ನೀವು ಲಿಪ್ ಸ್ಟಿಕ್ ಬಳಸುತ್ತಿದ್ದೀರಾ ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!

Written by Anand raj

Published on:

ಲಿಪ್ ಸ್ಟಿಕ್ ಹಚ್ಚುವುದು ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಲಿಪ್ ಸ್ಟಿಕ್ ಹಚ್ಚುವುದರಿಂದ ಮುಖದ ಚೆಲುವು ಹೆಚ್ಚಾಗುವುದು ನಿಜ. ಅದರೆ ಕ್ವಾಲಿಟಿ ಲಿಪ್ ಸ್ಟಿಕ್ ಬಳಸದಿದ್ದರೆ ತುಟಿಯ ಸೌಂದರ್ಯ ಕೆಡುವುದು ಖಚಿತ. ಪ್ರತಿದಿನ ಲಿಪ್ ಸ್ಟಿಕ್ ಬಳಸದಿದ್ದರೆ ತುಟಿ ಡ್ರೈ ಅನಿಸುತ್ತದೆ ಹಾಗಾಗಿ ಲಿಪ್ ಸ್ಟಿಕ್ ಬೇಕೇ ಬೇಕು.ಜೊತೆಗೆ ಲಿಪ್ ಸ್ಟಿಕ್ ಜೊತೆ ತುಟಿ ಹಾಳಾಗಬಾರದು ಎಂದು ಬಯಸಿದರೆ ಈ ಕೆಲವು ಟಿಪ್ಸ್ ಅನುಸರಿಸಿ.

ಮೂರು ವರ್ಷ ಹಳೆಯದಾದ ಲಿಪ್ ಸ್ಟಿಕ್ ಅನ್ನು ಬಳಸಬಾರದು. ವಾರದಲ್ಲಿ ಒಂದು ಅಥವಾ ಎರಡು ಬಾರಿ ತುಟಿಗೆ ಏನು ಹಚ್ಚಬೇಡಿ. ಲಿಪ್ ಸ್ಟಿಕ್ ಹಚ್ಚಿ ಬೋರ್ ಅನಿಸಿದರೆ ಲಿಪ್ ಗ್ಲಾಸ್ ಹಚ್ಚಬಹುದು. ದಿನಕ್ಕೆ ಎರಡಕ್ಕಿಂತ ಅಧಿಕ ಬಾರಿ ಲಿಪ್ ಸ್ಟಿಕ್ ಹಚ್ಚಬೇಡಿ. ಲಿಪ್ ಸ್ಟಿಕ್ ಹಚ್ಚುವ ಮುನ್ನ ಲಿಪ್ ಬಾಂಬ್ ಹಚ್ಚಬೇಕು. ಒಳ್ಳೆಯ ಬ್ರಾಂಡೆಡ್ ಶಾಪ್ ಗಳಲ್ಲಿ ಲಿಪ್ ಸ್ಟಿಕ್ ಅನ್ನು ಖರೀದಿಸಿ. ಇಲ್ಲವಾದರೆ ಫೇಕ್ ಲಿಪ್ ಸ್ಟಿಕ್ ಗೆ ಹಣ ಸುರಿಯಬೇಕಾಗುತ್ತದೆ. ಇನ್ನು ರಾತ್ರಿ ಕೊಬ್ಬರಿ ಎಣ್ಣೆ ಬಳಸಿ ಲಿಪ್ ಸ್ಟಿಕ್ ಅನ್ನು ಸ್ವಚ್ಛಗೊಳಿಸಿ.

Related Post

Leave a Comment