ಕೇವಲ 2 ಚಿಟಿಕೆ ಅರಿಶಿನ ಹೀಗೆ ಮಾಡಿ ಬಳಸೋದ್ರಿಂದ ಪರಿಣಾಮ ಏನಾಗತ್ತೆ ಗೊತ್ತಾ!

Written by Anand raj

Published on:

ಪ್ರತಿ ಭಾರತೀಯ ಅಡುಗೆ ಮನೆಯಲ್ಲಿಯೂ ತುಂಬಾ ಸುಲಭವಾಗಿ ಲಭ್ಯವಿರುವ ಮಸಾಲೆ ಎಂದರೆ ಅರಿಶಿನ. ಅರಿಶಿನವು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಹಲವು ಖಾಯಿಲೆಗಳಿಂದಲೂ ನಮ್ಮನ್ನು ದೂರ ಉಳಿಯುವಂತೆ ಮಾಡುತ್ತದೆ. ಅದರಲ್ಲೂ ಅರಿಶಿನವು ಮಹಿಳೆಯರ ಹಲವು ಸಮಸ್ಯೆಗಳಿಗೆ ರಾಮಬಾಣವೆಂದೇ ಹೇಳಬಹುದು.

 ಆಯುರ್ವೇದದ ಪ್ರಕಾರ, ಭಾರತೀಯ ಅಡುಗೆಮನೆಯಲ್ಲಿ ಕಂಡು ಬರುವ ಮಸಾಲೆ ಪದಾರ್ಥಗಳು ಯಾವುದೇ ಔಷಧಿಗಳಿಗಿಂತ ಕಡಿಮೆಯಿಲ್ಲ. ಅಂತಹ ಮಸಾಲೆಗಳಲ್ಲಿ ಅರಿಶಿನವೂ ಒಂದು. ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ಅರಿಶಿನವು ನಮ್ಮನ್ನು ಹಲವು ಕಾಯಿಲೆಗಳಿಂದ ದೂರ ಇರಿಸಬಲ್ಲದು. ಅದರಲ್ಲೂ, ಸ್ತ್ರೀಯರ ಹಲವು ಸಾಮಾನ್ಯ ಸಮಸ್ಯೆಗಳಿಗೆ ಅರಿಶಿನವನ್ನು ದಿವ್ಯೌಷಧ ಎಂದು ಬಣ್ಣಿಸಲಾಗಿದೆ. ಹಾಗಿದ್ದರೆ ಅರಿಶಿನವನ್ನು ಹೇಗೆ ಬಳಸಬೇಕು. ಇದರಿಂದ ಸ್ತ್ರೀಯರಿಗೆ ಏನೆಲ್ಲಾ ಪ್ರಯೋಜನಗಳು ಲಭ್ಯವಿವೆ ಎಂದು ತಿಳಿಯೋಣ…

ಆಯುರ್ವೇದದ ಪ್ರಕಾರ, ಅರಿಶಿನವು ಅನಾರೋಗ್ಯ ಸಮಸ್ಯೆಗಳನ್ನು ನಿವಾರಿಸುವುದು ಮಾತ್ರವಲ್ಲ, ಹಲವು ರೀತಿಯ ನೋವುಗಳಲ್ಲಿಯೂ ಪರಿಹಾರ ನೀಡಬಲ್ಲ ಶಕ್ತಿಯನ್ನು ಹೊಂದಿದೆ. ಇದಕ್ಕಾಗಿಯೇ ನಮ್ಮಲ್ಲಿ ಕೆಲವರು ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಚಿಟಿಕೆ ಅರಿಶಿನವನ್ನು ಬೆರೆಸಿ ಕುಡಿಯುತ್ತಾರೆ. ಇದಲ್ಲದೆ, ಅರಿಶಿನವನ್ನು  ಹೊಕ್ಕಳಿಗೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ. ಸ್ತ್ರೀಯರು ಚಿಟಿಕೆ ಅರಿಶಿನವನ್ನು ಹೊಕ್ಕಳಿಗೆ ಹಚ್ಚುವುದರಿಂದ ಏನೆಲ್ಲಾ ಪ್ರಯೋಜನಗಳು ಲಭ್ಯವಾಗಲಿವೆ ತಿಳಿಯಿರಿ.

ರಾತ್ರಿ ಮಲಗುವ ಮುನ್ನ ಚಿಟಿಕೆ ಅರಿಶಿನ ಬಳಸಿದರೆ ಸ್ತ್ರೀಯರ ಈ ಸಮಸ್ಯೆಗಳಿಗೆ ಸಿಗುತ್ತೆ ಸುಲಭ ಪರಿಹಾರ:
ಪಿರಿಯಡ್ಸ್ ನೋವಿಗೆ ಪರಿಹಾರ:
ನಮ್ಮಲ್ಲಿ ಹಲವು ಮಹಿಳೆಯರಿಗೆ ಋತುಚಕ್ರ ಎಂದರೆ ಪಿರಿಯಡ್ಸ್ ಸಮಯದಲ್ಲಿ ಅಸಹನೀಯ ನೋವಿನ ಸಮಸ್ಯೆ ಕಾಡುತ್ತದೆ. ಇಂತಹ ಸಮಯದಲ್ಲಿ ಹೊಕ್ಕಳಿಗೆ ಚಿಟಿಕೆ ಅರಿಶಿನವನ್ನು ಲೇಪಿಸುವುದರಿಂದ ಪರಿಹಾರ ದೊರೆಯುತ್ತದೆ ಎನ್ನಲಾಗುತ್ತದೆ.

ಅಜೀರ್ಣ ಅಥವಾ ಮಲಬದ್ಧತೆ:
ಸ್ತ್ರೀಯರು ಮಾತ್ರವಲ್ಲ ಪುರುಷರಲ್ಲೂ ಸಹ ಅಜೀರ್ಣ ಅಥವಾ ಮಲಬದ್ಧತೆ ಸಮಸ್ಯೆಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಹಲವು ವೇಳೆ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಕೂಡ ಬಾಧಿಸುತ್ತವೆ. ಇಂತಹ ಸಂದರ್ಭದಲ್ಲಿ ಚಿಟಿಕೆ ಅರಿಶಿನದೊಂದಿಗೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಹಚ್ಚುವುದು ತುಂಬಾ ಪ್ರಯೋಜನಕಾರಿ ಆಗಿದೆ.

ಜೀರ್ಣಕ್ರಿಯೆಗೆ ಉತ್ತಮ ಪರಿಹಾರ:
ಅರಿಶಿನವು ಫೈಬರ್‌ನ ಸಮೃದ್ಧ ಮೂಲ. ಇದು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ಹೊಕ್ಕುಳಲ್ಲಿ ಹಚ್ಚುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುತ್ತದೆ. ಇದರಿಂದಾಗಿ, ಆಗಾಗ್ಗೆ ಕಾಣಿಸಿಕೊಳ್ಳುವ ಹೊಟ್ಟೆ ನೋವು, ಅಜೀರ್ಣದಂತಹ ಸಮಸ್ಯೆಗಳಿಂದಲೂ ಸುಲಭ ಪರಿಹಾರ ಪಡೆಯಬಹುದು. 

ಹೊಕ್ಕಳಿಗೆ ಅರಿಶಿನವನ್ನು ಹಚ್ಚಲು ಸರಿಯಾದ ಸಮಯ ಯಾವುದು?
ನೀವು ಹೊಕ್ಕಳಿಗೆ ಅರಿಶಿನ ಹಚ್ಚಿದ ನಂತರ ಒಂದೆರಡು ಗಂಟೆಗಳ ಕಾಲ ವಿಶ್ರಾಂತಿ ಪಡೆಯುವುದರಿಂದ ಹೆಚ್ಚಿನ ಪರಿಹಾರ ದೊರೆಯಲಿದೆ. ಆದಾಗ್ಯೂ, ರಾತ್ರಿ ಮಲಗುವ ಮುನ್ನ ಈ ಪರಿಹಾರ ಕೈಗೊಳ್ಳುವುದು ಹೆಚ್ಚು ಸೂಕ್ತ ಎನ್ನಲಾಗುತ್ತದೆ. ರಾತ್ರಿ ಮಲಗುವ ಮುನ್ನ ಹೊಕ್ಕಳಿಗೆ ಅರಿಶಿನ ಹಚ್ಚುವುದರಿಂದ ದೇಹವು ಹೊಕ್ಕುಳದ ಮೂಲಕ ಅರಿಶಿನದ ಗುಣಗಳನ್ನು ಹೀರಿಕೊಳ್ಳುತ್ತದೆ.  ಇದು ನಿಮ್ಮ ಹಲವು ಸಮಸ್ಯೆಗಳನ್ನು ಪರಿಹರಿಸುತ್ತದೆ. 

Related Post

Leave a Comment