರೆ.ಇಲ್ಲಿ ಸ್ವಯಂಭೂ ಶಿವಲಿಂಗ ಇದ್ದಾನೆ.4 ಕಿಲೋಮೀಟರ್ ಉದ್ದ ಇರುವ ಈ ಗುಹೆಯಲ್ಲಿ ಶಿವಲಿಂಗದ ಮೇಲೆ ಸತತವಾಗಿ ಜಲದಿಂದ ಶಿವನಿಗೆ ಅಭಿಷೇಕ ಜರುಗುತ್ತದೆ. ಈ ಗುಹೆಯಲ್ಲಿ ಇರುವಂತಹ ಪರಮೇಶ್ವರನ ದರ್ಶನ ಮಾಡಿಕೊಳ್ಳಬೇಕಾದರೆ ಸಾಕಷ್ಟು ಧೈರ್ಯ ಇರಬೇಕು ಎಂದು ಹೇಳುತ್ತಾರೆ.2003ರಲ್ಲಿ 3 ಲಕ್ಷ ಜನ ಜಮ್ಮು-ಕಾಶ್ಮೀರದ ಶಿವನ ಗುಹೆಗೆ ಬಂದು ಮಹಾದೇವನ ದರ್ಶನವನ್ನು ಮಾಡಿದ್ದಾರೆ. ನಂತರ 2015 ರಲ್ಲಿ 20 ಲಕ್ಷ ಜನ ಭಕ್ತರು ಪರಮೇಶ್ವರನನ್ನು ದರ್ಶನ ಮಾಡಿದ್ದಾರೆ.
ಮುಂಬೈನ ಹಾರ್ಬರ್ ಗಿ ಹತ್ತಿರದ ಎಲಿಫ್ಯಾಂಟ್ ಗುಹೆಯಲ್ಲಿ ನೆಲೆಸಿರುವಂತಹ ಮಹಾದೇವನು.:ಇದು ಎಲಿಫ್ಯಾಂಟ್ ಗುಹೆ ಎಂದು ಪ್ರಸಿದ್ಧವಾಗಿದೆ.ಇವು ಐಲ್ಯಾಂಡ್ ನಲ್ಲಿ ನೆಲೆಸಿರುವುದರಿಂದ ಸಾಕಷ್ಟು ಪ್ರತ್ಯೇಕ ಹೊಂದಿದೆ.ಮುಂಬೈ ಹಾರ್ಬರ್ಗಿ ಹತ್ತು ಕಿಲೋಮೀಟರ್ ದೂರದಲ್ಲಿ ಈ ಎಲಿಫ್ಯಾಂಟ್ ಗುಹೆಗಳನ್ನು ನೋಡಬಹುದು.ಇದು ಕೂಡ ಅರೇಬಿಯನ್ ತೀರಕ್ಕೆ ಹತ್ತಿರದಲ್ಲಿರುತ್ತದೆ.ಈ ಗುಹೆಗಳನ್ನು ಎರಡು ಭಾಗಗಳಾಗಿ ವಿಭಜಿಸಲಾಗಿದೆ. ಮೊದಲನೆಯದು ಹಿಂದೂ ದೇವರ ಗುಹೆಗಳು ಎರಡನೆಯ ಗುಹೆಗಳನ್ನು ಚಿಕ್ಕವಾದ ಬುದ್ಧಿಸ್ಟ್ ಗುಹೆಗಳು ಎಂದು ಕರೆಯಲಾಗುತ್ತದೆ.
ಇಲ್ಲಿ ಬಗೆಬಗೆಯ ಶಿಲ್ಪಗಳನ್ನು ಕೆತ್ತಲಾಗಿದೆ. ಪ್ರಧಾನ ದೇವರು ಪರಮೇಶ್ವರ.ಈ ಪರಮೇಶ್ವರನನ್ನು ಅರ್ಧನಾರೀಶ್ವರ ರೂಪದಲ್ಲಿ ಭಕ್ತರು ಪೂಜಿಸುತ್ತಾರೆ. ಅನೇಕ ಶಿಲ್ಪಗಳು ನಿರ್ಮಾಣದಲ್ಲಿ ಭವ್ಯವಾಗಿ ಕಂಡುಬರುತ್ತದೆ ಈ ಗುಹೆಯ ಪರಮೇಶ್ವರನ ಲಿಂಗವು. ಅದರಲ್ಲಿ ಯಾವುದೇ ಚಾರಿತ್ರಿಕ ಅದಾರಗಳು ಲಭ್ಯವಾಗಿಲ್ಲ. ಇಲ್ಲಿ ಗರ್ಭಪುರಿ ಎಂಬ ಚಿಕ್ಕಗ್ರಾಮ ನೆಲೆಸಿದ್ದು.ಆ ಗ್ರಾಮಕ್ಕೆ ಈ ಗುಹೆಗಳು ದಕ್ಷಿಣ ದಿಕ್ಕಿಗೆ ಇರುತ್ತದೆ.197 ಗುಹೆಗಳಲ್ಲಿ 190 ಚಿಕ್ಕ ಚಿಕ್ಕ ಗುಹೆಗಳನ್ನು ನೋಡಬಹುದು.ಇನ್ನು ಈ ಪ್ರಧಾನ ದ್ವಾರದ ಬಳಿಯಲ್ಲಿ ಆನೆಗಳನ್ನು ಕೆತ್ತಲಾಗಿದೆ. ಪ್ರಪಂಚದಲ್ಲಿ ಎಲ್ಲಿಯೂ ಸಿಗದಂತಹ ತ್ರಿಮೂರ್ತಿಯ ಶಿಲಾ ವಿಗ್ರಹಗಳು ಈ ಗುಹೆಯಲ್ಲಿ ಕಾಣುತ್ತದೆ.ಇದರಿಂದ ದೇಶ-ವಿದೇಶದಿಂದ ಅನೇಕ ಭಕ್ತರು ಇಲ್ಲಿ ನೋಡಲು ಬರುತ್ತಾರೆ.
ಇನ್ನು ಕರ್ನಾಟಕದಲ್ಲಿರುವ ದಾಂಡೇಲಿ ಗುಹೆಗಳು:ಈ ಗುಹೆಯಲ್ಲೂ ಕೂಡ ಸಹಜ ಸಿದ್ಧವಾದ ಸ್ವಯಂಭೂಲಿಂಗವನ್ನು ದರ್ಶನ ಮಾಡಬಹುದು. ಪ್ರಕೃತಿಯ ನಡುವೆ ಇಲ್ಲಿ ಮಹದೇವನು ನೆಲೆಸಿದ್ದಾನೆ. ಆದರೆ ದಟ್ಟವಾದ ಅರಣ್ಯದ ಕಾರಣ ಇಲ್ಲಿಗೆ ತೆರಳಲು ಧೈರ್ಯ ಸಾಹಸವನ್ನು ತೋರಬೇಕಾಗುತ್ತದೆ.176 ಮೆಟ್ಟಿಲುಗಳನ್ನು ಇಳಿದು ಹೋದರೆ ಮಹದೇವನ ದರ್ಶನ ಆಗುತ್ತದೆ ಗುಹೆಯಲ್ಲಿ.
ಮೇಘಾಲಯದ ಮೆಜಫಿನ್
ಇದು ಮಸಿಲಂ ಗ್ರಾಮದ ಬಳಿ ಇರುವಂತಹ ಅತ್ಯಂತ ಪುರಾತನವಾದ ಗುಹೆಗಳು ಎಂದು ಹೇಳಲಾಗುತ್ತದೆ. ಇದರ ಉದ್ದ 190 ಕಿಲೋಮೀಟರ್ ಇದ್ದು, ಎತ್ತರ 50 ಮೀಟರ್ ಇದ್ದು,ಅಗಲ ನಾಲ್ಕು ಮೀಟರ್ ಇದೆ ಎಂದು ಹೇಳಲಾಗುತ್ತದೆ.ಇಲ್ಲಿ ಕೂಡ ಮಹದೇವನು ಸ್ವಯಂಭೂಲಿಂಗವಾಗಿ ನೆಲೆಸಿದ್ದಾನೆ. ಇಲ್ಲಿಯೂ ಕೂಡ ದೇಶವಿದೇಶಗಳಿಂದ ಭಕ್ತರು ಮಹದೇವನ ದರ್ಶನಕ್ಕೆ ಬರುತ್ತಾರೆ.
ಇನ್ನು ಬೆಲ್ಲಂ ಗುಹೆಗಳು ಎಂದು ಪ್ರಸಿದ್ಧವಾಗಿರುವ ಆಂಧ್ರದ ಬೆಲ್ಲಂ ಗುಹೆ. ಈ ಗುಹೆಗಳು ಅತೀ ಪಾತಾಳಕ್ಕೆ ಇವೆ ಎಂದು ಹೇಳಲಾಗುತ್ತದೆ. ಆದ್ದರಿಂದ ಇಲ್ಲಿ ಪಾತಾಳ ಗಂಗಾ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ.1884 ರಲ್ಲಿ ಈ ಗುಹೆಯನ್ನು ಒಬ್ಬ ಬ್ರಿಟಿಷ್ ಕೌನ್ಸಿಲರ್ ಕಂಡುಹಿಡಿದ್ದಾನೆ ಎಂದು ಹೇಳಲಾಗುತ್ತದೆ. ಆದರೆ ಅದ ನಂತರ ಎಷ್ಟು ವರ್ಷಗಳ ಕಾಲ ಮತ್ತೆ ಬೆಳಕಿಗೆ ಬಾರದೆ ಕತ್ತಲಲ್ಲಿ ಉಳಿದುಬಿಟ್ಟವು. ನಂತರ 1882 ರಲ್ಲಿ ಜರ್ಮನ್ ಸೈಂಟಿಸ್ಟ್ ಒಬ್ಬರು ಮತ್ತೆ ಪರಿಶೋಧನೆ ಮಾಡಿ ಬೆಳಕಿಗೆ ಬಂದವು.1988 ರಲ್ಲಿ ಸರ್ಕಾರವು ಇದನ್ನು ಸಂದರ್ಶನ ಮಾಡುವುದಕ್ಕೆ ಅನುಮತಿ ನೀಡಲಾಯಿತು.ಈ ಗುಹೆಗಳು 4500 ವರ್ಷಗಳ ಪುರಾತನ ಗುಹೆಗಳು ಎಂದು ಹೇಳಲಾಗಿದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.