ರಾತ್ರಿ ಪೂಜೆ ಮಾಡುವಾಗ ಅಪ್ಪಿ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ!

Written by Anand raj

Published on:

ಪರಮಾತ್ಮನನ್ನು ದ್ಯಾನಿಸಬೇಕಾದರೆ ಇಂತದ್ದೇ ಸಮಯ ಇಂತದ್ದೇ ಜಾಗ ಇರಬೇಕು ಎಂದು ಇಲ್ಲಾ. ಪ್ರತಿಯೊಂದು ಪ್ರದೇಶ ಮತ್ತು ವಸ್ತುವಿನಲ್ಲೂ ಕೂಡ ದೇವರಿದ್ದಾನೆ. ಇನ್ನು ಭಕ್ತನಾದವನು ಎಲ್ಲಿ ಬೇಕಾದರೂ ಕುಳಿತು ದೇವರ ಧ್ಯಾನವನ್ನು ಮಾಡಬಹುದು. ಅದರೆ ಪೂಜೆ ಮಾಡುವಾಗ ಮಾತ್ರ ಕೆಲವೊಂದು ನಿಯಮಗಳನ್ನು ತಪ್ಪದೆ ಅವಶ್ಯಕವಾಗಿ ಪಾಲಿಸಬೇಕು.

ಹನುಮಂತನಾ ಪೂಜೆಯನ್ನು 12:00 ಗಂಟೆಯಿಂದ 1:00 ಗಂಟೆ ಅವಧಿಯಲ್ಲಿ ಪೂಜೆಯನ್ನು ಮಾಡಬಾರದು. ಉಳಿದ ದೇವರ ಪೂಜೆಗೆ ಸಮಯ ಅವಧಿಯಿಲ್ಲ. ಯಾವಾಗಬೇಕಾದರೂ ಮಾಡಬಹುದು. ಅದರೆ ಸೂರ್ಯಸ್ತ ನಂತರದಲ್ಲಿ ಪೂಜೆ ಮಾಡಬೇಕಾದರೆ ಕೆಲವೊಂದು ವಿಷಯಗಳ ಬಗ್ಗೆ ನಾವು ಗಮನವನ್ನು ವಹಿಸಬೇಕು.

ಸೂರ್ಯಸ್ತದ ನಂತರ ಪೂಜೆ ಮಾಡುವವರು ಶಂಖವನ್ನು ಉದಲೇಬಾರದು. ಈ ವೇಳೆ ದೇವನು ದೇವತೆಗಳು ಮಲಗಿರುತ್ತಾರೆ. ಅವರ ನಿದ್ರೆಗೆ ಭಂಗ ಬರುತ್ತದೇ. ಆದ್ದರಿಂದ ಅಶುಭ ಫಲಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಶಂಖವನ್ನು ಸೂರ್ಯಸ್ತದ ನಂತರ ಪೂಜೆಯ ವೇಳೆ ಉದಬಾರದು.

ಇನ್ನು ಸೂರ್ಯನ ಕಿರಣ ಭೂಮಿಗೆ ಬಿದ್ದ ತಕ್ಷಣ ದಿನದ ಆರಂಭ. ದೇವನು ದೇವತೆಗಳು ಪೂಜೆಯ ಜೊತೆಗೆ ಸೂರ್ಯ ದೇವನ ಪೂಜೆಯನ್ನು ಅವಶ್ಯಕವಾಗಿ ಮಾಡಬೇಕು. ಅದರೆ ರಾತ್ರಿ ಸೂರ್ಯ ದೇವನಿಗೆ ಪೂಜೆ ಮಾಡಬಾರದು. ಸೂರ್ಯಸ್ತದ ನಂತರ ದರ್ಬೆ ತುಳಸಿ ಎಲೆಗಳನ್ನು ಹಾಗು ಅಮಾವಾಸ್ಯೆ ಹುಣ್ಣಿಮೆ ಏಕಾದಶಿ ದ್ವಾದಶಿ ದಿನಗಳಲ್ಲಿ ಕೀಳಬಾರದು. ರಾತ್ರಿ ಪೂಜೆ ಮಾಡಿದ ನಂತರ ಉಳಿದ ಹೂವು ಅಕ್ಕಿ ಪೂಜಾ ಸಾಮಾನುಗಳನ್ನು ಹಾಗೆಯೇ ಬಿಡಬೇಕು. ಬೆಳಗ್ಗೆ ಎದ್ದ ತಕ್ಷಣ ಶುದ್ಧವಾಗಿ ನಂತರ ಅವುಗಳನ್ನು ಸ್ವಚ್ಛಗೊಳಿಸಬೇಕು. ಹೀಗಾಗಿ ಈ ಕೆಲವು ನಿಯಮಗಳನ್ನು ರಾತ್ರಿ ಪೂಜೆ ಮಾಡುವವರು ತಪ್ಪದೆ ಪಾಲಿಸಬೇಕು.

Related Post

Leave a Comment