ಹಸಿ ಮೆಣಸಿನಕಾಯಿ ಅರೋಗ್ಯಕ್ಕೆ ಒಳಿತೆ? ಇಲ್ಲವೇ?

Written by Anand raj

Published on:

ಹಸಿ ಮೆಣಸಿನಕಾಯಿ ಗಾಢ ಹಸಿರು ಬಣ್ಣ ಹಾಗೂ ರುಚಿಯಲ್ಲಿ ಖಾರದಿಂದ ಕೂಡಿರುತ್ತದೆ. ಆಹಾರ ಪದಾರ್ಥಗಳ ರುಚಿಯು ಖಾರದಿಂದ ಕೂಡಿರುತ್ತದೆ. ಖಾರದ ರುಚಿಗಾಗಿ ಬಳಸುವುದನ್ನು ಬಿಟ್ಟರೆ ಯಾವುದೇ ಪ್ರಮುಖ ಖಾದ್ಯವನ್ನಾಗಿ ತಯಾರಿಸುವುದಿಲ್ಲ. ರುಚಿಯಲ್ಲಿ ಖಾರವಾಗಿದ್ದರೂ ಸಮೃದ್ಧವಾದ ಜೀವಸತ್ವಗಳನ್ನು ಹಾಗೂ ಪೋಷಕಾಂಶಗಳನ್ನು ಒಳಗೊಂಡಿದೆ.

​ಕ್ಯಾಲೋರಿ ಮುಕ್ತವಾಗಿದೆ

ಹಸಿ ಮೆಣಸಿನಕಾಯಿ ಶೂನ್ಯ ಪ್ರಮಾಣದ ಕ್ಯಾಲೋರಿಯನ್ನು ಒಳಗೊಂಡಿದೆ. ಒಮ್ಮೆ ಹಸಿ ಮೆಣಸಿನಕಾಯಿಯನ್ನು ಅಥವಾ ಹಸಿಮೆಣಸಿನ ಕಾಯಿ ಇರುವ ಆಹಾರವನ್ನು ಸೇವಿಸಿ ಮೂರು ಗಂಟೆ ಬಳಿಕ ಚಯಾಪಚಯ ಕ್ರಿಯೆಯು ಶೇ.50ರಷ್ಟು ವೇಗಗೊಳ್ಳುವುದು. ಕ್ಯಾಲೋರಿ ಮುಕ್ತವಾಗಿರುವ ಹಸಿಮೆಣಸಿನ ಕಾಯಿ ಆರೋಗ್ಯವನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುವುದು.

​ಕ್ಯಾನ್ಸರ್ ವಿರುದ್ಧ ರಕ್ಷಣೆ

ಹಸಿ ಮೆಣಸಿನಕಾಯಿಯು ಆಂಟಿಆಕ್ಸಿಡೆಂಟ್‍ಗಳಿಂದ ಕೂಡಿರುತ್ತದೆ. ಇದು ನೈಸರ್ಗಿಕ ಸ್ಕ್ಯಾವೆಂಜರ್‍ಗಳಾಗಿ ಕಾರ್ಯನಿರ್ವಹಿಸುವ ಮೂಲಕ ದೇಹವನ್ನು ಸ್ವತಂತ್ರ ರಾಡಿಕಲ್‍ಗಳಿಂದ ರಕ್ಷಿಸುವುದು. ಇದು ಪ್ರಾಸ್ಟೇಟ್ ಸಮಸ್ಯೆಗಳಿಂದಲೂ ರಕ್ಷಣೆ ನೀಡುವುದು.

​ರಕ್ತನಾಳಗಳ ಆರೋಗ್ಯದ ಮೇಲೆ ಪ್ರಭಾವ

ರಕ್ತದಲ್ಲಿ ಇರುವ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಸಮತೋಲನದಲ್ಲಿ ಇಡುವುದು. ರಕ್ತದಲ್ಲಿ ಪ್ಲೇಟ್‍ಲೆಟ್‍ಗಳನ್ನು ಒಟ್ಟುಗೂಡಿಸುವ ಪರಿಯನ್ನು ಕಡಿಮೆ ಮಾಡುವುದರ ಮೂಲಕ ಫೈಬ್ರಿನೋಟಿಕ್ ಚಟುವಟಿಕೆಯನ್ನು ಸಮತೋಲನದಲ್ಲಿ ಇಡುವುದು. ಅಲ್ಲದೆ ಅಪಧಮನಿಯ ಆರೋಗ್ಯವನ್ನು ಉತ್ತಮಗೊಳಿಸುವುದು. ಆರೋಗ್ಯಕರವಾದ ಫೈಬ್ರಿನೋಲಿಟಿಕ್ ಚಟುವಟಿಕೆಯು ರಕ್ತ ಹೆಪ್ಪು ಗಟ್ಟುವಿಕೆಯನ್ನು ತಡೆಯುವ ಸಾಮರ್ಥ್ಯವನ್ನು ಸೂಚಿಸುತ್ತದೆ. ಇದು ಹೆಪ್ಪುಗಟ್ಟಿದರೆ ಹೃದಯಘಾತ ಅಥವಾ ಪಾಶ್ರ್ವವಾಯುವಿಗೆ ಕಾರಣವಾಗುವ ಸಾಧ್ಯತೆಗಳಿರುತ್ತವೆ.

​ಮಿದುಳಿನ ಆರೋಗ್ಯ ಸುಧಾರಿಸುವುದು

ಹಸಿ ಮೆಣಸಿನ ಕಾಯಿ ಖಾರದ ರುಚಿಯನ್ನು ಹೊಂದಿದ್ದರೂ ಮೆದುಳಿನಲ್ಲಿ ಇರುವ ಹೈಪೋಥಾಲಮಸ್‍ನ ಕೇಂದ್ರವನ್ನು ತಂಪಾಗಿರಿಸಲು ಉತ್ತೇಜಿಸುತ್ತದೆ. ಈ ಮೂಲಕ ದೇಹದ ಉಷ್ಣತೆಯು ಸಮತೋಲನದಲ್ಲಿ ಇರುತ್ತದೆ. ಮಿದುಳನ್ನು ಚುರುಕಾಗಿಡಲು ಹಾಗೂ ಉತ್ತಮ ಆರೋಗ್ಯಕ್ಕೆ ಪ್ರೇರೇಪಿಸುವುದು.

​ಸೈನಸ್ ಸೋಂಕುಗಳನ್ನು ತಡೆಯುವುದು

ಹಸಿ ಮೆಣಸಿನ ಕಾಯಿಯಲ್ಲಿ ಇರುವ ಕ್ಯಾಪ್ಸೈಸಿನ್ ಮೂಗು ಮತ್ತು ಸೈನಸ್ ಲೋಳೆಗಳ ಮೇಲೆ ಉತ್ತೇಜಕ ಪರಿಣಾಮ ಬೀರುವುದು. ಕ್ಯಾಪ್ಸೈಸಿನ್ ಪೊರೆಗಳ ಮೂಲಕ ರಕ್ತದ ಹರಿವನ್ನು ಉತ್ತೇಜಿಸುವುದು. ಲೋಳೆಯ ಸ್ರವಿಕೆಯು ತೆಳುವಾಗುವುದು. ನೆಗಡಿ ಮತ್ತು ಸೈನಸ್ ಸೋಂಕುಗಳನ್ನು ಎದುರಿಸಲು ಉತ್ತೇಜಿಸುವುದು.

​ಅಲ್ಸರ್ ವಿರೋಧಿ

ಹಸಿ ಮೆಣಸಿನ ಕಾಯಿ ಇಂದ ಉತ್ಪತ್ತಿಯಾಗುವ ಶಾಖವು ಜೀರ್ಣಕಾರಿ ಮತ್ತು ಅಲ್ಸರ್ ವಿರೋಧಿಯಾಗಿ ಕಾರ್ಯ ನಿರ್ವಹಿಸುವುದು. ಸಕ್ರಿಯ ಪೆಪ್ಟಿಕ್ ಹುಣ್ಣು ಇರುವ ಜನರಿಗೆ ಹಸಿಮೆಣಸಿನ ಖಾರವು ತೊಂದರೆ ಹಾಗೂ ಉರಿಯನ್ನು ಉಂಟುಮಾಡುವುದು.

​ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು

ಹಸಿಮೆಣಸಿನ ಕಾಯಿ ಸಮೃದ್ಧವಾದ ವಿಟಮಿನ್ ಸಿ ಅನ್ನು ಒಳಗೊಂಡಿದೆ. ಇದು ಆರೋಗ್ಯಕರವಾದ ದೃಷ್ಟಿ, ಚರ್ಮದ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಮೆಣಸಿನ ಕಾಯಿಯನ್ನು ಆದಷ್ಟು ತಂಪಾದ ಸ್ಥಳದಲ್ಲಿ ಇಡಬೇಕು. ಅಧಿಕ ಶಾಖ ಮತ್ತು ಬೆಳಕು ಇರುವಲ್ಲಿ ಮೆಣಸಿನಕಾಯನ್ನು ಇಟ್ಟರೆ ವಿಟಮಿನ್ ಸಿ ಅನ್ನು ಕಳೆದುಕೊಳ್ಳುವುದು.

​ನೋವನ್ನು ನಿವಾರಿಸುವುದು

ಹಸಿ ಮೆಣಸಿನಕಾಯನ್ನು ಸೇವಿಸಿದಾಗ ಎಂಡಾರ್ಫಿನ್‍ಗಳನ್ನು ಬಿಡುಗಡೆ ಮಾಡುತ್ತದೆ. ಅದು ಮನಃಸ್ಥಿತಿಯನ್ನು ಹೆಚ್ಚಿಸುತ್ತದೆ ಜೊತೆಗೆ ಒಂದಿಷ್ಟು ನೋವನ್ನು ಕಡಿಮೆ ಮಾಡುವುದು.

​ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು

ಹಸಿ ಮೆಣಸಿನಕಾಯಿಯಲ್ಲಿ ಇರುವ ಔಷಧೀಯ ಗುಣವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿ ಇರುವಂತೆ ಮಾಡುವುದು. ಮಧುಮೇಹ ಹೊಂದಿರುವ ವ್ಯಕ್ತಿಗಳು ಉತ್ತಮ ಆರೋಗ್ಯಕ್ಕೆ ಹಾಗೂ ಸಕ್ಕರೆಯ ಪ್ರಮಾಣವನ್ನು ಸಮತೋಲನದಲ್ಲಿ ಇಡಲು ಆಹಾರದಲ್ಲಿ ಹಸಿ ಮೆಣಸನ್ನು ಸೇರಿಸಿಕೊಳ್ಳಬಹುದು.

​ಕಬ್ಬಿಣಾಂಶ ನೀಡುವುದು

ಹಸಿ ಮೆಣಸಿನಕಾಯಿ ಕಬ್ಬಿಣಾಂಶವನ್ನು ಸಮೃದ್ಧವಾಗಿ ಪಡೆದುಕೊಂಡಿದೆ. ಕಬ್ಬಿಣಾಂಶದ ಕೊರತೆ ಹಾಗೂ ರಕ್ತದ ಕೊರತೆ ಇರುವವರು ಆಹಾರದಲ್ಲಿ ಹಸಿ ಮೆಣಸಿನ ಕಾಯನ್ನು ಸೇರಿಸಿಕೊಳ್ಳಬಹುದು. ಬಹು ಬೇಗ ಸಮಸ್ಯೆಯು ನಿವಾರಣೆ ಹೊಂದುವುದು.

​ಚರ್ಮದ ಆರೈಕೆ ಮಾಡುವುದು

ಹಸಿ ಮೆಣಸಿನಕಾಯಿ ಜೀವವಿರೋಧಿ ಗುಣಲಕ್ಷಣವನ್ನು ಒಳಗೊಂಡಿದೆ. ಇದು ಚರ್ಮದಲ್ಲಿ ಇರುವ ಸೋಂಕುಗಳನ್ನು ಸುಲಭವಾಗಿ ನಿವಾರಿಸುವುದು. ಜೊತೆಗೆ ಅನುಚಿತ ಸೋಂಕುಗಳು ತಗುಲದಂತೆ ಕಾಪಾಡುವುದು.

​ವಿಟಮಿನ್ ಕೆ ಸಮೃದ್ಧವಾಗಿದೆ

ಹಸಿ ಮೆಣಸಿನಕಾಯಿಯಲ್ಲಿ ವಿಟಮಿನ್ ಕೆ ಸಮೃದ್ಧವಾಗಿದೆ. ಇದು ಆಸ್ಟಿಯೋಪೊರೋಸಿನ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕತ್ತರಿಸಿದ ಗಾಯ ಅಥವಾ ಬಿದ್ದು ಗಾಯಗೊಂಡಾಗ ಉಂಟಾಗುವ ರಕ್ತಸ್ರಾವವನ್ನು ನಿಯಂತ್ರಿಸಲು ಸಹಾಯ ಮಾಡುವುದು.

Related Post

Leave a Comment