ಬಾಲಿಯಲ್ಲಿ ಬಿಕಿನಿ ಧರಿಸಿ ಬೋಲ್ಡ್ ಪೋಸ್ ಕೊಟ್ಟ ನಾಗಿಣಿ: ನಮ್ರತಾ ಲುಕ್ ಗೆ ಫ್ಯಾನ್ಸ್ ಫುಲ್ ಫಿದಾ

Written by Anand raj

Published on:

ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ನಟಿಯರು ಸಿಕ್ಕಾಪಟ್ಟೆ ಸದ್ದು ಮತ್ತು ಸುದ್ದಿಯನ್ನು ಮಾಡುತ್ತಿದ್ದಾರೆ. ತಮ್ಮ ಅಂದ ಮತ್ತು ಸ್ಟೈಲ್ ನಿಂದಾಗಿ ಈ ನಟಿಯರು ಸೋಶಿಯಲ್ ಮೀಡಿಯಾಗಳಲ್ಲಿ ಕಿಚ್ಚನ್ನು ಹೊತ್ತಿಸಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯರ ಫೋಟೋಗಳನ್ನು ನೋಡಿ ಫಿದಾ ಆಗಿದ್ದಾರೆ. ಇದೀಗ ನಾಗಿಣಿ ಸೀರಿಯಲ್ ಖ್ಯಾತಿಯ ನಟಿ ನಮ್ರತಾ ಗೌಡ ಅವರು ಸಹಾ ತಮ್ಮ ಫೋಟೋಗಳ ಮೂಲಕ ಯುವಕರ ಎದೆಗೆ ಲಗ್ಗೆ ಇಟ್ಟಿದ್ದಾರೆ.

ಇತ್ತೀಚಿಗಷ್ಟೇ ನಟಿ ನಮ್ರತಾ ಗೌಡ ರಜೆಯನ್ನು ಎಂಜಾಯ್ ಮಾಡುವುದಕ್ಕೆ ಬಾಲಿ ದ್ವೀಪಕ್ಕೆ ಭೇಟಿ ನೀಡಿದ್ದರು. ಅಲ್ಲಿ ತೆಗೆದ ತಮ್ಮ ಅಂದವಾದ ಫೋಟೋಗಳನ್ನು ನಮ್ರತಾ ಶೇರ್ ಮಾಡಿಕೊಂಡಿದ್ದಾರೆ.

ಬಾಲಿಯ ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುವಾಗಲೇ ನಮ್ರತಾ ಅವರು ಸಿಕ್ಕಾಪಟ್ಟೆ ಹಾಟ್ ಮತ್ತು ಬೋಲ್ಡ್ ಪೋಸ್ ನೀಡಿರುವ ಬಿಕಿನಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ನಮ್ರತಾ ಅವರ ಈ ಹಾಟ್ ಲುಕ್ ನೋಡಿ ಅನೇಕರು ಶಾಕ್ ಆಗಿದ್ದಾರೆ. ಆದರೆ ಅವರ ಅಭಿಮಾನಿಗಳು ಮಾತ್ರ ನಟಿಯ ಹೊಸ ಲುಕ್ ನೋಡಿ ಫಿದಾ ಆಗಿದ್ದು ಮೆಚ್ಚುಗೆ ನೀಡಿದ್ದಾರೆ.

ನಮ್ರತಾ ಅವರು ಫೋಟೋಗಳ ಜೊತೆಗೆ, ನನ್ನ ಜೀವನ, ಗಾಸಿಪ್‌ ಕಡೆ ನೋಡುವವರು, ನೋಡೋದನ್ನು ಬಿಡಬೇಡಿ. ಸೀಸನ್ 2 ಬರಲಿದೆ ಎಂದು ಬರೆದು ಶಾಕ್ ನೀಡಿದ್ದಾರೆ.

ಹಾಟ್ ಮತ್ತು ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿದ ನಟಿಯು ಕಾಮೆಂಟ್ ಸೆಕ್ಷನ್ ಅನ್ನು ಆಫ್ ಮಾಡಿದ್ದಾರೆ. ನೆಗೆಟಿವ್ ಕಾಮೆಂಟ್ ಗಳ ಗೋಜಿಗೆ ಹೋಗೋದು ಬೇಡವೆಂದು ಹೀಗೆ ಮಾಡಿದ್ದರೂ ಮಾಡಿರಬಹುದು.

ನಾಗಿಣಿ 2′ ಧಾರಾವಾಹಿ ಮುಗಿದಾಗ ಮೇಲೆ ನಟಿ ಯಾವುದೇ ಹೊಸ ಪ್ರಾಜೆಕ್ಟ್ ನಲ್ಲಿ ಕಾಣಿಸಿಕೊಂಡಿಲ್ಲ. ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದು, ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಲಿರುತ್ತಾರೆ.‌ 

Related Post

Leave a Comment