ಬೆತ್ತಲಾಗಿ ಮಲಗೋದ್ರಿಂದ ನಮಗೆ ಎಷ್ಟು ಲಾಭ!

Written by Anand raj

Published on:

ದಿನಪೂರ್ತಿ ದಣಿದು, ಬಸವಳಿದ ಬಳಿಕ ದೇಹಕ್ಕೆ ವಿಶ್ರಾಂತಿ ಎನ್ನುವುದು ಬೇಕಿರುತ್ತದೆ. ಇದಕ್ಕಾಗಿಯೇ ರಾತ್ರಿ ವೇಳೆ ಪ್ರತಿಯೊಬ್ಬರು ಮಲಗುವುದು. ಯಾಕೆಂದರೆ ರಾತ್ರಿಯ ನಿದ್ರೆಯು ದೇಹದ ಆಯಾಸ ಕಡಿಮೆ ಮಾಡುವುದು ಮಾತ್ರವಲ್ಲದೆ, ದೇಹದಲ್ಲಿ ಕೋಶಗಳು ಪುನರ್ಶ್ಚೇತನಗೊಳಿಸುವಂತಹ ಇತ್ಯಾದಿ ಕಾರ್ಯ ಮಾಡಲು ನೆರವಾಗುವುದು.

ಮಲಗುವಾಗ ಹಲವಾರು ರೀತಿಯಿಂದ ಮಲಗುತ್ತಾರೆ. ಇದು ಅವರವರಿಗೆ ಬಿಟ್ಟ ವಿಚಾರ. ಆದರೆ ಈ ಲೇಖನದಲ್ಲಿ ಹೇಳುವಂತಹ ವಿಚಾರವು ಒಂದು ಕ್ಷಣ ನಿಮ್ಮನ್ನು ದಂಗುಬಡಿಸಬಹುದು. ಯಾಕೆಂದರೆ ಬೆತ್ತಲಾಗಿ ಮಲಗಿದರೆ ಅದರಿಂದ ಹಲವಾರು ರೀತಿಯ ಲಾಭಗಳು ಇವೆಯಂತೆ. ಇದು ರಕ್ತಪರಿಚಲನೆ ಹಚ್ಚಿಸಿ, ಒತ್ತಡ ಕಡಿಮೆ ಮಾಡುವುದು ಮತ್ತು ಪುರುಷರಲ್ಲಿ ವೀರ್ಯಗಣತಿ ಹೆಚ್ಚಿಸುವುದು.

ಮಲಗುವ ವೇಳೆ ನೀವು ಒಳ ಉಡುಪು ಧರಿಸಿದ್ದರೆ ಆಗ ಚರ್ಮಕ್ಕೆ ಉಸಿರಾಡಲು ಕಷ್ಟವಾಗುವುದು ಮತ್ತು ಇದರಿಂದ ನಿಮಗೆ ಆರಾಮವಾಗಿ ಮಲಗಲು ಸಾಧ್ಯವಿಲ್ಲ. ಇದರಿಂದ ಒಳ ಉಡುಪು ಇಲ್ಲದೆ ಮಲಗಲು ಪ್ರಯತ್ನಿಸಿ. ನೀವು ಹೀಗೆ ಮಲಗಲು ಹಿಂಜರಿಯುತ್ತಾ ಇದ್ದರೆ ಲೇಖನವನ್ನು ಪೂರ್ತಿ ಓದಿದ ಬಳಿಕ ನಿಮ್ಮ ನಿರ್ಧಾರ ಬದಲಾಗುವುದು ಖಚಿತ.

ನಿದ್ರೆಯ ಗುಣಮಟ್ಟ ಸುಧಾರಣೆ

ನಿದ್ರಿಸುವ ವೇಳೆ ಒಳ ಉಡುಪು ಧರಿಸಿದರೆ ಆಗ ಅದು ನಿಮ್ಮ ದೇಹವನ್ನು ಅಂಟಿಕೊಂಡು ನಿದ್ರೆಯಲ್ಲೂ ತಡೆ ಹೇರುವುದು. ಬಟ್ಟೆಯ ಗುಣಮಟ್ಟದಿಂದ ದೇಹವು ಬಿಸಿಯಾಗಬಹುದು, ಕಿರಿಕಿರಿಯಾಗಬಹುದು. ಬಿಗಿಹಿಡಿತ ಅಥವಾ ಬ್ರಾ ಅಥವಾ ಚಡ್ಡಿಯು ಕಿರಿಕಿರಿ ಉಂಟು ಮಾಡಬಹುದು. ಇಂತಹ ಕಿರಿಕಿರಿಯಿಂದಾಗಿ ಒಳಉಡುಪು ಧರಿಸಿ ಮಲಗುವುದರಿಂದ ಸರಿಯಾಗಿ ನಿದ್ರೆ ಬರದಿರಬಹುದು. ಇದೆಲ್ಲವೂ ಇಲ್ಲದೆ ಮಲಗಿದರೆ ನಿದ್ರೆಯ ಗುಣಮಟ್ಟ ಸುಧಾರಣೆಯಾಗುವುದು.

ಒತ್ತಡ ನಿವಾರಣೆ ಮತ್ತು ದಂಪತಿಗಳಲ್ಲಿ ಬೆಸುಗೆ ಹೆಚ್ಚುವುದು

ಬಟ್ಟೆಗಳು ಇಲ್ಲದೆ ದಂಪತಿ ಮಲಗಿದರೆ ಮತ್ತು ಅಪ್ಪಿಕೊಂಡರೆ ಆಗ ಅವರಲ್ಲಿ ತುಂಬಾ ಹತ್ತಿರವಾದ ಭಾವನೆ ಮೂಡುವುದು. ಅವರಿಬ್ಬರ ಬೆವರು ಜತೆಯಾಗಿ ಸೇರಿಕೊಂಡಾಗ ಕಾಮಾಸಕ್ತಿ ಮೂಡುವುದು ಮತ್ತು ಅದು ಆಕ್ಸಿಕಾಂಟಿನ್ ಎನ್ನುವ ಹಾರ್ಮೋನ್ ನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಒತ್ತಡ ಕಡಿಮೆಯಾಗಿ, ದೈಹಿಕ ಹಾಗೂ ಭಾವನಾತ್ಮಕವಾಗಿ ಪರಸ್ಪರ ಹತ್ತಿರವಾಗುವರು. ಇದು ಮೆಲಟೊನಿನ್ ಸ್ರವಿಸುವಿಕೆ ಹೆಚ್ಚಿಸುವುದು. ಇದು ವಯಸ್ಸಾಗುವ ಲಕ್ಷಣಗಳನ್ನು ತಡೆದು ನೀವು ತುಂಬಾ ಯೌವನಯುತವಾಗಿ ಕಾಣುವಂತೆ ಮಾಡುವುದು.

ಪುರುಷರಲ್ಲಿ ಫಲವತ್ತತೆ ಸುಧಾರಣೆ

ಒಳಉಡುಪು ಇಲ್ಲದೆ ಮಲಗಿದರೆ ಆಗ ದೇಹದ ಸಂಪೂರ್ಣ ಉಷ್ಣತೆಯು ಕಡಿಮೆಯಾಗುವುದು. ಇದರಿಂದ ಪುರುಷರ ವೃಷಣಗಳಲ್ಲಿ ಕೂಡ ಕಡಿಮೆ ತಾಪಮಾನ ಕಾಪಾಡಿಕೊಳ್ಳಲು ನೆರವಾಗುವುದು. 37 ಡಿಗ್ರಿಗಿಂತ ಕಡಿಮೆ ತಾಪಮಾನವಿದ್ದರೆ ಆಗ ಆರೋಗ್ಯಕರವಾಗಿ ವೀರ್ಯದ ಉತ್ಪತ್ತಿಯಾಗುವುದು.

ಬ್ಯಾಕ್ಟೀರಿಯಾ ಸೋಂಕು ತಗ್ಗಿಸುವುದು

ಮಹಿಳೆಯರಲ್ಲಿ ಸ್ತ್ರೀ ನಿಕಟ ಪ್ರದೇಶದಲ್ಲಿ ಉಂಟಾಗುವ ಬ್ಯಾಕ್ಟೀರಿಯಾ ಸೋಂಕನ್ನು ಯೋನಿನೋಸಿಸ್ ಎಂದು ಕರೆಯಲಾಗುತ್ತದೆ. ಜನನೇಂದ್ರಿಯ ಜಾಗದಲ್ಲಿ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾದ ಅಸಮತೋಲನದಿಂದ ಹೀಗೆ ಆಗುವುದು. ನಿದ್ರಿಸುವ ವೇಳೆ ಕೂಡ ಒಳಉಡುಪು ಧರಿಸಿಯೇ ಇರುವ ಕಾರಣದಿಂದ ಆ ಪ್ರದೇಶದಲ್ಲಿ ಆರ್ದ್ರತೆ ಹೆಚ್ಚಾಗಿ ಸೋಂಕು ಉಂಟಾಗುವುದು. ಒಳಉಡುಪು ಧರಿಸದೆ ಇದ್ದರೆ ಆಗ ಆ ಪ್ರದೇಶವು ಒಣಗಿ ಸೋಂಕನ್ನು ಕಡಿಮೆ ಮಾಡುವುದು.

ವಾಸನೆ ಕಡಿಮೆ ಮಾಡುವುದು

ಸೊಂಟದ ಕೆಳಗಡೆ ಯಾವುದೇ ರೀತಿಯ ಸೋಂಕು ಇದ್ದರೆ ಆಗ ಆರ್ದ್ರತೆ ಮತ್ತು ಬೆವರಿನಿಂದಾಗಿ ವಾಸನೆ ಬರುವುದು. ನಿದ್ರಿಸುವಾಗ ಒಳಉಡುಪು ಇಲ್ಲದೆ ಇದ್ದರೆ ವಾಸನೆ ಕಡಿಮೆ ಮಾಡಬಹುದು. ಆದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯುದು.

ದಂಪತಿಗಳಲ್ಲಿ ಹೆಚ್ಚುವ ಆಕ್ಸಿಟೋಸಿನ್

ದಂಪತಿಗಳು ಕೂಡುವ ವೇಳೆಯಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನು ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಉತ್ತಮ ಬಾಂಧವ್ಯಕ್ಕೆ ಹಾಗೂ ಕೂಡುವಿಕೆಯ ಸಂತೋಷವನ್ನು ಹೆಚ್ಚಿಸುವಲ್ಲಿ ಆಕ್ಸಿಟೋಸಿನ್ ನ ಕೊಡುಗೆ ಮಹತ್ತರವಾಗಿದೆ. ಹುಟ್ಟುಡುಗೆಯಲ್ಲಿರುವ ದಂಪತಿಗಳು ಹೆಚ್ಚು ಹತ್ತಿರಾಗುವುದರಿಂದ ಹೆಚ್ಚಿನ ಆಕ್ಸಿಟೋಸಿನ್ ಉತ್ಪತ್ತಿಯಾಗಿ ಉತ್ತಮ ದಾಂಪತ್ಯಸುಖವನ್ನು ಪಡೆಯಬಹುದಾಗಿದೆ.

ದಂಪತಿಗಳಲ್ಲಿ ಹೆಚ್ಚುವ ಸಾಮೀಪ್ಯ-ಮೆರಗುವ ರತಿ

ಉಡುಗೆಗಳ ಬಂಧನವಿಲ್ಲದಿರುವ ಕಾರಣ ದಂಪತಿಗಳ ದೇಹ ಹಾಗೂ ಮನಸ್ಸು ಇನ್ನಷ್ಟು ಹತ್ತಿರವಾಗುತ್ತದೆ. ಸಂಗಾತಿಯ ಮೈಬಿಸುಪನ್ನು ಪೂರ್ಣವಾಗಿ ಅನುಭವಿಸುವ ಕಾರಣ ರತಿಕ್ರೀಡೆಯಲ್ಲಿ ಮೆರುಗು ಮೂಡುತ್ತದೆ. ಸ್ವತಂತ್ರ ದೇಹಗಳನ್ನು ಇನ್ನಷ್ಟು ರಮಿಸುವ ಮುದ ಹೆಚ್ಚಿನ ಕ್ರೀಡೆಗೆ ಆಮಂತ್ರಣ ನೀಡುತ್ತದೆ. ಪರಿಣಾಮವಾಗಿ ದಂಪತಿಗಳಲ್ಲಿ ಅನ್ಯೋನ್ಯತೆ, ದಾಂಪತ್ಯ ಆರೋಗ್ಯ, ಶಾರೀರಿಕ ಆರೋಗ್ಯ, ಮಾನಸಿಕ ಆರೋಗ್ಯ ವೃದ್ಧಿಸುತ್ತದೆ.

ಉತ್ತಮಗೊಳ್ಳುವ ಜನನಾಂಗಗಳ ಆರೋಗ್ಯ

ಮಾನವರ ದೇಹದಲ್ಲಿ ಅತಿ ಹೆಚ್ಚು ಕಾಲ ಬಟ್ಟೆಗಳ ಮರೆಯಲ್ಲಿರುವ ಅಂಗಗಳೆಂದರೆ ಜನನಾಂಗಗಳಾಗಿವೆ. ಇಡಿಯ ದಿನ ಒಳ ಉಡುಪುಗಳ ಮರೆಯಲ್ಲಿ ಹಾಗೂ ಮೇಲುಡುಪುಗಳ ಒತ್ತಡದ ಬಿಗುವಿನಲ್ಲಿರುವ ಕಾರಣ ನಿಸರ್ಗಕ್ಕೆ ಅನುಸಾರವಾಗಿ ಸಡಿಲವಾಗಿರಲು ಸಾಧ್ಯವಿಲ್ಲ. ಹುಟ್ಟುಡುಗೆಯಲ್ಲಿರುವಷ್ಟೂ ಹೊತ್ತು ಜನನಾಂಗಗಳಿಗೆ ಅಗತ್ಯವಾದ ಸಡಿಲತೆ ಹಾಗೂ ತಂಪಾದ ಹವೆ ಲಭ್ಯವಾಗುತ್ತದೆ. ವಿಶೇಷವಾಗಿ ಸ್ತ್ರೀಯರಲ್ಲಿ ತೇವ ಬೇಗನೇ ಒಣಗಿ ಸೋಂಕು (fungal infection) ಉಂಟಾಗುವುದು ತಡೆದಂತಾಗುತ್ತದೆ.

ಆರೋಗ್ಯಕರ ಶರೀರ

ಒತ್ತಡದಲ್ಲಿದ್ದಾಗ ದೇಹದೊಳಕ್ಕೆ ಕಾರ್ಟಿಸೋಲ್ ಎಂಬ ಹಾರ್ಮೋನು ಉತ್ಪತ್ತಿಯಾಗುತ್ತದೆ. ಕಾರ್ಟಿಸೋಲ್ ಇರುವಷ್ಟೂ ಹೊತ್ತು ದೇಹದ ಜೀರ್ಣಕ್ರಿಯೆ ಕುಂಠಿತಗೊಳ್ಳುತ್ತದೆ ಹಾಗೂ ಸಂಗ್ರಹವಾದ ಕೊಬ್ಬು ಕರಗುವುದಿಲ್ಲ. ನಿಧಾನಕ್ಕೆ ಕೊಬ್ಬು ಸಂಗ್ರಹ ಹೆಚ್ಚುತ್ತಾ ಹೋಗಿ ಸ್ಥೂಲಕಾಯ ಆವರಿಸಿಕೊಳ್ಳುತ್ತದೆ. ವಿವಸ್ತ್ರವಾದ ದೇಹ ಮತ್ತು ನಿರಾಳವಾದ ಮನಸ್ಸು ಶೀಘ್ರವೇ ಒತ್ತಡರಹಿತವಾಗುವುದರಿಂದ ಕಾರ್ಟಿಸೋಲ್ ಉತ್ಪತ್ತಿಯಾಗುವುದಿಲ್ಲ. ಪರಿಣಾಮವಾಗಿ ಹೆಚ್ಚಿನ ಕೊಬ್ಬು ಕರಗಿ ಆರೋಗ್ಯಕರ, ಕೃಶಕಾಯವನ್ನು ಹೊಂದಬಹುದು.

Related Post

Leave a Comment