ಸಕ್ಕರೆ ಕಾಯಿಲೆಗೆ ಪವರ್ಫುಲ್ ಆಹಾರಗಳಿವು!

Written by Anand raj

Published on:

ಆಧುನಿಕ ಜಗತ್ತಿನಲ್ಲಿ ಮಧುಮೇಹ ಎನ್ನುವುದು ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ. ಇದು ವಿಶ್ವದ ಜನಸಂಖ್ಯೆಯ ಹೆಚ್ಚು ಭಾಗವನ್ನು ಭಾದಿಸುತ್ತಲಿದೆ. ನಮ್ಮ ಜೀವನಶೈಲಿ, ಆಹಾರ ಕ್ರಮ, ಒತ್ತಡ ಇತ್ಯಾದಿಗಳು ಮಧುಮೇಹಕ್ಕೆ ಪ್ರಮುಖ ಕಾರಣವಾಗಿದೆ. ಅನುವಂಶೀಯವಾಗಿಯೂ ಕೆಲವವರಲ್ಲಿ ಮಧುಮೇಹದ ಸಮಸ್ಯೆಯು ಕಾಡುವುದು. ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಜೀವನ ಸಾಗಿಸಬೇಕೇ ಹೊರತು, ಸಂಪೂರ್ಣವಾಗಿ ಇದನ್ನು ನಿವಾರಣೆ ಮಾಡಲು ಆಗಲ್ಲ.

ಮಧುಮೇಹ ಒಮ್ಮೆ ಬಂದರೆ ಅಂತಹವರು ತುಂಬಾ ಎಚ್ಚರಿಕೆಯಿಂದ ಜೀವನಶೈಲಿ ಮತ್ತು ಆಹಾರದ ಆಯ್ಕೆ ಮಾಡಿಕೊಳ್ಳಬೇಕು. ಹೀಗಾಗಿ ಮಧುಮೇಹಿಗಳು ತಮ್ಮ ಜೀವನಶೈಲಿ ಹಾಗೂ ಆಹಾರ ಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

ಮುಖ್ಯವಾಗಿ ಕೆಲವೊಂದು ಆಹಾರಗಳನ್ನು ತ್ಯಜಿಸಬೇಕು ಮತ್ತು ಇನ್ನು ಕೆಲವನ್ನು ಸೇರ್ಪಡೆ ಮಾಡಬೇಕು. ಮಧುಮೇಹಿಗಳ ಆರೋಗ್ಯಕಾರಿ ಆಹಾರ ಕ್ರಮವು ಹೇಗಿರಬೇಕು ಎಂದು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಮಧುಮೇಹಿಗಳು ತಮ್ಮ ಆಹಾರ ಕ್ರಮವು ಆರೋಗ್ಯವಾಗಿಡಲು ಈ ಕ್ರಮಗಳನ್ನು ತಪ್ಪದೆ ಪಾಲಿಸಬೇಕು.

​ಸಮತೋಲಿತ ಆಹಾರ ಕ್ರಮ

ಹಣ್ಣು ಮತ್ತು ತರಕಾರಿಗಳಿಂದ ಅರ್ಧ ಬಟ್ಟಲು ತುಂಬಿರಬೇಕು. ಇದರ ಬಳಿಕ ಕಾರ್ಬೋಹೈಡ್ರೇಟ್ಸ್ ಮತ್ತು ಕೆಲವೊಂದು ಪ್ರೋಟೀನ್ ಗಳನ್ನು ಕೂಡ ಆಯ್ಕೆ ಮಾಡಬೇಕು.

​ಸಂಪೂರ್ಣ ಕ್ಯಾಲರಿ ಸೇವನೆ ಗಣನೆಗೆ

ಕರಿದಿರುವಂತಹ ಆಹಾರ ಸೇವನೆ ಮಾಡುವ ಬದಲು ಯಾವಾಗಲೂ ಹಬೆಯಲ್ಲಿ ಬೇಯಿಸಿದ ಅಥವಾ ಗ್ರಿಲ್ ಮಾಡಲ್ಪಟ್ಟಿರುವ ಆಹಾರ ಸೇವನೆ ಮಾಡಿದರೆ ಒಳ್ಳೆಯದು. ಕೊಬ್ಬು ಮತ್ತು ಎಣ್ಣೆಯಂಶವನ್ನು ಆದಷ್ಟು ಕಡಿಮೆ ಮಾಡಿ.

​ಕಾರ್ಬೋಹೈಡ್ರೇಟ್ಸ್ ಸೇವನೆ

ನೀವು ನಿತ್ಯದ ಆಹಾರ ಕ್ರಮದಲ್ಲಿ ಎಷ್ಟು ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ಸ್ ಸೇವನೆ ಮಾಡುತ್ತಲಿರುವಿರಿ ಎನ್ನುವ ಕಡೆಗೆ ಗಮನಹರಿಸಬೇಕು.

​ಇಡೀ ಧಾನ್ಯಗಳು

ಕುಚ್ಚಲಕ್ಕಿ, ಚಪಾತಿ, ಓಟ್ಸ್ ಮತ್ತು ಇಡೀ ಧಾನ್ಯದ ನೂಡಲ್ ಮತ್ತು ಪಾಸ್ತಾವನ್ನು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ಅಧಿಕ ಪ್ರಮಾಣದ ನಾರಿನಾಂಶವು ಇದೆ ಮತ್ತು ಇದು ರಕ್ತದಲ್ಲಿ ಗ್ಲುಕೋಸ್ ಅಂಶವು ತುಂಬಾ ನಿಧಾನವಾಗಿ ಇಳಿಯಲು ಸಹಕಾರಿ. ಇದರಿಂದ ರಕ್ತದಲ್ಲಿನ ಗ್ಲುಕೋಸ್ ಮಟ್ಟವು ಉತ್ತಮ ಪ್ರಮಾಣದಲ್ಲಿರುವುದು.

ಇಡೀ ಧಾನ್ಯಗಳು

ಬೆಳ್ತಿಗೆ ಅಕ್ಕಿಯ ಬದಲು ಇಡೀ ಧಾನ್ಯದ ಆಹಾರಗಳು ಮತ್ತು ಹಣ್ಣುಗಳ ಜ್ಯೂಸ್ ಬದಲಿಗೆ ಹಣ್ಣುಗಳನ್ನು ಸೇವನೆ ಮಾಡಿ. ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ನಾರಿನಾಂಶವು ಇದ್ದು, ಇದು ದೀರ್ಘಕಾಲ ಹೊಟ್ಟೆ ತುಂಬುವಂತೆ ಮಾಡುವುದು ಮತ್ತು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಸಮತೋಲನದಲ್ಲಿ ಇಡುವುದು.

ಹಣ್ಣುಗಳನ್ನು ಸೇವಿಸಿ

ನಿತ್ಯವೂ ಯಾವುದಾದರೂ ಎರಡು ಬಗೆಯ ಹಣ್ಣುಗಳನ್ನು ಸೇವನೆ ಮಾಡಿ. ಮಧ್ಯಾಹ್ನ ಪಪ್ಪಾಯಿ ತಿಂದರೆ ಆಗ ರಾತ್ರಿ ವೇಳೆ ಸೇಬು ತಿನ್ನಿ. ಇದೇ ರೀತಿ ನಿತ್ಯವೂ ಎರಡು ಬಗೆಯ ಹಣ್ಣುಗಳನ್ನು ಸೇವನೆ ಮಾಡಿ.

ಸಾಸ್, ಸೂಪ್ ಗಳ ಬಗ್ಗೆ ಗಮನಿಸಿ

ಇವುಗಳಲ್ಲಿ ಕೂಡ ಕಾರ್ಬೋಹೈಡ್ರೇಟ್ಸ್ ಇರುವುದು ಮತ್ತು ಇದರ ಸೇವನೆ ಮಾಡುವ ವೇಳೆ ನೀವು ಕಾರ್ಬೋಹೈಡ್ರೇಟ್ಸ್ ಸೇವನೆಯ ಮಿತಿಯನ್ನು ಗಮನಿಸಬೇಕು.

ಜಿಐ ಕಡಿಮೆ ಇರುವ ಆಹಾರಗಳೆಲ್ಲವೂ ಆರೋಗ್ಯಕಾರಿಯಲ್ಲ

ನಿಮಗೆ ಮುಖ್ಯವಾಗಿ ಜಿಐ ಇಂಡೆಕ್ಸ್ ಕಡಿಮೆ ಇರುವ ಆಹಾರ ಸೇವನೆ ಮಾಡಲು ಸೂಚಿಸಬಹುದು. ಆದರೆ ಎಲ್ಲಾ ರೀತಿಯ ಜಿಐ ಕಡಿಮೆ ಇರುವ ಆಹಾರಗಳು ಒಳ್ಳೆಯದಲ್ಲ ಎನ್ನುವುದನ್ನು ಗಮನಿಸಬೇಕು. ಇದರ ಬಗ್ಗೆ ನೀವು ವೈದ್ಯರ ಸಲಹೆ ಪಡೆದರೆ ಒಳ್ಳೆಯದು.

Related Post

Leave a Comment