ಚಳಿಗಾಲದಲ್ಲಿ ಮಿಸ್ ಮಾಡದೇ ಸೇವಿಸಿ ನೋಡಿ!

Written by Anand raj

Published on:

ನೀವು ಮನೆಯಲ್ಲಿ ಸಾಂಬಾರ್ ಅಥವಾ ತಿಂಡಿ ಮಾಡಲು ಬಗೆ ಬಗೆಯ ತರಕಾರಿಗಳನ್ನು ಬಳಸಬಹುದು. ಆದರೆ ಅದರಲ್ಲಿ ಕ್ಯಾರೆಟ್ ಇದ್ದೇ ಇರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.ಕ್ಯಾರೆಟ್ ನಮ್ಮ ಜೀರ್ಣಂಗ ವ್ಯವಸ್ಥೆಯಿಂದ ಹಿಡಿದು ನಮ್ಮ ಸೌಂದರ್ಯದವರೆಗೂ ಚಳಿಗಾಲದಲ್ಲಿ ನಮಗೆ ಉಪಯೋಗಕ್ಕೆ ಬರುತ್ತದೆ.

ತಿಂದಂತಹ ಆಹಾರವನ್ನು ಚೆನ್ನಾಗಿ ಜೀರ್ಣ ಮಾಡಿ ಅದರಲ್ಲಿರುವಂತಹ ಬಹುತೇಕ ಪೌಷ್ಟಿಕಾಂಶಗಳು ನಮಗೆ ಸಿಗುವ ಹಾಗೆ ಕ್ಯಾರೆಟ್ ನಲ್ಲಿರುವ ನಾರಿನ ಅಂಶ ಮಾಡುತ್ತದೆ. ಕ್ಯಾರೆಟ್ ನಮ್ಮ ಆರೋಗ್ಯದ ರಕ್ಷಣೆಯ ಜೊತೆಗೆ ನಮ್ಮ ಅಂದವನ್ನು ಸಹ ಹೆಚ್ಚಿಸುತ್ತದೆ ಎಂದು ಹೇಳಬಹುದು. ಈ ಲೇಖನದಲ್ಲಿ ಚಳಿಗಾಲದಲ್ಲಿ ಕ್ಯಾರೆಟ್ ಸೇವನೆ ಏಕೆ ಮಾಡಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ….

ವಿಟಮಿನ್ ಪ್ರಮಾಣ ಹೇರಳವಾಗಿದೆ
ಕ್ಯಾರೆಟ್ ತನ್ನಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕು ಎನಿಸಿದ ಬಗೆ ಬಗೆಯ ವಿಟಮಿನ್ ಅಂಶಗಳನ್ನು ಒಳ ಗೊಂಡಿದೆ. ಇದರಲ್ಲಿ ವಿಟಮಿನ್ ಕೆ, ವಿಟ ಮಿನ್ ಎ ಸೇರಿದಂತೆ ಇನ್ನಿತರ ಅನೇಕ ಉಪಯುಕ್ತವಾದ ವಿಟಮಿನ್ ಪ್ರಮಾಣಗಳು ಇರುವುದರಿಂದ ಚಳಿಗಾಲದಲ್ಲಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸವನ್ನು ಇದು ಮಾಡುತ್ತದೆ.

ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳು ಇವೆ
ಕ್ಯಾರೆಟ್ ಸೇವನೆಯಿಂದ ನಮ್ಮ ದೇಹದಲ್ಲಿ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಸಾಮರ್ಥ್ಯ ಸಿಗುತ್ತದೆ. ಇದರಿಂದ ಬೇರೆ ಬೇರೆ ಆರೋಗ್ಯ ಸಮಸ್ಯೆ ಗಳು ಶುರುವಾಗುವ ಸಾಧ್ಯತೆ ತಪ್ಪುತ್ತದೆ.ಮುಖ್ಯವಾಗಿ ನಮ್ಮ ದೇಹದ ಒಳಗಿನ ಅಂಗಾಂಗಗಳು ಸರಾಗವಾಗಿ ಕೆಲಸ ಮಾಡಲು ಅನುಕೂಲ ವಾಗುತ್ತದೆ.

ಹೃದಯ ಸಹಕಾರಿ ಕೂಡ

ಕ್ಯಾರೆಟ್ ನಮ್ಮ ಹೃದಯದ ಆರೋಗ್ಯಕ್ಕೆ ಸಾಕಷ್ಟು ಅನುಕೂಲ ತಂದು ಕೊಡುತ್ತದೆ. ಏಕೆಂದರೆ ಇದರಲ್ಲಿ ಸ್ಯಾಚು ರೇಟೆಡ್ ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ಇದು ನಮ್ಮ ಹೃದಯದ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾ ಡುತ್ತದೆ. ದೇಹದಲ್ಲಿ ಸರಾಗವಾದ ರಕ್ತ ಸಂಚಾರ ಉಂಟಾಗುವಂತೆ ಮಾಡಿ ರಕ್ತದ ಒತ್ತಡ ಕಡಿಮೆಯಾಗುವ ಹಾಗೆ ನೋಡಿಕೊಳ್ಳುತ್ತದೆ.

ಕಣ್ಣಿನ ದೃಷ್ಟಿಗೆ ಒಳ್ಳೆಯದು

ಕ್ಯಾರೆಟ್ ಸೇವನೆಯಿಂದ ನಮ್ಮ ಕಣ್ಣುಗಳ ದೃಷ್ಟಿ ಚೆನ್ನಾಗಿರುತ್ತದೆ ಎಂದು ಹೇಳುತ್ತಾರೆ. ಅಂದರೆ ದೀರ್ಘ ಸಮಯ ದವರೆಗೂ ಕಣ್ಣಿನ ಪೊರೆ ಮತ್ತು ಕಣ್ಣಿಗೆ ಸಂಬಂಧಪಟ್ಟ ಇನ್ನಿತರ ತೊಂದರೆಗಳು ಕಾಣಿಸುವುದಿಲ್ಲ.

ಏಕೆಂದರೆ ಕ್ಯಾರೆಟ್ ತನ್ನಲ್ಲಿ ಬೀಟಾ ಕ್ಯಾರೋಟಿನ್ ಎಂಬ ಅಂಶ ವನ್ನು ಒಳಗೊಂಡಿದ್ದು, ಇದನ್ನು ನಮ್ಮ ದೇಹ ವಿಟಮಿನ್ ಎ ರೂಪಕ್ಕೆ ಬದಲಿಸಿ ನಮ್ಮ ಕಣ್ಣುಗಳಿಗೆ ಸಹಾಯ ಮಾಡುತ್ತದೆ.

ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡುತ್ತದೆ

ಕ್ಯಾರೆಟ್ ತನ್ನಲ್ಲಿ ನಾರಿನ ಅಂಶವನ್ನು ಒಳಗೊಂಡಿದ್ದು, ನಾವು ಸೇವಿಸುವ ಆಹಾರ ದೇಹದಲ್ಲಿ ಚೆನ್ನಾಗಿ ಜೀರ್ಣವಾಗುವಂತೆ ಮಾಡುತ್ತದೆ.

ಇದರಿಂದ ನಮಗೆ ಅಜೀರ್ಣತೆ ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರ ತರಹದ ಸಮಸ್ಯೆಗಳು ಕಾಣಿಸುವುದಿಲ್ಲ ಮತ್ತು ಕ್ಯಾರೆಟ್ ಸೇವನೆಯನ್ನು ಅಭ್ಯಾಸ ಮಾಡಿಕೊಂಡರೆ ದೀರ್ಘಕಾಲದಿಂದ ಇಂತಹ ಸಮಸ್ಯೆ ಗಳನ್ನು ಒಳಗೊಂಡಿರುವವರು ಕೂಡ ಬಹಳ ಬೇಗನೆ ಇದರಿಂದ ಹೊರ ಬರುತ್ತಾರೆ.​

Related Post

Leave a Comment