ಅಷ್ಟಐಶ್ವರ್ಯ ಹೆಚ್ಚಾಗಲು ಕಾರ್ತಿಕ ಮಾಸದಲ್ಲಿ 365 ಬತ್ತಿ ಹಚ್ಚುವ ವಿಧಾನ!

Written by Anand raj

Published on:

ಕಾರ್ತಿಕ ಮಸಾದ ವಿಶೇಷವೇನು…? ಈ ಬಾರಿ ಕಾರ್ತಿಕ ಮಾಸ ಎಂದು ಪ್ರಾರಂಭವಾಗಿ ಎಂದು ಮುಕ್ತಯ ಆಗುತ್ತೆ…? ಜೊತೆಗೆ ಕಾರ್ತಿಕ ಮಾಸದಲ್ಲಿ ಯಾವೆಲ್ಲಾ ಆಚರಣೆಗಳನ್ನು ಮಾಡಬೇಕು ಹಾಗು ಈ ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ಬೆಳಗುವ ಒಂದು ದೀಪದ ಬಗ್ಗೆ ತಿಳಿಸಿಕೊಡುತ್ತೇವೆ…

ಕಾರ್ತಿಕ ಮಾಸದಲ್ಲಿ ಒಂದು ದಿನವಾದರೂ ಈ ದೀಪವನ್ನು ಬೆಳಗಿದರೆ ಅದರಿಂದ ಲಕ್ಷ್ಮಿ ಅನುಗ್ರಹ ಆಗುತ್ತದೆ. ದೀಪಾವಳಿ ಅಮಾವಾಸ್ಯೆ ಮಾರನೇ ದಿನ ಅಂದರೆ ಬಲಿ ಪಾಡ್ಯಮಿ ದಿನದಿಂದ ಈ ಕಾರ್ತಿಕ ಮಾಸವು ಪ್ರಾರಂಭವಾಗುತ್ತದೆ. ಈ ಬಾರಿ ನವೆಂಬರ್ 14ನೆ ತಾರೀಕಿನಿಂದ ಪ್ರಾರಂಭವಾಗಿ ಡಿಸೆಂಬರ್ 12ನೆ ತಾರೀಕಿನವರೆಗೂ ಕಾರ್ತಿಕ ಮಾಸ ಇರುತ್ತದೆ. ಈ ಕಾರ್ತಿಕ ಮಾಸವು ಅತ್ಯಂತ ಶಕ್ತಿಶಾಲಿಯಾದ ಮತ್ತೆ ಶ್ರೇಷ್ಠವಾದ ಮಾಸ.

ಕಾರ್ತಿಕ ಎಂದರೆ ಒಂದು ನಕ್ಷತ್ರದ ಹೆಸರು. ಈ ನಕ್ಷತ್ರವು ಈ ಡಿಸೆಂಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಚಂದ್ರನಿಗೆ ಅತ್ಯಂತ ಹತ್ತಿರ ಇರುತ್ತದೆ. ಹಾಗಾಗಿ ಈ ಮಾಸವನ್ನು ಕಾರ್ತಿಕ ಮಾಸ ಎಂದು ಕರೆಯುವುದು.

ಕಾರ್ತಿಕ ಮಾಸದಲ್ಲಿ ಈಶ್ವರ ಅಧಿಪತಿ.ಕಾರ್ತಿಕ ಮಾಸದಲ್ಲಿ ಹೆಚ್ಚಾಗಿ ಈಶ್ವರನ ಪೂಜೆಯನ್ನು ಮಾಡಲಾಗುತ್ತದೆ.ಕಾರ್ತಿಕ ಮಾಸದಲ್ಲಿ ರಾತ್ರಿ ಹೆಚ್ಚಾಗಿ ಇರುತ್ತದೆ ಮತ್ತು ರಾತ್ರಿ ಕಡಿಮೆ ಆಗಿರುತ್ತದೆ. ಹಾಗಾಗಿ ಕಾರ್ತಿಕ ಮಾಸದಲ್ಲಿ ದೀಪಗಳನ್ನು ಬೆಳಗುವುದು. ಕಾರ್ತಿಕ ಮಾಸದಲ್ಲಿ ಮಾಡುವಂತಹ ವ್ರತಗಳು ಉಪವಾಸ ಪೂಜೆಗಳಿಗೆ ಹೆಚ್ಚಿನ ಫಲ ದೊರೆಯುತ್ತದೆ.

ಇನ್ನು ಕಾರ್ತಿಕ ಮಾಸದಲ್ಲಿ ಉಪವಾಸ ಇದ್ದು ದೇವಸ್ಥಾನಕ್ಕೆ ಹೋಗೀ ದೀಪವನ್ನು ಹಚ್ಚಿದರೆ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ನವೆಂಬರ್ 14 ರಿಂದ ಡಿಸೆಂಬರ್ 12ನೆ ತಾರೀಕಿನ ಒಳಗೆ ಯಾವುದಾದರು ಒಂದು ದಿನವಾದರೂ ಈ ಒಂದು ದೀಪವನ್ನು ಹಚ್ಚಬೇಕು. 365 ಬತ್ತಿಯ ದೀಪವನ್ನು ಹಚ್ಚಬೇಕು. ಈ ದೀಪವನ್ನು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಹಚ್ಚಬಹುದು.

ಮನೆಯಲ್ಲಿ ಹಚ್ಚುವುದಾದರೆ ತುಳಸಿ ಗಿಡ ಮುಂದೆ ಈ 365 ಬತ್ತಿಯ ದೀಪವನ್ನು ಹಚ್ಚಬೇಕು. ಬೆಳಗ್ಗೆ ಬ್ರಾಹ್ಮೀ ಮುಹೂರ್ತ ಅಥವಾ ಸಂಜೆ ಸಮಯದಲ್ಲಿ ಹಚ್ಚಬೇಕು. ಇಲ್ಲವಾದರೆ ಯಾವುದಾದರು ಶಿವನ ದೇವಸ್ಥಾನಕ್ಕೆ ಹೋಗೀ ಅಲ್ಲಿ ನೀವು ಈ 365 ಬತ್ತಿಯ ದೀಪವನ್ನು ಹಚ್ಚಬೇಕು. ಈ ಬತ್ತಿ ಗ್ರಂಥಿಗೆ ಅಂಗಡಿಯಲ್ಲಿ ಸಿಗುತ್ತದೆ. ಇದು ತುಂಬಾನೇ ವಿಶೇಷವಾದ ದೀಪ ಅದು.ಈ ಒಂದು ದೀಪ ಹಚ್ಚಿದರೆ ವರ್ಷ ಪೂರ್ತಿ ಶಿವನ ಪೂಜೆ ಮಾಡಿದ ಫಲ ನಿಮಗೆ ಸಿಗುತ್ತದೆ.

Related Post

Leave a Comment