ಮನೆ ಮುಂದೆ ಯಾಕೆ ರಂಗೋಲಿ ಹಾಕಬೇಕು ಗೊತ್ತಾ!

Written by Anand raj

Published on:

ಮನೆ ಮುಂದೆ ರಂಗೋಲಿ ಹಾಕುವುದು ಒಳ್ಳೆಯ ಕೆಲಸ. ಇದು ಲಕ್ಷ್ಮೀ ದೇವಿಯ ಸ್ವಾಗತದ ಪರಿ ಅಂತಾ ಹೇಳಲಾಗುತ್ತದೆ. ಆದ್ರೆ ರಂಗೋಲಿ ಹಾಕುವಾಗ ಕೆಲ ತಪ್ಪುಗಳನ್ನು ಮಾಡಬಾರದು. ಯಾವುದು ಆ ತಪ್ಪುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಯಾವುದೇ ದುಷ್ಟ ಶಕ್ತಿ ಮನೆಯನ್ನು ಪ್ರವೇಶಿಸದಿರಲಿ, ನಕಾರಾತ್ಮಕ ಶಕ್ತಿಯ ಪ್ರಭಾವ ನಾಶವಾಗಲಿ, ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಲಿ, ಲಕ್ಷ್ಮೀ ದೇವಿ ಬಂದು ಮನೆ ಬೆಳಗಲಿ ಎಂಬ ಕಾರಣಕ್ಕೆ ರಂಗೋಲಿ ಹಾಕಲಾಗುತ್ತದೆ. ಆದ್ರೆ ಈ ರೀತಿ ರಂಗೋಲಿ ಹಾಕುವಾಗಾ ನಾವು ಕೆಲ ತಪ್ಪುಗಳನ್ನು ಮಾಡಬಾರದು.

ಮೊದಲನೇಯದಾಗಿ, ರಂಗೋಲಿಯನ್ನ ಬೆಳಗ್ಗಿನ ಜಾವದಲ್ಲೇ ಹಾಕಬೇಕೆ ವಿನಃ, ನಿಮಗೆ ಸಮಯ ಸಿಕ್ಕಾಗ ಹಾಕುವುದಲ್ಲ. ಬೆಳಗಿನ ಜಾವಾ 5:30 ಯಿಂದ 6:30 ಒಳಗೆ ಈ ರಂಗೋಲಿ ಹಾಕಬೇಕಾಗುತ್ತದೆ. ರಂಗೋಲಿ ಮಧ್ಯ ಯಾವುದೇ ಕಾರಣಕ್ಕೂ ಅರಿಶಿನ ಕುಂಕುಮವನ್ನು ಹಾಕಬಾರದು. ಅದನ್ನು ತುಳಿದರೆ ನಿಮಗೆ ದೋಷ ಉಂಟಾಗುತ್ತದೆ. ಹಾಗಾಗಿ ರಂಗೋಲಿ ಮಧ್ಯ ಅರಿಶಿನ ಕುಂಕುಮವನ್ನು ಹಾಕಬೇಡಿ.

ಎರಡನೇಯದಾಗಿ ನಿಮ್ಮ ಪತಿ, ತಂದೆ ಅಥವಾ ಅಣ್ಣ ತಮ್ಮ
ಯಾರಾದರೂ ಕೆಲಸಕ್ಕೆ ಹೋಗುವ ಮುನ್ನವೇ ರಂಗೋಲಿ ಹಾಕಬೇಕು. ಅವರು ಕೆಲಸಕ್ಕೆ ಹೋದ ಬಳಿಕ ರಂಗೋಲಿ ಹಾಕಿದರೆ ಅದರಿಂದ ಅವರಿಗೇನೂ ಪ್ರಯೋಜನವಾಗುವುದಿಲ್ಲ. ಅವರು ಕೆಲಸಕ್ಕೆ ಹೋಗುವ ಮುಂಚೆಯೇ ರಂಗೋಲಿ ಹಾಕಿದರೆ, ಅವರ ಕೆಲಸ ಉತ್ತಮವಾಗಿ ಆಗುತ್ತದೆ.ಅಲ್ಲದೇ, ಅವರ ವೃತ್ತಿ ಜೀವನ ಉತ್ತಮವಾಗಿರುತ್ತದೆ.

ಮೂರನೇಯದಾಗಿ ಬರೀ ಅಂಗಳಕ್ಕಷ್ಟೇ ಅಲ್ಲ, ಹೊಸ್ತಿಲಿಗೆ, ದೇವರ ಮುಂದೆ, ತುಳಸಿ ಕಟ್ಟೆಯ ಎದುರಿಗೂ ರಂಗೋಲಿ ಹಾಕಬೇಕು. ಯಾಕಂದ್ರೆ ಈ ನಾಲಕ್ಕೂ ಸ್ಥಳಗಳೂ ಲಕ್ಷ್ಮೀಗೆ ಸೇರಿದ ಪವಿತ್ರ ಸ್ಥಳವಾಗಿದೆ. ಹಾಗಾಗಿ ಈ ಸ್ಥಳವನ್ನ ಸ್ವಚ್ಛವಾಗಿ, ರಂಗೋಲಿಯಿಂದ ಅಲಂಕರಿಸಿ ಇಡಬೇಕು.

Related Post

Leave a Comment