ಗಜಕರ್ಣ / ತುರಿಕೆ ಜಾಗಕ್ಕೆ ಇದನ್ನು ಮಿಕ್ಸ್ ಮಾಡಿ ಹಚ್ಚಿ !

Written by Anand raj

Published on:

ಎರಡು ದಿನ ಈ ಮನೆಮದ್ದನ್ನು ಹಚ್ಚಿದರೆ ಸಾಕು ಹಳೆಯ ಹುಳು ಕಡ್ಡಿ, ಗಜ ಕರ್ಣ, ತುರಿಕೆ, ಕಜ್ಜಿ ಸಮಸ್ಯೆ ಪೂರ್ಣವಾಗಿ ವಾಸಿಯಾಗುತ್ತದೆ. ದೇಹದ ಯಾವುದೇ ಭಾಗದಲ್ಲಿ ಇದ್ದರೂ ಸಂಪೂರ್ಣವಾಗಿ ವಾಸಿ ಮಾಡುವಂತಹ ಗುಣ ಇದರಲ್ಲಿದೆ.

ಈ ಸಮಸ್ಯೆಗಳು ಬರುವುದಕ್ಕೆ ಮುಖ್ಯ ಕಾರಣ:

  • ಬಿಗಿಯಾದ ಉಡುಪುಗಳನ್ನು ಧರಿಸುವುದು
  • ದೇಹವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇರುವುದು.
  • ಇನ್ನೊಬ್ಬರ ಬಟ್ಟೆಯನ್ನು ಧರಿಸಿದರು ಕೂಡ ಬರುತ್ತದೆ.
    *ಒಣಗದೆ ಇರುವ ಬಟ್ಟೆಯನ್ನು ಧರಿಸುವುದರಿಂದ ಬರುತ್ತದೆ.
  • ಹಳೆಯ ಬಟ್ಟೆ ಧರಿಸುವುದರಿಂದ ಬರುತ್ತದೆ.

ಮನೆಮದ್ದು :ಒಂದು ಹಗಲ ಕಾಯಿ ತೆಗೆದುಕೊಂಡು ತೊಳೆದು ಸಣ್ಣದಾಗಿ ಕಟ್ ಮಾಡಿ ಮಿಕ್ಸ್ ಜಾರಿಗೆ ಹಾಕಿ, ಒಂದು ಇಡೀ ಬೇವಿನ ಸೊಪ್ಪು ಹಾಕಿ ಪೇಸ್ಟ್ ರೀತಿ ಮಾಡಿಕೊಳ್ಳಿ.ಹಗಲಕಾಯಿ ಬಳಸುವುದರಿಂದ ಚರ್ಮದಲ್ಲಿ ಉಂಟಾದ ಅಲರ್ಜಿ ನಿವಾರಣೆಗೆ ಒಳ್ಳೆಯದು.

ನಂತರ ಒಂದು ಬೌಲ್ ಗೆ ಒಂದು ಚಮಚ ಹಗಲಕಾಯಿ ಪೇಸ್ಟ್ ಹಾಕಿ, ಎರಡು ಕರ್ಪೂರದ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಲೋಟ ನೀರನ್ನು ಕುದಿಸಿ ಅದಕ್ಕೆ ಒಂದು ಚಮಚ ಅರಿಶಿಣ ಹಾಕಿ ಚೆನ್ನಾಗಿ ಕುದಿಸಬೇಕು.ಈ ನೀರನ್ನು ಹುಳು ಕಡ್ಡಿ, ಗಜ ಕರ್ಣ ಆಗಿರುವ ಸ್ಥಳದಲ್ಲಿ ಹಚ್ಚಬೇಕು. ನಂತರ ತಯಾರಿಸಿದ ಮನೆಮದ್ದನ್ನು ಹಚ್ಚಬೇಕು.ಹೀಗೆ 2 ಗಂಟೆ ಹಾಗೆ ಇರಬೇಕು.

ಇದನ್ನು ಹಚ್ಚುವುದರಿಂದ ತುರಿಕೆಯ ಸಮಸ್ಸೆ ಇರುವುದಿಲ್ಲ ಮತ್ತು ಈ ಎಲ್ಲಾ ರೀತಿಯ ಸಮಸ್ಯೆಗಳು ವಾಸಿಯಾಗುತ್ತದೆ. ಇದೇ ರೀತಿ ಒಂದು ವಾರ ಹಚ್ಚಿದರೆ ಸಾಕು ಹುಳಕಡ್ಡಿ ಗಜ ಕರ್ಣ ಸಮಸ್ಸೆ ನಿವಾರಣೆಯಾಗುತ್ತದೆ.ಆದಷ್ಟು ಸಾದ್ಯವಾದರೆ ಪ್ರತಿದಿನ ಎರಡು ಬಾರಿ ಸ್ನಾನವನ್ನು ಮಾಡಿ ಮತ್ತು ದೇಹವನ್ನು ಒಣಗಿಸಿ ವಾಶ್ ಮಾಡಿದ ಬಟ್ಟೆಯನ್ನು ಧರಿಸಬೇಕು.

Related Post

Leave a Comment