ಅರಿಶಿನ ಮಿಶ್ರಿತ ತುಪ್ಪವನ್ನು ಚಳಿಗಾಲದಲ್ಲಿ ತಿಂದು ನೋಡಿ!

Written by Anand raj

Published on:

ನಿಸರ್ಗದತ್ತವಾದ ಯಾವುದೇ ವಸ್ತುಗಳಲ್ಲಿ ನಮ್ಮ ಆರೋಗ್ಯಕ್ಕೆ ಅಡ್ಡ ಪರಿಣಾಮಗಳು ಬಹಳ ಕಡಿಮೆ ಇರುತ್ತವೆ. ಹಾಗಾಗಿ ಪ್ರತಿ ಯೊಬ್ಬರು ತಾವು ತಿನ್ನುವ ಆಹಾರ ಪದಾರ್ಥಗಳು ನಿಸರ್ಗದ ಮಡಿಲಿನಿಂದ ಸಿಗಬೇಕು ಎಂದು ಆಸೆ ಪಡುತ್ತಾರೆ. ಸಾವಯವ ಆಹಾರ ಪದಾರ್ಥಗಳಿಗೆ ಈಗಿನ ಕಾಲದಲ್ಲಿ ಡಿಮ್ಯಾಂಡ್ ಜಾಸ್ತಿ.

ನಾವು ಕೂಡ ಇಲ್ಲಿ ಹೇಳ ಹೊರಟಿರುವುದು ಸಾವಯುವ ಅರಿಶಿನ ಮತ್ತು ತುಪ್ಪ ಸೇವನೆಯ ವಿಚಾರವನ್ನು. ಬೆಳಗಿನ ಸಮಯ ದಲ್ಲಿ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿದರೆ ಆರೋಗ್ಯದ ಮೇಲೆ ಉಂಟಾಗುವ ಒಳ್ಳೆಯ ಪ್ರಭಾವಗಳನ್ನು. ಜೀರ್ಣಶಕ್ತಿ, ಮೂಳೆಗಳ ಆರೋಗ್ಯ, ಕೀಲುಗಳ ಆರೋಗ್ಯ, ಸೌಂದರ್ಯ ಹೀಗೆ ಹಲವಾರು ಆಯಾಮ ಗಳಲ್ಲಿ ಇದರಿಂದ ಉಪಯೋಗವಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

ಜೀರ್ಣಶಕ್ತಿ ಹೆಚ್ಚಿಸುತ್ತದೆ

ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಸಾವಯುವ ಅರಿಶಿನ ಮಿಶ್ರಣ ಮಾಡಿದ ತುಪ್ಪವನ್ನು ಸೇವನೆ ಮಾಡುವುದ ರಿಂದ ಚಳಿಗಾಲದ ಬಹುತೇಕ ಆರೋಗ್ಯ ಸಮಸ್ಯೆಗಳು ಬಗೆಹರಿಯುತ್ತವೆ.

ಮುಖ್ಯವಾಗಿ ನಮ್ಮ ಕರುಳಿನ ಮೇಲೆ ತುಪ್ಪ ಕೆಲಸ ಮಾಡಲಿದ್ದು, ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸಿ ನಾವು ಸೇವಿಸಿದ ಎಲ್ಲಾ ಆಹಾರಗಳು ಚೆನ್ನಾಗಿ ಜೀರ್ಣವಾಗುವಂತೆ ಮತ್ತು ಅದರಿಂದ ಯಾವುದೇ ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ಉಬ್ಬರ ಉಂಟಾಗದಂತೆ ಕಾಪಾಡುತ್ತದೆ.

ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಕೂಡ ಬೆಳಗಿನ ಸಮಯದಲ್ಲಿ ಅರಿಶಿನ ಮಿಕ್ಸ್ ಮಾಡಿ ತುಪ್ಪ ಸೇವಿಸಬಹುದು.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಒಂದು ಟೇಬಲ್ ಚಮಚ ತುಪ್ಪ ನಮ್ಮ ರೋಗ ನಿರೋಧಕ ಶಕ್ತಿ ಯನ್ನು ಹೆಚ್ಚಿಸುವಲ್ಲಿ ಸಾಕಷ್ಟು ನೆರವಾಗುತ್ತದೆ. ಅರಿಶಿನದಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣ ಹೇರಳವಾಗಿದ್ದು, ಆಂಟಿ ಇಂಪ್ಲಾಮೆಟರಿ ಗುಣಲಕ್ಷಣಗಳು ಸಾಕಷ್ಟು ಕಂಡು ಬರುತ್ತವೆ.

ತುಪ್ಪ ತನ್ನಲ್ಲಿ ವಿಟಮಿನ್ ಎ ಪ್ರಮಾಣವನ್ನು ಹೆಚ್ಚಾಗಿ ಒಳ ಗೊಂಡಿದ್ದು, ನೈಸರ್ಗಿಕವಾಗಿ ಇದು ಆಂಟಿ ವೈರಲ್, ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣ ಲಕ್ಷಣಗಳನ್ನು ಹೆಚ್ಚಾಗಿ ಹೊಂದಿದೆ. ಇದರಿಂದ ಚಳಿಗಾಲದ ಸಂದರ್ಭದಲ್ಲಿ ಎದುರಾಗುವ ನೆಗಡಿ, ಕೆಮ್ಮು, ಶೀತ, ಜ್ವರ ಇತ್ಯಾದಿಗಳ ವಿರುದ್ಧ ನಮಗೆ ರಕ್ಷಣೆ ಸಿಗುತ್ತದೆ.​

ಉರಿಯುತ ನಿವಾರಕವಾಗಿ ಕೆಲಸ ಮಾಡುತ್ತದೆ
ಚಳಿಗಾಲದಲ್ಲಿ ನಮ್ಮ ಮೂಳೆಗಳ ಆರೋಗ್ಯ ಬಹಳ ಮುಖ್ಯವಾ ಗುತ್ತದೆ. ಏಕೆಂದರೆ ಈ ಸಂದರ್ಭದಲ್ಲಿ ಕೀಲು ನೋವು ಮತ್ತು ಮೂಳೆಗಳಿಗೆ ಸಂಬಂಧಪಟ್ಟ ವ್ಯಾಧಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

ತುಪ್ಪ ಮತ್ತು ಅರಿಶಿನ ಮಿಕ್ಸ್ ಮಾಡಿ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ನಮ್ಮ ಕರುಳಿನ ಭಾಗದ ಉರಿಯುತ ವನ್ನು ನಿವಾರಣೆ ಮಾಡುವ ಜೊತೆಗೆ ಮೂಳೆಗಳ ಸಮಸ್ಯೆಗಳನ್ನು ದೂರ ಇರಿಸುತ್ತದೆ.​

ಕೀಲುಗಳ ಆರೋಗ್ಯಕ್ಕೆ ಒಳ್ಳೆಯದು

ಚಳಿಗಾಲದಲ್ಲಿ ನಮ್ಮ ದೇಹ ನೀರಿನ ಅಂಶದ ಕೊರತೆ ಎದುರಿ ಸುತ್ತದೆ. ಸದಾ ಬೀಸುವ ತಣ್ಣನೆಯ ಗಾಳಿಯಿಂದ ನಮ್ಮ ಚರ್ಮ ಕೂಡ ಒಣಗುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಕೀಲುಗಳ ನಡುವಿನ ಲೂಬ್ರಿಕೇಷನ್ ಸಾಕಷ್ಟು ಕಡಿಮೆಯಾಗುತ್ತದೆ.

ಇದರಿಂದ ಕೀಲು ನೋವುಗಳು ಕಾಣಿಸಿಕೊಳ್ಳುತ್ತವೆ. ಆದರೆ ಮೂಳೆ ಗಳ ಆರೋಗ್ಯಕ್ಕೆ ರಕ್ಷಣಾತ್ಮಕವಾಗಿ ಕೆಲಸ ಮಾಡುವ ಗುಣವನ್ನು ವಿಟಮಿನ್ ಡಿ ಹೊಂದಿದೆ. ಅರಿಶಿನ ಮತ್ತು ತುಪ್ಪ ಮಿಕ್ಸ್ ಮಾಡಿ ಸೇವಿಸುವುದರಿಂದ ನಮ್ಮ ದೇಹದಲ್ಲಿ ವಿಟಮಿನ್ ಡಿ ಪ್ರಮಾಣ ಹೆಚ್ಚಾಗುತ್ತದೆ ಮತ್ತು ಕೀಲುಗಳ ನಡುವಿನ ಕಾರ್ಟಿಲೆಜ್ ರಕ್ಷಣೆ ಯಾಗುತ್ತದೆ.

ಒಳ್ಳೆಯ ನಿದ್ರೆ ನಿಮ್ಮದಾಗುತ್ತದೆ

ತುಪ್ಪ ಮತ್ತು ಅರಿಶಿನ ನರಮಂಡಲದ ಮೇಲೆ ಉತ್ತಮ ಪ್ರಭಾವ ಬೀರುವುದರಿಂದ ನಿಮ್ಮ ನರಮಂಡಲ ಶಾಂತವಾಗುತ್ತದೆ ಮತ್ತು ರಾತ್ರಿಗೆ ಸಮಯದಲ್ಲಿ ಒಳ್ಳೆಯ ನಿದ್ರೆ ಆವರಿಸುತ್ತದೆ.

ನಿದ್ರೆ ಸಂಬಂಧಪಟ್ಟ ಹಾರ್ಮೋನ್ ದೇಹದಲ್ಲಿ ಬಿಡುಗಡೆಯಾಗಿ ಕಣ್ಣುಗಳಿಗೆ ನಿದ್ರೆ ಮಂಪರು ಹತ್ತುತ್ತದೆ. ಮುಖ್ಯವಾಗಿ ಮೆದುಳಿನ ಭಾಗದಲ್ಲಿ ಕಂಡು ಬರುವ ಉರಿಯುತವನ್ನು ತುಪ್ಪ ಮತ್ತು ಅರಿಶಿನ ಅತ್ಯಂತ ಪರಿಣಾಮಕಾರಿಯಾಗಿ ನಿವಾರಿಸುತ್ತದೆ.

Related Post

Leave a Comment