ಕರೋನಾ ವಿರುದ್ಧ ಹೋರಾಡಬಲ್ಲ 3 ಆಯುರ್ವೇದಿಕ್ ಔಷಧ ಸಿದ್ಧಪಡಿಸಿದ ಶೃಂಗೇರಿ ಮಠ!

ಶೃಂಗೇರಿ ಶಾರದಾ ಪೀಠದ ಭಾಗವಾದ ಶ್ರೀ ಶಾರದಾ ಆಯುರ್ವೇದಿಕ್ ಚಿಕಿತ್ಸಾಲಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಕೊರೊನಾ ಸೋಂಕು ನಿವಾರಣೆಗೆ ಸಹಕಾರಿಯಾಗಬಲ್ಲ 3 ಆಯುರ್ವೇದಿಕ್ ವಿವಿಧ ಔಷಧಿಗಳನ್ನು ಅಭಿವೃದ್ಧಿಪಡಿಸಿರುವುದಾಗಿ ತಿಳಿಸಿದೆ.

ಕೊರೊನಾ ವಿರುದ್ಧ ಹೋರಾಡಲಿಕ್ಕೆ ಅಮೃತ ಸಂಜೀವಿನಿ , ಜೀವನೀಯಂ ಮತ್ತು ಓಜೊ ವರ್ಧಿನಿ ಎಂಬ ಮಾತ್ರೆಗಳನ್ನು ಸಿದ್ಧಪಡಿಸಿದ್ದು ಇವುಗಳನ್ನು ರೋಗದ ಆರಂಭಿಕ ಲಕ್ಷಣ ಗಳುಳ್ಳ ಹಾಗೂ ರೋಗ ಲಕ್ಷಣ ರಹಿತ ಸೋಂಕಿತರಿಗೆ ಔಷಧಿಯಾಗಿ ಬಳಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ ಕೋವಿಡ್ ನಿಂದ ಗುಣಮುಖರಾದ ನಂತರ ಕಾಣಿಸಿಕೊಳ್ಳುವ ಅನಾರೋಗ್ಯ ಲಕ್ಷಣಗಳಿಂದ ಶೀಘ್ರದಲ್ಲಿಯೇ ಚೇತರಿಸಿಕೊಳ್ಳಬಹುದು ಎಂಬುವುದು ಅಧ್ಯಯನ ವರದಿಗಳಲ್ಲಿ ತಿಳಿದು ಬಂದಿದೆ.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕಿಯಾದ ಡಾಕ್ಟರ್ ಸಿ ಆರ್ ಜಯಂತಿ ಅವರ ಮೇಲ್ವಿಚಾರಣೆಯಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಈ ಔಷಧಿ ಶೇಕಡಾ 92%ರಷ್ಟು ಪರಿಣಾಮಕಾರಿ ಎಂದು ಇದರಿಂದ ಸಾಬೀತಾಗಿದೆ ಎಂದು ಅಧ್ಯಯನ ಕೇಂದ್ರವು ತಿಳಿಸಿದೆ.

ಓಜೊ ವರ್ಧಿನಿ ಉಸಿರಾಟಕ್ಕೆ ಸಂಬಂಧಿಸಿದ ಹಲವು ರೀತಿಯ ರೋಗಗಳ ನಿವಾರಣೆಗೆ ಬಳಕೆಯಾಗಲಿದೆ.ಉರಿಯೂತ ಲಕ್ಷಣಗಳು ಹಾಗೂ ರೋಗನಿರೋಧಕ ಸಮತೋಲನಕ್ಕೆ ಸಹಕಾರಿಯಾಗಿದೆ.ಜೀವನೀಯಂ ಮಾತ್ರೆ ಉಸಿರಾಟ ತೊಂದರೆಯ ಚಿಕಿತ್ಸೆಗೆ ಪ್ರಬಲ ಪದಾರ್ಥಗಳಿಂದ ತಯಾರಿಸಿದ ಮಾತ್ರೆಗಳಾಗಿವೆ.

ಅಮೃತ ಸಂಜೀವಿನಿ

ರೋಗನಿರೋಧಕ ಶಕ್ತಿಯ ಸಮತೋಲನ ಕಾಯ್ದುಕೊಳ್ಳಲು ಶಿಫಾರಸು ಮಾಡಲಾಗಿದೆ ಎಂದು ಶಾರದಾ ಚಿಕಿತ್ಸಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ

ಧನ್ಯವಾದಗಳು.

Leave A Reply

Your email address will not be published.