ನಿಮಿರುವಿಕೆ ಸಮಸ್ಯೆಗೆ ಹೇಳಿ ಗುಡ್ ಬೈ!

Written by Anand raj

Published on:

ಯಾವುದೇ ಪುರುಷರಿಗೆ ಅಥವಾ ಮಹಿಳೆಯರಿಗೆ ಸಂಸಾರಿಕ ಜೀವನ ಚೆನ್ನಾಗಿದ್ದರೆ, ಮಿಕ್ಕ ಎಲ್ಲವೂ ಖುಷಿಯಾಗಿ ನಡೆದುಕೊಂಡು ಹೋಗುತ್ತದೆ. ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಗಾದೆಯಂತೆ ಲೈಂಗಿಕ ಹಿತಾಸಕ್ತಿ ಇಲ್ಲದೆ ಇರುವ ಅಥವಾ ಸಾಂಸಾರಿಕ ಜೀವನದಲ್ಲಿ ಉತ್ತಮ ಸಾಮರಸ್ಯ ಇಲ್ಲದೆ ಹೋದರೆ, ಅಂತಹ ಸಂಬಂಧಗಳು ಹೆಚ್ಚು ದಿನ ಉಳಿಯುವುದಿಲ್ಲ.

ಆದರೆ ಇದಕ್ಕೆಲ್ಲ ಪುರುಷರಿಗೆ ಅಥವಾ ಮಹಿಳೆಯರಿಗೆ ಯಾವುದೇ ಲೈಂಗಿಕ ಸಮಸ್ಯೆಗಳು ಇರಬಾರದು. ಅದರಲ್ಲೂ ವಿಶೇಷವಾಗಿ ಪುರುಷರಿಗೆ ತಮ್ಮ ಕೆಟ್ಟ ಹವ್ಯಾಸಗಳಿಂದ ಹಾಗೂ ಕೆಟ್ಟ ಜೀವನ ಶೈಲಿಯಿಂದ ಎದುರಿಸುವ ಲೈಂಗಿಕ ಸಮಸ್ಯೆಗಳು ನಿಜಕ್ಕೂ ಮುಜುಗರ ತರಿಸುತ್ತವೆ.

ಇಂತಹ ಒಂದು ಲೈಂಗಿಕ ಸಮಸ್ಯೆ ಎಂದರೆ ಅದು ನಿಮಿರುವಿಕೆ ಅಪಸಾಮಾನ್ಯ ಪ್ರಕ್ರಿಯೆ. ಆದರೆ ಇಂತಹ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಸಾವಿರಾರು ರೂಪಾಯಿ ಹಣ ಖರ್ಚು ಮಾಡುವ ಅವಶ್ಯಕತೆ ಇಲ್ಲ. ಕೇವಲ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದುಕೊಂಡು ಈ ಕೆಳಗಿನ ತರಕಾರಿಗಳನ್ನು ದಿನಂಪ್ರತಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ, ಮುಕ್ಕಾಲುಪಾಲು ನಿಮ್ಮ ಸಮಸ್ಯೆ ಬಗೆಹರಿದಂತೆ.ಬನ್ನಿ ಲೈಂಗಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲವು ತರಕಾರಿಗಳ ಬಗ್ಗೆ ತಿಳಿದುಕೊಳ್ಳೋಣ.

​ಬೀಟ್ರೋಟ್ ಸೇವನೆ ಮಾಡುವುದು

ಬೀಟ್ರೂಟ್ ನಲ್ಲಿ ದೇಹದ ರಕ್ತ ಸಂಚಾರವನ್ನು ವೃದ್ಧಿಪಡಿಸುವ ಗುಣ ಲಕ್ಷಣಗಳು ಕಂಡುಬರುತ್ತವೆ. ಇಷ್ಟೇ ಅಲ್ಲದೆ ಬೀಟ್ರೋಟ್ ನಲ್ಲಿ ನೈಟ್ರೇಟ್ ಅಂಶದ ಪ್ರಮಾಣ ಕೂಡ ಹೆಚ್ಚಾಗಿರುವುದರಿಂದ ಪುರುಷರ ಜನನಾಂಗದ ಭಾಗ ನಿಮಿರುವಿಕೆ ದೌರ್ಬಲ್ಯದಿಂದ ಒಂದು ವೇಳೆ ಬಳಲುತ್ತಿದ್ದರೆ, ಅದಕ್ಕೆ ಪರಿಹಾರವಾಗಿ ಇದು ಕೆಲಸ ಮಾಡಬಲ್ಲದು. ಹೀಗಾಗಿ ಪುರುಷರ ಲೈಂಗಿಕ ಜೀವನ ಸಂತೃಪ್ತಿಯಾಗಲು ಬೀಟ್ರೂಟ್ ಒಂದು ಪ್ರಮುಖ ಆಹಾರ ಪದಾರ್ಥ ಎಂದು ಹೇಳಬಹುದು.

​ಹಸಿರು ಎಲೆ ತರಕಾರಿಗಳು

ನಾನು ಸಾಧಾರಣವಾಗಿ ಸೇವನೆ ಮಾಡುವ ಪಾಲಕ್ ಸೊಪ್ಪು, ಹೂಕೋಸು, ಎಲೆಕೋಸು ಇತ್ಯಾದಿಗಳು ಹಸಿರು ಎಲೆ ತರಕಾರಿಗಳ ಗುಂಪಿಗೆ ಸೇರಿದ ಆಹಾರ ಪದಾರ್ಥಗಳಾಗಿವೆ. ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಅಧಿಕ ನೈಟ್ರೇಟ್ ಅಂಶ ಇರುವ ಕಾರಣದಿಂದ ಪುರುಷರ ದೇಹದ ಜನನಾಂಗದ ಭಾಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸಂಚಾರವನ್ನು ಉಂಟು ಮಾಡಿ ನಿಮಿರುವಿಕೆ ಸಮಸ್ಯೆ ಯನ್ನು ಸುಲಭವಾಗಿ ಪರಿಹಾರ ಮಾಡುತ್ತದ

​ಟೊಮೆಟೊ ಹಣ್ಣುಗಳು
ಟೊಮೇಟೊ ಹಣ್ಣುಗಳಿಗೆ ಆಕರ್ಷಕ ಕೆಂಪು ಬಣ್ಣ ಬರಲು ಪ್ರಮುಖ ಕಾರಣ ಲೈಕೊಪಿನ್ ಎಂಬ ಫೈಟೋನ್ಯೂಟ್ರಿಯೆಂಟ್ ಅಂಶ. ಇದೇ ಅಂಶದಿಂದ ಪುರುಷರ ಹಲವಾರು ಲೈಂಗಿಕ ಸಮಸ್ಯೆಗಳು ಪರಿಹಾರ ಆದ ಬಗ್ಗೆ ಸಂಶೋಧನೆಗಳ ಮೂಲದಿಂದ ಮಾಹಿತಿ ಸಿಕ್ಕಿದೆ.

ಹೀಗಾಗಿ ನಿಮಿರುವಿಕೆ ವಿಷಯದಲ್ಲಿ ದೌರ್ಬಲ್ಯವನ್ನು ಎದುರಿಸುತ್ತಿರುವ ಪುರುಷರು ತಮ್ಮ ದೇಹದ ರಕ್ತ ಸಂಚಾರವನ್ನು ಉತ್ತಮ ಪಡಿಸಿಕೊಳ್ಳಲು ಟೊಮೆಟೋ ಹಣ್ಣುಗಳನ್ನು ತಮ್ಮ ಆಹಾರ ಪದ್ಧತಿಯಲ್ಲಿ ಆಗಾಗ ಬಳಕೆ ಮಾಡಬಹುದು.

​ನುಗ್ಗೆಕಾಯಿ

ಬಹುತೇಕ ಲೈಂಗಿಕ ಪ್ರಕ್ರಿಯೆಯ ವಿಚಾರದಲ್ಲಿ ನುಗ್ಗೆಕಾಯಿ ಪುರುಷರಿಗೆ ನೆರವಾಗುತ್ತದೆ ನಿಮ್ಮ ಮಾತು ಕೇಳಿ ಬರುತ್ತಿದೆ. ಕೇವಲ ನುಗ್ಗೆಕಾಯಿ ಮಾತ್ರವಲ್ಲದೆ, ಅದರ ಎಲೆಗಳು, ಹೂಗಳು ಎಲ್ಲವೂ ಸಹ ಪುರುಷರ ಲೈಂಗಿಕ ದೌರ್ಬಲ್ಯವನ್ನು ಸರಿಪಡಿಸುವಲ್ಲಿ ನೆರವಾಗುತ್ತವೆ.

ದೇಹದಲ್ಲಿ ಪ್ರಮುಖವಾಗಿ ಲೈಂಗಿಕ ಹಾರ್ಮೋನ್ ಎಂದು ಗುರುತಿಸಿಕೊಂಡ ಟೆಸ್ಟೋಸ್ಟಿರೋನ್ ಪ್ರಮಾಣವನ್ನು ಹೆಚ್ಚು ಮಾಡಿ ಲೈಂಗಿಕ ಸಾಮರ್ಥ್ಯವನ್ನು ಕಾಯ್ದುಕೊಳ್ಳುವಂತೆ ಮಾಡುತ್ತದೆ.

​ಹಸಿಮೆಣಸಿನಕಾಯಿ

ಸಾಕಷ್ಟು ಜನರು ಗ್ಯಾಸ್ಟಿಕ್ ಎನ್ನುವ ಕಾರಣಕ್ಕೆ ಹಸಿಮೆಣಸಿನಕಾಯಿ ಸೇವನೆ ಮಾಡುವುದಿಲ್ಲ. ಆದರೆ ನಿಜ ಹೇಳಬೇಕು ಎಂದರೆ ಪುರುಷರ ಲೈಂಗಿಕ ಜೀವನವನ್ನು ಉತ್ತಮ ಪಡಿಸುವ ಶಕ್ತಿ ಮತ್ತು ಗುಣಲಕ್ಷಣ ಹಸಿಮೆಣಸಿನಕಾಯಿಯಲ್ಲಿ ಕಂಡುಬರುತ್ತದೆ.

ಇದು ಮುಖ್ಯವಾಗಿ ಪುರುಷರ ಹೃದಯದ ಅಪಧಮನಿಗಳು ಬ್ಲಾಕ್ ಆಗದಂತೆ ನೋಡಿಕೊಳ್ಳುವುದರ ಜೊತೆಗೆ, ಪುರುಷರ ಜನನಾಂಗದ ಭಾಗಕ್ಕೆ ಅಧಿಕ ಪ್ರಮಾಣದಲ್ಲಿ ರಕ್ತಸಂಚಾರವನ್ನು ಉಂಟುಮಾಡುವಲ್ಲಿ ಯಶಸ್ವಿಯಾಗುತ್ತದೆ.

ಬ್ರೊಕೋಲಿ

ಬ್ರೊಕೋಲಿ ಹಸಿರು ಎಲೆ ತರಕಾರಿ ಗುಂಪಿಗೆ ಸೇರಿದ ಆಹಾರ ಪದಾರ್ಥ ಆಗಿರುವುದರಿಂದ, ಇದರಲ್ಲಿ ನೈಟ್ರೇಟ್ ಅಂಶ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ರಕ್ತ ಸಂಚಾರದಲ್ಲಿ ಏರುಪೇರಾಗುವುದನ್ನು ತಪ್ಪಿಸಿ, ಪುರುಷರ ಜನನಾಂಗದ ಭಾಗಕ್ಕೆ ಅತ್ಯುತ್ತಮ ಪ್ರಮಾಣದಲ್ಲಿ ನಿಮಿರುವಿಕೆ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ.

Related Post

Leave a Comment