ಕಿವಿ ಒಲೆ ಚುಚ್ಚುವುದರ ಆಶ್ಚರ್ಯಕರ ಪ್ರಯೋಜನಗಳು!

Written by Anand raj

Published on:

ಸಾಮಾನ್ಯವಾಗಿ ಮಹಿಳೆಯರು ಆಭರಣಗಳನ್ನು ತಮ್ಮ ಅಂದವನ್ನು ಹೆಚ್ಚಿಸುವುದಕ್ಕೆ ಹಾಕುತ್ತಾರೆ.ಅದರೆ ಆಯುರ್ವೇದ ಪ್ರಕಾರ ಮಹಿಳೆಯರು ಮೂಗುತಿ ಮತ್ತು ಒಲೆ ಹಾಕುವುದರ ಮೂಲಕ ತಮ್ಮ ಅರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಆಯುರ್ವೇದ ಪ್ರಕಾರ ಮಹಿಳೆಯ ಎಡ ಬದಿಯ ಮೂಗು ಮಹಿಳೆಯ ಸಂತಾನೋತ್ಪತಿಯ ಅಂಗದ ಮೇಲೆ ಸಂಬಂಧವನ್ನು ಹೊಂದಿದೆ ಹೀಗಾಗಿ ಎಡ ಬದಿಯ ಮೂಗಿಗೆ ಮೂಗುತಿ ಹಾಕುವುದರಿಂದ ಅದು ಮಹಿಳೆಯ ಸಂತಾನೋತ್ಪತಿ ಕ್ರಿಯೆಯನ್ನು ಹೆಚ್ಚು ಮಾಡುತ್ತದೆ ಎಂದು ತಿಳಿದು ಬಂದಿದೆ.

ಎಡ ಮೂಗಿಗೆ ಆಭರಣ ಧರಿಸುವುದರಿಂದ ಅದು ಮಗುವಿಗೆ ಜನ್ಮ ನೀಡಿದ ವೇಳೆ ಉಂಟಾಗುವ ನೋವು ಕಡಿಮೆ ಮಾಡುವುದು ಮೂಗಿನ ಆಭರಣಗಳು ಹೆರಿಗೆಯನ್ನು ಸುಲಭ ಗೊಳಿಸುವುದು ಎಂದು ಭಾರತೀಯರು ನಂಬಿದ್ದರೆ. ಮೂಗಿನ ಎಡ ಭಾಗಕ್ಕೆ ಆಭರಣ ಧರಿಸಿದರೆ ಅದರಿಂದ ಋತುಸ್ರವದ ವೇಳೆ ಉಂಟಾಗುವ ನೋವು ಕಡಿಮೆ ಆಗುವುದು ಎಂದು ಆಯುರ್ವೇದವು ಹೇಳುತ್ತದೆ.ಇದು ಮೂಗಿಗೆ ಆಭರಣ ಧರಿಸುವುದರಿಂದ ಆಗುವ ಅತ್ಯಂತ ಲಾಭ.

ಕಿವಿಗೆ ಆಭರಣ ಧರಿಸುವುದರಿಂದ ರಕ್ತ ಸಂಚಾರ ಸರಿಯಾದ ರೀತಿಯಲ್ಲಿ ಆಗುವುದು ಮತ್ತು ಮೆದುಳಿನ ಜ್ಞಾಪಕ ಶಕ್ತಿ ಹೆಚ್ಚಾಗುವುದು. ಕಿವಿಯ ಮಧ್ಯದ ಭಾಗವು ರೋಗ ನಿರೋಧಕ ಶಕ್ತಿಯ ಭಾಗವಾಗಿದೆ. ಮದ್ಯದಲ್ಲಿ ಭಾಗದಲ್ಲಿ ಆಭರಣ ಧರಿಸುವುದರಿಂದ ಒಳ್ಳೆಯದು. ಅಸಾಮಾತನ ರೋಗವನ್ನು ಇದು ತಡೆಗಟ್ಟಲು ಇದು ಯಶಸ್ವಿ ಆಗಿದೆ.

ಇನ್ನು ಪುರುಷರು ಕಿವಿಗೆ ಆಭರಣ ಚುಚ್ಚಿದರೆ ಅದರಿಂದ ವೀರ್ಯಾವು ಹೆಚ್ಚಾಗುವುದು. ಭಾರತದ ಕೆಲವೊಂದು ಭಾಗದಲ್ಲಿ ಪುರುಷರು ಕಿವಿಗೆ ಆಭರಣ ಚುಚ್ಚಿಸಿಕೊಳ್ಳುವುದು ಒಂದು ಸಂಪ್ರದಾಯವಾಗಿದೆ.ಕಿವಿ ಚುಚ್ಚುವುದರಿಂದ ಕೆಲವು ಭಾಗಕ್ಕೆ ಅದ್ಬುತವಾಗಿ ಪ್ರಚೋದನೇ ನೀಡುತ್ತದೆ. ಇದರಿಂದ ಕಣ್ಣಿನ ದೃಷ್ಟಿ ಉತ್ತಮವಾಗಿರುತ್ತದೆ.

Related Post

Leave a Comment