ಮೂಳೆಗಳು ಗಟ್ಟಿಯಾಗಲು ಹೀಗೆ ಮಾಡಿ ! ಕ್ಯಾಲ್ಸಿಯಂ ಹೆಚ್ಚಾಗಲು ಮನೆಮದ್ದು!

Written by Anand raj

Published on:

ಕ್ಯಾಲ್ಸಿಯಂ ಮೂಳೆಗಳಿಗೆ ಬೇಕಾಗಿರುವ ಹಾಗು ಮೂಳೆಗಳನ್ನು ಗಟ್ಟಿಗೊಳಿಸಲು ಬೇಕಾಗಿರುವ ಒಂದು ಪ್ರಧಾನ ಅಂಶ.ನಾವು ಭ್ರೂಣದಿಂದ ಒಬ್ಬ ವ್ಯಕ್ತಿಯಾಗಿ ರೂಪುಗೊಳ್ಳುತ್ತೇವೆ ಎಂದರೆ ಅದರ ಹಿಂದೆ ವಿವಿಧ ಪೌಷ್ಟಿಕಾಂಶಗಳ ಭರ್ಜರಿ ಕಾರ್ಯ ಚಟುವಟಿಕೆ ಇರುತ್ತದೆ. ಗರ್ಭದಲ್ಲಿದ್ದಾಗ ತಾಯಿ ಸೇವಿಸುವ ಆಹಾರಗಳಲ್ಲಿ ಸಿಗುವ ಪೌಷ್ಟಿಕಾಂಶಗಳು ನಮ್ಮ ದೇಹ ಸೇರುತ್ತಿದ್ದವು. ಆನಂತರದಲ್ಲಿ ನಾವು ದಿನೇ ದಿನೇ ಬೆಳವಣಿಗೆ ಆದಂತೆ ವಿವಿಧ ಪೌಷ್ಟಿಕ ಸತ್ವಗಳನ್ನು ನಾವೇ ನಮಗೆ ಇಷ್ಟವಾದ ಆಹಾರಗಳ ಮೂಲಕ ಶುರು ಮಾಡುತ್ತೇವೆ. ಅನೇಕ ಬಗೆಯ ಪೌಷ್ಟಿಕಾಂಶಗಳ ಜೊತೆಗೆ ಕ್ಯಾಲ್ಸಿಯಂ ಕೂಡ ನಮಗೆ ಬಹಳ ಮುಖ್ಯವಾಗುತ್ತದೆ. ಕ್ಯಾಲ್ಸಿಯಂ ಸೇವನೆಯಿಂದ ನಮ್ಮ ಹಲ್ಲುಗಳು, ಮೂಳೆಗಳು ಮತ್ತು ಇತರ ಅಂಗಾಂಗಗಳಿಗೆ ಅನುಕೂಲವಾಗುತ್ತದೆ. ಹಾಗಾಗಿ ಹುಡುಕಾಟ ಬೇಡ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲೇ ಇದೆ.

ಪಾಲಕ್ ಸೊಪ್ಪು

ಇದು ಒಂದು ಹಸಿರು ಎಲೆ ತರಕಾರಿ ಆಗಿದೆ. ಡಾಕ್ಟರ್ ಹೇಳುವ ಪ್ರಕಾರ ಇದು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಬೇರೆ ಬೇರೆ ಆಯಾಮಗಳಲ್ಲಿ ಇದರಿಂದ ನಮಗೆ ಪ್ರಯೋಜನಗಳು ಸಿಗುತ್ತವೆ.ಪಾಲಕ್ ಸೊಪ್ಪು ತನ್ನಲ್ಲಿ 100 ಗ್ರಾಂ ತೂಕಕ್ಕೆ 99 ಮಿಲಿ ಗ್ರಾಂ ಕ್ಯಾಲ್ಸಿಯಂ ಪ್ರಮಾಣವನ್ನು ಹೊಂದಿದೆ ಎಂಬ ಮಾಹಿತಿ ಇದೆ. ಹಾಗಾಗಿ ಆಗಾಗ ಪಾಲಕ್ ಸೊಪ್ಪಿನ ಸಾರು, ಪಲ್ಯ ಇತ್ಯಾದಿಗಳ ನ್ನು ತಯಾರಿಸಿ ಸೇವಿಸುವುದು ಉತ್ತಮ.ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾದ್ರೆ ತುಂಬಾ ತೊಂದ್ರೆ ಎಚ್ಚರ!

ಬಾದಾಮಿ ಬೀಜಗಳು–ಡ್ರೈ ಫ್ರೂಟ್ಸ್ ಜಾತಿಗೆ ಸೇರಿರುವ ಬಾದಾಮಿ ಬೀಜಗಳು ತಮ್ಮಲ್ಲಿ ನಮ್ಮ ದೇಹಕ್ಕೆ ಅವಶ್ಯಕವಾಗಿ ಬೇಕಾದ ವಿವಿಧ ಬಗೆಯ ಪೌಷ್ಟಿಕಾಂಶಗಳನ್ನು ಒಳಗೊಂಡಿರುತ್ತವೆ.ಅದರಲ್ಲಿ ನಮ್ಮ ದೇಹದ ಮೂಳೆಗಳ ಸಮರ್ಥತೆಗೆ ಅಗತ್ಯ ಆಗುವ ಕ್ಯಾಲ್ಸಿಯಂ ಕೂಡ ಇರುತ್ತದೆ. ಡೈರಿ ಪದಾರ್ಥಗಳಿಗೆ ಹೋಲಿಸಿದರೆ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಾದಾಮಿ ಬೀಜಗಳಲ್ಲಿ ಕ್ಯಾಲ್ಸಿಯಂ ಸಿಗುತ್ತದೆ ಎಂದು ಹೇಳುತ್ತಾರೆ.

ಕಿತ್ತಳೆ ಹಣ್ಣು–ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಮೂಳೆಗಳನ್ನು ಬಲಪಡಿಸುವಲ್ಲಿ ಕಿತ್ತಳೆ ಹಣ್ಣು ತುಂಬಾ ಪ್ರಯೋಜನಕ್ಕೆ ಬರುತ್ತದೆ. ಹಾಗಾಗಿ ಇದರಲ್ಲಿ ವಿಟಮಿನ್ ಸಿ ಜೊತೆಗೆ ಕ್ಯಾಲ್ಸಿಯಂ ಕೂಡ ಹೇರಳವಾಗಿ ಕಂಡುಬರುತ್ತದೆ. ಸೀಸನ್ ನಲ್ಲಿ ಕಿತ್ತಳೆ ಹಣ್ಣು ಜಾಸ್ತಿ ಮಾರುಕಟ್ಟೆಯಲ್ಲಿ ಲಭ್ಯವಿ ರುವಾಗ ನೀವು ಇವುಗಳ ಪ್ರಯೋಜನಗಳನ್ನು ನಿಮ್ಮದಾಗಿ ಸಿಕೊಳ್ಳಬಹುದು.

ಮೊಸರು–ಮೊಸರು ಒಂದು ಡೈರಿ ಪದಾರ್ಥ. ಹಾಲಿನಿಂದ ತಯಾರಾಗುವ ಮೊಸರಿನಲ್ಲಿ ಅಪಾರವಾದ ಕ್ಯಾಲ್ಸಿಯಂ ಇರುತ್ತದೆ. ಯಾರು ಪ್ರತಿದಿನ ತಮ್ಮ ಆಹಾರ ಪದ್ಧತಿ ಯಲ್ಲಿ ಯಾವುದಾದರೂ ರೂಪದಲ್ಲಿ ಮೊಸರು ಬಳಕೆ ಮಾಡುತ್ತಾರೆ ಅವರಿಗೆ ಮೂಳೆಗಳ ಸಮಸ್ಯೆ ಬರುವು ದಿಲ್ಲ.ಅಂದರೆ ವಯಸ್ಸಾಗುತ್ತ ಮೂಳೆಗಳು ಸವೆಯುವುದು, ಮೂಳೆ ಗಳ ಶಕ್ತಿ ಕಡಿಮೆಯಾಗುವುದು, ಮೂಳೆಗಳು ಟೊಳ್ಳಾಗುವುದು. ಈ ತರಹ ಯಾವುದೇ ಸಮಸ್ಯೆಗಳು ಕಂಡುಬರುವುದಿಲ್ಲ ಎಂದು ಹೇಳುತ್ತಾರೆ.

ಬ್ರೊಕೋಲಿ–ಇತ್ತೀಚಿನ ದಿನಗಳಲ್ಲಿ ಬ್ರೊಕೋಲಿ ಸಹ ಮಾರು ಕಟ್ಟೆಯಲ್ಲಿ ಎಲ್ಲ ಕಡೆ ಲಭ್ಯವಿದೆ. ಇದರ ಆರೋಗ್ಯ ಪ್ರಯೋಜನಗಳು ಸಹ ಮಿತಿ ಇಲ್ಲದೆ ಸಿಗುತ್ತವೆ.ವಿಶೇಷವಾಗಿ ಕ್ಯಾಲ್ಸಿಯಂ ಪ್ರಮಾಣ ಹೇರಳವಾಗಿರುವ ಬ್ರೊಕೋಲಿಯನ್ನು ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಂಡರೆ ಮೂಳೆಗಳಿಗೆ ಹಾಗೂ ಹಲ್ಲುಗಳಿಗೆ ಸಂಬಂಧ ಪಟ್ಟಂತೆ ಯಾವುದೇ ರೀತಿಯ ಅನಾರೋ ಗ್ಯಕರ ಪರಿಣಾಮಗಳು ಎದುರಾಗುವುದಿಲ್ಲ. ಎರಡು ಕಪ್ ಹಸಿ ಬ್ರೊಕೋಲಿ ತನ್ನಲ್ಲಿ 85 ಮಿಲಿ ಗ್ರಾಂ ಕ್ಯಾಲ್ಸಿಯಂ ಹೊಂದಿದೆ.

ಸಾಲ್ಮನ್-ಸಮುದ್ರ ಆಹಾರ ಎಂದು ನೀವು ಅರಸಿ ಹೊರಟಾಗ ಸಾಲ್ಮನ್ ನಿಮ್ಮ ಲಿಸ್ಟ್ ನಲ್ಲಿ ಇದ್ದೇ ಇರುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿ ಕಂಡುಬರುತ್ತದೆ ಮತ್ತು ಶುದ್ಧ ವಾದ ರೂಪದಲ್ಲಿ ಸಿಗುತ್ತದೆ ಎಂದು ಹೇಳಲಾಗುತ್ತದೆ.ಕ್ಯಾಲ್ಸಿಯಂ ಇಂತಹ ಆಹಾರಗಳಲ್ಲಿ ಸಿಕ್ಕಂತಹ ಸಂದ ರ್ಭದಲ್ಲಿ ಅದನ್ನು ಉತ್ತಮ ಪ್ರಮಾಣದಲ್ಲಿ ಉಪಯೋ ಗಿಸಿಕೊಳ್ಳುವುದು ನಿಮ್ಮ ಬುದ್ಧಿವಂತಿಗೆ ಬಿಟ್ಟಿದ್ದು. ಮಾಂಸಾಹಾರಿಗಳಿಗೆ ಇದೊಂದು ಅತ್ಯುತ್ತಮ ಆಹಾರ ಪದಾರ್ಥ.

ಕೆನೆರಹಿತ ಹಾಲು–ಡೈರಿ ಪದಾರ್ಥವಾದ ಹಾಲನ್ನು ನಾವು ಮನೆಯಲ್ಲಿ ಸ್ಟೌ ಮೇಲೆ ಇಟ್ಟು ಕೆನೆ ಕಟ್ಟುವವರೆಗೆ ಕಾಯಿಸುತ್ತೇವೆ. ಸಂಪೂರ್ಣವಾಗಿ ಕೆನೆ ಹೊರ ತೆಗೆದ ನಂತರವೂ ಕೂಡ ಹಾಲಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿ ಸಿಗುತ್ತದೆ.ಹೀಗಾಗಿ ನಿಮ್ಮ ಆರೋಗ್ಯಕರ ದೇಹಕ್ಕೆ ಅಂದ್ರೆ ನಿಮ್ಮ ಹೃದಯದ ಆರೋಗ್ಯಕ್ಕೆ ಮತ್ತು ಮೂಳೆಗಳ ಆರೋಗ್ಯಕ್ಕೆ ಕೊಬ್ಬು ರಹಿತ ಕ್ಯಾಲ್ಸಿಯಂ ಹೆಚ್ಚಾಗಿರುವ ಹಾಲು ತುಂಬಾ ಸೂಕ್ತ.ರಾತ್ರಿ ಮಲಗುವ ಮುಂಚೆ ಒಂದು ಲೋಟ ಹಾಲು ಕುಡಿದು ಮಲಗುವ ಅಭ್ಯಾಸ ನಿಮ್ಮದಾದರೆ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಗೆ ಸಂಬಂಧಪಟ್ಟಂತೆ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡುಬರುವುದಿಲ್ಲ.​

Related Post

Leave a Comment