ಹೆಣವನ್ನು ಮುಟ್ಟಿದರೆ ಏನಾಗುತ್ತೊ ಗೊತ್ತಾ?ಯಾರಾದರೂ ತೀರಿಕೊಂಡರೆ ಖಂಡಿತವಾಗಿ ಈ ರೀತಿ ಮಾಡಿ!

Written by Anand raj

Published on:

ನೆಂಟರಲ್ಲಿ ಆಗಲಿ, ಸ್ನೇಹಿತರಲ್ಲಿ ಆಗಲಿ ಅಥವಾ ಅಕ್ಕ ಪಕ್ಕದ ಮನೆವರು ಆಗಲಿ ಯಾರಾದರೂ ತೀರಿಕೊಂಡರೆ ತಕ್ಷಣವೆ ನಾವು ಅಲ್ಲಿಗೆ ಹೋಗೀ ಅವರೊಂದಿಗೆ ಪ್ರೀತಿಯಿಂದ ಮಾತನಾಡಬೇಕು. ಅವರು ಅಳುತ್ತ ಇದ್ದರೆ ಸಮಾಧಾನ ಮಾಡಬೇಕು. ದಯವಿಟ್ಟು ಸುಮ್ನೆನೇ ಇರಿ ಅಳಬೇಡಿ ಎಲ್ಲಾರು ಒಂದು ದಿನ ಹೋಗಬೇಕಾಗಿರೋದೇ ಎಂದು ಹೇಳಿ ಅದರೆ ಸ್ವಲ್ಪ ಹಣ ಸಹಾಯ ಬೇಕಾದರೆ ಮಾಡಬೇಕು. ಅವರೊಂದಿಗೆ ಕುಳಿತುಕೊಂಡು ಒಳ್ಳೆಯ ಮಾತುಗಳನ್ನು ಆಡಬೇಕು.

ದಹನ ಸಂಸ್ಕಾರ ಆಗವವರೆಗೂ ಅವರ ಮನೆ ಹತ್ತಿರ ಇರಬೇಕು. ಅವರಿಗೆ ಯಾವುದೇ ಸಹಾಯ ಬೇಕು ಎಂದರು ಖಂಡಿತವಾಗಿ ಮಾಡಬೇಕು. ಆವಾಗ್ಲೇ ಭಗವಂತನ ಅನುಗ್ರಹ ಅನ್ನೋದು ನಮಗೆ ಸಿಗತ್ತೆ. ನಮ್ಮ ಕುಟುಂಬದವರಿಗೆ ಮಕ್ಕಳಿಗೆ ಒಳ್ಳೆಯದಾಗುತ್ತದೆ. ಒಬ್ಬರು ನೋವಲ್ಲಿ ಇರುವಾಗ ಸಮಾಧಾನ ಮಾಡದೇ ಇದ್ದರೆ ನಮ್ಮ ಜೀವನ ಏಕೆ ಬೇಕು ಹೇಳಿ.

ಕಷ್ಟದ ಸಮಯದಲ್ಲಿ ಅವರಿಗೆ ಸಮಾಧಾನ ಮಾಡಿದರೆ ನಮಗೂ ಸ್ವಲ್ಪ ಸಮಾಧಾನ ಆಗುತ್ತದೆ. ಇನ್ನು ಸ್ಮಶಾನದವರೆಗೂ ಹೆಣವನ್ನು ಹೊತ್ತುಕೊಂಡು ಹೋದರೆ ಯಾವುದೇ ದೋಷ ಬರುವುದಿಲ್ಲ. ನೀವು ಅವರಿಗೆ ಸಹಾಯ ಮಾಡಿದರೆ ಅವರ ಮನಸ್ಸಲ್ಲಿ ಇರುವ ನೋವು ಸ್ವಲ್ಪ ಕಡಿಮೆ ಆಗುತ್ತದೆ.

ಒಂದು ವೇಳೆ ಹೆಂಡತಿ ಗರ್ಭಿಣಿ ಆಗಿದ್ದರೆ ಮಾತ್ರ ಹೆಣವನ್ನು ಹೊತ್ತುಕೊಂಡು ಹೋಗಬಾರದು ಮತ್ತು ಹೆಣಕ್ಕೆ ಮಣ್ಣನ್ನು ಹಾಕಬಾರದು.ಬಡವರಿಗೆ ಮಾಡುವ ಸಹಾಯ, ಹಳೆಯ ಶಿವಲಿಂಗಕ್ಕೆ ಮಾಡುವ ಪೂಜೆ, ಅನಾಥ ಪ್ರೇತ ಸಂಸ್ಕಾರ ಈ ಮೂರು ಕೆಲಸಗಳು ಅಶ್ವಮೇಧ ಫಲ ಮಾಡಿದಷ್ಟು ಫಲ ನಮಗೆ ಸಿಗುತ್ತದೆ.

Related Post

Leave a Comment