ಮನೆಯಲ್ಲಿ ಜೇಡರ ಬಲೆ ಕಟ್ಟಿದರೆ ಹೀಗೆ ಮಾಡಿ ಸಾಕು ಒಂದು ಜೇಡ ಕೂಡ ಮನೆಯಲ್ಲಿ ಇರೋದಿಲ್ಲ!

Written by Anand raj

Published on:

ಪ್ರತಿಯೊಬ್ಬರೂ ಕೂಡ ತಮ್ಮ ಮನೆ ಸುಂದರವಾಗಿರಬೇಕು, ಸ್ವಚ್ಛವಾಗಿರಬೇಕು ಎಂದು ಬಯಸುತ್ತಾರೆ. ಅದರಲ್ಲೂ ಕೂಡ ಕೀಟಗಳಿಂದ ಆಗುವ ತೊಂದರೆಯಿಂದ ದೂರವಿರುವುದಕ್ಕೆ ಬಯಸುತ್ತಾರೆ. ಕೆಲವು ಕೀಟಗಳು ಬೇಡಬೇಡವೆಂದರೂ ಮನೆಯೊಳಗೆ ಸೇರಿಕೊಂಡು ಬಿಡುತ್ತವೆ. ಅವುಗಳ ಜೊತೆಗೆ ಬದುಕುವುದು ನಿಮಗೆ ಇಷ್ಟವಿಲ್ಲದೆ ಇದ್ದರೂ ಕೂಡ ಅನಿವಾರ್ಯವಾಗಿ ಅವುಗಳ ತೊಂದರೆಗೆ ನೀವು ಒಳಗಾಗಬೇಕಾಗುತ್ತದೆ. ಅದರಲ್ಲೊಂದು ಜೇಡ.

ಎಷ್ಟೇ ಸ್ವಚ್ಛವಾಗಿಟ್ಟುಕೊಂಡರೂ ಕೂಡ ಜೇಡಗಳು ಹೊತ್ತಲ್ಲದ ಹೊತ್ತಲ್ಲಿ ಬಲೆ ಕಟ್ಟಿಕೊಂಡು ಮನೆಯ ಸೌಂದರ್ಯಕ್ಕೆ ಕಪ್ಪು ಮಸಿ ಬಳಿದುಬಿಡುತ್ತವೆ. ಇಂತಹ ಜೇಡಗಳನ್ನು ನಿಮ್ಮ ಮನೆಯಿಂದ ದೂರವಿಡುವುದಕ್ಕೆ ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದು ಬಹಳ ಒಳ್ಳೆಯದು. ಕೆಮಿಕಲ್ ಗಳನ್ನು ಬಳಸಿ ಕ್ರಿಮಿಕೀಟಗಳನ್ನು ದೂರವಿಡಲು ಪ್ರಯತ್ನಿಸಿದರೆ ಆ ಕೆಮಿಕಲ್ ಗಳು ನಿಮ್ಮ ಆರೋಗ್ಯದ ಮೇಲೂ ತೊಂದರೆ ಮಾಡುವ ಸಾಧ್ಯತೆ ಇದೆ. ಹಾಗಾಗಿ ನೈಸರ್ಗಿಕವಾಗಿ ವಿನೆಗರ್ ಮತ್ತು ಕೆಲವು ಎಸೆನ್ಶಿಯಲ್ ಆಯಿಲ್ ಬಳಸಿ ಜೇಡಗಳನ್ನು ದೂರವಿಡಲು ಸಾಧ್ಯವಿದೆ.ಮನೆಯನ್ನು ನೈಸರ್ಗಿಕ ವಿಧಾನದಿಂದ ಸ್ವಚ್ವವಾಗಿಟ್ಟುಕೊಳ್ಳುವ ಮೂಲಕ ಜೇಡಗಳು ತಮ್ಮ ಅಸ್ತಿತ್ವವನ್ನು ನಿಮ್ಮ ಮನೆಯಲ್ಲಿ ಸ್ಥಾಪಿಸುವುದನ್ನು ತಡೆಯಬಹುದು. ಅದಕ್ಕಾಗಿ ಸರಿಯಾದ ಮಾರ್ಗವನ್ನು ನೀವು ಅನುಸರಿಸಬೇಕಾಗುತ್ತದೆ ಅಷ್ಟೇ.

ನೈಸರ್ಗಿಕ ಮದ್ದುಗಳನ್ನು ಬಳಸುವುದೇ ಉತ್ತಮ–ನಿಮ್ಮ ಮನೆಯ ಸಂದುಮೂಲೆಗಳಲ್ಲಿ ಮತ್ತು ಗೋಡೆಯಲ್ಲಿ ಒಡಕುಗಳಿರುವ ಜಾಗದಲ್ಲಿ ವಿನೆಗರ್ ಮತ್ತು ನೀರನ್ನು ಸೇರಿಸಿ ಸ್ಪ್ರೇ ಮಾಡಿ. ಒಂದು ಸ್ಪ್ರೇ ಬಾಟಲಿಯಲ್ಲಿ ಅರ್ಧ ಬಿಳಿ ವಿನೆಗರ್ ಮತ್ತು ಅರ್ಧದಷ್ಟು ನೀರನ್ನು ಸೇರಿಸಿ ತುಂಬಿಸಿ. ನಂತರ ಮನೆಯ ಗೋಡೆ, ಕಿಟಕಿ, ಬಾಗಿಲುಗಳ ಸಂದುಗಳಲ್ಲಿ ಮತ್ತು ಮೂಲೆಮುರುಕುಗಳಲ್ಲಿ ಸ್ಪ್ರೇ ಮಾಡಿ. ಜೇಡಗಳನ್ನು ಮನೆಯಿಂದ ದೂರವಿಡಲು ದಿನಂಪ್ರತಿ ಈ ವಿಧಾನವನ್ನು ಬಳಸಬಹುದು.

ಜೇಡಗಳು ನೇರವಾಗಿ ವಿನೆಗರ್ ನ ಸಂಪರ್ಕಕ್ಕೆ ಒಳಗಾದರೆ ಸಾಯುತ್ತವೆ. ಆದರೆ ನೇರವಾಗಿ ಜೇಡಗಳಿಗೆ ಹೊಡೆಯುವುದಕ್ಕೆ ಅಸಾಧ್ಯವಾದರೂ ಕೂಡ ವಿನೆಗರ್ ಮೂಲಕ ನೀವು ಜೇಡಗಳು ಮನೆಯೊಳಗೆ ಬರುವುದನ್ನು ತಡೆಗಟ್ಟಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ವಿನೆಗರ್ ಅನ್ನು ನೀವು ದಿನನಿತ್ಯ ಓಡಾಡುವ ನೆಲಕ್ಕೆ ಮತ್ತು ಅಡುಗೆ ಮನೆಯಲ್ಲಿ ಅಪ್ಲೈ ಮಾಡುವಾಗ ಜಾಗೃತೆ ವಹಿಸಿ. ಯಾಕೆಂದರೆ ಇದು ನಿಮಗೂ ಹಾನಿ ಮಾಡಬಹುದು.ಎಸೆನ್ಶಿಯಲ್ ಎಣ್ಣೆಗಳು ಉದಾಹರಣೆಗೆ ಪೆಪ್ಪರ್ ಮಿಂಟ್ ಆಯಿಲ್, ಟೀ ಟ್ರೀ ಮತ್ತು ಚಕ್ಕೆಯ ಎಣ್ಣೆಯನ್ನು ಅಪ್ಲೈ ಮಾಡಬಹುದು. ಈ ಎಣ್ಣೆಗಳು ಅತ್ಯುತ್ತಮವಾದ ನೈಸರ್ಗಿಕ ಮಾರ್ಗವಾಗಿದ್ದು ಜೇಡಗಳು ನಿಮ್ಮ ಮನೆಯಲ್ಲಿ ನೇತಾಡುವುದನ್ನು ತಪ್ಪಿಸುವುದಕ್ಕೆ ನೆರವು ನೀಡುತ್ತದೆ. 15-20 ಹನಿಗಳಷ್ಟು ಎಸೆನ್ಶಿಯಲ್ ಎಣ್ಣೆಯನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿಕೊಳ್ಳಿ ಜೊತೆಗೆ 3 ರಿಂದ 5 ಕಪ್ ನಷ್ಟು (710 ರಿಂದ 1,180 ಎಂಎಲ್) ನೀರನ್ನು ಸೇರಿಸಿ ಮತ್ತು ಪ್ರತಿ ದಿನ ಜೇಡಗಳು ಬಲೆ ಕಟ್ಟುತ್ತಿರುವ ನಿಮ್ಮ ಮನೆಯ ಜಾಗಗಳಲ್ಲಿ ಸ್ಪ್ರೇ ಮಾಡಿ.

ಒಂದೇ ನಿರ್ದಿಷ್ಟ ಎಣ್ಣೆಗೆ ಜೇಡಗಳು ಒಗ್ಗಿಕೊಳ್ಳುವುದನ್ನು ತಪ್ಪಿಸುವುದಕ್ಕಾಗಿ ನೀವು ಪ್ರತಿ ದಿನ ವಿವಿಧ ಎಸೆನ್ಶಿಯಲ್ ಎಣ್ಣೆಯನ್ನು ಬಳಕೆ ಮಾಡುವುದು ಒಳ್ಳೆಯದು.ನಿಮ್ಮ ಮನೆಯ ಕಿಟಕಿಯ ಮೂಲೆಗಳಲ್ಲಿ ಮತ್ತು ಜೇಡಗಳು ಬಲೆ ಕಟ್ಟುವ ಜಾಗದಲ್ಲಿ ಸಿಟ್ರಸ್ ಹಣ್ಣುಗಳ ಸಿಪ್ಪೆಯನ್ನು ಉಜ್ಜಿರಿ. ನಿಂಬೆ ಮತ್ತು ಕಿತ್ತಲೆ ಹಣ್ಣಿನ ಸಿಪ್ಪೆಗಳು ಜೇಡಗಳನ್ನು ಓಡಿಸಲು ಇರುವ ನೈಸರ್ಗಿಕ ಔಷಧಿಗಳು. ಜೇಡಗಳಿಗೆ ವಾಸನೆ ಬರುವಂತೆ ಕಿಟಕಿಯ ಮೂಲೆಗಳಲ್ಲಿ, ಬಾಗಿಲಿನ ಸಂದುಗಳಲ್ಲಿ ಮತ್ತು ಮನೆಯ ಬದಿಗಳಲ್ಲಿ ಈ ಸಿಪ್ಪೆಯನ್ನು ಸುಲಿದು ಉಜ್ಜಿ ನೋಡಿ. ಅಡುಗೆ ಮನೆಯಲ್ಲಿ ಒಂದು ಬೌಲ್ ನಲ್ಲಿ ಸಿಟ್ರಸ್ ಹಣ್ಣಿನ ರಸವನ್ನು ಇಡುವ ಮೂಲಕ ನೀವು ಜೇಡಗಳನ್ನು ಆ ಜಾಗದಿಂದ ದೂರವಿಡುವುದಕ್ಕೆ ಸಾಧ್ಯವಾಗುತ್ತದೆ.

ಇದು ನಿಮ್ಮ ಮನೆಯ ಪೇಯಿಂಟ್ ಅನ್ನು ಹಾಳು ಮಾಡುವ ಸಾಧ್ಯತೆ ಇರುವುದರಿಂದಾಗಿ ಮೊದಲು ಯಾವುದಕ್ಕೂ ಪರೀಕ್ಷೆ ಮಾಡಿಕೊಳ್ಳಿ. ಮನೆಯ ಕಾಣದ ಮೂಲೆಗಳಲ್ಲಿ ಮೊದಲು ಟ್ರೈ ಮಾಡಿಕೊಳ್ಳಬಹುದು.ಸಿಟ್ರಸ್ ಸಿಪ್ಪೆಯನ್ನು ಕಿಟಕಿಯ ಸಂದುಗಳಲ್ಲಿ ಮತ್ತು ಬಾಗಿಲಿನ ಮೂಲೆಗಳಲ್ಲಿ ಇಡುವ ಮೂಲಕವೂ ನೀವು ಜೇಡಗಳನ್ನು ದೂರವಿಡುವ ಪ್ರಯತ್ನವನ್ನು ನಡೆಸಬಹುದು.

ಅಂಟುವಾಳ ಕಾಯಿಯನ್ನು ನಿಮ್ಮ ಮನೆಯ ರೂಮುಗಳಲ್ಲಿ ಮತ್ತು ಕಿಟಕಿಯ ಬದಿಗಳಲ್ಲಿ ಬಳಕೆ ಮಾಡುವುದರಿಂದಾಗಿ ಜೇಡಗಳನ್ನು ದೂರವಿಡಬಹುದು. ಅಂಟುವಾಳ ಕಾಯಿಯ ನೊರೆಯ ವಾಸನೆ ಮತ್ತು ಅದರ ವಿಭಿನ್ನ ಗುಣವಿಶೇಷತೆಯಿಂದಾಗಿ ಜೇಡಗಳನ್ನು ದೂರವಿಡುವ ಶಕ್ತಿಯನ್ನು ಅದು ಹೊಂದಿದೆ. ಹತ್ತಿರದ ಯಾವುದಾದರೂ ಗಿರಾಣಿ ಅಂಗಡಿಯಲ್ಲಿ ಅಥವಾ ಆನ್ ಲೈನ್ ಸ್ಟೋರ್ ನಿಂದ ನೀವಿದನ್ನು ಖರೀದಿಸಬಹುದು. ಇಂಗ್ಲೀಷಿನಲ್ಲಿ ಅಂಟುವಾಳ ಕಾಯಿಯನ್ನು ಹಾರ್ಸ್ ಚೆಸ್ಟ್ ನಟ್ ಎಂದು ಕರೆಯುತ್ತಾರೆ. ಪ್ರತಿ ರೂಮಿನಲ್ಲೂ ನಾಲ್ಕೈದು ಅಂಟುವಾಳ ಕಾಯಿಯನ್ನು ಇಡುವುದರಿಂದಲೂ ಕೂಡ ಜೇಡಗಳನ್ನು ದೂರವಿಡಬಹುದು. ಬಹಳ ದಿನಗಳವರೆಗೆ ಈ ಕಾಯಿಗಳು ಹಾಳಾಗುವುದೂ ಇಲ್ಲ.

ಜೇಡಗಳನ್ನು ನಿಮ್ಮ ಮನೆಯಿಂದ ದೂರವಿಡುವುದಕ್ಕೆ ನೀವು ಮರದ ತುಂಡುಗಳನ್ನು ಅಥವಾ ಬ್ಲಾಕ್ಸ್ ಗಳನ್ನು ನಿಮ್ಮ ಮನೆಯ ಮೂಲೆಗಳಲ್ಲಿ ಸ್ಪ್ರೆಡ್ ಮಾಡಬಹುದು. ಜೇಡಗಳನ್ನು ಓಡಿಸುವುದಕ್ಕೆ ಈ ಸಿಡರ್ ವಾಸನೆಯು ನೈಸರ್ಗಿಕವಾಗಿ ಕೆಲಸ ಮಾಡುತ್ತದೆ. ನಿಮ್ಮ ಹತ್ತಿರದ ಸ್ಥಳೀಯ ಹಾರ್ಡ್ ವೇರ್ ಸ್ಟೋರ್ ಮತ್ತು ಆನ್ ಲೈನ್ ನಲ್ಲಿ ನಿಮಗೆ ಈ ಮರದ ತುಂಡುಗಳು ಅಥವಾ ಬ್ಲಾಕ್ಸ್ ಗಳು ಲಭ್ಯವಾಗುತ್ತದೆ. ಮನೆಯ ಬದಿಗಳಲ್ಲಿ ಮತ್ತು ಬಾಗಿಲು, ಕಿಟಕಿಯ ಸಂದುಗಳಲ್ಲಿ ನೀವು ಈ ತುಂಡು ಅಥವಾ ಬ್ಲಾಕ್ಸ್ ಗಳನ್ನು ಹರಡುವುದರಿಂದಾಗಿ ಜೇಡಗಳನ್ನು ಮನೆಯಿಂದ ದೂರವಿಡುವುದಕ್ಕೆ ಸಾಧ್ಯವಾಗುತ್ತದೆ.

Related Post

Leave a Comment