ನಾಗ ಪಂಚಮಿ ಹಬ್ಬ ಹುತ್ತದ ಹಾಗು ನಾಗರ ಕಲ್ಲಿನ ಪೂಜೆ ಮಾಡುವ ಸರಳ ವಿಧಾನ!

Written by Anand raj

Published on:

ನಾಗರಪಂಚಮಿ ಹಬ್ಬದಂದು ನಾಗರ ಪೂಜೆಗೆ ನಿಮಗೆ ಬೇಕಾಗಿರುವ ಎಲ್ಲಾ ವಸ್ತುಗಳನ್ನು ತೆಗೆದು ಇಟ್ಟುಕೊಳ್ಳಬೇಕು. ನಿಮ್ಮ ಮನೆ ಹತ್ತಿರ ಇರುವ ನಾಗರ ಕಲ್ಲು ಅಥವಾ ಹುತ್ತದ ಹತ್ತಿರ ಹೊಗಿ ನೀರಿನಿಂದ ನಾಗರ ಕಲ್ಲನ್ನು ತೊಳೆಯಬೇಕು ಅಥವಾ ಹುತ್ತಕ್ಕೆ ನೀರನ್ನು ಚಿಮುಕಿಸಿ. ನಂತರ ಅರಿಶಿನ ಕುಂಕುಮವನ್ನು ಹಚ್ಚಿ ಗೆಜ್ಜೆ ವಸ್ತ್ರವನ್ನು ಹಾಕಬೇಕು. ನಂತರ ಹೂವಿನಿಂದ ಅಲಂಕಾರ ಮಾಡಬೇಕು.

ಇನ್ನು ನೈವೇದ್ಯಕ್ಕೆ ಇಟ್ಟಿರುವ ವಸ್ತುಗಳನ್ನು ಇಡಬೇಕು. ಬಾಳೆಹಣ್ಣು, ಚಿಗಳಿ ತಂಬಿಟ್ಟು ಕಾಯಿ ಹಣ್ಣುಗಳು, ಕಡಲೆಕಾಳು ಕೋಸಂಬರಿ ಅನ್ನು ಬಾಳೆ ಎಲೆ ಮೇಲೆ ನೈವೇದ್ಯಕ್ಕೆ ಇಡಬೇಕು. ನಂತರ ದೀಪ ಹಚ್ಚಿ ದೂಪವನ್ನು ಬೆಳಗಬೇಕು ಹಾಗು ನೈವೇದ್ಯವನ್ನು ಮಾಡಿದ ಬಳಿಕ ಕೊನೆಗೆ ಮಹಾ ಮಂಗಳಾರತಿ ಮಾಡಬೇಕು. ನಂತರ ಹಸಿ ಹಾಲು ಮತ್ತು ತುಪ್ಪವನ್ನು ನಾಗರಾಕಲ್ಲು ಹಾಗು ಹುತ್ತಕ್ಕೆ ಬಿಡಬೇಕು. ನಂತರ 9 ಸುತ್ತು ದಾರವನ್ನು ಸುತ್ತಬೇಕು.ಸಂ ಇಷ್ಟೇ ಸರಳವಾಗಿ ನಾಗರಕಲ್ಲು ಅಥವಾ ಹುತ್ತದ ಪೂಜೆಯನ್ನು ಮಾಡಬಹುದು.

Related Post

Leave a Comment