ಸೇಬು ಎಲ್ಲರಿಗೂ ಇಷ್ಟವಾಗುತ್ತದೆ ಅದರಲ್ಲಿ ಆರೋಗ್ಯಕ್ಕೆ ಬೇಕಾದ ಪೋಷಕಾಂಶ ತುಂಬಾನೇ ಇದೆ. ಆದರೆ ಸೇಬಿನಲ್ಲಿರುವ ಬೀಜವನ್ನು ಯಾರು ಕೂಡ ತಿನ್ನುವುದಿಲ್ಲ ಹಾಗೂ ಬೀಜವನ್ನು ತಿನ್ನಬಾರದು.ಬೀಜವನ್ನು ತಿಂದರೆ ತುಂಬಾ ಸಮಸ್ಯೆ ಎದುರಾಗಾಬಹುದು. ಸೇಬಿನ ಬೀಜದಲ್ಲಿ ವಿಷಯುಕ್ತ ಪದಾರ್ಥ ಇರುತ್ತದೆ ಹಾಗೂ ಅದನ್ನು ತಿಂದರೆ ನಿಮ್ಮ ದೇಹದಲ್ಲಿ ತೊಂದರೆ ಉಂಟಾಗುತ್ತದೆ.
ಸೇಬಿನ ಹಣ್ಣಿನ ಬೀಜದಲ್ಲಿ ಅಮೀಟಲಿಯನ್ ಎನ್ನುವ ಒಂದು ವಿಷಯುಕ್ತ ಪದಾರ್ಥ ಇರುತ್ತದೆ. ಆ ವಿಷಯುಕ್ತ ಪದಾರ್ಥ ನಿಮ್ಮ ದೇಹಕ್ಕೆ ಸೇರಿದರೆ ಜೀರ್ಣವಾಗುವ ಸಮಯದಲ್ಲಿ ಹೈಡ್ರೋಜನ್ ಸೈನೈಡ್ ಆಗಿ ಬದಲಾಗುತ್ತದೆ. ಸೇಬು ಹಣ್ಣಿನ ಬೀಜ ತಿಂದರೆ ತಲೆನೋವು, ಸುಸ್ತು, ವಾಂತಿ, ಇದೆಲ್ಲ ಸಮಸ್ಯೆಗಳು ಕಾಡುತ್ತಾವೆ.ಇನ್ನು ಜಾಸ್ತಿ ಪ್ರಮಾಣದಲ್ಲಿ ಸೇಬು ಹಣ್ಣಿನ ಬೀಜ ನಿಮ್ಮ ದೇಹಕ್ಕೆ ಸೇರಿದರೆ ಹೃದಯ ಮತ್ತು ಮೆದುಳಿನ ಕೆಲಸ ನಿಲ್ಲುತ್ತದೆ.
ನಿಮ್ಮ ದೇಹಕ್ಕೆ ಆಗುವಂತಹ ಆಕ್ಸಿಜನ್ ಸಪ್ಲೇಯನ್ನು ಸ್ಟಾಪ್ ಮಾಡಿ ಆದ್ದರಿಂದ ನಿಮ್ಮ ದೇಹಕ್ಕೆ ಉಸಿರಾಟದ ತೊಂದರೆಯಾಗುತ್ತದೆ. ಇದರಿಂದ ಲೋ ಬಿಪಿ ಸಮಸ್ಯೆ ಕಾಡಬಹುದು.ಈ ವಿಷಯುಕ್ತ ಸೇಬಿನ ಬೀಜದಿಂದ ಸಾವು ಕೂಡ ಸಂಭವಿಸಬಹುದು. ಒಂದು ಬೀಜ ನಿಮ್ಮ ದೇಹಕ್ಕೆ ಸೇರಿದರೆ ತೊಂದರೆಯಾಗುವುದಿಲ್ಲ. ಆದರೆ ಒಂದು ಕಪ್ ಅಷ್ಟು ಸೇಬಿನ ಬೀಜ ನಿಮ್ಮ ದೇಹಕ್ಕೆ ಸೇರಿದರೆ ಸಾವು ಸಂಭವಿಸುವುದು ಖಂಡಿತ.
ಮುಖ್ಯವಾಗಿ ಸೇಬಿನ ಬೀಜದ ಆಯಿಲ್ ಅನ್ನು ಸ್ಕಿನ್ ಮತ್ತು ತಲೆ ಕೂದಲಿಗೆ ಬಳಸುತ್ತಾರೆ.ಮುಖ್ಯವಾಗಿ ಸೇಬು ಹಣ್ಣು ತಿನ್ನುವಾಗ ಬೀಜವನ್ನು ತೆಗೆಯುವುದನ್ನು ಮರೆಯಬೇಡಿ.
ಧನ್ಯವಾದಗಳು