ಈ ಸಮಯದಲ್ಲಿ ಗಂಡ ಹೆಂಡತಿ ಸೇರಿದರೆ ಮಕ್ಕಳಾಗುವ ಚಾನ್ಸ್ ಜಾಸ್ತಿ ಇರುತ್ತದೆ!

Written by Anand raj

Published on:

ತಾಯಿಯಾಗುವುದು ಪ್ರತಿ ಹೆಣ್ಣಿನ ಕನಸಾಗಿದ್ದು ಈ ಕಾರ್ಯ ಯಶಸ್ವಿಯಾಗಲು ಹಲವಾರು ಬಗೆಯ ಪರಿಸ್ಥಿತಿಗಳು ಪೂರಕವಾಗಿರಬೇಕಾಗುತ್ತದೆ. ಇದಕ್ಕಾಗಿ ಮೊದಲಾಗಿ ತಮ್ಮ ಫಲವತ್ತತೆಯ ದಿನಗಳು ಯಾವುದು, ಯಾವುವು ಅಲ್ಲ ಎಂಬುದನ್ನು ತಿಳಿದುಕೊಂಡಿರುವುದು ಅವಶ್ಯವಾಗಿದೆ. ಬನ್ನಿ, ಈ ನಿಟ್ಟಿನಲ್ಲಿ ಅಮೂಲ್ಯವಾದ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಒದಗಿಸಲಾಗಿದ್ದು ಇವುಗಳನ್ನು ಸರಿಯಾಗಿ ಅರ್ಥೈಸಿಕೊಂಡು ಸರಿಯಾದ ಸಮಯದಲ್ಲಿ ಪ್ರಯತ್ನಿಸುವ ಮೂಲಕ ಗರ್ಭ ಧರಿಸುವ ಕನಸು ನನಸಾಗಲು ಸಾಧ್ಯ.

ಮುಟ್ಟಿನ ದಿನಗಳಲ್ಲಿ ಗರ್ಭಧಾರಣೆಯ ಸಾಧ್ಯತೆ?

ಮಾಸಿಕ (ಮುಟ್ಟು) ದಿನಗಳಲ್ಲಿ ಗರ್ಭಾಶಯದಲ್ಲಿ ಹಿಂದಿನ ತಿಂಗಳಿಡೀ ಫಲಗೊಳ್ಳಲು ಕಾದಿದ್ದ ಅಂಡಾಣು ದೇಹದಿಂದ ವಿಸರ್ಜನೆಗೊಂಡು ಹೊಸ ಅಂಡಾಣುವಿನ ಬಿಡುಗಡೆಗೆ ವ್ಯವಸ್ಥೆ ಪ್ರಾರಂಭವಾಗುತ್ತದೆ. ಮೊದಲಿಗೆ ಗರ್ಭಾಶಯದ ಒಳಪದರ (endometrium) ಕಳಚಿಕೊಂಡು ದೇಹದಿಂದ ವಿಸರ್ಜಿಸಲ್ಪಡುತ್ತದೆ. ಈ ವಿಸರ್ಜನೆ ಪ್ರಾರಂಭವಾದ ಮೊದಲ ದಿನ ಮೊದಲ ಮುಟ್ಟಿನ ದಿನವಾಗಿದ್ದು ಮೂರು ದಿನಗಳಲ್ಲಿ ಪೂರ್ಣವಾಗಿ ಹೊರಹೋಗುತ್ತದೆ. ಮೂರನೆಯ ದಿನದಿಂದ ದೇಹದಲ್ಲಿ ಪ್ರೊಜೆಸ್ಟರಾನ್ ಮತ್ತು ಈಸ್ಟ್ರೋಜೆನ್ ರಸದೂತಗಳು ಹೆಚ್ಚು ಸ್ರವಿಸಲ್ಪಡುತ್ತವೆ ಹಾಗೂ ಈ ಒಳಪದರವನ್ನು ಹೊಸದಾಗಿ ನಿರ್ಮಿಸಲು ಹೆಚ್ಚು ಕಾರ್ಯನಿರತವಾಗುತ್ತದೆ.

ನಾಲ್ಕನೆಯ ದಿನ ಅಂಡಾಶಯದಿಂದ ಹೊಸ ಅಂಡಾಣು ಬಿಡುಗಡೆಯಾಗಿ ಗರ್ಭನಾಳದಲ್ಲಿ ಸ್ಥಾಪಿಸುವ ಕಾರ್ಯ ನಡೆಯುತ್ತದೆ. ಈ ಸಂದರ್ಭದಲ್ಲಿ ಮಹಿಳೆ ಅತಿ ಹೆಚ್ಚಿನ ಮನೋಭಾವದ ಬದಲಾವಣೆಯನ್ನು ಪಡೆಯುತ್ತಾಳೆ. ಅಂಡಾಣು ಬಿಡುಗಡೆಗೊಂಡ ಬಳಿಕ ಅಂಡಾಶಯದಲ್ಲಿ ಹೊಸ ಅಂಡಾಣುವಿನ ಉತ್ಪಾದನೆ ಪ್ರಾರಂಭಗೊಂಡು ಮುಂದಿನ ಹದಿನಾಲ್ಕು ದಿನಗಳಲ್ಲಿ ತಯಾರಾಗಿರುತ್ತದೆ, ಅಂದರೆ ಇದು ಮುಂದಿನ ತಿಂಗಳಿಗಾಗಿ. ಈ ಕಾರ್ಯ ಮುಂದಿನ ಎರಡು ದಿನದಲ್ಲಿ ಗರಿಷ್ಟವಾಗಿದ್ದು ನಂತರದ ಮೂರು ದಿನ ಮಂದಗತಿಯಲ್ಲಿ ಮುಂದುವರೆಯುತ್ತದೆ. ಹಾಗಾಗಿ ಮಾಸಿಕ ಚಕ್ರ ಐದು ದಿನಗಳು ಎಂದು ಕಂಡುಬಂದರೂ, ದೇಹದೊಳಗೆ ಮಂದಗತಿಯಲ್ಲಿ ಮುಂದುವರೆಯುವ ಕ್ರಿಯೆಯನ್ನು ಪರಿಗಣಿಸಿದರೆ ಸುಮಾರು ಏಳು ದಿನವನ್ನಾಗಿ ಪರಿಗಣಿಸಬಹುದು. ಈ ಸೂಚನೆಯನ್ನು ದೇಹದ ತಾಪಮಾನದ ಮೂಲಕ ದೇಹ ಪ್ರಕಟಿಸುತ್ತದೆ ಹಾಗೂ ಈ ವ್ಯತ್ಯಾಸವನ್ನು ಗಮನಿಸುವ ಮೂಲಕ ವೈದ್ಯರು ನಿಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ಪ್ರಸ್ತುತ ಸ್ಥಿತಿಯನ್ನು ಬಹುತೇಕ ಕರಾರುವಾಕ್ಕಾಗಿ ತಿಳಿಸಬಲ್ಲರು. ಈ ಮಾಹಿತಿ ನಿಮಗೆ ಅರ್ಥವಾದರೆ, ಮುಟ್ಟಿನ ದಿನಗಳಲ್ಲಿ ಆಗಮನವಾದ ವೀರ್ಯಾಣುಗಳಿಂದಾಗಿ ಗರ್ಭಧಾರಣೆಯ ಸಾಧ್ಯತೆ ಇಲ್ಲವೆಂದೇ ಪರಿಗಣಿಸಬಹುದು.

ಮುಟ್ಟಿನ ಸಮಯದಲ್ಲಿ ಗರ್ಭಧಾರಣೆ ಸಾಧ್ಯವಿಲ್ಲ

ಬಹುತೇಕ ಸಂದರ್ಭದಲ್ಲಿ ಇಲ್ಲ ಎಂದೇ ಖಚಿತವಾಗಿ ಹೇಳಬಹುದು. ಹಾಗಾಗಿ ಕೆಲವು ಮಹಿಳೆಯರು ಈ ಸಮಯವನ್ನು ಅಸುರಕ್ಷಿತ ಸಂಪರ್ಕದ ಅನುಭವ ಪಡೆಯಲು ಬಳಸಿಕೊಳ್ಳುತ್ತಾರೆ. ಆದರೆ ಅಪರೂಪದ ಸಂದರ್ಭದಲ್ಲಿ, ಗರ್ಭಕಂಠವನ್ನು ತಲುಪಿದ ವೀರ್ಯಾಣುಗಳು ಮುಂದಿನ ನಾಲ್ಕರಿಂದ ಐದು ದಿನ, ಅಪರೂಪದಲ್ಲಿ ಮುಂದಿನ ಏಳು ದಿನಗಳ ಕಾಲ ಜೀವಂತವಿರುವ ಕ್ಷಮತೆ ಹೊಂದಿದ್ದು ಆ ಸಮಯದಲ್ಲಿ ಮಿಲನಕ್ಕೆ ಸಿದ್ಧವಾಗಿರುವ ಅಂಡಾಣುವಿನೊಡನೆ ಕೂಡುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೂ ಇದು ಲಕ್ಷಕ್ಕೊಂದು ಇದ್ದರೂ ಸರಿ, ಸಂಭವವಂತೂ ಇದೆ. ಆದರೆ ಗರ್ಭಧರಿಸುವ ಇಚ್ಛೆಯುಳ್ಳ ಮಹಿಳೆ ಈ ದಿನಗಳಲ್ಲಿ ಸಂಪರ್ಕ ನಡೆಸದೇ ಸೂಕ್ತ ದಿನಗಳಿಗೆ ಕಾಯುವುದು ಜಾಣತನದ ಕ್ರಮವಾಗಿದೆ.

ಮುಟ್ಟಿನ ದಿನಗಳ ನಂತರ ಗರ್ಭ ಧರಿಸುವ ಸಾಧ್ಯತೆ

‘ಈ ಸಮಯದಲ್ಲಿ ವಾರದಲ್ಲಿ ಎರಡರಿಂದ ಮೂರು ದಿನಗಳ ಕಾಲ ಪ್ರಯತ್ನ ನಡೆಸುವಂತೆ ನಾನು ಸಲಹೆ ಮಾಡುತ್ತೇನೆ, ಸಾಧ್ಯವಾದರೆ ಪ್ರತಿ ದಿನ ಬಿಟ್ಟು ದಿನದ ಪ್ರಯತ್ನ ಹೆಚ್ಚು ಫಲಕಾರಿಯಾಗಿದೆ’ ಎಂದು ಪ್ರಸೂತಿ ತಜ್ಞರು ತಿಳಿಸುತ್ತಾರೆ.

ಏಕೆಂದು ಕಾರಣ ಇಲ್ಲಿದೆ

ಮಾಸಿಕ ದಿನಗಳ ಏಳನೆಯ ದಿನ, ನಿಮ್ಮ ಜನನಾಂಗದಿಂದ ಒಸರುವ ಲೋಳೆಯಂತಹ ದ್ರವವನ್ನು ನೀವು ಗಮನಿಸಬಹುದು. ಮುಂದಿನ ಕೆಲವು ದಿನಗಳಲ್ಲಿ ಇದು ಕೊಂಚ ಬಿಳಿಮಿಶ್ರಿತ ಹಳದಿ ಬಣ್ಣ ಅಥವಾ ಪೇಲವ ಹಳದಿ ಬಣ್ಣ ಪಡೆಯುತ್ತದೆ. ಇದು ಅಂಡಾಣು ಫಲಗೊಳ್ಳಲು ಸಿದ್ಧವಾಗಿದೆ ಎಂಬ ಸ್ಪಷ್ಟ ಸೂಚನೆಯಾಗಿದೆ. ಅಂದರೆ ಇದರ ಅರ್ಥ ಅಂಡಾಣು ಪೂರ್ಣವಾಗಿ ಬಿಡುಗಡೆಯಾಗಿದೆ ಎಂದು ಅರ್ಥವಲ್ಲ. ಆದರೆ ಬಿಡುಗಡೆಯಾಗುವ ಪ್ರಕ್ರಿಯೆ ಸೂಕ್ತ ರೀತಿಯಲ್ಲಿ ಸಾಗುತ್ತಿದೆ ಹಾಗೂ ಶೀಘ್ರವೇ ಲಭ್ಯವಾಗಲಿದೆ ಎಂಬ ಸೂಚನೆಯಾಗಿದೆ. ವಾಸ್ತವದಲ್ಲಿ, ಈ ಸ್ರಾವ ಗರ್ಭಕಂಠದ ಬಳಿ ವೀರ್ಯಾಣುಗಳನ್ನು ಆಕರ್ಷಿಸಿ ಮಿಲನಕ್ಕೆ ಸೂಕ್ತ ವಾತಾವರಣ ಕಲ್ಪಿಸುವುದಾಗಿದ್ದು ಈ ಭಾಗವನ್ನು ಹೆಚ್ಚು ಲೋಳೆಯುಕ್ತವಾಗಿಸುತ್ತದೆ. (cervical mucus)

ನೆನಪಿಡಿ. ಮುಟ್ಟಿನ ದಿನಗಳ ತಕ್ಷಣದ ದಿನಗಳಲ್ಲಿ ನಡೆಸುವ ಪ್ರಯತ್ನಗಳಿಂದಲೂ ನೀವು ಗರ್ಭಧರಿಸಲು ಸಾಧ್ಯ, ಅಂದರೆ ಆ ಸಮಯದಲ್ಲಿ ಅಂಡಾಣು ಬಿಡುಗಡೆಯಾಗದೇ ಇದ್ದರೂ ಸಹಾ. ಏಕೆಂದರೆ ವೀರ್ಯಾಣು ಈ ಲೋಳೆಯಲ್ಲಿ ಮುಂದಿನ ಐದು ದಿನಗಳವರೆಗೂ ಜೀವಂತವಿರುತ್ತದೆ. ‘ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಈ ಸಮಯದಲ್ಲಿ ಕೇವಲ ಒಂದು ಬಾರಿ ಮಾತ್ರವೇ, ಅಂದರೆ ಅಂಡಾಣು ಬಿಡುಗಡೆಯ ನಾಲ್ಕರಿಂದ ಐದು ದಿನಗಳಿಗೂ ಮುಂಚಿತವಾಗಿಯೇ ಸಮಾಗಮ ನಡೆಸಿದ ದಂಪತಿಗಳಲ್ಲೂ ಗರ್ಭಧಾರಣೆಯಾಗಿದೆ’ ಎನ್ನಲಾಗಿದೆ.

ಈ ಸಮಯದ ಸಮಾಗಮ ಗರ್ಭಧಾರಣೆಗೆ ಅನುಕೂಲಕರ

ಉತ್ತಮ. ಈ ಸಮಯದಲ್ಲಿ ಅಂಡಾಣು ಬಿಡುಗಡೆಯಾಗಿ ಮಿಲನಕ್ಕೆ ಸಿದ್ಧವಾಗಿರದೇ ಇದ್ದರೂ, ಗರ್ಭಧಾರಣೆಯ ಸಾಧ್ಯತೆ ಕಡಿಮೆಯಿದ್ದರೂ ಸರಿ ಇದ್ದೇ ಇರುತ್ತದೆ. ಹಾಗಾಗಿ ಈ ಸಮಯವನ್ನು ದಂಪತಿಗಳು ಸೂಕ್ತವಾಗಿ ಬಳಸಿಕೊಳ್ಳುವುದರಲ್ಲಿಯೇ ಜಾಣತನವಿದೆ.

ಅಂಡಾಣು ಉತ್ಪಾದನೆಯ ಸಮಯದಲ್ಲಿ ಗರ್ಭ ಧರಿಸುವ ಸಾಧ್ಯತೆ

ಇದು ಗರ್ಭ ಧರಿಸಲು ಅತ್ಯುತ್ತಮವಾದ ಅವಧಿಯಾಗಿದೆ. ನಿಮ್ಮ ಮಾಸಿಕ ದಿನಗಳ ಅವಧಿ ಎಷ್ಟೇ ಇರಲಿ, ಅಂಡಾಣುವಿನ ಬಿಡುಗಡೆ ನಿಮ್ಮ ಮುಂದಿನ ಮಾಸಿಕ ದಿನ ಪ್ರಾರಂಭವಾಗುವ ಸರಿಯಾಗಿ ಹದಿನಾಲ್ಕು ದಿನ ಹಿಂದೆ ಪ್ರಾರಂಭವಾಗುತ್ತದೆ. ಇದು ಪ್ರಾರಂಭವಾದಾಗ ನಿಮ್ಮ ದೇಹದ ತಾಪಮಾನ ಸುಮಾರು ಅರ್ಧ ಡಿಗ್ರಿ ಏರುತ್ತದೆ. ಆದರೆ ದೇಹದ ತಾಪಮಾನ ಏರುವುದನ್ನೇ ಕಾಯಬಾರದು, ಏಕೆಂದರೆ ಅಂಡಾಣು ಬಿಡುಗಡೆಯಾದ ಕೆಲವಾರು ದಿನಗಳ ಬಳಿಕವೇ ಈ ವ್ಯತ್ಯಾಸ ಕಾಣಿಸಿಕೊಳ್ಳಬಹುದು. ಅಂಡಾಣು ಬಿಡುಗಡೆಯಾಗುವ ಸರಿಯಾದ ದಿನವನ್ನು ವೈದ್ಯರು ನಿಖರವಾಗಿ ತಿಳಿಸಬಲ್ಲರು ಹಾಗೂ ಈ ದಿನ ಪ್ರಾರಂಭವಾದ ಇಪ್ಪತ್ತನಾಲ್ಕರಿಂದ ಮೂವತ್ತಾರು ಘಂಟೆಗಳ ಒಳಗೇ ನಡೆಸುವ ಸಮಾಗಮ ಅತ್ಯಂತ ಹೆಚ್ಚು ಫಲಕಾರಿಯಾಗಿರುತ್ತದೆ.

ಸಮಯ ಅತಿ ಪಕ್ವವಾಗಿದೆ ಎಂದು ಸೂಚಿಸುವ ಇನ್ನೊಂದು ಸ್ಪಷ್ಟ ಸೂಚನೆ ಎಂದರೆ ಜನನಾಂಗದಿಂದ ಒಸರುವ ಲೋಳೆಯಂತಹ ದ್ರವ. ಈ ದಿನ ಈ ಸ್ರಾವವೂ ಗರಿಷ್ಟವಾಗಿರುತ್ತದೆ ಹಾಗೂ ಮೊಟ್ಟೆಯ ಬಿಳಿಭಾಗದಷ್ಟು ಸ್ನಿಗ್ಧವಾಗಿದ್ದರೆ ಇದು ಅತ್ಯುತ್ತಮ ಸಮಯ ಎಂದು ತಿಳಿಯಬಹುದು. ಇದಕ್ಕಾಗಿ ತೋರುಬೆರಳನ್ನು ಜನನಾಂಗದಲ್ಲಿ ತೂರಿಸಿ ಲೋಳೆಯನ್ನು ಸಂಗ್ರಹಿಸಿ. ಈಗ ತೋರುಬೆರಳು ಮತ್ತು ಹೆಬ್ಬೆರಳನ್ನು ಸ್ಪರ್ಶಿಸಿ ಬಿಡಿಸಿದಾಗ ಸುಲಭವಾಗಿ ಬಿಡಿಸಲು ಸಾಧ್ಯವಾಗಿ ಸೂಕ್ಷ್ಮ ದಾರ ನಿರ್ಮಿತವಾದರೆ ಈ ಸಮಯ ಸೂಕ್ತವಾಗಿದೆ ಎಂದು ತಿಳಿಯಬಹುದು.

ಗರ್ಭ ಧಾರಣೆಗೆ ಪಕ್ವ ಸಮಯ

ಈ ಸಮಯದಲ್ಲಿ ನಡೆಸುವ ಸಮಾಗಮದಿಂದ ವೀರ್ಯಾಣುಗಳು ಮುಂಚಿತವಾಗಿ ಗರ್ಭಕಂಠದ ಲೋಳೆಗೆ ತಲುಪಿ ಅಂಡಾಣುವಿಗೆ ಕಾಯಲು ಸಾಧ್ಯವಾಗುತ್ತದೆ. ಹಾಗೂ ಅಂಡಾಣು ಬಿಡುಗಡೆಯಾದ ಬಳಿಕ ಸುಮಾರು ಹನ್ನೆರಡು ಘಂಟೆ ಮಾತ್ರವೇ ಸಮಾಗಮಗೊಳ್ಳಲು ಜೀವಂತವಿರುತ್ತದೆ. ಈ ಸಮಯದಲ್ಲಿ ಲಭ್ಯವಿರುವ ವೀರ್ಯಾಣುಗಳಲ್ಲಿ ಅತಿ ಚುರುಕಾದವು ಈಜುತ್ತಾ ಅಂಡಾಣು ಬಿಡುಗಡೆಯಾದ ನಾಲ್ಕರಿಂದ ಆರು ಘಂಟೆಗಳ ಒಳಗೆ ಧಾವಿಸಿ ಇವುಗಳಲ್ಲಿ ಅತ್ಯಂತ ಚುರುಕಾದ ಒಂದು ವೀರ್ಯಾಣು ಮಿಲನಗೊಳ್ಳುತ್ತದೆ. ಅಧ್ಯಯನಗಳ ಪ್ರಕಾರ, ಈ ದಿನಗಳಲ್ಲಿ ಪ್ರತಿದಿನದ ಸಮಾಗಮದಷ್ಟೇ ದಿನ ಬಿಟ್ಟು ದಿನ ನಡೆಸುವ ಪ್ರಯತ್ನಗಳೂ ಫಲಕಾರಿಯಾಗುತ್ತವೆ. ಹಾಗಾಗಿ ಈ ಸಮಯದ ಗರಿಷ್ಟ ಪ್ರಯೋಜನ ಪಡೆಯಲು ಪ್ರತಿ ಘಂಟೆ ಪ್ರಯತ್ನಿಸುವ ಉದ್ಧಟತನ ಬೇಡ.

ಅಂಡಾಣು ಬಿಡುಗಡೆಯಾದ ಬಳಿಕ ಗರ್ಭಧಾರಣೆಯ ಸಾಧ್ಯತೆ

ಈ ಅವಧಿಯನ್ನು ಲ್ಯೂಟಿಯಲ್ ಅವಧಿ (luteal phase) ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಈ ಅವಧಿ ಹನ್ನೆರಡು ದಿನಗಳವರೆಗಿರುತ್ತದೆ ಹಾಗೂ ಕೆಲವರಲ್ಲಿ ಹದಿನಾರು ದಿನಗಳವರೆಗೂ ಮುಂದುವರೆಯಬಹುದು. ಈ ಸಮಯದಲ್ಲಿ ಪ್ರೊಜೆಸ್ಟರಾನ್ ಪ್ರಮಾಣ ಹೆಚ್ಚುತ್ತದೆ ಹಾಗೂ ಈ ಸಮಯದಲ್ಲಿ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗಬಾರದು ಎಂಬ ಸೂಚನೆಯನ್ನು ಸತತವಾಗಿ ನೀಡುತ್ತಿರುತ್ತದೆ. ಗರ್ಭಕಂಠದ ಲೋಳೆದ್ರವ ಈಗ ಒಣಗಿರುತ್ತದೆ ಹಾಗೂ ಹೆಚ್ಚು ಸ್ನಿಗ್ಧವಾಗಿ ಮುಂದೆ ಯಾವುದೇ ವೀರ್ಯಾಣುಗಳನ್ನು ಒಳಬಿಡದ ಗೋಡೆಯಾಗುತ್ತದೆ. ಗರ್ಭನಾಳದಲ್ಲಿ ಫಲಿತಗೊಂಡ ಅಂಡಾಣು ಗರ್ಭಾಶಯದಲ್ಲಿ ಸ್ಥಾಪಿತಗೊಳ್ಳಲು (ಒಂದು ವೇಳೆ ಫಲಿತವಾಗಿದ್ದರೆ) ಸುಮಾರು ಆರು ದಿನಗಳನ್ನು ತೆಗೆದುಕೊಳ್ಳುತ್ತದೆ. ಗರ್ಭಾಶಯದ ಒಳಭಾಗ ತಲುಪಿದ ಬಳಿಕ ಗರ್ಭಾಶಯದಲ್ಲಿ ಈಗ ಹೊಸದಾಗಿ ನಿರ್ಮಿತವಾಗಿದ್ದ ಒಳಪದರ (ಎಂಡೋಮೆಟ್ರಿಯಂ) ದಲ್ಲಿ ಈ ಅಂಡಾಣು ಸ್ಥಾಪಿತಗೊಳ್ಳುತ್ತದೆ. ಹೀಗಾದರೆ ದೇಹದಲ್ಲಿ human chorionic gonadotropin (hCG) ರಸದೂತದ ಪ್ರಮಾಣದಲ್ಲಿ ಹೆಚ್ಚಳ ಕಂಡುಬರುತ್ತದೆ ಹಾಗೂ ಮುಂದಿನ ಒಂದು ವಾರದಲ್ಲಿ ಗರ್ಭಧಾರಣೆಯಾಗಿರುವ ಸ್ಪಷ್ಟ ಸೂಚನೆಗಳನ್ನು ನೀಡತೊಡಗುತ್ತದೆ.

ಈ ಸಮಯದಲ್ಲಿ ಗರ್ಭಧಾರಣೆಯ ಸಾಧ್ಯತೆ ಅತಿ ಕಡಿಮೆ

ಅಂಡಾಣು ಬಿಡುಗಡೆಗೊಂಡ ತಕ್ಷಣವೇ ವೀರ್ಯಾಣುವಿನ ಮಿಲನವಾದರೆ ಸರಿ, ಇಲ್ಲದಿದ್ದರೆ ಈ ಅಂಡಾಣು ಫಲಿತಗೊಳ್ಳದೇ ಮಾಸಿಕ ದಿನಗಳಲ್ಲಿ ವಿಸರ್ಜನೆಗೊಳ್ಳುತ್ತದೆ ಹಾಗೂ ಮುಂದಿನ ಅಂಡಾಣುವಿಗೆ ಕಾಯುವುದು ಅನಿವಾರ್ಯವಾಗುತ್ತದೆ. ಹಾಗಾಗಿ ಗರ್ಭಧಾರಣೆ ಬಯಸದ ದಂಪತಿಗಳಿಗೆ ಈ ಅವಧಿ ಅತಿ ಸೂಕ್ತವಾಗಿದ್ದು ಯಾವುದೇ ದುಗುಡ ದುಮ್ಮಾನವಿಲ್ಲದೇ ಸಂಸರ್ಗದ ಸುಖವನ್ನು ಪಡೆಯಬಹುದು.

ಸತತ ಪ್ರಯತ್ನಗಳ ಬಳಿಕ ಗರ್ಭಧಾರಣೆಯಾಗದಿದ್ದರೆ

ಸತತ ಪ್ರಯತ್ನಗಳ ಬಳಿಕವೂ ಗರ್ಭಧಾರಣೆಯಾಗದೇ ಇದ್ದರೆ ಈ ಬಗ್ಗೆ ಹೆಚ್ಚು ವ್ಯಾಕುಲರಾಗದಿರಿ. ಏಕೆಂದರೆ ನೀವು ಮಾಡುವ ದಿನಗಳ ಲೆಕ್ಕಾಚಾರಕ್ಕೂ ನಿಮ್ಮ ದೇಹದಲ್ಲಿ ನಿಜವಾಗಿ ಆಗುತ್ತಿರುವ ದಿನಗಳ ಲೆಕ್ಕಾಚಾರಕ್ಕೂ ವ್ಯತ್ಯಾಸವಿರಬಹುದು. ಅಥವಾ ನೀವು ಲೆಕ್ಕ ಮಾಡಲು ಆರಂಭಿಸಿದ ದಿನವೇ ಒಂದೆರಡು ದಿನ ಹಿಂದು ಮುಂದಾಗಿರಬಹುದು. ಹಾಗಾಗಿ, ಈ ದಿನಗಳ ನಿಖರ ಮಾಹಿತಿಯನ್ನು ಪಡೆಯಲು ವೈದ್ಯರ ಸಲಹೆ ಅತಿ ಅಗತ್ಯವಾಗಿದೆ.

ಅಷ್ಟೇ ಅಲ್ಲ, ಗರ್ಭಧಾರಣೆಗೆ ನಿಮ್ಮ ಸಂಗಾತಿಯ ವೀರ್ಯಾಣುಗಳೂ ಸಾಕಷ್ಟು ಸಾಂದ್ರತೆಯಲ್ಲಿರಬೇಕು (ಸಾಮಾನ್ಯ -ಪ್ರತಿ ಮಿಲಿ ಲೀಟರ್ ನಲ್ಲಿ 200 ಮಿಲಿಯನ್ , ಗರ್ಭಧಾರಣೆಯ ಸಾಧ್ಯತೆಗೆ ಇದು ಕನಿಷ್ಟ 15 ಮಿಲಿಯನ್ ಅಥವಾ ಪ್ರತಿ ಸ್ಖಲನದಲ್ಲಿ 39 ಮಿಲಿಯನ್ ನಷ್ಟಿರಬೇಕು ಇದಕ್ಕೂ ಕಡಿಮೆ ಇದ್ದರೆ, ಗರ್ಭಧಾರಣೆಯ ಸಾಧ್ಯತೆ ಹೆಚ್ಚೂ ಕಡಿಮೆ ಇಲ್ಲವಾಗುತ್ತದೆ. ಮಿಲನಕ್ಕೆ ಕೇವಲ ಒಂದೇ ಒಂದು ವೀರ್ಯಾಣು ಬೇಕಿದ್ದರೂ ಇಷ್ಟು ಆಗಾಧ ಸಂಖ್ಯೆಯಲ್ಲಿ ಏಕೆ ಬೇಕು ಎಂಬುದೇ ನಿಸರ್ಗದ ವಿಚಿತ್ರವಾಗಿದೆ)

ಹಾಗಾಗಿ ಸಂಗಾತಿಯ ವೀರ್ಯಾಣುಗಳೂ ಆರೋಗ್ಯಕರವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದೂ ಅಗತ್ಯವಾಗಿದೆ. ಪ್ರತಿವರ್ಷ ಸಂತಾನವನ್ನು ಪಡೆಯಲು ಯತ್ನಿಸುವ ದಂಪತಿಗಳಲ್ಲಿ ಕೇವಲ ಅರ್ಧದಷ್ಟು ದಂಪತಿಗಳ ಮೊದಲ ಆರು ತಿಂಗಳ ಪ್ರಯತ್ನ ಫಲ ನೀಡುತ್ತದೆ.

Related Post

Leave a Comment