ದ್ರೌಪದಿ ಹಾಗೂ ಮಹಾಭಾರತ!ಅಸಲಿಗೆ ದ್ರೌಪದಿ ಯಾರು ?

Written by Anand raj

Published on:

ಭಾರತ ಪುರಾಣ ಇತಿಹಾಸದಲ್ಲಿ ಪಾತಿವ್ರತ್ಯಕ್ಕೆ ಬಹಳ ಪ್ರಾಮುಖ್ಯತೆಯಿದೆ.ಪತಿಯನ್ನು ಪ್ರತ್ಯಕ್ಷ ದೇವರೆಂದು ಪೂಜಿಸುವಂತಹ ಸನಾತನ ಸಂಪ್ರದಾಯಗಳನ್ನು ಒಳಗೊಂಡಿರುವ ದೇಶವೇ ನಮ್ಮ ಭಾರತ ದೇಶ.ಪುರಾತನ ಕಾಲದಿಂದಲೂ ಈಗಿನವರೆಗೂ ಸಹ ಪತಿಯೇ ದೇವರೆಂದು ಪೂಜಿಸುವ ಮಹಿಳೆಯರಿದ್ದಾರೆ.ಸತಿ ಸಾವಿತ್ರಿ ,ಸತಿ ಅನಸೂಯಾಳಂತಹ ಶ್ರೇಷ್ಠವಾದ ಮಹಿಳೆಯರು ಜನಿಸಿರುವ ಪುಣ್ಯ ದೇಶವೇ ನಮ್ಮ ಭಾರತ ದೇಶ.ಪುರಾಣಗಳಲ್ಲಿ ತಿಳಿಸಲಾದಂತಹ ಹಲವಾರು ವಿಧಾನಗಳನ್ನು ನಾವೀಗಲೂ ಸಹ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುತ್ತೇವೆ.ಪುರಾಣ ಹಾಗೂ ಇತಿಹಾಸದಲ್ಲಿ ಅತಿ ಶ್ರೇಷ್ಠವಾದ ಮಹಿಳೆಯರೆಂದು ಹೇಳುವಂತಹ ಐವರಲ್ಲಿ ದ್ರೌಪದಿಯು ಸಹ ಒಬ್ಬಳು.ದ್ರೌಪದಿಯ ಜೀವನದ ಬಗ್ಗೆ ಹಲವಾರು ಗ್ರಂಥಗಳಲ್ಲಿ ಬಗೆ ಬಗೆಯಾದ ರೀತಿಗಳಲ್ಲಿ ವಿವರಿಸಲಾಗಿದೆ.ದ್ರೌಪದಿಗೆ ಹೇಳಿ ಕೇಳಿ 5 ಜನ ಗಂಡಂದಿರು.ಒಬ್ಬ ಸ್ತ್ರೀಗೆ ಒಂದೇ ಗಂಡ ಇರಬೇಕು ದ್ರೌಪದಿಗೆ 5 ಜನ ಗಂಡಂದಿರಿದ್ದಾರೆ ಹಾಗಿರುವಾಗ ಅವಳು ಹೇಗೆ ಪತಿವ್ರತೆಯಾಗಲು ಸಾಧ್ಯ ಎಂದು ವಿಧವಿಧವಾಗಿ ವಾದಿಸುವವರೂ ಇದ್ದಾರೆ.ನಿಜಕ್ಕೆ ದ್ರೌಪದಿ ಯಾರು ಹಾಗೂ ಅವಳ ಚರಿತ್ರೆ ಏನೆಂದು ತಿಳಿಯೋಣ ಬನ್ನಿ..

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಪೂರ್ವಕಾಲದಲ್ಲಿ ಮೌದ್ಗಲ್ಯ ಎನ್ನುವ ಮಹಾಮುನಿ ಒಬ್ಬರಿದ್ದರೂ ಆತ ಕುಷ್ಠರೋಗಿ.ಅವರ ಶರೀರವೆಲ್ಲಾ ಕುಷ್ಠರೋಗದಿಂದ ತುಂಬಿತ್ತು.ನೋಡಲು ಅತೀ ಕುರೂಪಿಯಾಗಿದ್ದರು ಅವರ ದೇಹವೆಲ್ಲಾ ಹುಣ್ಣುಗಳಿಂದ ತುಂಬಿ ರಕ್ತ ಕೀವು ಸುರಿಯುತ್ತಿತ್ತು.ಅಂತಹ ಮೌದ್ಗಲ್ಯನ ಮಡದಿಯೇ ಇಂದ್ರಸೇನಾ.ಅವಳು ಅತ್ಯಂತ ರೂಪವತಿ ಅದು ಮಾತ್ರವಲ್ಲದೆ ಮಹಾನ್ ಪತಿವ್ರತೆಯು ಕೂಡ.ಗಂಡ ಹೇಗಾದರೂ ಇರಲಿ ಅವನಿಗೆ ಸೇವೆ ಮಾಡುವುದೊಂದೆ ಕೆಲಸ ಎಂಬಂತೆ ಅವನಿಗೆ ಹಗಲು ರಾತ್ರಿ ಸೇವೆಗಳನ್ನು ಮಾಡುತ್ತಾ ಅದರಲ್ಲಿಯೇ ಮುಳುಗಿ ಹೋಗಿದ್ದಳು ಇಂದ್ರಸೇನಾ. ಮೌದ್ಗಲ್ಯ ತಿಂದ ನಂತರವೇ ಇಂದ್ರಸೇನಾ ತಿನ್ನುತ್ತಿದ್ದಳು ಅದು ಕೂಡ ಮೌದ್ಗಲ್ಯ ತಿಂದಂತಹ ತಟ್ಟೆಯಲ್ಲೇ ತಾನು ತಿನ್ನುತ್ತಿದ್ದಳು.

ಹಾಗೆ ಒಂದು ದಿನ ಮೌದ್ಗಲ್ಯ ತಿಂದಂತಹ ತಟ್ಟೆಯಲ್ಲಿ ಇಂದ್ರಸೇನಾ ಊಟ ತಿನ್ನುತ್ತಿರುವಾಗ ಆ ಊಟದಲ್ಲಿ ಮೌದ್ಗಲ್ಯನ ಕೈ ಬೆರಳೊಂದು ಸಿಗುತ್ತದೆ.ಅದನ್ನು ನೋಡಿದರೆ ಯಾರಾದರೂ ಅಸಹ್ಯ ಪಡುತ್ತಾರೆ ಆದರೆ ಇಂದ್ರಸೇನಾ ಮಾತ್ರ ಅಯ್ಯೋ ನನ್ನ ಗಂಡನ ಇನ್ನೊಂದು ಬೆರಳು ಸಹ ಉದುರಿ ಹೋಯಿತೆ ಎಂದು ದುಃಖಿಸುತ್ತಾ ಆ ಬೆರಳನ್ನು ಪಕ್ಕಕ್ಕಿಟ್ಟು ಊಟ ಸೇವಿಸಿದಳು.ಅದನ್ನೆಲ್ಲ ಪಕ್ಕದಲ್ಲೇ ಕುಳಿತು ನೋಡುತ್ತಿದ್ದ ಮೌದ್ಗಲ್ಯ ಇಂದ್ರ ಸೇನಳಿಗಿರುವ ಪತಿಭಕ್ತಿಗೆ ಮನಸೋತು “ನಿನಗೇನು ವರ ಬೇಕೊ ಬೇಡಿಕೊ ,ನನಗಿರುವ ತಪೋಶಕ್ತಿಯಿಂದ ಅದನ್ನು ಈಡೇರಿಸುತ್ತೇನೆ” ಎಂದರು ಗಂಡನಿಗೆ ಸೇವೆ ಮಾಡುತ್ತಲೇ ಜೀವನ ಸಾಗಿಸುತ್ತಿದ್ದ ಇಂದ್ರಸೇನಾ “ನಾನು ನಿಮ್ಮೊಂದಿಗೆ ಯಾವ ಸುಖವೂ ಅನುಭವಿಸಲು ಸಾಧ್ಯವಾಗಲಿಲ್ಲ ಹಾಗಾಗಿ ನನಗೆ ನಿಮ್ಮೊಂದಿಗೆ ಸಂತೋಷವಾಗಿ ಕೆಲ ಸಮಯ ಕಳೆಯಬೇಕೆಂಬ ಬಯಕೆ ಇದೆ” ಎಂದಳು ಇಂದ್ರಸೇನಾ.

ಇಂಧ್ರಸೇನಾಳ ಬಯಕೆಯನ್ನು ತಿರಸ್ಕರಿಸಲಾಗದೆ ಮೌದ್ಗಲ್ಯ ತನ್ನ ತಪೋಬಲದಿಂದ 5 ರೂಪಗಳಲ್ಲಿ 5 ಅಂಧವಾದ ಪ್ರದೇಶಗಳಲ್ಲಿ ಇಂದ್ರಸೇನಳೊಡನೆ ಶೃಂ ಗಾರ ನಡೆಸುತ್ತಾರೆ.ಕೆಲ ದಿನಗಳ ಬಳಿಕ ಮೌದ್ಗಲ್ಯ ಮರಣಿಸಿ ಬ್ರಹ್ಮ ಲೋಕ ಸೇರುತ್ತಾರೆ.ಇಂದ್ರಸೇನಾ ಸಹ ತನ್ನ ಗಂಡನ ಚಿತೆಯಲ್ಲಿಯೇ ದೇಹತ್ಯಾಗ ಮಾಡಿ ಮುಂದಿನ ಜನ್ಮದಲ್ಲಿ ಕಾಶಿ ರಾಜನ ಮಗಳಾಗಿ ಜನಿಸುತ್ತಾಳೆ.ಆಕೆ ಅತಿಲೋಕ ಸೌಂದರ್ಯವತಿ.ಅವಳಿಗಿರುವ ದೊಡ್ಡ ದೊಡ್ಡ ಕಣ್ಣುಗಳೇ ಮುಖ್ಯ ಆಕರ್ಷಣೆ ಆಕೆ ಗಂಗಾ ನದಿ ದಡದಲ್ಲಿ ಕುಳಿತು ಶಿವನಿಗಾಗಿ ತಪಸ್ಸು ಮಾಡುತ್ತಾಳೆ.ಶಿವ ಪ್ರತ್ಯಕ್ಷಗೊಂಡು “ಏನು ವರ ಬೇಕೆಂದು?” ಕೇಳಿದರೆ ಆ ಕಾಶಿ ರಾಜನಕುಮಾರಿಯ ಶಿವನನ್ನು ನೋಡಿ ಅಯೋಮಯದಲ್ಲಿ ಏನು ಕೇಳುವುದೆಂದು ತೋಚದೆ ಅವಸರದಲ್ಲಿ ಬಾಯಿ ತೊದಲುತ್ತಾ ಪತಿ ಪತಿ ಎಂದು 5 ಬಾರಿ ಹೇಳುತ್ತಾಳೆ.ಒಡನೆಯೇ ಶಿವ ಅವಳಿಗೆ ಐವರು ಪುರುಷರೊಂದಿಗೆ ವಿವಾಹವಾಗುತ್ತದೆ ಎಂದು ವರ ಪ್ರಸಾದಿಸುತ್ತಾರೆ.ಶಿವ ತಥಾಸ್ತು ಎಂದೊಡನೆ ಆಘಾತಕ್ಕೊಳಗಾದ ಕಾಶಿ ರಾಜನ ಮಗಳು “ಅಯ್ಯೋ ಪ್ರಭು ಸನಾತನ ಧರ್ಮದಲ್ಲಿ ಜನಿಸಿದ ಸ್ತ್ರೀಗೆ ಒಬ್ಬನೇ ಪತಿ ಇರಬೇಕು ನಾನು ಅವಸರದಲ್ಲಿ 5 ಬಾರಿ ಪತಿ ಎಂದು ಉಚ್ಚರಿಸಿದೆ ನನಗೆ ಆ ವರ ಬೇಡ ಬೇರೇನಾದರೂ ಕೇಳುತ್ತೇನೆ ಅದು ಸಾಧ್ಯವಿಲ್ಲದಿದ್ದರೆ ನನಗೆ ಕೊಟ್ಟ ವರವಾದರೂ ಹಿಂಪಡೆಯಿರಿ” ಎಂದು ಬೇಡುತ್ತಾಳೆ.

ಶಿವನ ಆಜ್ಞೆಗೆ ಹಿಂದೇಟಿಲ್ಲ ಕೊಟ್ಟ ವರ ಎಂತಹ ಪರಿಸ್ಥಿತಿಯಲ್ಲೂ ಹಿಂಪಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಶಿವ.ವಿಧಿಯಿಲ್ಲದೆ ಕಾಶಿ ರಾಜನ ಮಗಳು ಧನ್ಯೋಸ್ಮಿ ಎನ್ನುತ್ತಾ ನನಗೆ ಎಂತಹ ಗುಣಗಳೇ ಮಹಾ ಗುಣಗಳಿರುವ ಪತಿಗಳು ಸಿಗುತ್ತಾರೆಂದು ಶಿವನನ್ನು ಕೇಳಿದರೆ ,”ಇಂದ್ರನನ್ನು ನನ್ನ ಬಳಿ ಕರೆತಂದರೆ ಹೇಳುತ್ತೇನೆ” ಎನ್ನುತ್ತಾರೆ ಶಿವ.ಗಂಗಾ ನದಿಯ ಬಳಿ ಇದ್ದಂತಹ ಇಂದ್ರ ದೇವರನ್ನು ಶಿವನ ಬಳಿ ಕರೆದೋಗೂತ್ತಾಳೆ ಅದೇ ಸಮಯದಲ್ಲಿ ಶಿವ ಯುವಕನಂತೆ ರೂಪಾ ಬದಲಾಯಿಸಿ ಒಂದು ಯುವತಿಯೊಡನೆ ಕವಡೆ ಆಟ ಆಡುತ್ತಿರುತ್ತಾರೆ.ಇಂದ್ರ ದೇವರಿಗೆ ಕೋಪ ಬಂದು ಆ ಯುವಕನ ಮೇಲೆ ಆಗ್ರಹ ತೋರಿಸಿದರೆ ಆ ಯುವಕನ ವೇಶದಲ್ಲಿದ್ದ ಶಿವ “ನೀನಷ್ಟು ಬಲಶಾಲಿಯಾದರೆ ಅಲ್ಲಿ ಕಾಣಿಸುವಂತಹ ಗುಹೆಯನ್ನು ಒಂದೇ ಏಟಿಗೆ ಎರಡು ಭಾಗಗಳಾಗಿಸು” ಎಂದು ಒಂದು ಗುಹೆಯ ಕಡೆ ಬೆರಳು ಮಾಡಿ ತೋರಿಸುತ್ತಾರೆ.

ಇಂದ್ರ ಒಂದೇ ಏಟಿಗೆ ಗುಹೆ ಒಡೆದು ಹಾಕಿದರೆ ಒಳಗೆ ಇಂದ್ರನನ್ನು ಹೋಲುವಂತಹ ಇನ್ನು 4 ಜನ ಪುರುಷರು ಇರುತ್ತಾರೆ.ಅದನ್ನು ನೋಡಿ ಇಂದ್ರ ಆಶ್ಚರ್ಯಗೊಂಡು ಹಿಂತಿರುಗಿ ಆ ಯುವಕನೆಡೆಗೆ ನೋಡಿದರೆ ಆ ಯುವಕ ಶಿವನಂತೆ ರೂಪಾ ಬದಲಾಯಿಸಿ”ನೀವು 5 ಜನರು ಭೂಲೋಕದಲ್ಲಿ ಜನಿಸಬೇಕು” ಎನ್ನುತ್ತಾರೆ.ಶಿವನ ಆಜ್ಞೆಯ ಮೇರೆಗೆ ಇಂದ್ರ ದೇವರು ,ವರುಣ ದೇವರು ,ವಾಯುದೇವರು ,ಅಶ್ವಿನಿ ದೇವತೆಗಳ ಅಂಶವೂ ಪಾಂಡುರಾಜನ ಮಡದಿಯಾದ ಕುಂತಿ ದೇವಿಗೆ ಜನಿಸುತ್ತಾರೆ. ಹಾಗೆಯೇ ದ್ರುಪದನ ಕುಮಾರಿಯಂತೆ ಕಾಶಿ ರಾಜನ ಮಗಳು ಯಜ್ಞಕುಂಡದಿಂದ ಜನಿಸುತ್ತಾಳೆ ಅವಳೇ ದ್ರೌಪದಿ.

ಒಂದು ಬಾರಿ ದ್ರುಪದ ದ್ರೋಣಾಚಾರ್ಯ ರೊಂದಿಗೆ ಯುದ್ಧದಲ್ಲಿ ಸೋತು ಹೋಗುತ್ತಾರೆ.ಆ ಸೋಲಿನಿಂದ ಒಳಗೊಳಗೇ ಚಿಂತಿಸುತ್ತಿದ್ದ ದ್ರುಪದ ಹೇಗಾದರೂ ದ್ರೋಣಾಚಾರ್ಯರನ್ನು ಸೋಲಿಸಲೇಬೇಕೆಂದು ದೃಢ ಸಂಕಲ್ಪ ತೊಟ್ಟು ತನ್ನ ಮಗಳನ್ನು ವಿವಾಹವಾಗುವವನಿಂದಲೇ ದ್ರೋಣಾಚಾರ್ಯರು ಸೋಲಬೇಕೆಂದು ತೀರ್ಮಾನಿಸುತ್ತಾರೆ.ದ್ರುಪದನ ಮಗಳಾದ ದ್ರೌಪದಿಯ ಸ್ವಯಂವರದಲ್ಲಿ ಮೊದಲು ಭಾಗವಹಿಸಿದಂತ ಕರಣ ಮತ್ಸ್ಯ ಯಂತ್ರವನ್ನು ಭೇದಿಸಲು ಪ್ರಯತ್ನಿಸಿದಾಗ ಅಲ್ಲಿಗೆ ಮಾಯಾ ವೇಷದಲ್ಲಿ ಧಾವಿಸಿದ ಇಂದ್ರ ದೇವರು “ಕರ್ಣ ಸೂತಪುತ್ರ ಅವನಿಗೆ ಸ್ವಯಂವರದಲ್ಲಿ ಭಾಗವಹಿಸುವ ಅರ್ಹತೆ ಇಲ್ಲ”ಎಂದು ವಾದಿಸುತ್ತಾರೆ ಅದರ ಬಳಿಕ ಕರ್ಣ ಸ್ವಯಂವರ ದಿಂದ ಹೊರನಡೆಯುತ್ತಾರೆ ನಂತರ ಅರ್ಜುನ ಮತ್ಸ್ಯ ಯಂತ್ರವನ್ನು ಭೇದಿಸಿ ದ್ರೌಪದಿಯನ್ನು ವಿವಾಹವಾಗುತ್ತಾನೆ.ದ್ರೌಪದಿಯನ್ನು ತನ್ನ ನಿವಾಸಕ್ಕೆ ಕರೆತಂದ ಬಳಿಕ ಕುಂತಿ ದೇವಿಯ ಆಜ್ಞೆಯ ಮೇರೆಗೆ ಆ 5 ಸಹೋದರರು ದ್ರೌಪದಿ ಯನ್ನು ವಿವಾಹವಾಗುತ್ತಾರೆ.ದ್ರುಪದ ಮೊದಲು ಈ ವಿವಾಹಕ್ಕೆ ಅನುಮತಿಸುವುದಿಲ್ಲ ,5 ಜನ ಗಂಡಂದಿರು ಒಬ್ಬ ಮಹಿಳೆಗೆ ಇದು ಧರ್ಮ ವಿರುದ್ಧವೆಂದು ದ್ರುಪದ ಹೇಳಿದಾಗ ವ್ಯಾಸರು ದ್ರೌಪತಿಯ ಹಿಂದಿನ ಜನ್ಮದ ಬಗ್ಗೆ ದ್ರುಪದನಿಗೆ ವಿವರಿಸುತ್ತಾ “ಇದೆಲ್ಲ ಶಿವನ ಆಜ್ಞೆಯ ಮೇರೆಗೆ ನಡೆಯುತ್ತಿದೆ” ಎಂದು ತಿಳಿಸುತ್ತಾರೆ.

ಪಾಂಡವರು ಐವರು ಸಹ ದೇವತೆಗಳ ಅಂಶವೆಂದು ವ್ಯಾಸರು ಹೇಳಿದ ಬಳಿಕ ದ್ರುಪದ ಈ ಮದುವೆಗೆ ಸಮ್ಮತಿಸುತ್ತಾರೆ.ಪಾಂಡವರಲ್ಲಿ ಒಬ್ಬೊಬ್ಬರು ಒಂದು ವರ್ಷದ ಕಾಲ ದ್ರೌಪದಿ ಯೊಡನೆ ಸಂಸಾರ ನಡೆಸುತ್ತಾರೆ. ಒಂದು ವರ್ಷ ಕಳೆದರೆ ದ್ರೌಪದಿಗಾಗಿ 4 ವರ್ಷಗಳ ಕಾಲ ಅವರು ಎದುರು ನೋಡುತ್ತಿದ್ದರು.ಶಿವನ ವರದಿಂದಾಗಿ ದ್ರೌಪದಿಯು ಒಬ್ಬ ಪತಿಯೊಂದಿಗೆ ಸಂಸಾರ ನಡೆಸಿ ವರ್ಷದ ಬಳಿಕ ಇನ್ನೊಬ್ಬ ಪತಿಯ ಬಳಿ ಹೊರಡುವ ಮುಂಚೆ ದ್ರೌಪದಿ ಪುನಃ ಕನ್ಯೆಯಾಗಿ ಬದಲಾಗುತ್ತಿದ್ದಳು.

5 ಜನ ಪಾಂಡವರೊಂದಿಗೆ ಸಂಸಾರ ನಡೆಸಿದರೂ ಸಹ ತಾನು ಕನ್ಯೆಯಾಗಿಯೇ ಉಳಿಯಬೇಕೆಂಬ ವರ ಶಿವನ ಬಳಿ ಪಡೆದಿದ್ದಳು ದ್ರೌಪದಿ.

ಇನ್ನು ಮದುವೆಯ ನಂತರ ಪಾಂಡವರಲ್ಲಿ ಹಿರಿಯವನಾದ ಧರ್ಮ ರಾಜನೊಂದಿಗೆ ಮೊದಲು ದ್ರೌಪದಿ ಒಂದು ವರ್ಷ ಸಂಸಾರ ನಡೆಸಬೇಕಿತ್ತು. ದ್ರೌಪದಿಯನ್ನು ವಿವಾಹವಾಗುವಾಗ ಧರ್ಮರಾಜ ತನ್ನ ಸಹೋದರರನ್ನೆಲ್ಲಾ ಒಟ್ಟುಗೂಡಿಸಿ ಪೂರ್ವದಲ್ಲಿ ಸಂದ,ಉಪ್ಸಂದ ಎನ್ನುವ ಇಬ್ಬರು ಅಸುರರು ಒಂದೇ ಯುವತಿಯನ್ನು ಪ್ರೀತಿಸುತ್ತಾರೆ ಆದ್ದರಿಂದ ಅವರಿಬ್ಬರ ನಡುವೆ ಗಲಾಟೆ ಶುರುವಾಗಿ ಅದು ಯುದ್ಧಕ್ಕೆ ಬದಲಾಗಿ ಒಬ್ಬರನ್ನೊಬ್ಬರು ಅಂತ್ಯಗೊಳಿಸುತ್ತಾರೆ ಹಾಗಾಗಿ ದ್ರೌಪದಿ ಯಿಂದ ನಾವು ಸಹ ಸಂದ ಉಪ್ಸಂದರಂತೆ ಅಂತ್ಯವಾಗ ಬಾರದೆಂದು ಧರ್ಮರಾಜ ತನ್ನ ಸಹೋದರರಿಗೆ ಉಪದೇಶಿಸುತ್ತಾರೆ.”ಒಂದು ವರ್ಷ ದ್ರೌಪದಿ ಒಬ್ಬೊಬ್ಬರೊಂದಿಗೆ ಜೀವಿಸಬೇಕು.ಆ ಸಮಯದಲ್ಲಿ ಮಿಕ್ಕ ನಾಲ್ವರು ಅವಳೆಡೆಗೆ ಕಣ್ಣೆತ್ತಿ ಸಹ ನೋಡುವಂತಿಲ್ಲ” ಎಂಬ ಷರತ್ತು ವಿಧಿಸುತ್ತಾರೆ.”ಒಂದು ವೇಳೆ ಯಾರಾದರೂ ಈ ನಿಯಮ ತಪ್ಪಿದರೆ ಅವರು 12 ವರ್ಷಗಳ ಕಾಲ ದ್ರೌಪದಿ ಯೊಡನೆ ಜೀವಿಸುವಂತಿಲ್ಲ ,ಇದು ನಮ್ಮ 5 ಜನರಲ್ಲಿ ಎಲ್ಲರಿಗೂ ವರ್ತಿಸುತ್ತದೆ” ಎಂದು ಧರ್ಮರಾಜ ತಿಳಿಸುತ್ತಾರೆ.

ಧರ್ಮರಾಜನ ಮಾತಿಗೆ ಎಲ್ಲಾ ಸಹೋದರರು ಸಮ್ಮತಿಸುತ್ತಾರೆ.ಧರ್ಮ ರಾಜನೊಂದಿಗೆ ದ್ರೌಪದಿ ಇರುವ ಸಮಯದಲ್ಲಿ ಅರ್ಜುನ ಈ ನಿಯಮವನ್ನು ಅತಿಕ್ರಮಿಸುತ್ತಾನೆ.ಒಬ್ಬ ಬಡ ಬ್ರಾಹ್ಮಣನ ಹಸುಗಳನ್ನು ಕಳ್ಳರು ಕದ್ದಿರುತ್ತಾರೆ ಅವುಗಳನ್ನು ರಕ್ಷಿಸಲು ಆಯುಧಗಳಿಗಾಗಿ ಧರ್ಮರಾಜ ದ್ರೌಪದಿ ಯೊಂದಿಗೆ ಏಕಾಂತವಾಗಿರುವ ಸಮಯದಲ್ಲಿ ಅರ್ಜುನ ಅವರ ಮಂದಿರದೊಳಗೆ ಪ್ರವೇಶಿಸುತ್ತಾನೆ.ನಿಯಮವನ್ನು ಅತಿಕ್ರಮಿಸಿದ್ದರಿಂದಾಗಿ ಅರ್ಜುನ 12 ವರ್ಷಗಳ ಕಾಲ ತನ್ನ ನಿವಾಸದಿಂದ ದೂರ ಉಳಿಯುತ್ತಾನೆ. ಆ 12 ವರ್ಷಗಳಲ್ಲಿಯೇ ಅರ್ಜುನ ಉಲೂಚಿ , ಚಿತ್ರಾಂಗದ ಹಾಗೂ ಸುಭದ್ರೆಯನ್ನು ವಿವಾಹವಾಗುತ್ತಾನೆ.

ಪಾಂಡವರಲ್ಲಿ ಅರ್ಜುನನೆಂದರೆ ದ್ರೌಪದಿಗೆ ವಿಪರೀತವಾದ ಪ್ರೀತಿ ಆದರೆ ಆ ವಿಷಯವನ್ನು ಎಂದು ಅವಳು ಬಹಿರಂಗವಾಗಿ ಹೇಳಿರುವುದಿಲ್ಲ ಆದರೆ ದ್ರೌಪದಿಯನ್ನು ಅತಿಯಾಗಿ ಪ್ರೀತಿಸುವವರಲ್ಲಿ ಭೀಮಾ ಮೊದಲು.ದ್ರೌಪದಿಗೆ ಬಂದಂತಹ ಪ್ರತಿ ಕಷ್ಟವನ್ನು ಭೀಮಾ ತೀರಿಸಿದ್ದಾನೆ. ಅವಳು ಬೇಡಿದ ಪ್ರತಿ ಬೇಡಿಕೆಯನ್ನು ಈಡೇರಿಸಿದ್ದಾನೆ.ಕವಡೆಯಾಟದಲ್ಲಿ ಕೌರವರೊಂದಿಗೆ ಪಾಂಡವರು ಸೋತಾಗ ಕೌರವರು ತುಂಬು ಸಭೆಯಲ್ಲಿ ದ್ರೌಪದಿಯನ್ನು ವಸ್ತ್ರಾಪಹರಣ ನಡೆಸಿದಾಗ ದುಶ್ಶಾಸನನನ್ನು ಕೊಲ್ಲಲು ಭೀಮ ಬರುತ್ತಾನೆ ಆದರೆ ಧರ್ಮರಾಜ ಭೀಮನನ್ನು ತಡೆದು ನಿಲ್ಲಿಸುತ್ತಾರೆ.ಆಗ ಭೀಮ ಕೌರವರನ್ನು ತಾನೇ ಕೊಲ್ಲುವುದಾಗಿ ಶಪಥ ಮಾಡುತ್ತಾನೆ.ಕವಡೆ ಆಟದಲ್ಲಿ ಸೋತು ಪಾಂಡವರು ಅರಣ್ಯ ವಾಸಕ್ಕೆ ಹೊರಟಾಗ ಸೈಂಧವ ಹಾಗೂ ಕೀಚಕರನ್ನು ಭೀಮ ದ್ರೌಪದಿಯನ್ನು ಮೋಹಿಸಿ ದ್ದಕ್ಕಾಗಿ ಕೊಲ್ಲುತ್ತಾನೆ.ತುಂಬು ಸಭೆಯಲ್ಲಿ ದ್ರೌಪದಿಗೆ ನಡೆದ ಅವಮಾನದ ಪ್ರತಿಫಲದಿಂದಾಗಿ ಕುರುಕ್ಷೇತ್ರ ಯುದ್ಧ ನಡೆಯುತ್ತದೆ.ಈ ಯುದ್ಧದಲ್ಲಿ ಕೌರವರನ್ನು ಪಾಂಡವರು ಅಂತ್ಯಗೊಳಿಸುತ್ತಾರೆ.ಭೀಮಾ ದುಶ್ಶಾಸನ ರನ್ನು ಕೊಂದು ಅವನ ರಕ್ತವನ್ನು ತೆಗೆದುಕೊಂಡು ಬಂದು ದ್ರೌಪತಿಯ ಕೂದಲಿಗೆ ಹಚ್ಚುತ್ತಾನೆ
ಆಗ ದ್ರೌಪತಿ ಮುಡಿ ಕಟ್ಟುತ್ತಾಳೆ.

ಅದೇ ಕುರುಕ್ಷೇತ್ರ ಯುದ್ಧದಲ್ಲಿ ದ್ರೌಪದಿ ತನ್ನ ಮಕ್ಕಳಾದ ಉಪ ಪಾಂಡವರನ್ನು ಸಹ ಕಳೆದುಕೊಳ್ಳುತ್ತಾಳೆ.ಶಿವನಿಂದ ವರ ಪಡೆದ ಕಾರಣದಿಂದಲೇ ಪಾಂಡವರಿಗೂ ಮುಂಚೆಯೇ ದ್ರೌಪದಿ ಸಾವನ್ನಪ್ಪುತ್ತಾಳೆ.ಮಹಾಭಾರತದಲ್ಲಿ ಎಲ್ಲರೂ ಒಂದು ಭಾಗವಾದರೆ ದ್ರೌಪದಿಯೆ ಒಂದು ಭಾಗ.ದ್ರೌಪದಿ ಇಲ್ಲದಿದ್ದರೆ ಕುರುಕ್ಷೇತ್ರ ಯುದ್ಧವೇ ಇರುತ್ತಿರಲಿಲ್ಲ ,ಮಹಾಭಾರತವೇ ಇರುತ್ತಿರಲಿಲ್ಲ.ದ್ರೌಪತಿಯ ಬಯಕೆಯಿಂದಲೇ ಕುರುಕ್ಷೇತ್ರವಲ್ಲ ನಡೆದಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

Related Post

Leave a Comment