ನಿಂಬೆ ಹಣ್ಣಿನ ಮೇಲೆ ಸ್ವಲ್ಪ ಪೇಸ್ಟ್ ಹಾಕಿ ಸಾಕು ನಿಮ್ಮ 100 ಕೆಲಸ ನಿಮಿಷದಲ್ಲಿ ಮುಗಿಯುತ್ತೆ!

Written by Anand raj

Published on:

ನಿಂಬೆ ಹಣ್ಣಿನ ಮೇಲೆ ಚೂರು ಟೂತ್ ಪೇಸ್ಟ್ ಅನ್ನು ಹಾಕಿದರೆ ನಿಮ್ಮ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ. ಇದನ್ನು ಹೀಗೂ ಬಳಸಬಹುದು ಅಂತ ತಿಳಿದೇ ಇರಲಿಲ್ಲ. ನಿಂಬೆ ಹಣ್ಣಿನ ಇಂದ ಕೆಲವೊಂದು ಟಿಪ್ಸ್ ಮಾಡುವುದನ್ನು ತಿಳಿಸಿಕೊಡುತ್ತೀವಿ.

ಅರ್ಧ ನಿಂಬೆ ಹಣ್ಣಿನ ಕಟ್ ಮಾಡಿ ಅದರ ಮೇಲೆ ಟೂತ್ ಪೇಸ್ಟ್ ಹಾಕಿಕೊಳ್ಳಿ. ಕೆಲವೊಂದು ಬಾರಿ ದೋಸೆ ಹಚ್ಚಿನಲ್ಲಿ ದೋಸೆ ಮಾಡಿದರೆ ದೋಸೆ ಎದ್ದೇಳುವುದಿಲ್ಲ. ಇಲ್ಲವಾದರೆ ಅಂಬ್ಲೆಟ್ ಮಾಡಿದ ನಂತರ ದೋಸೆ ಮಾಡಿದರೆ ಅಂಬ್ಲೆಟ್ ಸ್ಮೆಲ್ ಬರುತ್ತಿರುತ್ತದೆ. ಆಗ ನೀವು ಅರ್ಧ ನಿಂಬೆ ಹಣ್ಣಿನ ಗೆ ಸ್ವಲ್ಪ ಟೂತ್ ಪೇಸ್ಟ್ ಹಾಕಿ ಹಾಗು ಹಚ್ಚಿಗೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಉಜ್ಜಬೇಕು. ಅಮೇಲೆ ಬರಿ ನೀರಿನಿಂದ ತೊಳೆಯಿರಿ. ಈ ರೀತಿ ಮಾಡಿದರೆ ಮೊಟ್ಟೆ ಸ್ಮೆಲ್ ಕೂಡ ಇರುವುದಿಲ್ಲ. ದೋಸೆ ಕೂಡ ಚೆನ್ನಾಗಿ ಬರುತ್ತದೆ.

ಇನ್ನು ಚಾಕು ಕೂಡ ತುಕ್ಕು ಇಡಿಯುವುದು ಅಥವಾ ಎಣ್ಣೆ ಜಿಡ್ಡು ಇರುತ್ತದೆ. ಆಗ ಅರ್ಧ ನಿಂಬೆ ಹಣ್ಣಿಗೆ ಟೂತ್ ಪೇಸ್ಟ್ ಹಚ್ಚಿಕೊಂಡು ಚೆನ್ನಾಗಿ ಉಜ್ಜಬೇಕು.ಹೀಗೆ ಮಾಡಿದರೆ ಚಾಕು ಹೊಸದರಂತೆ ಆಗುತ್ತದೆ ಮತ್ತು ಒಳ್ಳೆಯ ಶೈನ್ ಕೂಡ ಬರುತ್ತದೆ.

ಇನ್ನು ಈ ರೀತಿ ಬಳಸಿದ ನಿಂಬೆ ಹಣ್ಣನ್ನು ಎಸೆಯಬೇಡಿ ಸಣ್ಣದಾಗಿ ಕಟ್ ಮಾಡಿ ಮತ್ತು ನೀರು ಹಾಕಿ ಚೆನ್ನಾಗಿ ಕುದಿಸಬೇಕು. ಇದು ತುಂಬಾನೇ ಉಪಯೋಗಕ್ಕೆ ಬರುತ್ತದೆ. ಇನ್ನು ಒಂದು ಬೌಲ್ ಗೆ ಅಡುಗೆ ಸೋಡಾ ಮತ್ತು ಒಂದು ಚಮಚ ಸೋಪ್ ಪೌಡರ್ ಹಾಗು ಕುದಿಸಿದ ನಿಂಬೆ ಹಣ್ಣಿನ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಇದನ್ನು ಜಿರಳೆ ನೋಣ ಇರುವೆ ಜಾಗಕ್ಕೆ ಹಾಕಬಹುದು. ಈ ರೀತಿ ಮಾಡಿದರೆ ಇರುವೆ ಕಾಟ ಇರುವುದಿಲ್ಲ.

Related Post

Leave a Comment