ಗರಿಕೆ ಹುಲ್ಲು ಸಿಕ್ಕರೆ ದಯವಿಟ್ಟು ಬಿಡಬೇಡಿ!

Written by Anand raj

Published on:

ಗರಿಕೆಯು ಗಣೇಶನ ಪೂಜೆಗೆ ಅತಿ ಶ್ರೇಷ್ಠವಾಗಿ ಇರುವುದರಿಂದ 21 ಗರಿಕೆ ಹುಲ್ಲನ್ನು ದೇವರಿಗೆ ಅರ್ಪಿಸುತ್ತಾರೆ.ಇದು ಹಳ್ಳಿಗಳಲ್ಲಿ ಗದ್ದೆ ತೋಟ ಮನೆಯ ಅಂಗಳದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಗರಿಕೆ ಹುಲ್ಲು ಅನೇಕ ರೋಗಗಳ ನಿವಾರಣೆ ಮಾಡುತ್ತದೆ. ಇದರ ಎಲೆಗಳು ಉದ್ದವಾಗಿದ್ದು ಕಾಂಡಗಳು ಬೆಳೆದಲ್ಲಿ ಬೇರುಗಳು ಬೆಳೆಯುತ್ತಾ ಹೋಗುತ್ತದೆ. ಗರಿಕೆ ಹುಲ್ಲು ವಿಶೇಷ ಔಷಧಿಯ ಗುಣಗಳನ್ನು ಹೊಂದಿದ್ದು ಇದನ್ನು ಸಂಜೀವಿನಿ ಎಂದು ಕರೆಯುತ್ತಾರೆ.ಗರಿಕೆ ಹುಲ್ಲಿನ ಔಷಧಿ ಗುಣಗಳನ್ನು ಬಗ್ಗೆ ತಿಳಿದುಕೊಳ್ಳಿ.

1, ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು ಸುಮಾರು ಗರಿಕೆ ಹುಲ್ಲು ತೆಗೆದುಕೊಂಡು ಸ್ವಲ್ಪ ನೀರು ಹಾಕಿ ಮಿಕ್ಸಿ ಗೇ ಹಾಕಿ ರುಬ್ಬಿ ರಸವನ್ನು ಸೋಸಿ ಕುಡಿಯಬೇಕು.ಹೀಗೆ ಒಂದು ತಿಂಗಳು ಕಾಲ ಮಾಡಿದರೆ ರಕ್ತ ಶುದ್ದಿಗೊಂಡು ರೋಗಗಳು ನಿವಾರಣೆ ಆಗುತ್ತದೆ.

2, ಇನ್ನು ತಾಯಿಯ ಎದೆ ಹಾಲಿನ ಪ್ರಮಾಣ ಕಡಿಮೆಯಾದಾಗ ಮಗುವಿಗೆ ಒಂದು ಚಮಚ ಗರಿಕೆ ಹುಲ್ಲಿನ ರಸದ ಜೊತೆ ಜೇನು ತುಪ್ಪ ಬೆರೆಸಿ ಸೇವಿಸುವುದರಿಂದ ಮಗು ದಷ್ಟಪುಷ್ಟವಾಗಿ ಬೆಳೆಯುತ್ತದೆ.

3, ಗರಿಕೆ ಹುಲ್ಲನ್ನು ನೀರಿನಲ್ಲಿ ತೊಳೆದು ಪೇಸ್ಟ್ ಮಾಡಿ ರಸ ಅಥವಾ ಪೇಸ್ಟ್ ಅನ್ನು ಬಿದ್ದ ಗಾಯಕ್ಕೆ ಹಚ್ಚಿದರೆ ರಕ್ತ ಸ್ರವವನ್ನು ತಡೆಯಬಹುದು.

4, ಇನ್ನು ಗರಿಕೆ ಹಲ್ಲನ್ನು ಸಣ್ಣ ಮಾಡಿಕೊಂಡು ಇದಕ್ಕೆ ಅರಿಶಿಣ ಮತ್ತು ಸುಣ್ಣವನ್ನು ಸೇರಿಸಿ ಉಗುರು ಸುತ್ತಿಗೆ ಹಚ್ಚುವುದರಿಂದ ಕಡಿಮೆ ಆಗುತ್ತದೆ.

5, ಸ್ವಲ್ಪ ತುಳಸಿ ಮತ್ತು ಸ್ವಲ್ಪ ಗರಿಕೆ ಹುಲ್ಲನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಇಡಬೇಕು. ಮಾರನೇ ದಿನ ಬೆಳಗ್ಗೆ ನೀರನ್ನು ಸೋಸಿ ಕುಡಿಯಬೇಕು.ಹೀಗೆ ಮೂರು ದಿನ ಮಾಡಿ ಕುಡಿಯುವುದರಿಂದ ಶೀತ ಕಡಿಮೆ ಆಗುವುದು.

6, ಗರಿಕೆ ತುಳಸಿ ಒಂದೆಲಾಗವನ್ನು ಬೇರು ಸಮೇತ ನೀರಿಗೇ ಹಾಕಿ ಚೆನ್ನಾಗಿ ಕುದಿಸಬೇಕು.ನಂತರ ಸ್ವಲ್ಪ ಬೆಲ್ಲ ಸೇರಿಸಿ 2-3 ದಿನಗಳ ಕಾಲ ಕುಡಿಯುವುದರಿಂದ ಚಳಿಜ್ವರಾ ಕಡಿಮೆ ಆಗುತ್ತದೆ.

10, ಗರಿಕೆ ಹುಲ್ಲಿನ ರಸವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ 2 ರಿಂದ 3 ಚಮಚ ಸೇವಿಸಿದರೆ ಅಸ್ತಮಾ ಅಲರ್ಜಿಗಳು ನಿವಾರಣೆ ಆಗುತ್ತದೆ. ಮೂತ್ರಕೋಶದ ತೊಂದರೆಗೆ ಇದು ತುಂಬಾ ಒಳ್ಳೆಯದು ಮತ್ತು ಹೃದಯದ ರೋಗಕ್ಕೂ ತುಂಬಾ ಒಳ್ಳೆಯದು.

Related Post

Leave a Comment