ನೆನೆಸಿಟ್ಟ ಬಾದಾಮಿ 80 ರೋಗಗಳಿಗೆ ಬಳಸಿ!

Written by Anand raj

Published on:

ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟ ಬಾದಾಮಿ, ಒಣ ಬಾದಾಮಿಯನ್ನು ತಿನ್ನುವುದಕ್ಕಿಂದ ಒಳ್ಳೆಯದು ಅಥವಾ ಒಳ್ಳೆಯದಲ್ಲ ಎಂದು ಜನ ಹೇಳುವುದನ್ನು ಕೇಳಿದ್ದೀರಾ? ಖಂಡಿತಾ ಕೇಳಿರುತ್ತೀರಿ. ಹಾಗಾಗಿ ಬಾದಾಮಿಯನ್ನು ಹೇಗೆ ತಿನ್ನಬೇಕೆಂಬ ಗೊಂದಲ ನಿಮ್ಮಲ್ಲಿದೆಯೇ? ಆ ಗೊಂದಲಕ್ಕೆ ಇಲ್ಲಿದೆ ಪರಿಹಾರ.

ರುಚಿಕರ ಬಾದಾಮಿಯನ್ನು ಇಷ್ಟಪಡದವರು ವಿರಳ. ಬಾದಾಮಿ… ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಬಹುತೇಕರು ತಮ್ಮ ಡಯಟ್​ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಚರ್ಮ ಹಾಗೂ ದೇಹಕ್ಕೆ ಬೇಕಾದ ಅಗತ್ಯ ಪೌಷ್ಟಿಕಾಂಶಗಳನ್ನು ಬಾದಾಮಿ ಪೂರೈಸುತ್ತದೆ. ಕೆಲವರು ನೆನೆಸಿದ ಬಾದಾಮಿ ತಿಂದರೆ, ಮತ್ತೆ ಕೆಲವರು ಒಣ ಬಾದಾಮಿಯನ್ನು ಇಷ್ಟಪಡುತ್ತಾರೆ. ಆದರೆ ಬಾದಾಮಿಯನ್ನು ಹೇಗೆ ತಿನ್ನಬೇಕೆಂಬ ಗೊಂದಲ  ಸಾಕಷ್ಟು ಮಂದಿಯಲ್ಲಿದೆ. ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟ ಬಾದಾಮಿ, ಒಣ ಬಾದಾಮಿ ತಿನ್ನುವುದಕ್ಕಿಂದ ಒಳ್ಳೆಯದು ಅಥವಾ ಒಳ್ಳೆಯದಲ್ಲ ಎಂದು ಜನ ಹೇಳುವುದನ್ನು ಕೇಳಿದ್ದೀರಾ? ಖಂಡಿತಾ ಕೇಳಿರುತ್ತೀರಿ. ಹಾಗಾಗಿ ಬಾದಾಮಿಯನ್ನು ಹೇಗೆ ತಿನ್ನಬೇಕೆಂಬ ಗೊಂದಲ ನಿಮ್ಮಲ್ಲಿದೆಯೇ? ಆ ಗೊಂದಲಕ್ಕೆ ಇಲ್ಲಿದೆ ಪರಿಹಾರ.

ಪ್ರೋಟೀನ್, ಫೈಬರ್ ಮತ್ತು ಒಮೆಗಾ 3ಯ ಆಗರವಾಗಿರುವ ರುಚಿಕರ ಬಾದಾಮಿಯನ್ನು ಇಷ್ಟಪಡದವರು ತುಂಬಾ ಕಡಿಮೆ. ಹೆಚ್ಚಿನವರಿಗೆ ಬಾದಾಮಿ ಆರೋಗ್ಯ ಎಷ್ಟು ಉಪಯೋಗಕಾರಿ ಎಂಬುದರ ಅರಿವಿದ್ದು, ಅವರು ಅದನ್ನು ನಿತ್ಯದ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡಿದ್ದಾರೆ ಎಂಬುವುದು ಒಳ್ಳೆಯ ಸಂಗತಿ.

ಆದರೆ, ಬಾದಾಮಿಯನ್ನು ಹಾಗೆಯೇ ತಿನ್ನುವುದಕ್ಕಿಂತ, ನೀರಲ್ಲಿ ನೆನಸಿಟ್ಟು ತಿಂದರೆ ಅದರಲ್ಲಿರುವ ಪೌಷ್ಟಿಕ ಸತ್ವಗಳು ಮತ್ತು ವಿಟಮಿನ್‍ಗಳನ್ನು ದೇಹ ಬಹುಬೇಗನೆ ಹೀರಿಕೊಳ್ಳುತ್ತದೆ ಎಂಬುದು ನಮ್ಮಲ್ಲಿ ಬಹಳಷ್ಟು ಜನರಿಗೆ ತಿಳಿದಿಲ್ಲ. ನೆನೆಸಿದ ಬಾದಾಮಿಯೋ, ಒಣ ಬಾದಾಮಿಯೋ?- ನೆನೆಸಿದ ಬಾದಾಮಿ ಮತ್ತು ಒಣ ಬಾದಾಮಿಯ ನಡುವೆ ಯಾವುದನ್ನು ಆಯ್ದುಕೊಳ್ಳಬೇಕು ಎಂಬುವುದು ಕೇವಲ ರುಚಿಗೆ ಸಂಬಂಧಿಸಿದ ವಿಷಯವಲ್ಲ, ಅದು ಆರೋಗ್ಯಕರ ಆಯ್ಕೆ ಕೂಡ. ನೆನೆಸಿದ ಬಾದಾಮಿ ಉತ್ತಮ , ಏಕೆಂದರೆ ಅದರ ಸಿಪ್ಪೆಯಲ್ಲಿರುವ ಟೆನಿನ್ ಬಾದಾಮಿಯ ಪೋಷಕಾಂಶವನ್ನು ದೇಹ ಹೀರಿಕೊಳ್ಳಲು ಅಡ್ಡಿ ಮಾಡುತ್ತದೆ.

ಬಾದಾಮಿಯನ್ನು ನೀರಿನಲ್ಲಿ ನೆನೆಸಿದಾಗ ಸಿಪ್ಪೆಯನ್ನು ಸಲೀಸಾಗಿ ತೆಗೆಯಬಹುದು, ಆ ಮೂಲಕ ಬಾದಾಮಿಯಲ್ಲಿನ ಪೋಷಕಾಂಶಗಳು ಸುಲಭವಾಗಿ ದೇಹ ಸೇರುತ್ತವೆ. ನೆನಸಿದ ಬಾದಾಮಿ ಮೃದುವಾಗಿರುತ್ತದೆ, ಹಾಗಾಗಿ ಬೇಗ ಜೀರ್ಣವಾಗುತ್ತದೆ. ಬಾದಾಮಿಯನ್ನು 5 ರಿಂದ 6 ಗಂಟೆ ನೆನೆಸಿದರೆ ಸಾಕು, ರಾತ್ರಿಯಿಡಿ ನೆನೆಸಿದರೂ ತಪ್ಪಿಲ್ಲ. ಬಾದಾಮಿಯನ್ನು ಸರಿಯಾಗಿ ನೆನೆಸಿಡುವ ಬಗೆ- ಒಂದು ಕಪ್ ನೀರಿನಲ್ಲಿ, ಒಂದು ಮುಷ್ಟಿ ಬಾದಾಮಿ ನೆನೆಸಿಡಿ. ಬಳಿಕ ಅದನ್ನು ಮುಚ್ಚಿ, ಬಾದಾಮಿಯನ್ನು 6 ರಿಂದ 8 ಗಂಟೆ ನೆನೆಯಲು ಬಿಡಿ. ಮರುದಿನ ಬೆಳಗ್ಗೆ ಕಪ್‍ನಲ್ಲಿರುವ ನೀರನ್ನು ಚೆಲ್ಲಿ, ಬಾದಾಮಿಯ ಸಿಪ್ಪೆ ತೆಗೆದು, ಕೂಡಲೇ ಸೇವಿಸಿ. ಅದನ್ನು ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ಮುಚ್ಚಿ, ಒಂದು ವಾರದ ವರೆಗೆ ಸಂರಕ್ಷಿಸಿ ಕೂಡ ಇಡಬಹುದು.

ಬಾದಾಮಿಯಲ್ಲಿರುವ ಪೌಷ್ಟಿಕಾಂಶಗಳು

ಬಾದಾಮಿ… ವಿಟಮಿನ್ ಇ, ಡಯೆಟರಿ ಫೈಬರ್, ಪ್ರೋಟೀನ್, ಒಮೇಗಾ 3 ಮತ್ತು 6 ಫ್ಯಾಟಿ ಆ್ಯಸಿಡ್‍ನಂತಹ ಆರೋಗ್ಯಕರ ಪೋಷಕಾಂಶಗಳ ಖಜಾನೆ. ಹಾಗಾಗಿಯೇ ಬಾದಾಮಿಯನ್ನು ಸೂಪರ್ ಫುಡ್‌ ಎನ್ನುತ್ತಾರೆ. ಅದರಲ್ಲಿರುವ ಪ್ರೋಟೀನ್​ನಿಂದ ಬೇಗ ಹಸಿವಾಗುವುದಿಲ್ಲ, ಮೂಳೆ ಗಟ್ಟಿಯಾಗುತ್ತದೆ ಮತ್ತು ರಕ್ತ ಹಾಗೂ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ರಕ್ತದೊತ್ತಡ ಇರುವ ಮಂದಿಗೆ ಬಾದಾಮಿ ಅತ್ಯಂತ ಪ್ರಯೋಜನಕಾರಿ. ಬಾದಾಮಿ ಸ್ನಾಯು ಮತ್ತು ನರಗಳ ಕ್ರಿಯೆಗೆ ಸಹಕಾರಿ.

ನೆನೆಸಿದ ಬಾದಾಮಿಯ ಇತರ ಪ್ರಯೋಜನಗಳು: ನೆನೆಸಿದ ಬಾದಾಮಿಗಳು ದೇಹದಲ್ಲಿ ಲೈಪೇಸ್‌ ಎಂಬ ಕಿಣ್ವಗಳ ಬಿಡುಗಡೆಗೆ ಸಹಕರಿಸುತ್ತದೆ. ಲೈಪೇಸ್‌ ಕೊಬ್ಬನ್ನು ಜೀರ್ಣಿಸಲು ಸಹಾಯ ಮಾಡುತ್ತದೆ. ತೂಕ ಇಳಿಸಲು ಸಹಕಾರಿ – ಊಟದ ಮಧ್ಯೆ ಸೇವಿಸಬಲ್ಲ ತಿನಿಸಾಗಿ ಬಾದಾಮಿ ಜನಜನಿತ ಎಂಬುದು ನಮಗೆಲ್ಲಾ ತಿಳಿದಿದೆ. ಬಾದಾಮಿಯಲ್ಲಿರುವ ಮಾನೋಸ್ಯಾಚುರೇಟೆಡ್ ಫ್ಯಾಟ್‍ಗಳು ಹಸಿವನ್ನು ಇಂಗಿಸುತ್ತವೆ ಮತ್ತು ನಿಮ್ಮ ಹೊಟ್ಟೆ ದೀರ್ಘಕಾಲ ತುಂಬಿಯೇ ಇರುತ್ತದೆ. ಅವುಗಳನ್ನು ತಿನ್ನುವುದರಿಂದ, ಅತಿಯಾಗಿ ಆಹಾರ ತಿನ್ನುವುದು ತಪ್ಪುತ್ತದೆ, ಪರಿಣಾಮವಾಗಿ ತೂಕ ಇಳಿಯುತ್ತದೆ.

ಹೃದಯಕ್ಕೆ ಉತ್ತಮ:  ಬಾದಾಮಿಗಳು ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲನ್ನು ಹೆಚ್ಚಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಆ್ಯಂಟಿಆ್ಯಕ್ಸಿಡೆಂಕ್ಸ್‌ಗಳ ಆಗರ – ಬಾದಾಮಿಯಲ್ಲಿರುವ ವಿಟಮಿನ್ ಇ ಆ್ಯಂಟಿಆ್ಯಕ್ಸಿಡೆಂಕ್ಸ್‌ ಆಗಿ ಕೆಲಸ ಮಾಡುತ್ತದೆ, ಉರಿಯೂತ ಮತ್ತು ಮುಪ್ಪನ್ನು ತಡೆಯುತ್ತದೆ. ಇನ್ನಷ್ಟು ಲಾಭಗಳು- ಬಾದಾಮಿಯಲ್ಲಿ ವಿಟಮಿನ್ ಬಿ17 ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ, ಅದು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬಾದಾಮಿಯಲ್ಲಿರುವ ಫ್ಲಾವನಾಯ್ಡ್‌ಗಳು ಟ್ಯೂಮರ್ನ‌ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ಅಷ್ಟೇ ಅಲ್ಲ, ಬಾದಾಮಿ ,ರಕ್ತದಲ್ಲಿನ ಸಕ್ಕರೆ ಮತ್ತು ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ಬಾದಾಮಿಯಲ್ಲಿರುವ ಫಾಲಿಕ್ ಆ್ಯಸಿಡ್‍ಗಳು ಜನ್ಮದತ್ತ ದೋಷಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Related Post

Leave a Comment