ಕರುಳು ಶುದ್ಧಿಕರಣದ ವಿಧಾನ!

Written by Anand raj

Published on:

ಆರೋಗ್ಯಕಾರಿ ದೇಹಕ್ಕೆ ಹೊಟ್ಟೆಯು ಆರೋಗ್ಯವಾಗಿ ಇರುವುದು ಅತೀ ಅಗತ್ಯವಾಗಿರುವುದು. ಇದೇ ವೇಳೆ ದೇಹದ ಒಳಗಿನ ಕೆಲವೊಂದು ಅಂಗಗಳ ಬಗ್ಗೆ ನಮಗೆ ಹೆಚ್ಚಿನ ಜ್ಞಾನವು ಇರುವುದೇ ಇಲ್ಲ. ಹೀಗಾಗಿ ಅನಾರೋಗ್ಯಗಳು ಕಾಡುವುದು ಹೆಚ್ಚಾಗುತ್ತಿರುತ್ತದೆ. ಹೊಟ್ಟೆ ಹಾಗೂ ಜೀರ್ಣಾಂಗ ವ್ಯವಸ್ಥೆಯ ಜತೆಗೆ ಕರುಳನ್ನು ನಾವು ಶುಚಿಯಾಗಿಟ್ಟುಕೊಂಡರೆ ಆಗ ಖಂಡಿತವಾಗಿಯೂ ಯಾವುದೇ ರೀತಿಯ ಅನಾರೋಗ್ಯವು ನಮ್ಮನ್ನು ಕಾಡದು.

ಇಂದಿನ ದಿನಗಳಲ್ಲಿ ಮಲಬದ್ಧತೆಯ ಸಮಸ್ಯೆಯು ಅರ್ಧದಷ್ಟು ಜನರನ್ನು ಕಾಡುತ್ತಲಿರುವುದು. ಇದಕ್ಕೆ ಕರುಳಿನ ಕ್ರಿಯೆಯು ಸರಾಗವಾಗಿ ಇರದೆ ಇರುವುದು ಪ್ರಮುಖ ಕಾರಣವಾಗಿದೆ. ಕರುಳು ಶುದ್ಧವಾಗಿದ್ದರೆ ಅದು ನಮ್ಮ ಸಂಪೂರ್ಣ ಆರೋಗ್ಯವನ್ನು ಕಾಪಾಡುವ ಜತೆಗೆ, ಕರುಳಿನ ಕ್ಯಾನ್ಸರ್ ಬರದಂತೆ ತಡೆಯುವುದು.ಕರುಳನ್ನು ಶುದ್ಧವಾಗಿ ಇರಿಸುವ ಕೆಲವು ಲಾಭಗಳ ಬಗ್ಗೆ ನೀವು ತಿಳಿಯಿರಿ.

ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿಣಾಮಕಾರಿಯಾಗಿಡುವುದು

ಕರುಳು ಶುದ್ಧೀಕರಣಗೊಂಡರೆ ಆಗ ಕಲ್ಮಷವು ಹೊರಗೆ ಹೋಗುವುದು ಮತ್ತು ದೇಹಕ್ಕೆ ಬೇಕಾಗಿರುವಂತಹ ಪೋಷಕಾಂಶಗಳನ್ನು ಇದು ಹೀರಿಕೊಳ್ಳುವುದು. ಕರುಳನ್ನು ಶುದ್ಧೀಕರಿಸುವ ವಿಧಾನದಿಂದ ಕಲ್ಮಷವು ತುಂಬಾ ಸುಲಭವಾಗಿ ಹೊರಗೆ ಹೋಗುವುದು.

ಸಮತೋಲನ ಕಾಪಾಡುವುದು ಮತ್ತು ಮಲಬದ್ಧತೆ ತಡೆಯುವುದು

ಮಲಬದ್ಧತೆಯು ದೀರ್ಘಕಾಲಿಕವಾಗಿದ್ದರೆ ಅದು ಜೀರ್ಣಕ್ರಿಯೆಯು ನಿಧಾನವಾಗಲು ಪ್ರಮುಖ ಕಾರಣವಾಗುವುದು. ಇದರಿಂದಾಗಿ ಕಲ್ಮಷವು ದೀರ್ಘಕಲಾ ತನಕ ದೇಹದಲ್ಲಿ ಉಳಿಯುವುದು. ಇದರಿಂದಾಗಿ ಕೆಲವೊಂದು ಸಮಸ್ಯೆಗಳಾಗಿರುವಂತಹ ಕಿರಿಕಿರಿ, ಹೆಮೊರಾಯ್ಡ್ ಮತ್ತು ರಕ್ತನಾಳ ಹುಬ್ಬುವ ಸಮಸ್ಯೆಯು ಬರುವುದು.

ಶಕ್ತಿ ವೃದ್ಧಿಸುವುದು

ದೇಹದಿಂದ ವಿಷಕಾರಿ ಅಂಶವು ಹೊರಗೆ ಹೋದರೆ ಆಗ ಖಂಡಿತವಾಗಿಯೂ ದೇಹಕ್ಕೆ ಪುನಶ್ಚೇತನವು ಸಿಗುವುದು. ಇದು ಕಲ್ಮಷ ಹೊರಹಾಕಲು ಬಳಸುತ್ತಿದ್ದ ಶಕ್ತಿಯನ್ನು ದೇಹಕ್ಕೆ ಬಳಸುವುದು ಮತ್ತು ಈ ಶಕ್ತಿಯು ದೇಹದ ಇತರ ಅಂಗಾಂಗಳಿಗೆ ಕೂಡ ತೆರಳುವುದು. ಕರುಳನ್ನು ನಿರ್ವಿಷಗೊಳಿಸಿದವರ ರಕ್ತದೊತ್ತವು ಉತ್ತಮವಾಗಿದೆ, ನಿದ್ರೆಯು ಚೆನ್ನಾಗಿದೆ ಮತ್ತು ಶಕ್ತಿಯು ವೃದ್ಧಿಸಿದೆ ಎಂದು ತಿಳಿದುಬಂದಿದೆ.

​ವಿಟಮಿನ್ ಹಾಗೂ ಪೋಷಕಾಂಶಗಳ ಹೀರಿಕೊಳ್ಳಲು

ಕರುಳು ಶುದ್ಧೀಕರಣಗೊಂಡರೆ ಆಗ ನೀರು, ವಿಟಮಿನ್ ಗಳು ಮತ್ತು ಪೋಷಕಾಂಶಗಳನ್ನು ಹೀರಿಕೊಂಡು ರಕ್ತನಾಳಗಳಿಗೆ ತಲುಪಿಸುವುದು. ದೇಹವು ಆಹಾರದಲ್ಲಿ ಇರುವ ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೀರಿಕೊಳ್ಳಲು ಇದು ಎಲ್ಲಾ ರೀತಿಯಿಂದಲೂ ನೆರವಾಗುವುದು.

​ಏಕಾಗ್ರತೆ ಸುಧಾರಿಸುವುದು

ಮನಸ್ಸಿನ ಏಕಾಗ್ರತೆಯ ಮೇಲೂ ದೇಹದ ಆರೋಗ್ಯವು ಪರಿಣಾಮ ಬೀರುವುದು. ಕೆಟ್ಟ ಆಹಾರ ಮತ್ತು ಸರಿಯಾಗಿ ವಿಟಮಿನ್ ಗಳು ಹೀರಿಕೊಳ್ಳದೆ ಇದ್ದರೆ ಆಗ ಇದು ಏಕಗ್ರತೆ ಮೇಲೆ ಪರಿಣಾಮ ಬೀರುವುದು.

ಕರುಳಿನಲ್ಲಿ ಲೋಳೆ ಮತ್ತು ವಿಷಕಾರಿ ಅಂಶವು ಜಮೆಯಾಗುವ ಕಾರಣದಿಂದಾಗಿ ಬೇಕಾಗುವಂತಹ ಕಾರ್ಯವು ಕರುಳಿಗೆ ಮಾಡಲು ಸಾಧ್ಯವಾಗದು.

ನಿರ್ವಿಷಗೊಳಿಸುವಂತಹ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ಆಗ ಕರುಳು ಉತ್ತಮವಾಗಿರುವುದು. ಇದರಿಂದ ಯಾವಾಗಲೂ ಜಾಗ್ರತವಾಗಿರುವಂತೆ ಮಾಡುವುದು.

​ತೂಕ ಇಳಿಸಲು ಸಹಕಾರಿ

ನಾವು ಸೇವನೆ ಮಾಡುವಂತಹ ನಾರಿನಾಂಶಗಳು ಇಲ್ಲದೆ ಇರುವಂತಹ ಆಹಾಗಳು ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಸಾಗಲು ನಾರಿನಾಂಶವಿರುವ ಆಹಾರಕ್ಕಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳುವುದು.

ಆಹಾರವು ನಿಧಾನವಾಗಿ ಸಾಗುವ ಕಾರಣದಿಂದಾಗಿ ಲೋಳೆಯು ನಿರ್ಮಾಣವಾಗುವುದು ಮತ್ತು ಇದು ಕರುಳಿನ ಗೋಡೆಗಳ ಮೇಲೆ ಅಂಟಿಕೊಳ್ಳುವುದು ಮತ್ತು ಇದರಿಂದ ಕರುಳಿನ ಭಾರವು ಹೆಚ್ಚಾಗುವುದು.

ಕರುಳಿನ ಶುದ್ಧೀಕರಣ ಮಾಡಿದರೆ ಅದರಿಂದ ತೂಕ ಇಳಿಕೆಗೆ ಸಹಕಾರಿ. ಕರುಳಿನ ಶುದ್ಧೀಕರಣ ಕ್ರಿಯೆ ಮಾಡಿದ ಬಳಿಕ ತಿಂಗಳಲ್ಲಿ 9 ಕೆಜಿಯಷ್ಟು ಕಡಿಮೆ ಮಾಡಿಕೊಂಡಿರುವುದು ಕಂಡುಬಂದಿದೆ. ಸಾಮಾನ್ಯ ಮನುಷ್ಯನ ಕರುಳು ಎರಡು ಕೆಜಿಯಷ್ಟು ತೂಕವಿರುವುದು.

ಇದು ಅಂತಿಮವಾಗಿ ಜೀರ್ಣವಾಗುವಂತಹ ಸುಮಾರು ಎಂಟು ಊಟವನ್ನು ಹಿಡಿದಿಡಬಹುದು. ಕರುಳಿನ ಶುದ್ದೀಕರಣವು ಚಯಾಪಚಯ ವೃದ್ಧಿಸುವುದು ಮತ್ತು ತೂಕ ಇಳಿಸಲು ಸಹಕಾರಿ ಆಗುವುದು. ನೀವು ಉತ್ತಮ ಆಹಾರ ಕ್ರಮ ಮತ್ತು ದೇಹದ ಆರೋಗ್ಯದ ಕಡೆ ಗಮನ ಹರಿಸಬೇಕು.

​ಕರುಳಿನ ಕ್ಯಾನ್ಸರ್ ಅಪಾಯ ಕಡಿಮೆ

ಆಹಾರ, ಪಾನೀಯ ಹಾಗೂ ಗಾಳಿಯ ಮೂಲಕ ಸೇವನೆ ಮಾಡುವಂತಹ ವಿಷಕಾರಿ ಅಂಶವು ಜಠರಕರುಳು, ಕಿಡ್ನಿ ಮತ್ತು ಯಕೃತ್ ಮೂಲಕ ಸಾಗುವುದು.

ಇದು ನಿಮ್ಮ ಅಂಗಾಂಗಗಳಲ್ಲಿ ಅತೀ ಬೇಗನೆ ಸಾಗದೆ ಇದ್ದರೆ ಅದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ದೇಹದಿಂದ ಕಲ್ಮಷವನ್ನು ಹೊರಗೆ ಹಾಕಿದರೆ ಅದರಿಂದ ಕ್ಯಾನ್ಸರ್ ಗಡ್ಡೆಗಳ ಬೆಳವಣಿಗೆ, ಕಲ್ಲು ಇತ್ಯಾದಿ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.

​ಫಲವತ್ತತೆ ಹೆಚ್ಚುವುದು

ಕರುಳನ್ನು ಶುದ್ದೀಕರಿಸುವುದು, ನಾರಿನಾಂಶ ಹೆಚ್ಚು ಸೇವನೆ ಮತ್ತು ಆರೋಗ್ಯಕಾರಿ ಆಹಾರದ ಆಯ್ಕೆಯಿಂದ ನಿಯಂತ್ರಣವು ಸುಧಾರಣೆ ಆಗುವುದು ಮತ್ತು ತೂಕವು ಸಮತೋಲನದಲ್ಲಿ ಇರುವುದು.

ಕೊಬ್ಬಿಗೆ ಈಸ್ಟ್ರೋಜನ್ ಮೂಲವಾಗಿದೆ ಮತ್ತು ಇದು ಹೆಚ್ಚಾದರೆ ಗರ್ಭಧಾರಣೆ ಕೂಡ ಕಷ್ಟವಾಗಬಹುದು.

ಕರುಳು ಹಲವಾರು ವರ್ಷಗಳಿಂದ ತುಂಬಾ ಭಾರವಾಗಿದ್ದರೆ ಆಗ ಅದು ಗರ್ಭಕೋಶ ಮತ್ತು ಅದರ ಸುತ್ತಮುತ್ತಲಿನ ಕೆಲವೊಂದು ಸಂತಾನೋತ್ಪತ್ತಿ ಅಂಗಗಳ ಮೇಲೆ ಪರಿಣಾಮ ಬೀರಬಹುದು.

ವೀರ್ಯ ಮತ್ತು ಅಂಡಾಣುವಿನ ಮೇಲೆ ಪರಿಣಾಮ ಬೀರುವಂತಹ ಕೆಲವು ವಿಷಕಾರಿ ಅಂಶಗಳು ಹಾಗೂ ರಾಸಾಯನಿಗಳನ್ನು ಕರುಳಿನ ಶುದ್ದೀಕರಣದಿಂದ ಹೊರಗೆ ಹಾಕಬಹುದು. ಗರ್ಭಧಾರಣೆಗೆ ಪ್ರಯತ್ನಿಸುವ ಮೊದಲು ದಂಪತಿಯು ಕರುಳಿನ ಶುದ್ಧೀಕರಣ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.

​ರಕ್ತನಾಳದಲ್ಲಿ ಪಿಎಚ್ ಮಟ್ಟ ಕಾಪಾಡುವುದು

ನಾರಿನಾಂಶವಿಲ್ಲದೆ ಅಧಿಕ ಪ್ರೋಟೀನ್ ಸೇವನೆ ಮಾಡಿದರೆ ಅದರಿಂದ ಕರುಳಿನಲ್ಲಿ ಆಮ್ಲವು ಜಮೆ ಆಗುವುದು. ಇದರಿಂದ ದೇಹದಲ್ಲಿ ಆಲಸ್ಯವು ಉಂಟಾಗುವುದು.

ಕರುಳು ಉರಿಯೂತವಾದರೆ ಆಗ ಅದು ನೀರು, ವಿಟಮಿನ್ ಗಳು ಹಾಗೂ ಖನಿಜಾಂಶಗಳನ್ನು ಹೀರಿಕೊಳ್ಳುವ ಕಾರ್ಯವನ್ನು ತಗ್ಗಿಸುವುದು.

ಶಿಲೀಂಧ್ರ, ಯೀಸ್ಟ್, ಬ್ಯಾಕ್ಟೀರಿಯಾ ಮತ್ತು ಕೀಟಗಳು ಮತ್ತು ಮಲವು ಉತ್ಪತ್ತಿಯಾಗಿ ಅದು ರಕ್ತನಾಳ ಹಾಗೂ ಸಂಪರ್ಕಿತ ಅಂಗಾಂಶಗಳನ್ನು ಪ್ರವೇಶಿಸುವುದು. ಇದರಿಂದ ದೇಹದಲ್ಲಿನ ಪಿಎಚ್ ಮಟ್ಟದಲ್ಲಿ ಅಸಮತೋಲನ ಉಂಟಾಗಬಹುದು.

Related Post

Leave a Comment