ಗ್ಯಾಸ್ ಅಸಿಡಿಟಿ ನಿಮಿಷದಲ್ಲಿ ಮಾಯ ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತೆ ಟಿಪ್ಸ್ ಗೊತ್ತಾದರೆ ಜೀವನದಲ್ಲಿ ತಿರುಗಿ ಬರಲ್ಲ!

Written by Anand raj

Published on:

ಈ ಟಿಪ್ಸ್ ನಿಮಗೆ ತಿಂದ ಆಹಾರ ಸುಲಭವಾಗಿ ಜೀರ್ಣ ಆಗುವುದಕ್ಕೆ ಸಹಾಯ ಆಗುತ್ತದೆ. ಇದಕ್ಕೆ ಮೊದಲು 4 ಚಮಚ ಅಜ್ವಾನ ಅಥವಾ ಓಂ ಕಾಳನ್ನು ತೆಗೆದುಕೊಳ್ಳಬೇಕು. ಇದು ಯಾವುದೇ ರೀತಿಯ ಗ್ಯಾಸ್ ಅಸಿಡಿಟಿ ಸಮಸ್ಸೆ ಇದ್ದರೆ ಇದು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ನಂತರ 4 ಚಮಚ ಮೆಂತೆ ಕಾಳು ತೆಗೆದುಕೊಳ್ಳಬೇಕು.

ಮೊದಲು ಒಂದು ಬಡಾಲಿಗೆ ಕಾಲು ಚಮಚ ತುಪ್ಪ ಹಾಕಿ ಮೆಂತೆಯನ್ನು ಫ್ರೈ ಮಾಡಬೇಕು. ವಾತ ಕಸ ಸಮಸ್ಸೆ ಇರುವವರಿಗೆ ಇದು ತುಂಬಾ ಒಳ್ಳೆಯದು. ನಂತರ ಓಂ ಕಾಳನ್ನು ಕೂಡ ಫ್ರೈ ಮಾಡಿಕೊಳ್ಳಬೇಕು. ಮೊದಲು ಫ್ರೈ ಮಾಡಿದ ಮೆಂತೆ ತಣ್ಣಗೆ ಅದಬಳಿಕ ಪುಡಿ ಮಾಡಿಕೊಳ್ಳಬೇಕು. ಇದಕ್ಕೆ ಫ್ರೈ ಮಾಡಿದ ಓಂ ಕಾಳನ್ನು ಹಾಕಿ ಪುಡಿ ಮಾಡಿಕೊಳ್ಳಿ.ಈ ಎರಡು ಪದಾರ್ಥ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದಕ್ಕೆ ಅರ್ಧ ಚಮಚ ಇಂಗನ್ನು ಹಾಕಿ ಮಿಕ್ಸ್ ಮಾಡಿ ಬಾಟಲ್ ಗೆ ಹಾಕಬೇಕು. ಈ ಮೂರು ಪದಾರ್ಥ ಗ್ಯಾಸ್ ಅಸಿಡಿಟಿ ಮತ್ತು ಆಜೀರ್ಣ ಸಮಸ್ಸೆಗೆ ತುಂಬಾ ಒಳ್ಳೆಯದು. ಊಟದ ಮಧ್ಯದಲ್ಲಿ ಈ ಚೂರಣವನ್ನು ಸೇವನೆ ಮಾಡಬೇಕು. ಊಟ ಮಾಡುವ ಮಧ್ಯದಲ್ಲಿ ಒಂದು ಚಮಚ ಈ ಚೂರಣ ಸೇವನೆ ಮಾಡಿ ನೀರನ್ನು ಕುಡಿಯಬೇಕು. ನಂತರ ಊಟವನ್ನು ಮಾಡಬೇಕು. ಇದನ್ನು ನೀವು ಬೆಳಗ್ಗೆ ತಿಂಡಿ ತಿನ್ನುವ ಸಮಯದಲ್ಲಿ ಸೇವನೆ ಮಾಡಬೇಕು ಮತ್ತು ರಾತ್ರಿ ಊಟ ಮಾಡುವ ಸಮಯದಲ್ಲಿ ಇದನ್ನು ಸೇವನೆ ಮಾಡಬೇಕು. ಇದನ್ನು ಪ್ರತಿದಿನ 2 ಚಮಚ ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ನೀವು ತಿಂದ ಆಹಾರ ಆರಾಮವಾಗಿ ಜೀರ್ಣ ಆಗುತ್ತದೆ ಮತ್ತು ಹೊಟ್ಟೆ ಹಸಿವು ಕೂಡ ಆಗುತ್ತದೆ.

Related Post

Leave a Comment