ಬಜೆ ಬೇರು ಸಿಕ್ಕರೆ ದಯವಿಟ್ಟು ಬಿಡಬೇಡಿ!

Written by Anand raj

Published on:

ಮಲೆನಾಡಿನಲ್ಲಿ ಹೆಚ್ಚಾಗಿ ಬೆಳೆಯುವ ಬಜೆ ಗಿಡವು ಬಜೆ ಬೇರು ಎಂದೇ ಪ್ರಸಿದ್ಧ. ಹಿಂದಿನ ಕಾಲದಲ್ಲಿ ಬಾಣಂತಿ ಮತ್ತು ಮಗು ಇರುವ ಮನೆಯಲ್ಲಿ ಈ ಬೇರನ್ನು ಹೆಚ್ಚು ಉಪಯೋಗಿಸುತ್ತಿದ್ದರು . ಮಲೆನಾಡ ಮನೆಗಳಲ್ಲಿ ಮಗು ಹುಟ್ಟಿದ ಹಲವು ತಿಂಗಳವರೆಗೆ ಕೆಲವು ದಿನಗಳಿಗೊಮ್ಮೆ ಬಜೆ ಬೇರು ತೇಯ್ದು ನೆಕ್ಕಿಸುತ್ತಾರೆ. ಮಾತು ಶುದ್ಧವಾಗಲಿ ಅನ್ನುವ ಕಾರಣಕ್ಕೆ. ಬಜೆ ಬೇರನ್ನು ಹೊಟ್ಟೆ ನೋವು , ಹೊಟ್ಟೆ ಹುಳ , ಹೊಟ್ಟೆ ಉಬ್ಬರ ಇತ್ಯಾದಿ ರೋಗಗಳನ್ನು ನಾಶಪಡಿಸುತ್ತದೆ. ಮಕ್ಕಳಲ್ಲಿ ಬುದ್ಧಿಶಕ್ತಿ ಹಾಗೂ ನೆನೆಪಿನ ಶಕ್ತಿ ಹೆಚ್ಚು ಮಾಡಲು ಈ ಬಜೆ ಬೇರನ್ನು ಬಳಸಲಾಗುತ್ತದೆ.

ಜ್ಞಾಪಕ ಶಕ್ತಿ ಎಲ್ಲರಲ್ಲೂ ಇರುತ್ತದೆ ಅದಕ್ಕೆ ಸರಿಯಾದ ನಿಯಮವನ್ನು ಅಳವಡಿಸಿಕೊಂಡರೆ ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ.ಮೆದುಳಿಗೆ ಸಹಕಾರ ಕೊಡುವ ತುಪ್ಪವನ್ನು ಹೆಚ್ಚಾಗಿ ಸೇವನೆ ಮಾಡಬೇಕು.ನಾಟಿ ಹಸುವಿನ ತುಪ್ಪವನ್ನು ಸೇವನೆ ಮಾಡುವುದರಿಂದ ಮೆದುಳು ಕ್ರಿಯಾಶೀಲ ಆಗಿರುತ್ತದೆ. ಇದರಲ್ಲಿ ಜ್ಞಾಪಕಶಕ್ತಿಯನ್ನು ವೃದ್ಧಿ ಮಾಡುವ ಅತ್ಯಂತ ಶಕ್ತಿ ಇದರಲ್ಲಿದೆ.ಇನ್ನು ಮನೆಮದ್ದು ಬಳಸಿದರೆ ನಿಮ್ಮ ಜ್ಞಾಪಕ ಶಕ್ತಿ ವೃದ್ಧಿ ಆಗುತ್ತದೆ.

ಬಜೆಯನ್ನು ಬೆಂಕಿಯಲ್ಲಿ ಸುಟ್ಟು , ಪುಡಿ ಮಾಡಿ. 1ಚಿಟಿಕೆ ಪುಡಿಗೆ ತಾಯಿಯ ಎದೆಹಾಲನ್ನು ಬೆರೆಸಿ ಮಗುವಿಗೆ ಕುಡಿಸಿದರೆ ಹೊಟ್ಟೆ ಉಬ್ಬರ , ಹಾಲು ಕುಡಿಯದೇ ಇರುವುದು , ಅಜೀರ್ಣ ಕಡಿಮೆಯಾಗುತ್ತದೆ.

ತಲೆಯಲ್ಲಿ ಹೇನುಗಳಿದ್ದರೆ ಬಜೆ ಪುಡಿಯನ್ನು ಕೊಬ್ಬರಿ ಎಣ್ಣೆ ಜೊತೆ ಕಲಸಿ ಹಚ್ಚಿ. ಅನಂತರ ತೊಳೆದುಕೊಳ್ಳಿ.

ಬಜೆ ಪುಡಿಯನ್ನು ಜೇನುತುಪ್ಪದಲ್ಲಿ ಕಲಸಿ ನಾಲಿಗೆಗೆ ಪ್ರತಿದಿನ ತಿಕ್ಕಿದರೆ ಮಕ್ಕಳಿಗೆ ಮಾತು ಸ್ಪಷ್ಟವಾಗಿ ಬರುತ್ತದೆ.

ತಲೆ ನೋವು, ಗಂಟುಗಳ ನೋವು ಇದ್ದರೆ ಬಜೆಯನ್ನು ನೀರಿನಲ್ಲಿ ತೇದು ನೋವಿದಲ್ಲಿ ಹಚ್ಚಿದರೆ ನೋವು ನಿವಾರಣೆಯಾಗುತ್ತದೆ .

1 ಚಮಚ ಬಜೆ ಪುಡಿಯನ್ನು 2 ಚಮಚ ತಣ್ಣಗಿನ ಕಾಯಿಹಾಲಿನಲ್ಲಿ ಕಲಸಿ ತಲೆಗೆ ಹಚ್ಚಿದರೆ ಕೂದಲು ಉದರುವುದು ನಿಲ್ಲುತ್ತದೆ .

ಬುದ್ದಿ ಮತ್ತು ನೆನಪಿನ ಶಕ್ತಿ ಹೆಚ್ಚಾಗಬೇಕಾ? ಮರೆಗುಳಿತನ ದೂರ ತಲೆ ಚುರುಕು ಮಕ್ಕಳ ನೆನಪಿನ ಶಕ್ತಿ….

Related Post

Leave a Comment