ಹೆರಿಗೆ ನಂತರ ಹೊಟ್ಟೆ ಬೊಜ್ಜು ಕರಗಿಸುವ ವಿಧಾನ!

Written by Anand raj

Published on:

How to lose belly fat after delivery:ಇತ್ತೀಚಿನ ದಿನಗಳಲ್ಲಿ ಬೊಜ್ಜು ಎನ್ನುವುದು ಸಾಮಾನ್ಯ ಆಗಿಬಿಟ್ಟಿದೆ. ಅದರ ಲ್ಲೂ ಮದುವೆಯಾದ ಮಹಿಳೆಯರು ಅಥವಾ ಮಕ್ಕಳು ಆದ ನಂತರ ಇನ್ನೂ ಕೆಲವರಿಗೆ ಯವ್ವನದಲ್ಲಿಯೇ ಮೈತು ಕ ಹೆಚ್ಚಿಸಿಕೊಂಡಿರುತ್ತಾರೆ. ಏನೇ ಹರಸಾಹಸ ಪಟ್ಟರು ಬೊಜ್ಜು ಕರಗಿಸಲು ಸಾಧ್ಯವಾಗದೆ ಇದ್ದಾಗ ಜಿಮ್ ಸೇರುತ್ತಾರೆ.

ಆದ್ರೆ ಕೆಲವರಿಗೆ ಹೊರಗಡೆ ಹೋಗಿ ವ್ಯಾಯಾಮ ಮಾಡಲು ಕಷ್ಟವಾದರೆ ಮನೆಯಲ್ಲಿಯೇ ಪ್ರತಿನಿತ್ಯ ಈ ಆಸನ ಮಾಡಿದರೆ ನಿಮ್ಮ ಹೊಟ್ಟೆ ಮೈಕಟ್ಟು ಕೂಡ ಚೆನ್ನಾಗಿಟ್ಟುಕೊಳ್ಳಬಹುದು. ದಂಡಾಸನ ಇದುವೇ ನಿಮ್ಮ ಮೈ ಕೊಬ್ಬು ಕರಗಿಸಲು ಸಹಕಾರಿಯಾಗುವ ಏಕೈಕ ಆಸನ.ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ ಪ್ಲಾಂಕ್ಸ್.

ದಂಡಾಸನ ಮಾಡುವುದು ಹೇಗೆ?–ಈ ಅಸನ ಮಾಡುವುದಕ್ಕೆ ಮೊದಮೊದಲು ತುಂಬಾ ಕಷ್ಟ ಅನಿಸಬಹುದು ಆದರೆ ಪ್ರತಿನಿತ್ಯ ಅಭ್ಯಾಸ ಮಾಡಿದರೆ ಒಂದು ನಿಮಿಷ ಅಥವಾ ಎರಡು ನಿಮಿಷ ಮಾಡಿದರೂ ಸಾಧ್ಯವಾಗುತ್ತದೆ.

ಆದರೆ ಶರೀರ ನೇರ ಸ್ಥಿತಿಯಲ್ಲಿರಬೇಕು, ಉದಾಹರಣೆಗೆ ಈ ಚಿತ್ರವನ್ನು ನೋಡಿದರೆ ನಿಮಗೆ ಗೊತ್ತಾಗುತ್ತದೆ ಈ ಹಾಸನ ಮಾಡುವುದರಿಂದ ಕೆಳಹೊಟ್ಟೆಯ ಸ್ನಾಯುಗಳು ಬಿಗಿಯಾಗುವುದಲ್ಲದೆ ಗರ್ಭಕೋಶಕ್ಕೆ ಒಳ್ಳೆಯದು.

ದೇಹವನ್ನು ಬ್ಯಾಲೆನ್ಸ್ ಮಾಡುವುದರ ಮೂಲಕ ಹೊಟ್ಟೆಯ ಸ್ನಾಯುಗಳು ಬಲವಾಗುತ್ತದೆ. ದೇಹ ತಮಗೆ ಬೇಕಾದ ಹಾಗೆ ಬಗ್ಗಿಸುವುದರ ಕಲೆ ಗೊತ್ತಿದ್ದರೆ ಈ ಹಾಸನ ಅಷ್ಟು ಕಷ್ಟವೇನು ಅಲ್ಲ. ಬೊಜ್ಜು ಕರಗಿಸುವುದಕ್ಕೆ ಈ ಆಸನ ತುಂಬಾ ಪರಿಣಾಮಕಾರಿಯಾಗಿರುತ್ತದೆ. ಕೆಲ ಸುಲಭದ ವ್ಯಾಯಾಮಗಳನ್ನು ಮಾಡಿದ ನಂತರವೂ ಕೂಡ ಕೊನೆಯಲ್ಲಿ ಇದನ್ನ ಮಾಡಬಹುದು.

ಈ ಆಸನವನ್ನು ಮಾಡುವಾಗ ಕಿಬ್ಬೋಟ್ಟೆಯ ಸೆಳೆತ ನಿಮಗೆ ಅರಿವಿಗೆ ಬರುತ್ತದೆ. ಹೀಗೆ ಪ್ರತಿನಿತ್ಯ ಯಾಸನವನ್ನು ಮಾಡುತ್ತಾ ಬಂದರೆ ದೇಹದ ಆರೋಗ್ಯ ಉತ್ತಮವಾಗಿರುತ್ತದೆ ಜೊತೆಗೆ ಬೊಜ್ಜು ಕೂಡ ಸಂಗ್ರಹವಾಗುವುದಿಲ್ಲ.

ಗರ್ಭಿಣಿಯರಿಗೆ ಪರ್ಫೆಕ್ಟ್ ಆಸನ–ಬಹುತೇಕ ಮಹಿಳೆಯರಿಗೆ ಮಗುವಾದ ನಂತರ ಹೊಟ್ಟೆ ದೊಡ್ಡದಾಗುತ್ತದೆ ಅಂದರೆ ಬೊಜ್ಜು ಬೆಳೆಯಲು ಆರಂಭವಾಗುತ್ತದೆ ನಾರ್ಮಲ್ ಡೆಲಿವರಿ ಆಗಿದ್ದರೆ ವೈದ್ಯರ ಸಲಹೆ ಪಡೆದು ವ್ಯಾಯಾಮ ಅಭ್ಯಾಸ ಮಾಡಬಹುದು.

ಇನ್ನು ಸಿ ಸೆಕ್ಷನ್ ಡೆಲಿವರಿ ಆಗಿರುವ ಮಹಿಳೆಯರು ಆರು ಏಳು ತಿಂಗಳ ನಂತರ ವ್ಯಾಯಾಮ ಮಾಡಬಹುದು ತುಂಬಾ ಕಷ್ಟವೆಸಿದರೆ ವೈದ್ಯರ ಸಲಹೆ ಪಡೆದು ಪ್ರಾರಂಭಿಸಿ. ಇಷ್ಟೆಲ್ಲಾ ಪ್ರಯೋಜನವಿರುವ ಆಸನವನ್ನು ತಪ್ಪದೆ ನಿಮ್ಮ ದಿನಚರಿಗೆ ಹಾಕಿಕೊಳ್ಳಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ.

Related Post

Leave a Comment