ಶೇಕಡ 99% ರಷ್ಟು ಜನರು ಮೊಸರನ್ನು ತಪ್ಪಾಗಿ ಸೇವಿಸುತ್ತಾರೆ! ಹೇಗೆ?

Written by Anand raj

Published on:

ಪ್ರತಿ ದಿನ ಮೊಸರನ್ನು ಸೇವಿಸುವುದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ನಮ್ಮೆಲ್ಲರಿಗೂ ಗೊತ್ತು. ಮೊಸರಿನಲ್ಲಿರುವ ಕ್ಯಾಲ್ಷಿಯಂ ,ವಿಟಮಿನ್ ,ಕ್ಯಾಲೊರಿ ,ಪ್ರೋಟಿನ್ಗಳು ದೇಹಕ್ಕೆ ಸೂಕ್ತವಾದ ಪೋಷಣೆಯನ್ನು ನೀಡುತ್ತದೆ ಆದರೆ ಅದನ್ನು ಸರಿಯಾದ ರೀತಿಯಲ್ಲಿ ಸೇವಿಸಿದಾಗ ಮಾತ್ರ ಎನ್ನುವುದನ್ನು ನಾವು ಮರೆಯಬಾರದು ಆದರೆ ಶೇಕಡ 99% ರಷ್ಟು ಜನರು ಪ್ರತಿದಿನ ಮೊಸರನ್ನು ತಪ್ಪಾಗಿ ಸೇವಿಸುತ್ತಾರೆ.ಇದೇ ಕಾರಣಕ್ಕೆ ಮೊಸರಿನಿಂದ ಯಾವುದೇ ಲಾಭ ನಮ್ಮ ದೇಹಕ್ಕೆ ದೊರೆಯುವುದಿಲ್ಲ.
ಇದರ ಬಗ್ಗೆ ತಿಳಿಯೋಣ ಬನ್ನಿ..

ನಾವೆಲ್ಲ ಮೊಸರನ್ನು ಸೇವಿಸುವಾಗ ಮಾಡುವ ಈ ತಪ್ಪಿನಿಂದ ಅನಾರೋಗ್ಯಕ್ಕೆ ಗುರಿಯಾಗುತ್ತಿದ್ದೇವೆ.ನೆಗಡಿ,ಜ್ವರ ಅಸ್ತಮಾ ತ್ವಚೆಯಲ್ಲಿ ಕಿರಿಕಿರಿ,ಕೂದಲು ಉದುರುವ ಸಮಸ್ಯೆ,ಮಲಬದ್ಧತೆ,ಹೊಟ್ಟೆ ಉಬ್ಬರ,ಕಫ ದಂತಹ ಸಮಸ್ಯೆಗಳನ್ನು ಅನುಭವಿಸುತ್ತಿದ್ದೇವೆ ಯಾಕೆಂದರೆ ಆರೋಗ್ಯಕರವಾದ ವಸ್ತುವನ್ನು ಅನುಚಿತವಾಗಿ ಸೇವಿಸುವುದರಿಂದ ಉಂಟಾಗುವ ಲಾಭಕ್ಕಿಂತ ಹಾನಿಗಳೇ ಹೆಚ್ಚಾಗಿರುತ್ತದೆ.ಮೊಸರಿನಲ್ಲಿ ಆರೋಗ್ಯಕರವಾದ ಬ್ಯಾಕ್ಟೀರಿಯಾಗಳು ಸಮೃದ್ಧವಾಗಿದೆ.ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.ಈ ಬ್ಯಾಕ್ಟೀರಿಯಾಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಆದರೆ ನಾವು ಮಾಡುವ ಮುಖ್ಯ ತಪ್ಪೇನೆಂದರೆ ಈ ಬ್ಯಾಕ್ಟೀರಿಯಾಗಳು ನಶಿಸಿ ಹೋದ ನಂತರ ಈ ಮೊಸರನ್ನು ಸೇವಿಸುತ್ತೇವೆ.ಹೇಗೆ ಗೊತ್ತಾ ?

ನಾವೆಲ್ಲಾ ಮೊಸರನ್ನು ಹಾಗೆ ಸೇವಿಸುವುದಿಲ್ಲ ಅದರ ರುಚಿಯನ್ನು ಹೆಚ್ಚಿಸಲು ಉಪ್ಪನ್ನು ಸೇರಿಸಿ ಸೇವಿಸುತ್ತೇವೆ.
ಈ ವಿಧಾನ ತಪ್ಪು ಯಾಕೆಂದರೆ ಉಪ್ಪನ್ನು ತಯಾರಿಸುವಾಗ ಸಾಕಷ್ಟು ರಾಸಾಯನಿಕ ವಸ್ತುಗಳನ್ನು ಸೇರಿಸಿ ತಯಾರಿಸಲಾಗುತ್ತದೆ ಇದನ್ನು ಮೊಸರಿಗೆ ಹಾಕಿದ ತಕ್ಷಣ ಇದರಲ್ಲಿರುವ ದೇಹಕ್ಕೆ ಬೇಕಾಗಿರುವಂತಹ ಒಳ್ಳೆಯ ಬ್ಯಾಕ್ಟೀರಿಯಾಗಳು ಸತ್ತು ಬಿಡುತ್ತದೆ.ಇಂತಹ ಮೊಸರನ್ನು ಸೇವಿಸುವುದರಿಂದ ಯಾವುದೇ ಲಾಭವೂ ನಮ್ಮ ದೇಹಕ್ಕೆ ದೊರೆಯುವುದಿಲ್ಲ.ಇದೇ ಕಾರಣಕ್ಕೆ ನಾವು ಪ್ರತಿ ದಿನ ಮೊಸರು ಸೇವಿಸುತ್ತಿದ್ದರೂ ಆರೋಗ್ಯದಲ್ಲಿ ಯಾವುದೇ ಬದಲಾವಣೆ ನಮಗೆ ಕಾಣಿಸುತ್ತ ಇಲ್ಲ.

ಹಾಗಿದ್ರೆ ಮೊಸರನ್ನು ಹೇಗೆ ಸೇವಿಸಬೇಕು ?

ಉತ್ತಮ ಆರೋಗ್ಯ ಲಾಭಕ್ಕೆ ಮೊಸರಿಗೆ ಬೆಲ್ಲ ಅಥವಾ ಕಲ್ಲು ಸಕ್ಕರೆಯನ್ನು ಬೆರೆಸಿ ಸೇವಿಸಬೇಕು.ಇದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಅಷ್ಟೇ ಅಲ್ಲದೆ ಮೊಸರಿಗೆ ಸಿಹಿಯನ್ನು ಹಾಕಿ ಸೇವಿಸಿದಾಗ ಮೊಸರಲ್ಲಿರುವ ಉತ್ತಮ ಬ್ಯಾಕ್ಟೀರಿಯಾ ದ್ವಿಗುಣವಾಗುತ್ತದೆ ಇದರಿಂದ ಇನ್ನೂ ಹೆಚ್ಚಿನ ಲಾಭ ಮೊಸರಿನಿಂದ ನಮ್ಮ ದೇಹಕ್ಕೆ ದೊರೆಯುತ್ತದೆ. ಇನ್ನು ಮೊಸರಲ್ಲಿ ರುವ ಉತ್ತಮ ಬ್ಯಾಕ್ಟೀರಿಯಾ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

ಮೊಸರನ್ನು ಬಿಸಿ ಮಾಡುವುದು.ಇದು ಇನ್ನೊಂದು ದೊಡ್ಡ ತಪ್ಪು ಎಂದೇ ಹೇಳ ಬಹುದು. ಮೊಸರನ್ನು ಬಿಸಿ ಮಾಡಿ ಹಲವು ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ ಆದರೆ ಇದು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ.ಇದರಿಂದ ಮೊಸರಲ್ಲಿರುವ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳು ಮತ್ತು ಟಾಕ್ಸಿನ್ ಗಳು ನಾಶವಾಗುತ್ತದೆ. ಅಂತಹ ಮೊಸರನ್ನು ಸೇವಿಸಿದಾಗ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಸಹ ಎದುರಾಗಬಹುದು.ಜೀರ್ಣಕ್ರಿಯೆಗೆ ಕೂಡ ತೊಂದರೆ ಉಂಟು ಮಾಡುತ್ತದೆ.

ರಾತ್ರಿ ಹೊತ್ತು ಮೊಸರನ್ನು ಸೇವಿಸುವುದು.

ರಾತ್ರಿ ಹೊತ್ತು ಮೊಸರು ಸೇವಿಸುವುದರಿಂದ ಆರೋಗ್ಯಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಅದರಲ್ಲೂ ಮುಖ್ಯವಾಗಿ ಕಫದ ಬಾಧೆ ಉಂಟಾಗುವ ಸಂಭವ ಹೆಚ್ಚಾಗಿರುತ್ತದೆ ಆದ್ದರಿಂದ ಆದಷ್ಟು ಮೊಸರನ್ನು ಸೂರ್ಯಾಸ್ತದ ಮುಂಚೆಯೇ ಸೇವಿಸಬೇಕು,
ಸೂರ್ಯಾಸ್ತದ ನಂತರ ಮೊಸರಿನ ಸೇವನೆ ಆರೋಗ್ಯಕರ ಪದ್ಧತಿಯಲ್ಲ.

ಧನ್ಯವಾದಗಳು

Related Post

Leave a Comment