ಬೆನ್ನು ನೋವು ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಬೆನ್ನು ನೋವನ್ನು ವಿಶ್ವದಾದ್ಯಂತ ಕಾಡುವ ಒಂದು ಅಂಗವೈಕಲ್ಯ ಎಂದು ಹೇಳಲಾಗುವುದು. ಕೆಲವು ಅಂಕಿ ಅಂಶಗಳ ಪ್ರಕಾರ ಪ್ರತಿ 10 ಜನರಲ್ಲಿ 8 ಜನರು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿತ್ಯವೂ ಕಾಡುವ ಈ ಅಸ್ವಸ್ಥತೆಗೆ ಕೆಲವು ಸರಳ ಪರಿಹಾರಗಳನ್ನು ಅನುಸರಿಸಬಹುದು.
ಬೆನ್ನು ನೋವು ಗುರುತಿಸುವುದು
ಬೆನ್ನು ನೋವು ಸಾಮಾನ್ಯ ಆರೋಗ್ಯ ಸಮಸ್ಯೆಯಲ್ಲಿ ಒಂದು. ಆದರೆ ಅದಕ್ಕೆ ಕಾರಣಗಳು ಬೇರೆ ಬೇರೆಯಾಗಿರುತ್ತವೆ. ಯಾವ ಕಾರಣದಿಂದ ಬೆನ್ನು ನೋವು ಬುರುತ್ತಿದೆ? ಅದಕ್ಕೆ ಯಾವ ಆರೈಕೆ ಅಗತ್ಯ ಎನ್ನುವುದನ್ನು ಮೊದಲು ಪರಿಶೀಲಿಸಬೇಕು. ನಂತರ ನೋವಿಗೆ ಸೂಕ್ತ ಚಿಕಿತ್ಸೆ ಅಥವಾ ಆರೈಕೆಯನ್ನು ಪಡೆದುಕೊಳ್ಳಬೇಕು. ಕೆಲವೊಮ್ಮೆ ಚಿಕಿತ್ಸೆ ಫಲಕಾರಿಯಾಗದೆ ನೋವನ್ನು ಅನುಭವಿಸುತ್ತಲೇ ಇರಬೇಕಾಗುವುದು.
ಅಧಿಕ ನೀರಿನ ಸೇವನೆ
ಅಧಿಕ ತೂಕ ಹಾಗೂ ನಿರ್ಜಲೀಕರಣವು ಬೆನ್ನು ನೋವಿಗೆ ಹೆಚ್ಚಿನ ಒತ್ತಡ ನೀಡುತ್ತದೆ. ಉರಿಯೂತಕ್ಕೆ ಕಾರಣವಾಗುವ ಆಹಾರವನ್ನು ತ್ಯಜಿಸಬೇಕು. ಜೊತೆಗೆ ಸಾಕಷ್ಟು ನೀರನ್ನು ಕುಡಿಯಬೇಕು. ಅದು ಮೂಳೆಗಳ ಆರೋಗ್ಯಕ್ಕೆ ಉತ್ತಮ ಪೋಷಣೆ ನೀಡುವುದು. ಬೆರ್ರಿ ಹಣ್ಣು, ವಾಲ್‍ನಟ್, ಸೊಪ್ಪಿನಂತಹ ತರಕಾರಿಗಳು ಮೂಳೆಯ ಆರೋಗ್ಯವನ್ನು ಕಾಪಾಡುತ್ತವೆ. ಇವುಗಳ ಜೊತೆಗೆ ನೀರನ್ನು ಹೆಚ್ಚಾಗಿ ಸೇವಿಸಬೇಕು. ಪ್ರತಿ ದಿನ ಮಹಿಳೆಯರು 2.7 ಲೀ ನಷ್ಟು ಮತ್ತು ಪುರುಷರು 3.7 ಲೀ. ನಷ್ಟು ನೀರನ್ನು ಕುಡಿಯಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ಧೂಮಪಾನ ಮಾಡದಿರಿ
ಧೂಮ ಪಾನ ಬೆನ್ನು ನೋವನ್ನು ತೀವ್ರಗೊಳಿಸುತ್ತದೆ. ಬೆನ್ನು ನೋವು ಇರುವವರು ಧೂಮ ಪಾನ ಮಾಡದಿರಿ. ಗಾಯಗೊಂಡ ಪ್ರದೇಶಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುವುದು. ಹೃದಯ ರೋಗ ಮತ್ತು ಉಸಿರಾಟದ ತೊಂದರೆಯನ್ನು ದ್ವಿಗುಣಗೊಳ್ಳುತ್ತದೆ. ಮೂಳೆಗಳ ಆರೋಗ್ಯವನ್ನು ಹಾಳು ಮಾಡುವುದು.
ಮಾನಸಿಕ ಒತ್ತಡ ನಿಯಂತ್ರಿಸಿ
ಅಧಿಕ ಮಾನಸಿಕ ಒತ್ತಡವು ಮೂಳೆಯ ಆರೋಗ್ಯವನ್ನು ಹಾಳು ಮಾಡುತ್ತದೆ. ಮಾನಸಿಕವಾಗಿ ಶಾಂತವಾಗಿದ್ದರೆ ನರ ಮಂಡಲಗಳು ಶಾಂತಗೊಳ್ಳುತ್ತವೆ. ಧ್ಯಾನ, ಯೋಗ ಮತ್ತು ಉಸಿರಾಟದ ವ್ಯಾಯಾಮಗಳನ್ನು ಕೈಗೊಂಡಾಗ ಮಾನಸಿಕ ಮತ್ತು ದೈಹಿಕ ಆರೋಗ್ಯವು ಉತ್ತಮ ಸ್ಥಿತಿಯಲ್ಲಿ ಇರುತ್ತದೆ.
ಸೂಕ್ತ ಕೆಲಸ ನಿರ್ವಹಣೆ
ವೃತ್ತಿ ಕೆಲಸ ಅಥವಾ ಮನೆಯಲ್ಲಿಯೇ ನಿರ್ವಹಿಸುವ ಯಾವುದೇ ಕೆಲಸವನ್ನಾದರೂ ಸೂಕ್ತ ಕಾಳಜಿ ಹಾಗೂ ಗಮನದಿಂದ ನಿರ್ವಹಿಸಬೇಕು. ಇಲ್ಲವಾದರೆ ಬೆನ್ನು ಮೂಳೆಗಳ ಮೇಲೆ ಒತ್ತಡ ಬೀರುವುದು. ಅದು ನೋವಿಗೆ ಪ್ರಚೋದನೆ ನೀಡುವುದು. ಹಾಗಾಗಿ ಕೈಗೊಳ್ಳುವ ದೈಹಿಕ ಕೆಲಸವನ್ನು ನಿರ್ವಹಿಸುವಾಗ ಸರಿಯಾದ ಮಾಹಿತಿ ಮತ್ತು ಮಾಡುವ ಸಾಮಥ್ರ್ಯವನ್ನು ವಿನಿಯೋಗಿಸಬೇಕು.
ಸರಿಯಾಗಿ ಎದ್ದುಕೊಳ್ಳುವುದು
ದೇಹದಲ್ಲಿ ಅಧಿಕ ನೀರಿನಂಶ ಇರುತ್ತದೆ. ಉರಿಯೂತ ಹಾಗೂ ರೋಗಗಳಿಂದ ಮುಕ್ತರಾಗಲು ನಾವು ಸೂಕ್ತ ಚಲನೆ ಹಾಗೂ ಕೆಲಸವನ್ನು ಮಾಡಬೇಕು. ಅನುಚಿತ ಜೀವನ ಶೈಲಿ ಹಾಗೂ ಚಲನೆಯು ಜೀವನದಲ್ಲಿ ಜಡವನ್ನು ಉಂಟುಮಾಡುವುದು. ಜೊತೆಗೆ ಬೆನ್ನುನೋವು ಅಥವಾ ಮೋಳೆಯ ಆರೋಗ್ಯ ಸಮಸ್ಯೆಗೆ ಪ್ರಚೋದನೆ ನೀಡುತ್ತದೆ. ಹಾಗಾಗಿ ಓಡಾಡುವಾಗ, ಎದ್ದೇಳುವಾಗ, ವ್ಯಾಯಾಮ ಮಾಡುವಾಗ ಅಥವಾ ಚಟುವಟಿಕೆಯಿಂದ ಕೂಡಿರುವಾಗ ಸೂಕ್ತ ಗಮನದ ಆಧಾರದ ಮೇಲೆ ಎಲ್ಲವನ್ನೂ ನಿರ್ವಹಿಸಬೇಕು.
ಬೆನ್ನಿನ ಬಗ್ಗೆ ಕಾಳಜಿ
ಕೆಲವು ಕೆಲಸ ಮಾಡುವುದರಿಂದ ಬೆನ್ನಿನ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎನ್ನುವುದನ್ನು ನಾವು ತಿಳಿದಿರುವುದಿಲ್ಲ. ಉದಾಹರಣೆಗೆ ಮಗುವನ್ನು ಎತ್ತಿಕೊಳ್ಳುವುದು ಹೇಗೆ? ಎನ್ನುವುದು ತಿಳಿದಿರುವುದಿಲ್ಲ. ಆದರೆ ಒಂದೇ ಸಮನೆ ಎತ್ತಲು ಹೋಗುವುದು, ಆಗ ಬೆನ್ನಿಗೆ ಒತ್ತಡ ಹಾಗೂ ನೋವು ಉಂಟಾಗುವುದು. ಹಾಗಾಗಿ ದೈನಂದಿನ ಕೆಲಸ ಕಾರ್ಯ ನಿರ್ವಹಿಸುವಾಗ ಅವು ಬೆನ್ನಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಎನ್ನುವುದನ್ನು ತಿಳಿದಿರಬೇಕು.
ಯೋಗ ಅಭ್ಯಾಸ
ಯೋಗ ಮತ್ತು ಪಾರಂಪರಿಕ ವ್ಯಾಯಾಮಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು. ಬೆನ್ನಿಗೆ ನಿರಾಳತೆ ಹಾಗೂ ಒತ್ತಡ ಕಡಿಮೆ ಆಗುವಂತಹ ವ್ಯಾಯಾಮವನ್ನು ಕೈಗೊಳ್ಳಬೇಕು. ಆಗ ಬೆನ್ನು ಮತ್ತು ಸೊಂಟ ನೋವನ್ನು ನಿಯಂತ್ರಣದಲ್ಲಿ ಇಡಬಹುದು. ಮಲಗುವಾಗ ಸೂಕ್ತ ಭಂಗಿಯಲ್ಲಿ ಮಲಗಬೇಕು. ಆಗ ಬೆನ್ನಿನ ಮೇಲೆ ಒತ್ತಡ ಉಂಟಾಗದು.
ಪಾದರಕ್ಷೆಯ ಆಯ್ಕೆ
ನಾವು ಧರಿಸುವ ಶೂ ಹಾಗೂ ಪಾದರಕ್ಷೆಗಳು ನಮ್ಮ ಕಾಲು, ಸೊಂಟ ಮತ್ತು ಬೆನ್ನಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಕೆಲವೊಮ್ಮೆ ವಿಪರೀತ ನೋವು ಹಾಗೂ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಗಲು ಇರುತ್ತವೆ. ಹಾಗಾಗಿ ನಮ್ಮ ಆರೋಗ್ಯಕ್ಕೆ ಒಗ್ಗುವಂತಹ ಪಾದ ರಕ್ಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲವಾದೆ ನೋವು ನಿರಂತರವಾಗಿ ಕಾಡುತ್ತಲೇ ಇರುತ್ತದೆ.
ಮೂಳೆ ಸಂಬಂಧಿ ವ್ಯಾಯಾಮ
ನಾವು ದಿನನಿತ್ಯದ ಆರೋಗ್ಯದಲ್ಲಿ ಸುಧಾರಣೆ ಕಾಣಬೇಕು. ಬೆನ್ನಿಗೆ ಯಾವುದೇ ಒತ್ತಡ ಉಂಟಾಗಬಾರದು ಎಂದಾದರೆ ಮೊದಲು ಸೂಕ್ತ ವ್ಯಾಯಾಮದ ಆಯ್ಕೆ ಮಾಡಿ. ಮೂಳೆ, ತಜ್ಞರ ಸಲಹೆ ಮೇರೆಗೆ ಯಾವ ವ್ಯಾಯಾಮಗಳು ಬೆನ್ನು, ಸೊಂಟ ಹಾಗೂ ಕಾಲು ನೋವಿನ ಸಮಸ್ಯೆಯನ್ನು ನಿವಾರಿಸುತ್ತವೆ ಎನ್ನುವುದನ್ನು ಪರಿಶೀಲಿಸಿ. ನಂತರ ಆ ಕ್ರಮವನ್ನು ಅನುಸರಿಸಿ. ಬಹುಬೇಗ ಬೆನ್ನುನೋವಿನ ಸಮಸ್ಯೆಯಿಂದ ಮುಕ್ತರಾಗಬಹುದು.