ತಲೆ ಸ್ನಾನ ಮಾಡಿ ಪೂಜೆ ಮಾಡಿದ್ರೆ ಉತ್ತಮ. ಅದರಲ್ಲೂ ಹೆಣ್ಣು ಮಕ್ಕಳು ತಲೆಸ್ನಾನ ಮಾಡಿದಾಗ ಯಾವ ರೀತಿ ಪೂಜೆಗೆ ಕುಳಿತುಕೊಳ್ಳಬೇಕು..? ಯಾವ ನಿಯಮ ಅನುಸರಿಸಬೇಕು ಅನ್ನೋ ಬಗ್ಗೆ ನಾವೀಗಾಗಲೇ ನಿಮಗೆ ಮಾಹಿತಿ ನೀಡಿದ್ದೇವೆ. ಆದ್ರೆ ಪ್ರತಿದಿನ ತಲೆ ಸ್ನಾನ ಮಾಡಿಯೇ ಪೂಜೆ ಮಾಡಬೇಕಾ..? ಇಲ್ಲದಿದ್ರೆ ಪೂಜಾ ಫಲ ದೊರೆಯುವುದಿಲ್ಲವಾ ಎಂಬ ಪ್ರಶ್ನೆಗೆ ನಾವಿವತ್ತು ಉತ್ತರಿಸಲಿದ್ದೇವೆ. ಅಷ್ಟೇ ಅಲ್ಲದೇ, ಯಾವ ನೈವೇದ್ಯವನ್ನ ನಾವು ಪ್ರತಿದಿನ ಎಲ್ಲ ದೇವರಿಗೂ ಅರ್ಪಿಸಬಹುದು ಅನ್ನೋ ಬಗ್ಗೆಯೂ ಮಾಹಿತಿ ನೀಡಲಿದ್ದೇವೆ.
ಪುರುಷರು ಪ್ರತಿದಿನ ತಲೆ ಸ್ನಾನ ಮಾಡಿ, ಪೂಜೆ ಮಾಡಿದ್ರೆ ಉತ್ತಮ. ಹಬ್ಬ ಹರಿದಿನ, ಹೋಮ ಹವನವಿರುವ ದಿನವಷ್ಟೇ, ಹೆಣ್ಣು ಮಕ್ಕಳು ತಲೆಸ್ನಾನ ಮಾಡಿ, ಪೂಜೆ ಮಾಡಬಹುದು. ಇನ್ನು ಪ್ರತಿದಿನ ಯಾರು ತಲೆಸ್ನಾನ ಮಾಡಬೇಕೆಂಬ ಪ್ರಶ್ನೆಗೆ ಉತ್ತರ, ದೀಕ್ಷೆ ಪಡೆದವರು, ಪುರೋಹಿತರು, ಸಾಧು ಸಂತರು ತಲೆ ಸ್ನಾನ ಮಾಡಿ, ಪೂಜೆ ಮಾಡಬೇಕು.
ಇನ್ನು ಪ್ರತಿದಿನ ದೇವರಿಗೆ ನೈವೇದ್ಯವಿಡುವುದು ಎಲ್ಲರಿಗೂ ಸಾಧ್ಯವಿರುವುದಿಲ್ಲ. ಅನುಕೂಲವಿದ್ದವರು ಪ್ರತಿದಿನ ಬೇರೆ ಬೇರೆ ಸಿಹಿ ಪದಾರ್ಥ ಮಾಡಿ, ದೇವರಿಗೆ ನೈವೇದ್ಯವನ್ನಿಡುತ್ತಾರೆ. ಆದ್ರೆ ಯಾರಿಗೆ ಪ್ರತಿದಿನ ವೈವಿಧ್ಯಮಯವಾದ ನೈವೇದ್ಯವಿಡಲು ಸಾಧ್ಯವಿಲ್ಲವೋ, ಅವರು ಒಂದೆರಡು ಚಮಚ ಶುದ್ಧ ಹಸುವಿನ ಹಾಲನ್ನು ಕೂಡ ನೈವೇದ್ಯಕ್ಕಿಡಬಹುದು.
ಇನ್ನು ಕೆಲವರು ಪ್ರತಿದಿನ ದೇವರಿಗೆ ಸಕ್ಕರೆ, ಹುರಿಗಡಲೆ ಮಿಶ್ರಣ, ಹುರಿಗಡಲೆ ಬೆಲ್ಲದ ಮಿಶ್ರಣ, ಎಥವಾ ಕಲ್ಲು ಸಕ್ಕರೆ, ಬೆಲ್ಲದ ಅಚ್ಚನ್ನ ಕೂಡ ನೈವೇದ್ಯಕ್ಕೆ ಇಡುತ್ತಾರೆ. ಈ ಪದಾರ್ಥಗಳನ್ನ ನೈವೇದ್ಯಕ್ಕಿಟ್ಟರೂ ಕೂಡ ನಡೆಯುತ್ತದೆ. ಇನ್ನು ಪ್ರತಿದಿನ ಪೂಜೆ ಸಲ್ಲಿಸುವಾಗ, ಹಳೆ ಹೂವುಗಳನ್ನ ತೆಗೆದು ಒಂದೆರಡು ಹೊಸ ಹೂವುಗಳನ್ನ ಹಾಕಿ ಪೂಜೆ ಸಲ್ಲಿಸುವುದು ಉತ್ತಮ.