ಚಿತ್ರಮೂಲ ಆಯುರ್ವೇದ ಔಷಧಿಯ ಮೂಲ!

ಭೂಮಿಯ ಮೇಲೆ ದೊರಕುವ ಹಲವಾರು ಸಸ್ಯಗಳು ಅನೇಕ ಔಷಧೀಯ ಸಂಯುಕ್ತಗಳನ್ನು ಒದಗಿಸುವ ಮೂಲಗಳೆನ್ನಿಸಿವೆ. ಜಗತ್ತಿನ ಶೇ.80ರಷ್ಟು ಜನರು ಕಾಯಿಲೆಗಳ ನಿವಾರಣೆಗಾಗಿ ಇಂದಿಗೂ ಗಿಡಮೂಲಿಕೆಗಳನ್ನೇ ಅವಲಂಬಿಸಿದ್ದಾರೆ ಎನ್ನುತ್ತದೆ ಒಂದು ಸಮೀಕ್ಷೆ.

 ಭೂಮಿಯ ಮೇಲೆ ದೊರಕುವ ಹಲವಾರು ಸಸ್ಯಗಳು ಅನೇಕ ಔಷಧೀಯ ಸಂಯುಕ್ತಗಳನ್ನು ಒದಗಿಸುವ ಮೂಲಗಳೆನ್ನಿಸಿವೆ. ಜಗತ್ತಿನ ಶೇ.80ರಷ್ಟು ಜನರು ಕಾಯಿಲೆಗಳ ನಿವಾರಣೆಗಾಗಿ ಇಂದಿಗೂ ಗಿಡಮೂಲಿಕೆಗಳನ್ನೇ ಅವಲಂಬಿಸಿದ್ದಾರೆ ಎನ್ನುತ್ತದೆ ಒಂದು ಸಮೀಕ್ಷೆ. ಅಥರ್ವ ವೇದ, ಚರಕ ಸಂಹಿತ ಮತ್ತು ಸೂಶ್ರುತ ಸಂಹಿತಗಳಲ್ಲಿ ಸುಮಾರು 700ಕ್ಕೂ ಹೆಚ್ಚಿನ ಗಿಡಮೂಲಿಕೆಗಳ ಬಗ್ಗೆ ವಿಸ್ತೃತ ವಿವರಣೆ ನೀಡಲಾಗಿದೆ. ಈ ಗಿಡಮೂಲಿಕೆಗಳ ಪಟ್ಟಿಗೆ ಸೇರುವ ಒಂದು ಅದ್ಬುತ ಬಹುವಾರ್ಷಿಕ ಔಷಧ ಸಸ್ಯ ಚಿತ್ರಮೂಲ.

ಈ ಸಸ್ಯವನ್ನು ಭಾರತೀಯರ ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಪ್ಲಂಬಾಗೋ ಜೈಲಾನಿಕ. ಇದು ಪ್ಲಂಬಾಜಿನೇಸಿಯೇ ಎಂಬ ಕುಟುಂಬಕ್ಕೆ ಸೇರುವ ದಕ್ಷಿಣ ಏಷ್ಯಾ ಮೂಲದ ಗಿಡಮೂಲಿಕೆಯಾಗಿದೆ. ಇದು ಪ್ರಪಂಚದಾದ್ಯಂತ ಲೆಡ್‌ವಾರ್ಟ್ ಎಂದೇ ಖ್ಯಾತವಾಗಿದೆ. ಈ ಸಸ್ಯದ ಎಲೆಗಳು ಹಚ್ಚ ಹಸಿರಾಗಿ ಇದ್ದು ವರ್ಷಪೂರ್ತಿ ಬಿಳಿ ಬಣ್ಣದ ಹೂಗಳನ್ನು ಬಿಡುತ್ತದೆ. ಇದನ್ನು ಅರೆಬರೆ ನೆರಳಿನಲ್ಲೂ, ಹೂಕುಂಡಗಳಲ್ಲೂ ಸುಲಭವಾಗಿ ಬೆಳೆದುಕೊಳ್ಳಬಹುದಾಗಿದೆ. ಇದರ ಬೇರು, ಬೇರಿನ ತೊಗಟೆ, ಬೀಜ ಮತ್ತು ಎಲೆಗಳನ್ನೂ ಸಹ ಔಷಧವಾಗಿ ಬಳಸಬಹುದಾಗಿದೆ.

ಈ ಔಷಧ ಸಸ್ಯವನ್ನು ಬೀಜ, ಕತ್ತರಿಸಿದ ಗಿಡದ ಕವಲುಗಳು ಹಾಗೂ ಹಳೆಯ ಘಟಕಗಳಿಂದ ವೃದ್ಧಿ ಮಾಡಲಾಗುತ್ತದೆ. ಚಿತ್ರಮೂಲದ ತೊಗಟೆ, ಬೇರು ಮತ್ತು ಎಲೆಗಳ ಪುಡಿಯನ್ನು ಗೊನೊರಿಯಾ, ಕ್ಷಯರೋಗ, ಮಲೇರಿಯಾ, ಸಕ್ಕರೆ ಕಾಯಿಲೆ ಮತ್ತು ಹಲವು ಬಗೆಯ ಕ್ಯಾನ್ಸರ್‌ಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದು ಜೀರ್ಣಕ್ರಿಯೆ, ಜ್ಞಾಪಕಶಕ್ತಿ ವೃದ್ಧಿಸುವುದಲ್ಲದೆ ಕರುಳಿನ ತೊಂದರೆ, ಭೇದಿ, ಮೂಲವ್ಯಾದಿ, ತುರಿಕೆ, ಜಠರದ ತೊಂದರೆ ನಿವಾರಣೆಗೂ ದಿವ್ಯೌಷಧವಾಗಿದೆ. ಇದರ ಬೇರುಗಳನ್ನು ಹಾಲಿನಲ್ಲಿ ಕುದಿಸಿ ಬಾಯಿ, ಗಂಟಲು ಮತ್ತು ಎದೆ ಉರಿಯೂತವನ್ನು ಶಮನ ಮಾಡಲು ಬಳಸಲಾಗುತ್ತದೆ.

Leave A Reply

Your email address will not be published.